Home Blog Page 63

Wife : ಬೇರೊಬ್ಬನ್ನೊಂದಿಗೆ ಇರುವಾಗ ಪತಿಯ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪತ್ನಿ (Wife) ಯೋರ್ವಳು ಬೇರೋಬ್ಬ ಪುರುಷನೊಂದಿಗೆ ಇರುವಾಗಲೇ ಪತಿಯ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಮತ್ತು ವಿವಾಹೇತರ ಸಂಬಂಧದ ಕಹಿಸತ್ಯ ಘಟನೆ ಅನಾವರಣಗೊಂಡಿದೆ.

ಉತ್ತರ ಪ್ರದೇಶದಲ್ಲಿಈ ಘಟನೆ ನಡೆದಿದ್ದು, ಐದು ವರ್ಷಗಳ ದಾಂಪತ್ಯ ಜೀವನದ ನಂತರ ತನ್ನ ಪತ್ನಿ (Wife) ಬೇರೊಬ್ಬ ವ್ಯಕ್ತಿಯೊಂದಿಗೆ ಇರುವಾಗ ರೆಡ್‌ಹ್ಯಾಂಡ್ ಆಗಿ ಪತಿಯ ಕಥಗೆ ಸಿಕ್ಕಿಬಿದ್ದಿದ್ದು, ಪತ್ನಿ ಮಾಡಿದ ಅನ್ಯಾಯವನ್ನು ಪ್ರಶ್ನಿಸಿದ್ದಾರೆ.

ಸದ್ಯ ಇದರ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಘಟನೆ ಭಾರತದಲ್ಲಿ ವೈವಾಹಿಕ ಸಂಬಂಧಗಳು ಹೇಗೆ ದುರ್ಬಲಗೊಳ್ಳುತ್ತಿವೆ ಎಂಬುದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ತೋರುತ್ತಿದೆ.

ಇದನ್ನು ಓದಿ : RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಪತಿಯ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಸಹ ಪತ್ನಿ (Wife) ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ವರ್ತಿಸಿದ್ದಾಳೆ. ಆದರೆ ಪತಿ ಮಾತ್ರ ತೀವ್ರ ಆಘಾತಕ್ಕೆ ಒಳಗಾಗಿ ಕಣ್ಣೀರು ಹಾಕುತ್ತಿರುವುದು ವಿಡಿಯೋದಲ್ಲಿ ಕಾಣಬುದಾಗಿದೆ. ಈ ವೇಳೆ “ನನ್ನ ಐದು ವರ್ಷಗಳ ಜೀವನವನ್ನು ನೀನು ಹಾಳು ಮಾಡಿದೆ” ಎಂದು ಪತಿ ಆಕ್ರೋಶದಿಂದ ಕೂಗಾಡಿದ್ದಾರೆ.

ಈ ವೈರಲ್‌ ವಿಡಿಯೋವನ್ನು ‘Ghar Ke Kalesh’ ಎಂಬ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ 202.6K ಕ್ಕೂ ಹೆಚ್ಚು Views ಈ ವೈರಲ್ ವಿಡಿಯೋ ಪಡೆದುಕೊಂಡಿದೆ. ಈ ವಿಡಿಯೋ ಇತ್ತಿಚೇಗೆ ವಿವಾಹೇತರ ಸಂಬಂಧದ ಕುರಿತಾದ ಮತ್ತೊಂದು ಪ್ರಕರಣವನ್ನು ಬೆಳಕಿಗೆ ತಂದಂತಾಗಿದೆ.

ಸಾಮಾನ್ಯವಾಗಿ ಪತಿ ತನ್ನ ಪತ್ನಿ (Wife) ಗೆ ಹೀಗೆ ವಂಚನೆ ಮಾಡುವುದನ್ನು ನಾವೂ ನೋಡಿದ್ದೇವೆ ಇಲ್ಲಾ ಕೇಳಿದ್ದೇವೆ. ಆದರೆ ಇಲ್ಲಿ ಪತ್ನಿಯೇ ಪತಿಗೆ ವಂಚನೆ ಮಾಡಿದ್ದಾಳೆ. ವಿಡಿಯೋದ ಶೀರ್ಷಿಕೆಯಲ್ಲಿ “Extra-Marital affair Kalesh (Husband allegedly catches his wife with other man. Keeps on screaming why you wasted my 5 years)” ಎಂದು ಬರೆದುಕೊಳ್ಳಲಾಗಿದೆ.

ಇದನ್ನು ಓದಿ : Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

ವಿಡಿಯೋದಲ್ಲಿ ಗಮನಿಸಬಹುದಾದ ಅಂಶವೆನೆಂದರೆ, ಪತಿ “ನೀನು ನನ್ನ ಜೀವನವನ್ನು ನಾಶಪಡಿಸಿದೆ, ನನ್ನ ಐದು ವರ್ಷಗಳನ್ನು ಹಾಳು ಮಾಡಿದೆ” ಎಂದು ಕೋಪ ಮತ್ತು ದುಃಖದಿಂದ ಹೇಳುವುದನ್ನು ಕಾಣಬಹುದು. ಇದೇ ವೇಳೆ ಶರ್ಟ್‌ ಹರಿದುಕೊಂಡಿರುವ ಓರ್ವ ವ್ಯಕ್ತಿಯನ್ನು ಸಹ ನಾವೂ ವಿಡಿಯೋದಲ್ಲೊ ಕಾಣಬಹುದಾಗಿದೆ.

ಪತಿ ತನ್ನ ಕೋಪ ಮತ್ತು ದುಃಖವನ್ನು ಆಕ್ರೋಶಭರಿವಾಗಿ ತೊಡಿಕೊಳ್ಳುತ್ತಿದ್ದರೆ, ಇತ್ತ ಪತ್ನಿ (Wife) ಮಾತ್ರ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪತಿಯೊಂದಿಗೆ ಜಗಳಕ್ಕಿಳಿದ್ದಿದ್ದಾಳೆ. ಇದೇ ವೇಳೆ ಪತಿಯ ಸಂಬಂಧಿಕರು ಎನ್ನಲಾದ ಮತ್ತೊಬ್ಬ ಮಹಿಳೆಯ ಬಗ್ಗೆ ಪತ್ನಿ ಅಗೌರವದಿಂದ ವರ್ತಿಸಿ ಹಲ್ಲೆಗೂ ಮುಂದಾಗಿದ್ದಾಳೆ.

ಇಷ್ಟಾದರೂ ಪತ್ನಿ ಕಿರುಚಾಡುತ್ತಿರುವುರಿಂದ ಮತ್ತಷ್ಟೆ ಕೆರಳಿದ ಪತಿ ಕೋಪದಲ್ಲಿ ಪತ್ನಿಗೆ ಕಪಾಳಮೋಕ್ಷ ಮಾಡಿ, ತನ್ನ ಸಂಕಟ ಮತ್ತು ದುಃಖವನ್ನು ತೋಡಿಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ :

* “ಇದು ದಿನೇ ದಿನೇ ಹೆಚ್ಚುತ್ತಿದೆ, ಯಾರು ಇದಕ್ಕೆ ಜವಾಬ್ದಾರರು? ಅತಿಯಾದ ಸೀರಿಯಲ್‌ಗಳು ಇದಕ್ಕೆ ಕಾರಣವೇ?” ಎಂದು ಪ್ರಶ್ನಿಸಿದ್ದಾರೆ.

*ವಿಶ್ವಾಸದ್ರೋಹದ ಪರಿಣಾಮಗಳ ಬಗ್ಗೆ ಹೇಳುತ್ತಾ, “5 ವರ್ಷ ವ್ಯರ್ಥವಾಯಿತೇ? ಅವಳು ಅವನ ಜೀವನವನ್ನೇ ಹಾಳು ಮಾಡಿದ್ದಾಳೆ,  ಎಂದು ಹೇಳಿದ್ದಾರೆ.

*“ಹುಡುಗಿಗೆ ಯಾವುದೇ ಪಶ್ಚಾತ್ತಾಪವಿಲ್ಲ…” ಮತ್ತು “ಒಂದು ಕಡೆ ಕಳ್ಳತನ, ಇನ್ನೊಂದು ಕಡೆ ಎದೆಗಾರಿಕೆ” ಎಂದು ಪತ್ನಿಯ ನಾಚಿಕೆಯಿಲ್ಲದ ವಾದದ ವರ್ತನೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ : Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!

ವಿಡಿಯೋ :

https://twitter.com/i/status/1948214397328908681

ಸಂಪಾದಕೀಯ :

ಈ ಇಂತಹ ಘಟನೆಗಳು ವೈವಾಹಿಕ ಸಂಬಂಧದ ನಿಖರ ಮೌಲ್ಯ ಮತ್ತು ಭದ್ರತೆಯ ಅಗತ್ಯತೆಯನ್ನು ಮರಳಿ ಒತ್ತಿ ಹೇಳುತ್ತವೆ. ಸಂವಹನ, ನಂಬಿಕೆ ಮತ್ತು ಬದ್ಧತೆ ದಾಂಪತ್ಯದ ತಳಹದಿ ಎಂದು ತಜ್ಞರು ಸೂಚಿಸುತ್ತಾರೆ. ಇಂತಹ ಘಟನೆಗಳ ವಿರುದ್ಧ ಸಮಾಜ ಜಾಗೃತವಾಗಬೇಕಿದೆ.

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!

indian-woman

ಜನಸ್ಪಂದನ ನ್ಯೂಸ್‌, ಡೆಸ್ಕ್‌ : 100% ಉಪಯೋಗ, 0% ವ್ಯರ್ಥ ; ಭಾರತೀಯ ಮಹಿಳೆ (indian-woman) ಯ ತಂತ್ರಕ್ಕೆ ನೆಟ್ಟಿಗರು ಶಾಕ್.! ಏನಿದು ಅಂತೀರಾ.? ಇಲ್ಲೇ ಇರೋದು ರಹಸ್ಯ.! ಈ ರಹಸ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಲ್ಲೋಬ್ಬ ಮಹಿಳೆ ಹಣ ಉಳಿಸಲು ವಸ್ತುಗಳನ್ನು ಹೇಗೆ ಬಳಸಬೇಕೆನ್ನುವದನ್ನು ಮಾಡಿ ತೋರಿಸಿದ್ದಾರೆ. ಅದರಲ್ಲೂ ಹಣ ಉಳಿಸುವಲ್ಲಿ ಮತ್ತು ವಸ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ತೋರಿಸಲು ಭಾರತೀಯ ಹೆಣ್ಮಕ್ಕಳಿಗೆ ವಿಶೇಷ ಪ್ರಾವೀಣ್ಯವಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 24 ರ ದ್ವಾದಶ ರಾಶಿಗಳ ಫಲಾಫಲ.!

ಆಹಾರ ಪದಾರ್ಥವಾಗಲಿ ಅಥವಾ ದಿನಸರಿ ಬಳಕೆಯ ವಸ್ತುಗಳಾಗಲಿ ಅವು ವ್ಯರ್ಥವಾಗದಂತೆ ಬಳಸುವ ಜಾಣ್ಮೆಯನ್ನು ಈ ಭಾರತೀಯ ನಾರಿ (indian-woman) ಯಿಂದ ಕಲಿಯುವುದು ತುಂಬಾ ಇದೆ. ಸದ್ಯ ಈ ಭಾರತೀಯ ನಾರಿ, ಮಾರುಕಟ್ಟೆಯಿಂದ ತಂದ ಪಾಕೇಟ್‌ನಿಂದ ಎಣ್ಣೆಯನ್ನು ಹೇಗೆ ತೆಗೆಯಬೇಕು ಮತ್ತು ಅದನ್ನು ಹೇಗೆಲ್ಲಾ ಬಳಸಬಹುದು ಎನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ.

ಪ್ರತಿ ಹನಿ ಎಣ್ಣೆ ವ್ಯರ್ಥವಲ್ಲ ಎಂಬ ಮಹಿಳೆಯ ಸ್ಪಷ್ಟ ಸಂದೇಶ :

ವೈರಲ್ ಆಗಿರುವ ವಿಡಿಯೋದಲ್ಲಿ, ಓರ್ವ ಭಾರತೀಯ ಮಹಿಳೆ (indian-woman) ಸಾಸಿವೆ ಎಣ್ಣೆ (Mustard oil) ಯ ಪ್ಯಾಕೆಟ್‌ನ್ನು ಸಂಪೂರ್ಣವಾಗಿ ಬಳಸುವ ಕ್ರಿಯೆಯನ್ನು ತೋರಿಸುತ್ತಾರೆ. ಮೊದಲಿಗೆ ಎಣ್ಣೆಯನ್ನು ಡಬ್ಬಿಗೆ ಹಾಕಿದ ನಂತರ ಪ್ಯಾಕೆಟ್‌ನ ಒಳಗಿರುವ ಅಳಿದುಳಿದ ಎಣ್ಣೆಯನ್ನೂ ಸಹ ವ್ಯರ್ಥ ಮಾಡಿಲ್ಲ.

ಇದನ್ನು ಓದಿ : Papaya : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 1 ಹಣ್ಣು ತಿನ್ನಿ ; ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿ ಪಡೆಯಿರಿ.!

ಎಣ್ಣೆಯನ್ನು ಡಬ್ಬಿಗೆ ಹಾಕಿದ ನಂತರ ಪ್ಯಾಕೆಟ್‌ನ್ನು ಕತ್ತರಿಸಿ ಅದರಲ್ಲಿ ಅಳಿದುಳಿದ ಎಣ್ಣೆಯಲ್ಲಿ ಮಹಿಳೆ ಚಪಾತಿ ಹಿಟ್ಟು ಕಲಿಸುತ್ತಾರೆ. ಇನ್ನು ಉಳಿದಿರಬಹುದೆಂದು ಅದೆ ಎಣ್ಣೆಯೊಂದಿಗೆ ಪತಿ ಮಕ್ಕಳಿಗೆ ತೈಲ ಮಸಾಜ್ ಮಾಡಲು ತಲೆ, ಕೈ, ಪಾದಗಳಲ್ಲಿ ಎಣ್ಣೆ ಉಜ್ಜುತ್ತಾರೆ, ಮಹಿಳೆಯ ಈ ರೀತಿಯ ವರ್ತನೆ ಕಂಡು ಮಕ್ಕಳು ಆಶ್ಚರ್ಯಚಕಿತರಾಗಿರುವುದನ್ನು ವಿಡಿಯೋದಲ್ಲಿ ಕಂಡುಬರುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ :

ಈ ವಿಡಿಯೋ @Rawat_1199 ಎಂಬ “X” (ಹಳೆಯ ಟ್ವಿಟರ್)‌ನಲ್ಲಿ ಶೇರ್ ಆಗಿದ್ದು, “Bhartiya Nari Apna Kam Adhura Nahin chodte” ಎಂದು ಬರೆದುಕೊಂಡಿದ್ದಾರೆ. ಸದ್ಯ ವಿಡಿಯೋ 361.7K ಗಿಂತ ಹೆಚ್ಚಿನ View ಪಡೆದುಕೊಂಡಿದೆ.

ಭಾರತೀಯ ನಾರಿ (indian-woman) ಯ ವಿಡಿಯೋ :

https://twitter.com/i/status/1944972188106547567

Belagavi : “ನೀನು ಸತ್ತರೆ ಅಕ್ಕ ಚೆನ್ನಾಗಿರ್ತಾಳೆ” ಎಂಬ ಮಾತಿಗೆ ವ್ಯಕ್ತಿ ಆತ್ಮಹತ್ಯೆ.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಮನೆಯೊಳಗಿನ ಕಿರಿಕ್, ಮನಸ್ತಾಪ ಮತ್ತು ನೋವಿನ ಮಾತುಗಳನ್ನು ಕೇಳಿ ವ್ಯಕ್ತಿಯೋರ್ವ ತನ್ನ ಜೀವಕ್ಕೆ ಕಾರಣವಾದ ದಾರುಣ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹೊನ್ನಿಹಾಳ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಾಹಿತಿಯಂತೆ, ಹೀಗೆ ಮನೆಯೊಳಗಿನ ಕಿರಿಕ್, ಮನಸ್ತಾಪ ಮತ್ತು ನೋವಿನ ಮಾತುಗಳನ್ನು ಕೇಳಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಮಲ್ಲಪ್ಪ ಎಂದು ಗುರುತಿಸಲಾಗಿದೆ.

“ನೀನು ಸತ್ತರೆ ಅಕ್ಕ ಚೆನ್ನಾಗಿ ಇರುತ್ತಾಳೆ” ಎಂದ ಬಾಮೈದುನ ಮಾತಿಗೆ ಸಿಟ್ಟಾದ ಮಲ್ಲಪ್ಪ ಎಂಬ ವ್ಯಕ್ತಿ ತನ್ನ ಬಾಮೈದ, ಪತ್ನಿ ಎದುರೇ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನು ಓದಿ : Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!

ಪತ್ನಿ ರೇಖಾ ಮತ್ತು ಅವರ ಸಹೋದರ ಮಲ್ಲಿಕಾರ್ಜುನ ಅವರಿಂದ ಮನನೊಂದು, “ನೀನು ಸತ್ತರೆ ಅಕ್ಕ ಚೆನ್ನಾಗಿರ್ತಾಳೆ” ಎಂಬ ಹೇಳಿಕೆಯಿಂದ ಆಘಾತಗೊಂಡ ಮಲ್ಲಪ್ಪ, ಮನೆಯಲ್ಲಿ ಕುಡುಗೋಲು ಬಳಸಿ ತನ್ನ ಕತ್ತು ಕೊಯ್ದುಕೊಂಡು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಲಹವೇ ಕಾರಣವೇನು?

ಮಲ್ಲಪ್ಪ ಹಾಗೂ ಪತ್ನಿ ನಡುವೆ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಮನೆಯಲ್ಲಿ ಬಾಮೈದ ಮಲ್ಲಿಕಾರ್ಜುನ ಹಾಗೂ ಪತ್ನಿ ರೇಖಾ ಜೊತೆ ಮಲ್ಲಪ್ಪ ಗಲಾಟೆ ಮಾಡಿಕೊಂಡಿದ್ದಾನೆ.

ಈ ನಡುವೆ ನಡುವೆ ಮಾತಿನ ಚಕಮಕಿಯ ಸಂದರ್ಭದಲ್ಲಿ ಬಾಮೈದ, “ನೀನು ಸತ್ತರೆ ಅಕ್ಕ ಚೆನ್ನಾಗಿ ಇರುತ್ತಾಳೆ” ಎಂದಿದ್ದಾನೆ. ಈ ಮಾತಿನಿಂದ ಮಲ್ಲಪ್ಪನಿಗೆ ಆಘಾತವಾಗಿದ್ದು, ಅವರು ಭಾವನಾತ್ಮಕವಾಗಿ ಕುಗ್ಗಿ ತನ್ನ ಬಾಮೈದ ಮತ್ತು ಪತ್ನಿ ಎದುರೇ ಕುಡುಗೋಲಿನಿಂದ ಕುತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ : RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪ್ರಕರಣ ದಾಖಲು :

ಈ ಸಂಬಂಧ ಮಾರಿಹಾಳ (Belagavi) ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ. ಮಲ್ಲಪ್ಪನ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Astrology : ಹೇಗಿದೆ ಗೊತ್ತಾ.? ಜುಲೈ 26 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 26, ಶನಿವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಮನೆಯಲ್ಲಿನ ಅಂತಹ ಕಲಹವು ನಿಮ್ಮ ಮನಸ್ಸನ್ನು ಅಸ್ಥಿರಗೊಳಿಸುತ್ತದೆ ಮತ್ತು ನಿಮ್ಮನ್ನು ಅಸಹನೆಯಲ್ಲಿರಿಸುತ್ತದೆ. ಬೌದ್ಧಿಕ ಚರ್ಚೆಗಳು ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು. ನಿಮ್ಮ ಖರ್ಚುವೆಚ್ಚಗಳನ್ನೂ ಪರಿಶೀಲಿಸಬೇಕು. ಆಡಂಬರದ ಖರ್ಚು ಯೋಗ್ಯವಾದುದಲ್ಲಿ. ಸಾಧ್ಯವಿದ್ದರೆ, ನಿಮ್ಮ ಪ್ರಯಾಣದ ಯೋಜನೆಗಳನ್ನು ಬೇರೊಂದು ದಿನಕ್ಕೆ ಮುಂದೂಡಿ.

*ವೃಷಭ ರಾಶಿ*

ಕಚೇರಿಯಲ್ಲಿ ನೀವು ಪ್ರದರ್ಶಿಸಲ್ಪಟ್ಟ ಮೇಧಾವಿತನದ ರೀತಿಯು ನಿಮ್ಮನ್ನು ಅಜೇಯ ಸ್ಪರ್ಧಿಯನ್ನಾಗಿಸುತ್ತದೆ. ಸಾಮಾಜಿಕ ಕ್ಷೇತ್ರದಲ್ಲೂ ನೀವು ಅಧಿಕಾರ ಚಲಾಯಿಸುತ್ತೀರಿ. ನಿಮ್ಮ ಸ್ಥಾನಮಾನದಲ್ಲಿ ಗಮನಾರ್ಹ ವೃದ್ಧಿಯನ್ನು ನಿರೀಕ್ಷಿಸಬಹುದು. ಮಧ್ಯಾಹ್ನದ ಬಳಿಕ, ಎಲ್ಲವೂ ಬದಲಾಗುತ್ತದೆ.

*ಮಿಥುನ ರಾಶಿ*

ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಗಾ ಇರಿಸಿ. ವಿದ್ಯಾರ್ಥಿಗಳಿಗೆ ಈ ದಿನವು ಕಷ್ಟಕರವಾಗಲಿದೆ ಇದರಿಂದಾಗಿ ಯಶಸ್ಸು ಗಳಿಸಲು ಸಾಧ್ಯವಾಗುವುದಿಲ್ಲ. ಮಧ್ಯಾಹ್ನದ ಬಳಿಕ, ಪರಿಸ್ಥಿತಿಯು ಸುಧಾರಿಸುವಂತೆ ಕಂಡುಬರುತ್ತವೆ. ಇದು ಕೆಲವು ಸ್ನೇಹಿತರನ್ನು ಔತಣಕೂಟಕ್ಕೆ ಆಹ್ವಾನಿಸಲು ಅಥವಾ ಅವರೊಂದಿಗೆ ತಿರುಗಾಟದ ಯೋಜನೆ ರೂಪಿಸಲು ಪ್ರಚೋದಿಸುತ್ತದೆ. ದಿನದ ದ್ವಿತೀಯಾರ್ಧದಲ್ಲಿ ಧನಲಾಭ ಉಂಟಾಗುವ ಸಂಭವವಿದೆ.

*ಕಟಕ ರಾಶಿ*

ನೀವು ಭಾವನಾತ್ಮಕವಾಗಿ ತೀಕ್ಷ್ಣವಾಗಿರುವಿರಿ ಆದರೆ, ನಿಮ್ಮ ದೃಷ್ಟಿಯು ದಿನಪೂರ್ತಿ ಭಾವನಾತ್ಮಕವಾಗಿಯೇ ಇದ್ದರೆ, ಇದು ನಿಮ್ಮ ಮೇಲೆ ಪರಿಣಾಮ ಬೀರಬಾರದು. ಮಾನಸಿಕ ಮತ್ತು ದೈಹಿಕ ಸ್ಥಿತಿಮಟ್ಟವು ಉತ್ತಮವಾಗಿರುತ್ತದೆ. ಮಧ್ಯಾಹ್ನದ ಬಳಿಕ ನಕಾರಾತ್ಮಕತೆಯು ನಿಮ್ಮ ಅಭಿಪ್ರಾಯ ಅಸ್ಪಷ್ಟಗೊಳಿಸುವ ಸಾಧ್ಯತೆಯಿರುವುದರಿಂದ ನಿಮ್ಮ ಮನಸ್ಸು, ದೇಹ ಮತ್ತು ಉತ್ಸಾಹದ ನಡುವಿನ ಸಾಮರಸ್ಯವನ್ನು ನಿಮ್ಮ ದುರಾಕ್ರಮಣ ಪ್ರವೃತ್ತಿಯು ಹಾಳುಮಾಡದಂತೆ ನೋಡಿಕೊಳ್ಳಿ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
*ಸಿಂಹ ರಾಶಿ*

ನಿಮ್ಮ ಪ್ರೀತಿಪಾತ್ರರ ಮುಂದೆ ಕಟು ಮಾತುಗಳನ್ನಾಡಬೇಡಿ, ಅವರು ನಿಮ್ಮೊಂದಿಗೆ ಕಲಹಕ್ಕೆ ಒಳಗಾಗಬಹುದು. ಸಣ್ಣ ಸಣ್ಣ ವಿವಾದಗಳಲ್ಲಿ ಮತ್ತು ಕಚ್ಚಾಟಗಳಲ್ಲಿ ತೊಡಗುವ ಬದಲು, ಅಗತ್ಯವಾಗಿ ಕಾಳಜಿ ಮತ್ತು ಗಮನದ ಅಗತ್ಯವಿರುವ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ನಿಮ್ಮ ನಿಲುವುಗಳು ಸಮಾಧಾನ ಹಾಗೂ ಯೋಗ್ಯವಾಗಿದ್ದಲ್ಲಿ, ದಿನದ ದ್ವಿತೀಯಾರ್ಧದಲ್ಲಿ ಎಲ್ಲವೂ ಮೇಲ್ಗತಿಯಲ್ಲಿ ಸಾಗಲಿದೆ.

*ಕನ್ಯಾ ರಾಶಿ*

ವೃತ್ತಿ, ವೈಯಕ್ತಿಕ ಅಥವಾ ಸಾಮಾಜಿಕ ಕ್ಷೇತ್ರವಾಗಿರಲಿ, ದಿನದ ಪೂರ್ವಾರ್ಧದಲ್ಲಿ ಗ್ರಹಗತಿಗಳು ನಿಮಗೆ ಸಂತಸ ಹಾಗೂ ತೃಪ್ತಿಭರಿತ ಪ್ರತಿಫಲವನ್ನು ನೀಡಲಿವೆ. ಈ ದಿನವು ಉತ್ತಮವಾಗಿದ್ದು, ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂತಸಭರಿತ ಪ್ರವಾಸ ಅಥವಾ ವಿಹಾರವನ್ನು ಕೈಗೊಳ್ಳಬಹುದು. ಮಧ್ಯಾಹ್ನದ ಬಳಿಕ ನಿಮ್ಮ ಗಮನವು ಬೇರೆಡೆಯಾದರೆ, ಪರಿಸ್ಥಿತಿಯು ಸ್ವಲ್ಪ ಕಷ್ಟಕರವಾಗಬಹುದು.

*ತುಲಾ ರಾಶಿ*

ಆಧ್ಯಾತ್ಮ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇದು ಉತ್ತಮ ದಿನ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿ, ಮೌಲ್ಯಯುತ ಕಾರ್ಯಗಳ ನೀಡುವ ಮೂಲಕ ನೀವು ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿತಗೊಳಿಸುತ್ತೀರಿ ಇದು ನಿಮಗೆ ಲಾಭದಾಯಕವಾಗಲಿದೆ. ಗೃಹಕ್ಷೇತ್ರಕ್ಕೆ ಸಂಬಂಧಿಸಿ, ಎಲ್ಲವೂ ದಿನಪೂರ್ತಿ ಪರಿಸ್ಥಿತಿಗಳೆಲ್ಲವೂ ಸುಗಮವಾಗಿರುತ್ತದೆ.

*ವೃಶ್ಚಿಕ ರಾಶಿ*

ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸಗಳಿಂದ ಹಣಕಾಸಿನ ಲಾಭದ ಹೊಸ ಮೂಲಗಳು ಸೃಷ್ಟಿಯಾಗಬಹುದು. ನೀವು ಪಿತ್ರಾರ್ಜಿತ ಆಸ್ತಿ ಪಡೆಯಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂದು, ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಭರವಸೆ ಮತ್ತು ಹತಾಶೆಯ ಭಾವನೆ ಇರುತ್ತದೆ.

ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
*ಧನುಸ್ಸು ರಾಶಿ*

ಕೆಲಸದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಆದಾಯ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ, ಆದರೆ ವೃತ್ತಿಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಸಹ ಕಂಡುಬರುತ್ತವೆ. ಇಂದು, ನೀವು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

*ಮಕರ ರಾಶಿ*

ಆದಾಯದ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗಬಹುದು, ಆದರೆ ಅತಿಯಾದ ಖರ್ಚುಗಳಿಂದ ಮನಸ್ಸು ತೊಂದರೆಗೊಳಗಾಗಬಹುದು. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಇಂದು, ನಿಮ್ಮ ಸ್ನೇಹಿತರ ಸಹಾಯದಿಂದ ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ ಮತ್ತು ಹಣದ ಒಳಹರಿವಿನ ಹೊಸ ಮಾರ್ಗಗಳು ಸೃಷ್ಟಿಯಾಗುತ್ತವೆ. ಆರೋಗ್ಯ ಚೆನ್ನಾಗಿರುತ್ತದೆ.

*ಕುಂಭ ರಾಶಿ*

ಹೊಸ ಆಲೋಚನೆಗಳು ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ದಿನ. ನಿಮ್ಮ ಪ್ರಯತ್ನಗಳಿಗೆ ಮನ್ನಣೆ ಸಿಗುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಲಾಭ ದೊರೆಯಬಹುದು. ಕುಟುಂಬದೊಂದಿಗೆ ಸಂತೋಷದಿಂದ ಇರುವಿರಿ. ಸ್ನೇಹಿತರ ಭೇಟಿ ಸಾಧ್ಯ. ಆರೋಗ್ಯ ಉತ್ತಮವಾಗಿರುತ್ತದೆ. ಮಾನಸಿಕವಾಗಿ ಶಾಂತವಾಗಿರುವಿರಿ.

*ಮೀನ ರಾಶಿ*

ಕೆಲಸದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ತಾಳ್ಮೆಯಿಂದ ವರ್ತಿಸಿ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಅನಾವಶ್ಯಕ ಖರ್ಚುಗಳಿಂದ ದೂರವಿರಿ. ಕುಟುಂಬದಲ್ಲಿ ಉತ್ತಮ ವಾತಾವರಣ ಇರುತ್ತದೆ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಾಲಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.

Astrology

heart-attack ವಾದ ಕೂಡಲೇ ತಕ್ಷಣದ ಪರಿಹಾರಕ್ಕೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಹೃದಯಾಘಾತ (heart-attack) ವಾದ ಕೂಡಲೇ ತಕ್ಷಣದ ಪರಿಹಾರಕ್ಕೆ ವ್ಯಕ್ತಿಯ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿದರೆ ಜೀವ ಉಳಿಯಬಹುದು.!. ಆಸ್ಪತ್ರೆಗೆ ತಲುಪಲು ಸಮಯ ತೆಗೆದುಕೊಳ್ಳುವ ಸಂದರ್ಭಗಳಲ್ಲಿ, ಮನೆಯಲ್ಲೇ ಇರುವ ಸಿಂಪಲ್ ಮನೆಮದ್ದುಗಳು ಕೆಲವೊಮ್ಮೆ ಜೀವ ಉಳಿಸಲು ಸಹಾಯ ಮಾಡಬಹುದು.

ತುಳಸಿ ಎಲೆಯ ರಸ, ಇದು ಒಂದು ನೈಸರ್ಗಿಕ ತಕ್ಷಣದ ಪರಿಹಾರಕ್ಕೆ ಉಪಯುಕ್ತ. ಈ ಎಲೆಯ ರಸವನ್ನು ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯ ನಾಲಿಗೆ ಮೇಲೆ ಹಿಂಡಿದರೆ ತಕ್ಷಣಕ್ಕೆ ಪರಿಹಾರ ಸಿಗಬಹುದು ಮತ್ತು ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸುವ ಮೂಲಕ ಆತನ ಪ್ರಾಣ ಉಳಿಸಬಹುದು.

ಇದನ್ನು ಓದಿ : RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಕೇವಲ ವಯಸ್ಸಾದವರಲ್ಲಷ್ಟೇ ಅಲ್ಲದೆ ಯುವ ಜನತೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಆಹಾರದಲ್ಲಿ ಅಸಮತೋಲನ, ಮಾನಸಿಕ ಒತ್ತಡ, ವೇಗದ ಜೀವನಶೈಲಿ, ಧೂಮಪಾನ ಹಾಗೂ ವ್ಯಾಯಾಮದ ಕೊರತೆ ಮುಂತಾದ ಕಾರಣಗಳಿಂದಾಗಿ ಹೃದಯಾಘಾತ (heart-attack), ಹೃದಯ ವೈಫಲ್ಯ ಮತ್ತು ಹೃದಯ ಸ್ತಂಭನೆ (Cardiac Arrest) ಸಂಬಂಧಿತ ಪ್ರಕರಣಗಳು ಯುವಕರಲ್ಲಿಯೂ ಹೆಚ್ಚು ಕಾಣಿಸುತ್ತಿವೆ.

ಹೃದಯಾಘಾತ (Heart Attack) ಎಂಬ ಶಬ್ದವೇ ಜನರಲ್ಲಿ ಭಯ ಹುಟ್ಟಿಸುತ್ತದೆ. ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಪರಿಹಾರಕ್ಕೆ ಸರಿಯಾದ ಕ್ರಮ ಕೈಗೊಳ್ಳದ ಮತ್ತು ಪ್ರಥಮ ಚಿಕಿತ್ಸೆ ನೀಡದಿದ್ದರೆ ರೋಗಿಯ ಜೀವ ಅಪಾಯಕ್ಕೆ ಒಳಗಾಗಬಹುದು. ಆದ್ದರಿಂದ, ತಕ್ಷಣದ ಪ್ರಾಥಮಿಕ ನೆರವು ನೀಡುವುದು ಅತ್ಯಗತ್ಯ.

ಹೃದಯಾಘಾತ (heart-attack) – ತಕ್ಷಣ ಏನು ಮಾಡಬೇಕು?

ಹೃದಯಾಘಾತ (heart-attack) ದ ಲಕ್ಷಣಗಳು ಕಂಡುಬಂದ ತಕ್ಷಣವೇ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವುದು ಅತ್ಯವಶ್ಯಕ. ಕೆಲವೊಮ್ಮೆ ಆಸ್ಪತ್ರೆ ತಲುಪುವ ಮೊದಲೇ ರೋಗಿಗಳು ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ. ಅಂಕಿಅಂಶಗಳ ಪ್ರಕಾರ, ಹೃದಯಾಘಾತ (heart-attack) ದ ನಂತರ ಶೇ. 50 ರಷ್ಟು ರೋಗಿಗಳು ತುರ್ತು ಚಿಕಿತ್ಸೆ ಸಿಗುವ ಮೊದಲು ಸಾವನ್ನಪ್ಪುತ್ತಾರೆ.

ಇದನ್ನು ಓದಿ : Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

ಈ ಹಿನ್ನೆಲೆಯಲ್ಲಿ ಜನರಿಗೆ ಎಷ್ಟೇ ಸ್ಪಷ್ಟ ಮಾಹಿತಿ ಇದ್ದರೂ ಕೂಡ, ರೋಗಿಗೆ ಸರಿಯಾದ ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬ ಅರಿವು ಕಡಿಮೆ ಇದೆ. ಹೀಗಾಗಿ ದುರ್ಘಟನೆಗಳು ನಡೆದೇ ಹೋಗುತ್ತವೆ.

ಹೃದಯಾಘಾತದ ಸಮಯದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ :
  1. ರೋಗಿಯನ್ನು ತಕ್ಷಣವೇ ತಂಪಾದ ಹಾಗೂ ಸುಸ್ಥಿತಿಯ ಸ್ಥಳಕ್ಕೆ ಕೂರಿಸಿ ಅಥವಾ ಮಲಗಿಸಿ.
  2. ಬಟ್ಟೆಗಳು ಬಿಗಿಯಾಗಿದ್ದರೆ, ಅವುಗಳನ್ನು ಸಡಿಲಗೊಳಿಸಿ.
  3. ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಅಥವಾ ಸಮೀಪದ ಆಸ್ಪತ್ರೆಗೆ ಸಂಪರ್ಕಿಸಿ.
  4. ರೋಗಿಯು ನಿಶ್ಚೇತನಗೊಂಡಿದ್ದರೆ, CPR (Cardiopulmonary Resuscitation) ನೀಡಬೇಕು.
  5. ಆತ ಎಚ್ಚರದಲ್ಲಿದ್ದರೆ, 300 ಮಿಲಿಗ್ರಾಂ Aspirin ನೀಡಬಹುದು (ಡಾಕ್ಟರ್ ಸಲಹೆಯೊಂದಿಗೆ ಮಾತ್ರ).
  6. ಯಾವುದೇ ವಿಳಂಬವಿಲ್ಲದೆ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಗತ್ಯ.
ಹೃದಯಾಘಾತದ ಮೊದಲ ಸೂಚನೆಗಳಾವವು.?

ಹೃದಯದ ತೀವ್ರ ಸಮಸ್ಯೆಗಳು ಆರಂಭವಾಗುವ ಮೊದಲೇ ಕೆಲವೊಂದು ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಪ್ರಾಣಾಪಾಯವಾಗಬಹುದು. ಹೀಗಾಗಿ ಈ ಕೆಳಗಿನ ಸಂಕೇತಗಳನ್ನು ಗಂಭೀರವಾಗಿ ಪರಿಗಣಿಸಬೇಕು:

  • ಎದೆಯಲ್ಲಿ ಭಾರ ಭಾಸ.
  • ಬಲವಾದ ಎದೆ ನೋವು (ಅನ್ನು ಎಡಭುಜದ ಕಡೆ ವ್ಯಾಪಿಸುವ ಸಾಧ್ಯತೆ).
  • ಉಸಿರಾಟದ ತೊಂದರೆ.
  • ತೀವ್ರ ಬೆವರುವುದು.
  • ನರಳಿಕೆ ಲಕ್ಷಣಗಳು (ಚಡಪಡಿಕೆ, ಕೈಕಾಲು ಒದ್ದೆ).
  • ವಾಕರಿಕೆ ಅಥವಾ ವಾಂತಿ.
ಇದನ್ನು ಓದಿ : Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!
ತತ್‌ಕ್ಷಣಕ್ಕೆ ತುಳಸಿ ಎಲೆಯ ಉಪಯೋಗ :

ತುಳಸಿ ಎಲೆಗಳು, ನೈಸರ್ಗಿಕ ಔಷಧೀಯ ಗುಣಗಳಿಂದ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತವೆ. ನಿಂಬೆ ರಸ ಹಾಗೂ ಜೇನುತುಪ್ಪದ ಜೊತೆಗೆ ತುಳಸಿ ಎಲೆಗಳ ರಸವನ್ನು ಸೇವನೆ ಮಾಡುವುದರಿಂದ ರಕ್ತನಾಳಗಳಲ್ಲಿ ಕಂಡುಬರುವ ಬ್ಲಾಕ್‌ಗಳನ್ನು ತೆರಗಿಸಲು ಸಹಕಾರಿಯಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ತುಳಸಿ ರಸ ಕುಡಿಯುವುದರಿಂದ ರಕ್ತದ ಹೆಪ್ಪುಗಟ್ಟಿಕೆ ಆಗದಂತೆ ತಡೆಯಬಹುದು, ಇದು ಜೀವ ಉಳಿಸಲು ಸಹಾಯ ಮಾಡಬಹುದು.

ಸಮಯವೇ ಜೀವ : ಮೊದಲ 15 ನಿಮಿಷಗಳ ಮಹತ್ವ :

ಹೃದಯಾಘಾತ (heart-attack) ಸಂಭವಿಸಿದ ಬಳಿಕದ ಪ್ರಥಮ 15 ನಿಮಿಷಗಳ ಕಾಲ ಅತ್ಯಂತ ಪ್ರಮುಖವಾಗಿರುತ್ತವೆ. ಈ ಅವಧಿಯಲ್ಲಿ ಸರಿಯಾದ ಪ್ರಥಮ ಚಿಕಿತ್ಸೆಯನ್ನು ನೀಡಿದರೆ, ಅನೇಕ ಜೀವಗಳನ್ನು ಉಳಿಸಬಹುದು. ಆತುರ ಅಥವಾ ಹೆದರಿಕೆಗೆ ಒಳಗಾಗಬಾರದು ಮತ್ತು ಶಾಂತ ಚಿಂತನೆಯೊಂದಿಗೆ ತ್ವರಿತವಾಗಿ ವೈದ್ಯಕೀಯ ನೆರವು ಪಡೆಯುವ ಕೆಲಸ ಮಾಡಬೇಕು.

ಸಂಪಾದಕೀಯ :

ಹೃದಯಾಘಾತ (heart-attack) ವು ತುರ್ತು ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಲ್ಪಡುವುದರಿಂದ, ಅದರ ಬಗ್ಗೆ ಸಮರ್ಪಕ ಜಾಗೃತಿ ಮತ್ತು ತಕ್ಷಣದ ಕ್ರಮಗಳು ಜೀವ ಉಳಿಸಲು ಪ್ರಮುಖ ಪಾತ್ರವಹಿಸುತ್ತವೆ. ಮನೆಮದ್ದುಗಳು ಉಪಯೋಗವಾಗಬಹುದು, ಆದರೆ ಅವು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ ಎಂಬುದನ್ನು ನೆನಪಿನಲ್ಲಿ ಇಡಬೇಕು.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

Kidney

ಜನಸ್ಪಂದನ ನ್ಯೂಸ್‌, ಅರೋಗ್ಯ : ಬೆಳಿಗ್ಗೆಯ ಈ 4 ಲಕ್ಷಣಗಳು ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಅವು ಮೂತ್ರಪಿಂಡ (Kidney) ದ ಆರಂಭಿಕ ಸಮಸ್ಯೆಯ ಸೂಚನೆಗಳಾಗಿರಬಹುದು.! ಹಾಗಾದ್ರೆ ಆ ಲಕ್ಷಣಗಳಾವವು.? ಬನ್ನಿ ಅದರ ಬಗ್ಗೆ ತಿಳಿಯೋಣ.

ಫೋರ್ಟಿಸ್ ಆಸ್ಪತ್ರೆ, ನೋಯ್ಡಾದ ಮೂತ್ರಪಿಂಡ (Kidney) ವಿಭಾಗದ ಹೆಚ್ಚುವರಿ ನಿರ್ದೇಶಕಿ ಡಾ. ಅನುಜಾ ಪೋರ್ವಾಲ್ ಅವರ ಅಭಿಪ್ರಾಯದಂತೆ, ಕೆಟ್ಟ ಆಹಾರ ನಿಯಮಗಳು ಮತ್ತು ಅನಾರೋಗ್ಯಕರ ಜೀವನಶೈಲಿಯು ಮೂತ್ರಪಿಂಡದ ಮೇಲೆ ಹೆಚ್ಚಾದ ಒತ್ತಡ ಉಂಟುಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಯು ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ.

ಮೂತ್ರಪಿಂಡ (Kidney) ದ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿರುವ ಸೂಚನೆಗಳೇನು?

ಅನುಜಾ ಪೋರ್ವಾಲ್ ಅವರ ಪ್ರಕಾರ, ಮೂತ್ರಪಿಂಡ (Kidney) ದ ದೋಷಗಳು ದೇಹದಲ್ಲಿ ಕೆಲ ಸ್ಪಷ್ಟವಾದ ಬದಲಾವಣೆಗಳ ಮೂಲಕ ಸೂಚನೆ ನೀಡುತ್ತವೆ. ಅವುಗಳಲ್ಲಿ ಪ್ರಮುಖವಾಗಿರುವವು:

1. ಬೆಳಿಗ್ಗೆಯ ದೌರ್ಬಲ್ಯ ಮತ್ತು ಆಯಾಸ :

ನೀವು ಬೆಳಿಗ್ಗೆ ಎದ್ದ ಕೂಡಲೆ ಅಸಹಜ ದಣಿವನ್ನು ಅನುಭವಿಸುತ್ತಿದ್ದರೆ, ಅದು ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯ ಲಕ್ಷಣವಾಗಿರಬಹುದು. ವಿಷಕಾರಿ ತತ್ವಗಳು ರಕ್ತದಲ್ಲಿ ಸಂಗ್ರಹವಾಗುತ್ತಿದ್ದರಿಂದ ದೇಹದಲ್ಲಿ ಆಯಾಸ ಹಾಗೂ ಶಕ್ತಿ ಕೊರತೆಯುಂಟಾಗುತ್ತದೆ.

2. ಮೂತ್ರದಲ್ಲಿ ಬಣ್ಣ ಮತ್ತು ಪ್ರಮಾಣದ ಬದಲಾವಣೆ :

ಹಲವಾರು ಸಂದರ್ಭಗಳಲ್ಲಿ ಬೆಳಿಗ್ಗೆಯ ಮೊದಲ ಮೂತ್ರವೇ ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಮುಖ ಸೂಚನೆ ನೀಡುತ್ತದೆ. ಮೂತ್ರದಲ್ಲಿ ಹಳದಿ ಬಣ್ಣ ತೀವ್ರವಾಗಿದ್ದರೆ ಅಥವಾ ಗಾಢವಾದ ನೊರೆ ಕಾಣುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನು ಓದಿ : BOB ನೇಮಕಾತಿ : 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
3. ಬಾಯಾರಿಕೆ ಮತ್ತು ಹೊಟ್ಟೆ ಸೆಳೆತ :

ಅತಿಯಾದ ಬಾಯಾರಿಕೆಯಾಗುವುದು ದೇಹದಲ್ಲಿ ನೀರಿನ ಅಸಮತೋಲನದ ಪ್ರತೀಕವಾಗಿದೆ. ಜೊತೆಗೆ ಹೊಟ್ಟೆ ಊತ ಅಥವಾ ಸೆಳೆತವೂ ಮೂತ್ರಪಿಂಡದ ಕಾರ್ಯದಲ್ಲಿ ಸಮಸ್ಯೆ ಉಂಟಾದಾಗ ಕಂಡುಬರುವ ಲಕ್ಷಣಗಳಾಗಿವೆ.

4. ಚರ್ಮದ ತುರಿಕೆ ಅಥವಾ ದದ್ದುಗಳು :

ವಿಷಕಾರಿ ತತ್ವಗಳ ಸಂಗ್ರಹಣೆಯಿಂದಾಗಿ ಚರ್ಮದ ಮೇಲೆ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಎದ್ದು ತುರಿಕೆ ಅಥವಾ ದದ್ದು ಕಾಣಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.

Accident : ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ; 4 ಸಾವು.!

0

ಜನಸ್ಪಂದನ ನ್ಯೂಸ್‌, ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದ್ದು, ನಾಲ್ವರು ಯುವಕರು ದುರ್ಮರಣಕ್ಕೆ ಒಳಗಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಲ್ಲಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ (Accident) ಪರಿಣಾಮ, ಕಾರಿನಲ್ಲಿದ್ದ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.

ಅಪಘಾತ (Accident) ದಲ್ಲಿ ಸಾವೀಗೀಡಾದವರು :

ಈ ಭೀಕರ ಅಪಘಾತದಲ್ಲಿ (Accident) ಮೃತರಾದವರನ್ನು ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ನಿವಾಸಿಗಳಾದ ರಿಜ್ವಾನ್, ನಹೀದ್, ರಾಕಿಬ್ ಮತ್ತು ನಿಹಾದ್ ಎಂದು ಗುರುತಿಸಲಾಗಿದೆ.

ಅಪಘಾತ (Accident) ಕ್ಕೀಡಾದ ಕಾರು ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿತ್ತು. ಕಾರಿನಲ್ಲಿದ್ದರು ಗುರುವಾರ ಉಳ್ಳಾಲಕ್ಕೆ ಹೋಗಿ ಇಂದು (ಜು.25) ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ದೇವರಕೊಲ್ಲಿಯ ಬಳಿ ಎದುರಿನಿಂದ ಬಂದ ಲಾರಿ, ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ (Accident) ಸಂಭವಿಸಿದೆ.

ಲಾರಿ ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ನಡೆದರೂ, ಅವರು ಮಾರ್ಗಮಧ್ಯದಲ್ಲೇ ಪ್ರಾಣ ತ್ಯಜಿಸಿದ್ದಾರೆ.

ಅಪಘಾತ (Accident) ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಅಪಘಾತ (Accident) ದ ನಂತರ ರಸ್ತೆ ಮೇಲೆ ಇತ್ತು ಕಾರು ಹಾಗೂ ಲಾರಿಗೆ ತೆರವು ಕಾರ್ಯಾಚರಣೆ ನಡೆಸಲಾಗಿದೆ.

Astrology : ಹೇಗಿದೆ ಗೊತ್ತಾ.? ಜುಲೈ 25 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 25, ಶುಕ್ರವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಎಲ್ಲಾ ಕಡೆಯಿಂದ ಆದಾಯದ ಮಾರ್ಗಗಳಿವೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಿ ಲಾಭವನ್ನು ಪಡೆಯುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಶುಭ ಸುದ್ದಿ ದೊರೆಯುತ್ತದೆ. ಸಂಗಾತಿಯೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ.

*ವೃಷಭ ರಾಶಿ*

ಪ್ರಮುಖ ವ್ಯವಹಾರಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳಿಗೆ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ. ಕುಟುಂಬ ವ್ಯವಹಾರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ನಿವಾರಿಸುತ್ತೀರಿ. ಹೊಸ ಸಾಲ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ.

*ಮಿಥುನ ರಾಶಿ*

ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳು ದೂರವಾಗುತ್ತವೆ. ಹೊಸ ವ್ಯವಹಾರಗಳಿಗೆ ಹೂಡಿಕೆಗಳು ದೊರೆಯುತ್ತವೆ. ಮಕ್ಕಳ ವಿವಾಹ ಉದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ಉದ್ಯೋಗಿಗಳು ತಮ್ಮ ಜವಾಬ್ದಾರಿಗಳಲ್ಲಿ ಅಡೆತಡೆಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ. ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

*ಕಟಕ ರಾಶಿ*

ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಉದ್ಯೋಗಿಗಳು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ, ಮನೆಯಲ್ಲಿ ಹೊಸ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
*ಸಿಂಹ ರಾಶಿ*

ಮನೆಯಲ್ಲಿ ಶುಭ ಕಾರ್ಯಗಳು ನೆರವೇರುತ್ತವೆ. ಹೊಸ ವಸ್ತ್ರ, ಆಭರಣಗಳನ್ನು ಖರೀದಿಸಲಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಪಾಲುದಾರರೊಂದಿಗೆ ಸೌಹಾರ್ದತೆ ಹೆಚ್ಚಾಗುತ್ತದೆ . ಕೆಲವು ಕಾರ್ಯಕ್ರಮಗಳನ್ನು ಉತ್ಸಾಹದಿಂದ ಪ್ರಾರಂಭಿಸಿ ಸಮಯಕ್ಕೆ ಪೂರ್ಣಗೊಳಿಸಲಾಗುತ್ತದೆ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ.

*ಕನ್ಯಾ ರಾಶಿ*

ವ್ಯಾಪಾರ ವಿಸ್ತರಣೆಗೆ ಹೊಸ ಹೂಡಿಕೆಗಳು ದೊರೆಯುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಇದ್ದ ಸಮಸ್ಯೆಗಳು ಬಗೆಹರಿಯುತ್ತವೆ. ಕೈಗೊಂಡ ವ್ಯವಹಾರಗಳಲ್ಲಿ ಯಶಸ್ವಿಯಾಗುತ್ತೀರಿ. ಸಮಾಜದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ. ಭೂಮಿಗೆ ಸಂಬಂಧಿಸಿದ ಖರೀದಿಗಳು ಲಾಭದಾಯಕವಾಗಿರುತ್ತವೆ. ಖರ್ಚು ವೆಚ್ಚಗಳ ವಿಷಯದಲ್ಲಿ ಮರುಪರಿಶೀಲಿಸಬೇಕು.

*ತುಲಾ ರಾಶಿ*

ದೀರ್ಘಕಾಲದ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಮಾನಸಿಕ ಪ್ರಶಾಂತತೆ ಪಡೆಯುತ್ತೀರಿ. ಹಳೆಯ ವಿಷಯಗಳು ನೆನಪಾಗುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಪ್ರತಿಸ್ಪರ್ಧಿಗಳು ಸಹ ಸ್ನೇಹಿತರಾಗಿ ಪರಸ್ಪರ ಸಹಾಯ ಮಾಡುತ್ತಾರೆ. ವ್ಯಾಪಾರ ಉದ್ಯೋಗಗಳಲ್ಲಿ ನಿರೀಕ್ಷಿತ ಬದಲಾವಣೆಗಳಾಗುತ್ತವೆ.

*ವೃಶ್ಚಿಕ ರಾಶಿ*

ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಮನೆಯ ಹೊರಗೆ ಗೌರವ ಮತ್ತು ಘನತೆ ಹೆಚ್ಚಾಗುತ್ತದೆ. ಕುಟುಂಬದ ಕೆಲವರ ವರ್ತನೆ ಅಚ್ಚರಿ ಮೂಡಿಸುತ್ತದೆ. ವೃತ್ತಿಪರ ವ್ಯವಹಾರಗಳಿಗೆ ಲಾಭ ದೊರೆಯುತ್ತದೆ. ಉದ್ಯೋಗಗಳಲ್ಲಿ ಅನುಕೂಲತೆ ಹೆಚ್ಚಾಗುತ್ತದೆ. ಆರ್ಥಿಕ ಸಂಕಷ್ಟವಿದ್ದರೂ ಆದಾಯದ ವಿಷಯದಲ್ಲಿ ಕೊರತೆಯಿರುವುದಿಲ್ಲ.

ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
*ಧನುಸ್ಸು ರಾಶಿ*

ಖರ್ಚಿಗೆ ತಕ್ಕಷ್ಟು ಆದಾಯ ದೊರೆಯುತ್ತದೆ. ಪ್ರಮುಖ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಗುತ್ತದೆ. ಹಳೆಯ ಸ್ನೇಹಿತರ ಪುನರ್ಮಿಲನವು ಸಂತೋಷವನ್ನು ತರುತ್ತದೆ ಮತ್ತು ಸ್ಥಿರಾಸ್ತಿ ವಿವಾದಗಳು ರಾಜಿಯಾಗುತ್ತವೆ. ವ್ಯಾಪಾರಗಳಿಗೆ ಹೊಸ ಪ್ರೋತ್ಸಾಹ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಕನಸುಗಳು ನನಸಾಗುತ್ತವೆ.

*ಮಕರ ರಾಶಿ*

ಆತ್ಮೀಯರ ಸಹಕಾರದಿಂದ ಸಾಲದ ಸಮಸ್ಯೆಯಿಂದ ಮುಕ್ತಿ ಹೊಂದುತ್ತೀರಿ. ವಾಹನ ಖರೀದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ. ಇತರರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳಿಂದ ಮುಕ್ತರಾಗುತ್ತಾರೆ.

*ಕುಂಭ ರಾಶಿ*

ಆದಾಯ ಅಗತ್ಯಕ್ಕೆ ಸಾಕಾಗದೇ ಹೊಸ ಸಾಲ ಮಾಡಬೇಕಾಗುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಸರಿಯಾದ ಆಲೋಚನೆಯಿಲ್ಲದೆ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತವೆ. ಸಣ್ಣ ಕೈಗಾರಿಕೆಗಳು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ.

*ಮೀನ ರಾಶಿ*

ಮನೆಯೊಳಗೆ ಜನಪ್ರಿಯತೆ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಅಗತ್ಯಕ್ಕೆ ಆರ್ಥಿಕ ನೆರವು ದೊರೆಯುತ್ತವೆ. ಹೊಸ ವಸ್ತ್ರ, ಆಭರಣಗಳನ್ನು ಖರೀದಿಸಲಾಗುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತಂದು ಲಾಭವನ್ನು ಪಡೆಯಲಾಗುತ್ತದೆ. ಉದ್ಯೋಗಿಗಳಿಗೆ ಉನ್ನತ ಹುದ್ದೆಗಳು ದೊರೆಯುತ್ತವೆ.

Astrology

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪತ್ನಿ (Wife) ಯೋರ್ವಳು, ತನ್ನ ಪತಿಯನ್ನು ಹತ್ಯೆಗೈದು ನಂತರ ಮೃತದೇಹವನ್ನು ಮನೆ ಮುಂದೆ ಎಸೆದು ಹೋದ ಮಾನವೀಯತೆಯ ಹದಗೆಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಇಂತಹ ಹದಗೆಟ್ಟ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಇಲ್ಲಿ ಪತ್ನಿ (Wife) ಯೊಬ್ಬಳು ತನ್ನ ತಮ್ಮನ ಸಹಾಯದಿಂದ ಗಂಡನನ್ನು ಭೀಕರವಾಗಿ ಹತ್ಯೆ ಮಾಡಿ, ನಂತರ ಆತನ ಮೃತದೇಹವನ್ನು ನೇರವಾಗಿ ಗಂಡನ ಮನೆಯ ಮುಂದೆ ಎಸೆದಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಇದನ್ನು ಓದಿ : Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!

ಮೃತ ದುರ್ದೈವಿ ಪತಿಯನ್ನು ನಂದ್ಯಾಲ ಜಿಲ್ಲೆಯ ನೂನೆಪಲ್ಲೆ ಗ್ರಾಮದ ನಿವಾಸಿ ರಾಮಣಯ್ಯ (50) ಎದು ಗುರುತಿಸಲಾಗಿದ್ದು, ಪತ್ನಿ (Wife) ರಮಣಮ್ಮ ಮತ್ತು ಆಕೆಯ ತಮ್ಮ ರಾಮಯ್ಯ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗುತ್ತಿದೆ.

ಘಟನೆ ಹೀಗಿದೆ :

ರಾಮಣಯ್ಯ ಕಳೆದ 20 ವರ್ಷಗಳಿಂದ ಪಿಡುಗುರಲ್ಲ ಗ್ರಾಮದ ರಮಣಮ್ಮ ಎಂಬುವವರೊಂದಿಗೆ ವಿವಾಹಿತರಾಗಿದ್ದು, ದಂಪತಿಗಳಿಗೆ ಜ್ಯೋತಿ, ಚಂದನ ಮತ್ತು ಸಾಯಿ ಎಂಬ ಮೂರು ಮಕ್ಕಳು. ಕೆಲ ವರ್ಷಗಳಿಂದ ದಂಪತಿಯ ನಡುವೆ ಗಂಭೀರ ಮನಸ್ತಾಪ ಉಂಟಾಗಿದ್ದ ಹಿನ್ನೆಲೆಯಲ್ಲಿ, ರಮಣಮ್ಮ ತನ್ನ ತವರುಮನೆ ಪಿಡುಗುರಲ್ಲ ಗ್ರಾಮದಲ್ಲಿ ವಾಸಿಸುತ್ತಿದ್ದಳು.

ಇತ್ತೀಚೆಗೆ ಪತ್ನಿ (Wife) ಯನ್ನು ಮನೆಗೆ ಕರೆತರಲು ರಾಮಣಯ್ಯ ಪಿಡುಗುರಲ್ಲ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪತ್ನಿ (Wife) ರಮಣಮ್ಮ ಮತ್ತು ಆಕೆಯ ಸಹೋದರ ರಾಮಯ್ಯ ಇಬ್ಬರು ರಾಮಣಯ್ಯನ ಮೇಲೆ ಕಣ್ಣಿಗೆ ಕಾರದ ಪುಡಿ ಎರಚಿ, ನಂತರ ಕತ್ತು ಹಿಸುಕಿಕೊಂಡು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : BSF : 3,588 ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹತ್ಯೆಯ ಬಳಿಕ ಅವರು ರಾಮಣಯ್ಯನ ಮೃತದೇಹವನ್ನು ನಂದ್ಯಾಲದ ರಾಮಣಯ್ಯನ ಮನೆಯ ಎದುರು ಎಸೆದು ಪರಾರಿಯಾದ್ದಾರೆ. ಘಟನೆ ಕಂಡ ಮಕ್ಕಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು (Wife & brother in law) ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

Kidney

ಜನಸ್ಪಂದನ ನ್ಯೂಸ್‌, ಅರೋಗ್ಯ : ಬೆಳಿಗ್ಗೆಯ ಈ 4 ಲಕ್ಷಣಗಳು ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಅವು ಮೂತ್ರಪಿಂಡ (Kidney) ದ ಆರಂಭಿಕ ಸಮಸ್ಯೆಯ ಸೂಚನೆಗಳಾಗಿರಬಹುದು.! ಹಾಗಾದ್ರೆ ಆ ಲಕ್ಷಣಗಳಾವವು.? ಬನ್ನಿ ಅದರ ಬಗ್ಗೆ ತಿಳಿಯೋಣ.

ದೈನಂದಿನ ಜೀವನಶೈಲಿಯಲ್ಲಿ ನಾವು ಅತ್ಯಂತ ಕಡಿಮೆ ಗಮನ ಕೊಡುವ ಅಂಗಗಳಲ್ಲಿ ಮೂತ್ರಪಿಂಡ (Kidney) ವೂ ಒಂದು. ರಕ್ತವನ್ನು ಶುದ್ಧಗೊಳಿಸುವ ಮೂಲಕ ದೇಹದಲ್ಲಿನ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಪ್ರಮುಖ ಕೆಲಸ ಮಾಡುವುದೇ ಈ ಅಂಗ. ಆದರೆ, ಮೊತ್ತಮೊದಲಿಗೆ ಗುರುತಿಸಲಾಗದ ಕೆಲವು ಸಣ್ಣ ಲಕ್ಷಣಗಳೇ ಮುಂದೆ ಜೀವಘಾತಕ ಸಮಸ್ಯೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನು ಓದಿ : Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!

ಫೋರ್ಟಿಸ್ ಆಸ್ಪತ್ರೆ, ನೋಯ್ಡಾದ ಮೂತ್ರಪಿಂಡ (Kidney) ವಿಭಾಗದ ಹೆಚ್ಚುವರಿ ನಿರ್ದೇಶಕಿ ಡಾ. ಅನುಜಾ ಪೋರ್ವಾಲ್ ಅವರ ಅಭಿಪ್ರಾಯದಂತೆ, ಕೆಟ್ಟ ಆಹಾರ ನಿಯಮಗಳು ಮತ್ತು ಅನಾರೋಗ್ಯಕರ ಜೀವನಶೈಲಿಯು ಮೂತ್ರಪಿಂಡದ ಮೇಲೆ ಹೆಚ್ಚಾದ ಒತ್ತಡ ಉಂಟುಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಯು ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ.

ಮೂತ್ರಪಿಂಡ (Kidney) ದ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿರುವ ಸೂಚನೆಗಳೇನು?

ಅನುಜಾ ಪೋರ್ವಾಲ್ ಅವರ ಪ್ರಕಾರ, ಮೂತ್ರಪಿಂಡ (Kidney) ದ ದೋಷಗಳು ದೇಹದಲ್ಲಿ ಕೆಲ ಸ್ಪಷ್ಟವಾದ ಬದಲಾವಣೆಗಳ ಮೂಲಕ ಸೂಚನೆ ನೀಡುತ್ತವೆ. ಅವುಗಳಲ್ಲಿ ಪ್ರಮುಖವಾಗಿರುವವು:

1. ಬೆಳಿಗ್ಗೆಯ ದೌರ್ಬಲ್ಯ ಮತ್ತು ಆಯಾಸ :

ನೀವು ಬೆಳಿಗ್ಗೆ ಎದ್ದ ಕೂಡಲೆ ಅಸಹಜ ದಣಿವನ್ನು ಅನುಭವಿಸುತ್ತಿದ್ದರೆ, ಅದು ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯ ಲಕ್ಷಣವಾಗಿರಬಹುದು. ವಿಷಕಾರಿ ತತ್ವಗಳು ರಕ್ತದಲ್ಲಿ ಸಂಗ್ರಹವಾಗುತ್ತಿದ್ದರಿಂದ ದೇಹದಲ್ಲಿ ಆಯಾಸ ಹಾಗೂ ಶಕ್ತಿ ಕೊರತೆಯುಂಟಾಗುತ್ತದೆ.

2. ಮೂತ್ರದಲ್ಲಿ ಬಣ್ಣ ಮತ್ತು ಪ್ರಮಾಣದ ಬದಲಾವಣೆ :

ಹಲವಾರು ಸಂದರ್ಭಗಳಲ್ಲಿ ಬೆಳಿಗ್ಗೆಯ ಮೊದಲ ಮೂತ್ರವೇ ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಮುಖ ಸೂಚನೆ ನೀಡುತ್ತದೆ. ಮೂತ್ರದಲ್ಲಿ ಹಳದಿ ಬಣ್ಣ ತೀವ್ರವಾಗಿದ್ದರೆ ಅಥವಾ ಗಾಢವಾದ ನೊರೆ ಕಾಣುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನು ಓದಿ : BOB ನೇಮಕಾತಿ : 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
3. ಬಾಯಾರಿಕೆ ಮತ್ತು ಹೊಟ್ಟೆ ಸೆಳೆತ :

ಅತಿಯಾದ ಬಾಯಾರಿಕೆಯಾಗುವುದು ದೇಹದಲ್ಲಿ ನೀರಿನ ಅಸಮತೋಲನದ ಪ್ರತೀಕವಾಗಿದೆ. ಜೊತೆಗೆ ಹೊಟ್ಟೆ ಊತ ಅಥವಾ ಸೆಳೆತವೂ ಮೂತ್ರಪಿಂಡದ ಕಾರ್ಯದಲ್ಲಿ ಸಮಸ್ಯೆ ಉಂಟಾದಾಗ ಕಂಡುಬರುವ ಲಕ್ಷಣಗಳಾಗಿವೆ.

4. ಚರ್ಮದ ತುರಿಕೆ ಅಥವಾ ದದ್ದುಗಳು :

ವಿಷಕಾರಿ ತತ್ವಗಳ ಸಂಗ್ರಹಣೆಯಿಂದಾಗಿ ಚರ್ಮದ ಮೇಲೆ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಎದ್ದು ತುರಿಕೆ ಅಥವಾ ದದ್ದು ಕಾಣಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.

ಸಮಯಕ್ಕೆ ಚಿಕಿತ್ಸೆ ಅತಿ ಮುಖ್ಯ :

ಮೂತ್ರಪಿಂಡ (Kidney) ಸಂಬಂಧಿತ ಯಾವುದೇ ಸಮಸ್ಯೆಯನ್ನು ಮುಂಚಿತವಾಗಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಗಂಭೀರ ಸ್ಥಿತಿಯನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ದೈನಂದಿನ ಚಟುವಟಿಕೆಗಳಲ್ಲಿ ಈ ರೀತಿಯ ಲಕ್ಷಣಗಳನ್ನು ಗಮನಿಸಿ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು.

ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಬಿದ್ದ Plane ; ರಸ್ತೆಯಲ್ಲಿದ್ದ 2 ಕಾರುಗಳಿಗೆ ಬೆಂಕಿ, ಇಬ್ಬರ ದುರ್ಮರಣ.!

light-Plane-crash

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಲಘು ವಿಮಾನ (Plane) ಯೊಂದು ಬಿದ್ದ ಪರಿಣಾಮವಾಗಿ ರಸ್ತೆಯಲ್ಲಿದ್ದ ಸಂಚರಿಸುತ್ತಿದ್ದ 2 ಕಾರುಗಳು ಬೆಂಕಿಗೆ ಆಹುತಿಯಾಗಿದ್ದಲ್ಲದೇ ಇಬ್ಬರ ದುರ್ಮರಣ ಸಂಭವಿದ ಘಟನೆಯೊಂದು ನಡೆದಿದೆ.

ಹೌದು, ಮಧ್ಯ ಇಟಲಿಯಲ್ಲಿ ಜನನಿಬಿಡ ಹೈವೇ ಮೇಲೆಯೇ ಸಂಭವಿಸಿದ ಲಘು ವಿಮಾನ (Plane) ದುರಂತವು ಮತ್ತೊಮ್ಮೆ ವಿಮಾನಯಾನ ಸುರಕ್ಷತೆ ಕುರಿತು ಆತಂಕವನ್ನು ಮೂಡಿಸಿದೆ. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನ (Plane) ವು ನಿಯಂತ್ರಣ ತಪ್ಪಿ ನೇರವಾಗಿ ರಸ್ತೆಯತ್ತ ಸಾಗಿ ಬಂದು ಪತನಗೊಂಡಿದೆ.

ವಿಮಾನ ಅಪಘಾತದ ವೇಳೆ ಬ್ರೆಸಿಯಾ ಬಳಿಯ A21 ಕಾರ್ಡಮೊಲ್ಲೆ-ಆಸ್ಪಿಟೇಲ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಕಾರುಗಳು ಈ ದುರಂತದಲ್ಲಿ ಸುಟ್ಟು ಕರಗಲಾಗಿದ್ದು, ಸ್ಥಳದಲ್ಲಿ ಭಾರೀ ಬಿಕ್ಕಟ್ಟು ಉಂಟಾಯಿತು. ಸದ್ಯ ಅದರ ವಿಮಾನ (Plane) ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು. ಈ ದುರಂತದಲ್ಲಿ ಗಾಯಗೊಂಡಿದ್ದ ಕಾರು ಚಾಲಕರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರುಗಳಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಅಪಘಾತದ ಪರಿಣಾಮ ವಿಮಾನ (Plane) ದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು 75 ವರ್ಷದ ವಕೀಲ ಸೆರ್ಗಿಯೊ ರಾವಗ್ಲಿಯಾ ಮತ್ತು ಅವರ 55 ವರ್ಷದ ಪತ್ನಿ ಅನ್ನಾ ಮಾರಿಯಾ ಡಿ ಸ್ಟೆಫಾನೊ ಎನ್ನಲಾಗಿದೆ. ವಿಮಾನವು ನಿಯಂತ್ರಣ ತಪ್ಪಿ ಜನನಿಬಿಡ ಹೆದ್ದಾರಿಗೆ ಡಿಕ್ಕಿ ಹೊಡೆಯುವ ಮೊದಲು ಕೆಲವೇ ಕ್ಷಣಗಳ ಮೊದಲು ಟೇಕ್ ಆಫ್ ಆಗಿತ್ತು ಎಂದು ವರದಿಯಾಗಿದೆ.

ಅಪಘಾತಕ್ಕೀಡಾದ ವಿಮಾನ (Plane) ದ ವಿಡಿಯೋ :

https://twitter.com/i/status/1948012354052243829

ಸಾರ್ವಜನಿಕರ ಆತಂಕ :

ಈ ಮಾದರಿಯ ಘಟನೆಗಳು ಪುನಃಪುನಃ ನಡೆಯುತ್ತಿರುವುದರಿಂದ, ಖಾಸಗಿ ವಿಮಾನ (Plane) ಸಂಸ್ಥೆಗಳ ತಾಂತ್ರಿಕ ಪರಿಶೀಲನೆ ಕುರಿತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. “ವಿಮಾನ (Plane)ಗಳ ಶ್ರೇಣಿತ ಪರಿಶೀಲನೆ ಮತ್ತು ಸುರಕ್ಷಾ ಪ್ರಮಾಣೀಕರಣವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಇಂಥ ದುರ್ಘಟನೆಗಳು ಮುಂದೆಯೂ ಸಂಭವಿಸಬಹುದೆಂಬ ಭೀತಿಯಿದೆ” ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : 100% ಉಪಯೋಗ, 0% ವ್ಯರ್ಥ ; ಭಾರತೀಯ ಮಹಿಳೆ (indian-woman) ಯ ತಂತ್ರಕ್ಕೆ ನೆಟ್ಟಿಗರು ಶಾಕ್.! ಏನಿದು ಅಂತೀರಾ.? ಇಲ್ಲೇ ಇರೋದು ರಹಸ್ಯ.! ಈ ರಹಸ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಲ್ಲೋಬ್ಬ ಮಹಿಳೆ ಹಣ ಉಳಿಸಲು ವಸ್ತುಗಳನ್ನು ಹೇಗೆ ಬಳಸಬೇಕೆನ್ನುವದನ್ನು ಮಾಡಿ ತೋರಿಸಿದ್ದಾರೆ. ಅದರಲ್ಲೂ ಹಣ ಉಳಿಸುವಲ್ಲಿ ಮತ್ತು ವಸ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ತೋರಿಸಲು ಭಾರತೀಯ ಹೆಣ್ಮಕ್ಕಳಿಗೆ ವಿಶೇಷ ಪ್ರಾವೀಣ್ಯವಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 24 ರ ದ್ವಾದಶ ರಾಶಿಗಳ ಫಲಾಫಲ.!

ಆಹಾರ ಪದಾರ್ಥವಾಗಲಿ ಅಥವಾ ದಿನಸರಿ ಬಳಕೆಯ ವಸ್ತುಗಳಾಗಲಿ ಅವು ವ್ಯರ್ಥವಾಗದಂತೆ ಬಳಸುವ ಜಾಣ್ಮೆಯನ್ನು ಈ ಭಾರತೀಯ ನಾರಿ (indian-woman) ಯಿಂದ ಕಲಿಯುವುದು ತುಂಬಾ ಇದೆ. ಸದ್ಯ ಈ ಭಾರತೀಯ ನಾರಿ, ಮಾರುಕಟ್ಟೆಯಿಂದ ತಂದ ಪಾಕೇಟ್‌ನಿಂದ ಎಣ್ಣೆಯನ್ನು ಹೇಗೆ ತೆಗೆಯಬೇಕು ಮತ್ತು ಅದನ್ನು ಹೇಗೆಲ್ಲಾ ಬಳಸಬಹುದು ಎನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ.

ಪ್ರತಿ ಹನಿ ಎಣ್ಣೆ ವ್ಯರ್ಥವಲ್ಲ ಎಂಬ ಮಹಿಳೆಯ ಸ್ಪಷ್ಟ ಸಂದೇಶ :

ವೈರಲ್ ಆಗಿರುವ ವಿಡಿಯೋದಲ್ಲಿ, ಓರ್ವ ಭಾರತೀಯ ಮಹಿಳೆ (indian-woman) ಸಾಸಿವೆ ಎಣ್ಣೆ (Mustard oil) ಯ ಪ್ಯಾಕೆಟ್‌ನ್ನು ಸಂಪೂರ್ಣವಾಗಿ ಬಳಸುವ ಕ್ರಿಯೆಯನ್ನು ತೋರಿಸುತ್ತಾರೆ. ಮೊದಲಿಗೆ ಎಣ್ಣೆಯನ್ನು ಡಬ್ಬಿಗೆ ಹಾಕಿದ ನಂತರ ಪ್ಯಾಕೆಟ್‌ನ ಒಳಗಿರುವ ಅಳಿದುಳಿದ ಎಣ್ಣೆಯನ್ನೂ ಸಹ ವ್ಯರ್ಥ ಮಾಡಿಲ್ಲ.

ಇದನ್ನು ಓದಿ : Papaya : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 1 ಹಣ್ಣು ತಿನ್ನಿ ; ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿ ಪಡೆಯಿರಿ.!

ಎಣ್ಣೆಯನ್ನು ಡಬ್ಬಿಗೆ ಹಾಕಿದ ನಂತರ ಪ್ಯಾಕೆಟ್‌ನ್ನು ಕತ್ತರಿಸಿ ಅದರಲ್ಲಿ ಅಳಿದುಳಿದ ಎಣ್ಣೆಯಲ್ಲಿ ಮಹಿಳೆ ಚಪಾತಿ ಹಿಟ್ಟು ಕಲಿಸುತ್ತಾರೆ. ಇನ್ನು ಉಳಿದಿರಬಹುದೆಂದು ಅದೆ ಎಣ್ಣೆಯೊಂದಿಗೆ ಪತಿ ಮಕ್ಕಳಿಗೆ ತೈಲ ಮಸಾಜ್ ಮಾಡಲು ತಲೆ, ಕೈ, ಪಾದಗಳಲ್ಲಿ ಎಣ್ಣೆ ಉಜ್ಜುತ್ತಾರೆ, ಮಹಿಳೆಯ ಈ ರೀತಿಯ ವರ್ತನೆ ಕಂಡು ಮಕ್ಕಳು ಆಶ್ಚರ್ಯಚಕಿತರಾಗಿರುವುದನ್ನು ವಿಡಿಯೋದಲ್ಲಿ ಕಂಡುಬರುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ :

ಈ ವಿಡಿಯೋ @Rawat_1199 ಎಂಬ “X” (ಹಳೆಯ ಟ್ವಿಟರ್)‌ನಲ್ಲಿ ಶೇರ್ ಆಗಿದ್ದು, “Bhartiya Nari Apna Kam Adhura Nahin chodte” ಎಂದು ಬರೆದುಕೊಂಡಿದ್ದಾರೆ. ಸದ್ಯ ವಿಡಿಯೋ 361.7K ಗಿಂತ ಹೆಚ್ಚಿನ View ಪಡೆದುಕೊಂಡಿದೆ.

ಇದನ್ನು ಓದಿ : ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಬಿದ್ದ Plane ; ರಸ್ತೆಯಲ್ಲಿದ್ದ 2 ಕಾರುಗಳಿಗೆ ಬೆಂಕಿ, ಇಬ್ಬರ ದುರ್ಮರಣ.!

ಹಲವರು ಮಹಿಳೆಯ ಜಾಣ್ಮೆಗೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. “ಇದು ನಿಜಕ್ಕೂ ಶುದ್ಧ ಭಾರತೀಯ ನಾರಿ ಶಕ್ತಿ”, “ಉಳಿಸಿದ ಪ್ರತಿ ಪೈಸೆಯೂ ಗಳಿಸಿದ ಪ್ರತಿ ಪೈಸೆಯೇ!” ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಕುತೂಹಲದಿಂದ ಅಥವಾ ಟೀಕೆಯಿಂದ “ಇದು ಹೆಚ್ಚು ಆಗುತ್ತಿದೆ” ಎಂಬ ಭಾವ ವ್ಯಕ್ತಪಡಿಸಿದ್ದಾರೆ.

ಭಾರತೀಯ ನಾರಿ (indian-woman) ಯ ವಿಡಿಯೋ :

https://twitter.com/i/status/1944972188106547567

ಪ್ರತಿಕ್ರಿಯೆಗಳ ತುಣುಕುಗಳು :
  • “ಈ ವಿಡಿಯೋ ನೋಡಿ ನಾನು ನನ್ನ ಅಜ್ಜಿಯನ್ನು ನೆನೆಸಿಕೊಂಡೆ!”
  • “ಇದು ನಾವೆಲ್ಲ ಕಲಿಯಬೇಕಾದ ಸಂಸ್ಕೃತಿಯ ಭಾಗ.”
  • “ಪ್ರತಿ ಪೀಳಿಗೆ ಹಿಂದಿನದಕ್ಕಿಂತ ವಿಚಿತ್ರವಾಗಿ ವರ್ತಿಸುತ್ತಿದೆ…”

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

KSRTC ಬಸ್‌ಗಳ ಮುಖಾಮುಖಿ ಢಿಕ್ಕಿ : 8 ಜನರಿಗೆ ಗಂಭೀರ ಗಾಯ.!

KSRTC

ಜನಸ್ಪಂದನ ನ್ಯೂಸ್, ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ನಡೆದ KSRTC ಬಸ್‌ಗಳ ನಡುವಿನ ಭೀಕರ ಮುಖಾಮುಖಿ ಅಪಘಾತದಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಪಘಾತದಲ್ಲಿ ಇಬ್ಬರು KSRTC ಬಸ್ ಚಾಲಕರ ಜೊತೆಗೆ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!

ಘಟನೆಯ ವೇಳೆಗೆ ಒಂದು ಬಸ್ ಬೆಂಗಳೂರುದಿಂದ ಮಂಗಳೂರಿಗೆ, ಮತ್ತೊಂದು ಬಸ್ ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಶಿರಾಡಿಘಾಟ್ ರಸ್ತೆಯ ಮಾರನಹಳ್ಳಿ ಬಳಿ ಬಸ್‌ಗಳು ಮುಖಾಮುಖಿಯಾಗಿ ಢಿಕ್ಕಿ ಹೊಡೆದವು.

ರಭಸದ ಢಿಕ್ಕಿಯಿಂದ ಒಂದು KSRTC ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 23, ಗುರುವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ಕೈಗೊಂಡ ವ್ಯವಹಾರಗಳಲ್ಲಿ ತೊಂದರೆಗಳು ಉಂಟಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ದೂರ ಪ್ರಯಾಣದ ಸೂಚನೆಗಳಿವೆ. ಮನೆಯ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ಖರ್ಚು ಹೆಚ್ಚಾಗಲಿದೆ. ವೃತ್ತಿಪರ ವ್ಯವಹಾರಗಳು ಸಾಮಾನ್ಯವಾಗಿ ಸಾಗುತ್ತವೆ.

*ವೃಷಭ ರಾಶಿ*

ಹಣಕಾಸಿನ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ. ಮಿತ್ರರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಪ್ರಮುಖ ಕೆಲಸಗಳಲ್ಲಿ ನೀವು ಹೆಚ್ಚು ಶ್ರಮ ಪಟ್ಟರೂ ಕೆಲಸಗಳು ಮುಂದಕ್ಕೆ ಸಾಗುವುದಿಲ್ಲ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗರುತ್ತವೆ. ಉದ್ಯೋಗಗಳಲ್ಲಿ ನಿಮ್ಮ ಮೌಲ್ಯವು ಹೆಚ್ಚಾಗುತ್ತದೆ.

*ಮಿಥುನ ರಾಶಿ*

ಆತ್ಮೀಯರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಆಕಸ್ಮಿಕ ಧನ ಲಾಭ ಪಡೆಯುತ್ತೀರಿ.ಮನೆಯ ಹೊರಗೆ ನಿಮ್ಮ ಉತ್ತಮ ಮಾತಿನಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಕೆಲಸಗಳು ಹೊಸ ಉತ್ಸಾಹದಿಂದ ಪೂರ್ಣಗೊಳ್ಳುತ್ತವೆ. ವ್ಯಾಪಾರ ಉದ್ಯೋಗಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ.

*ಕಟಕ ರಾಶಿ*

ಪ್ರಮುಕ ವ್ಯಕ್ತಿಗಳೊಂದಿಗಿನ ಸಂಪರ್ಕಗಳು ವಿಸ್ತಾರಗೊಳ್ಳುತ್ತವೆ. ಹೊಸ ವಾಹನ ಯೋಗವಿದೆ. ಕೆಲವು ವ್ಯವಹಾರಗಳಲ್ಲಿ ನಿರ್ಧಾರಗಳು ಇದ್ದಕ್ಕಿದ್ದಂತೆ ಬದಲಾಗುತ್ತವೆ. ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತೀರಿ.ಆರ್ಥಿಕವಾಗಿ ಅನುಕೂಲಕರ ವಾತಾವರಣವಿರುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಮ್ಮ ಭವಿಷ್ಯವಾಣಿಗಳು ನಿಜವಾಗುತ್ತವೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
*ಸಿಂಹ ರಾಶಿ*

ಖರ್ಚುವೆಚ್ಚಗಳ ವಿಷಯದಲ್ಲಿ ಮರುಪರಿಶೀಲನೆ ಮಾಡುವುದು ಒಳ್ಳೆಯದು. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಮನೆಯ ವಾತಾವರಣ ಸಮಸ್ಯಾತ್ಮಕವಾಗಿರುತ್ತದೆ . ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಮನೆಯ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿಗಳು ಹೆಚ್ಚಾಗುತ್ತವೆ.

*ಕನ್ಯಾ ರಾಶಿ*

ಆರ್ಥಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಕಠಿಣ ಪರಿಶ್ರಮವು ಫಲ ನೀಡುವುದಿಲ್ಲ. ಮನೆಯಲ್ಲಿ ಕೆಲವು ಜನರ ವರ್ತನೆಯು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಬಂಧುಮಿತ್ರರೊಡನೆ ವಿವಾದ ಉಂಟಾಗುತ್ತದೆ. ದೂರ ಪ್ರಯಾಣಗಳು ಮುಂದೂಡಲ್ಪಡುತ್ತವೆ. ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.

*ತುಲಾ ರಾಶಿ*

ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ. ಒಂದು ವ್ಯವಹಾರದಲ್ಲಿ ಎಲ್ಲರನ್ನೂ ಒಂದು ಮಾತಿನಲ್ಲಿ ನಿಲ್ಲುವಂತೆ ಮಾಡುತ್ತೀರಿ. ಹೊಸ ವಾಹನ ಖರೀದಿ ಯೋಗವಿದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರಗಳು ಸ್ವಲ್ಪಮಟ್ಟಿಗೆ ಸಾಮಾನ್ಯವಾಗಿ ಸಾಗುತ್ತವೆ, ಉದ್ಯೋಗಗಳು ಅನುಕೂಲಕರ ವಾತಾವರಣವನ್ನು ಹೊಂದಿರುತ್ತವೆ.

*ವೃಶ್ಚಿಕ ರಾಶಿ*

ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಗೊಂದಲ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಇವರ ಪರವಾಗಿ ಕಷ್ಟಗಳು ಅನಿವಾರ್ಯ. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುವುದು ಉತ್ತಮ. ವ್ಯಾಪಾರದಲ್ಲಿ ಅಲ್ಪ ಲಾಭವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಅಧಿಕವಾಗಿರುತ್ತದೆ.

ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
*ಧನುಸ್ಸು ರಾಶಿ*

ನಿರುದ್ಯೋಗಿಗಳ ಶ್ರಮಕ್ಕೆ ಫಲವಾಗಿ ಹೊಸ ಅವಕಾಶಗಳು ದೊರೆಯುತ್ತವೆ .ಸ್ಥಿರಾಸ್ತಿ ಮಾರಾಟ ಲಾಭದಾಯಕವಾಗಿರುತ್ತದೆ.ಹೊಸ ಸ್ನೇಹಿತರು ಪರಿಚಯಗಳು ಹೆಚ್ಚಾಗುತ್ತವೆ.ಮಕ್ಕಳಿಗೆ ಶೈಕ್ಷಣಿಕ ವಿಷಯಗಳಲ್ಲಿ ಶುಭ ಸುದ್ದಿ ದೊರೆಯುತ್ತದೆ. ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ.

*ಮಕರ ರಾಶಿ*

ಹಣದ ವಿಚಾರದಲ್ಲಿ ಏರುಪೇರು ಹೆಚ್ಚಾಗಲಿದೆ. ಅನಿರೀಕ್ಷಿತ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ.ಪ್ರಮುಖ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ ಮತ್ತು ವೃತ್ತಿಪರ ಉದ್ಯೋಗಗಳು ಹೆಚ್ಚುವರಿ ಕೆಲಸದ ಹೊರೆಯನ್ನು ಹೊಂದಿರುತ್ತವೆ.

*ಕುಂಭ ರಾಶಿ*

ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ ಮತ್ತು ವ್ಯವಹಾರಗಳು ನಿರೀಕ್ಷಿತ ಲಾಭವನ್ನು ಪಡೆಯುತ್ತವೆ. ಉದ್ಯಮಿಗಳಿಗೆ ಹೊಸ ಹೂಡಿಕೆಗಳು ದೊರೆಯುತ್ತವೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದೆ. ಅಧಿಕಾರಿಗಳ ಸಹಾಯದಿಂದ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ.

*ಮೀನ ರಾಶಿ*

ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಹೊಸ ಲಾಭವನ್ನು ಪಡೆಯುತ್ತೀರಿ. ಬಾಲ್ಯದ ಗೆಳೆಯರ ಭೇಟಿ ಸಂತೋಷವನ್ನು ತರುತ್ತದೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ವಿವಾದಗಳು ಬಗೆಹರಿಯುತ್ತವೆ. ಕೈಗೆತ್ತಿಕೊಂಡ ಕೆಲಸ ವಿಳಂಬವಾದರೂ ನಿಧಾನಗತಿಯಲ್ಲಿ ಪೂರ್ಣಗೊಳಿಸುತ್ತೀರಿ. ಉದ್ಯೋಗಗಳು ಮೊದಲಿಗಿಂತ ಉತ್ತಮ ವಾತಾವರಣವನ್ನು ಹೊಂದಿರುತ್ತವೆ.

Astrology

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಬಿದ್ದ Plane ; ರಸ್ತೆಯಲ್ಲಿದ್ದ 2 ಕಾರುಗಳಿಗೆ ಬೆಂಕಿ, ಇಬ್ಬರ ದುರ್ಮರಣ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಲಘು ವಿಮಾನ (Plane) ಯೊಂದು ಬಿದ್ದ ಪರಿಣಾಮವಾಗಿ ರಸ್ತೆಯಲ್ಲಿದ್ದ ಸಂಚರಿಸುತ್ತಿದ್ದ 2 ಕಾರುಗಳು ಬೆಂಕಿಗೆ ಆಹುತಿಯಾಗಿದ್ದಲ್ಲದೇ ಇಬ್ಬರ ದುರ್ಮರಣ ಸಂಭವಿದ ಘಟನೆಯೊಂದು ನಡೆದಿದೆ.

ಹೌದು, ಮಧ್ಯ ಇಟಲಿಯಲ್ಲಿ ಜನನಿಬಿಡ ಹೈವೇ ಮೇಲೆಯೇ ಸಂಭವಿಸಿದ ಲಘು ವಿಮಾನ (Plane) ದುರಂತವು ಮತ್ತೊಮ್ಮೆ ವಿಮಾನಯಾನ ಸುರಕ್ಷತೆ ಕುರಿತು ಆತಂಕವನ್ನು ಮೂಡಿಸಿದೆ. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನ (Plane) ವು ನಿಯಂತ್ರಣ ತಪ್ಪಿ ನೇರವಾಗಿ ರಸ್ತೆಯತ್ತ ಸಾಗಿ ಬಂದು ಪತನಗೊಂಡಿದೆ.

ವಿಮಾನ ಅಪಘಾತದ ವೇಳೆ ಬ್ರೆಸಿಯಾ ಬಳಿಯ A21 ಕಾರ್ಡಮೊಲ್ಲೆ-ಆಸ್ಪಿಟೇಲ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಕಾರುಗಳು ಈ ದುರಂತದಲ್ಲಿ ಸುಟ್ಟು ಕರಗಲಾಗಿದ್ದು, ಸ್ಥಳದಲ್ಲಿ ಭಾರೀ ಬಿಕ್ಕಟ್ಟು ಉಂಟಾಯಿತು. ಸದ್ಯ ಅದರ ವಿಮಾನ (Plane) ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು. ಈ ದುರಂತದಲ್ಲಿ ಗಾಯಗೊಂಡಿದ್ದ ಕಾರು ಚಾಲಕರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರುಗಳಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಅಪಘಾತದ ಪರಿಣಾಮ ವಿಮಾನ (Plane) ದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು 75 ವರ್ಷದ ವಕೀಲ ಸೆರ್ಗಿಯೊ ರಾವಗ್ಲಿಯಾ ಮತ್ತು ಅವರ 55 ವರ್ಷದ ಪತ್ನಿ ಅನ್ನಾ ಮಾರಿಯಾ ಡಿ ಸ್ಟೆಫಾನೊ ಎನ್ನಲಾಗಿದೆ. ವಿಮಾನವು ನಿಯಂತ್ರಣ ತಪ್ಪಿ ಜನನಿಬಿಡ ಹೆದ್ದಾರಿಗೆ ಡಿಕ್ಕಿ ಹೊಡೆಯುವ ಮೊದಲು ಕೆಲವೇ ಕ್ಷಣಗಳ ಮೊದಲು ಟೇಕ್ ಆಫ್ ಆಗಿತ್ತು ಎಂದು ವರದಿಯಾಗಿದೆ.

ಅಪಘಾತಕ್ಕೀಡಾದ ವಿಮಾನ (Plane) ದ ವಿಡಿಯೋ :

https://twitter.com/i/status/1948012354052243829

ಸಾರ್ವಜನಿಕರ ಆತಂಕ :

ಈ ಮಾದರಿಯ ಘಟನೆಗಳು ಪುನಃಪುನಃ ನಡೆಯುತ್ತಿರುವುದರಿಂದ, ಖಾಸಗಿ ವಿಮಾನ (Plane) ಸಂಸ್ಥೆಗಳ ತಾಂತ್ರಿಕ ಪರಿಶೀಲನೆ ಕುರಿತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. “ವಿಮಾನ (Plane)ಗಳ ಶ್ರೇಣಿತ ಪರಿಶೀಲನೆ ಮತ್ತು ಸುರಕ್ಷಾ ಪ್ರಮಾಣೀಕರಣವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಇಂಥ ದುರ್ಘಟನೆಗಳು ಮುಂದೆಯೂ ಸಂಭವಿಸಬಹುದೆಂಬ ಭೀತಿಯಿದೆ” ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Astrology : ಹೇಗಿದೆ ಗೊತ್ತಾ.? ಜುಲೈ 24 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 23, ಗುರುವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ಕೈಗೊಂಡ ವ್ಯವಹಾರಗಳಲ್ಲಿ ತೊಂದರೆಗಳು ಉಂಟಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ದೂರ ಪ್ರಯಾಣದ ಸೂಚನೆಗಳಿವೆ. ಮನೆಯ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ಖರ್ಚು ಹೆಚ್ಚಾಗಲಿದೆ. ವೃತ್ತಿಪರ ವ್ಯವಹಾರಗಳು ಸಾಮಾನ್ಯವಾಗಿ ಸಾಗುತ್ತವೆ.

*ವೃಷಭ ರಾಶಿ*

ಹಣಕಾಸಿನ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ. ಮಿತ್ರರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಪ್ರಮುಖ ಕೆಲಸಗಳಲ್ಲಿ ನೀವು ಹೆಚ್ಚು ಶ್ರಮ ಪಟ್ಟರೂ ಕೆಲಸಗಳು ಮುಂದಕ್ಕೆ ಸಾಗುವುದಿಲ್ಲ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗರುತ್ತವೆ. ಉದ್ಯೋಗಗಳಲ್ಲಿ ನಿಮ್ಮ ಮೌಲ್ಯವು ಹೆಚ್ಚಾಗುತ್ತದೆ.

*ಮಿಥುನ ರಾಶಿ*

ಆತ್ಮೀಯರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಆಕಸ್ಮಿಕ ಧನ ಲಾಭ ಪಡೆಯುತ್ತೀರಿ.ಮನೆಯ ಹೊರಗೆ ನಿಮ್ಮ ಉತ್ತಮ ಮಾತಿನಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಕೆಲಸಗಳು ಹೊಸ ಉತ್ಸಾಹದಿಂದ ಪೂರ್ಣಗೊಳ್ಳುತ್ತವೆ. ವ್ಯಾಪಾರ ಉದ್ಯೋಗಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ.

*ಕಟಕ ರಾಶಿ*

ಪ್ರಮುಕ ವ್ಯಕ್ತಿಗಳೊಂದಿಗಿನ ಸಂಪರ್ಕಗಳು ವಿಸ್ತಾರಗೊಳ್ಳುತ್ತವೆ. ಹೊಸ ವಾಹನ ಯೋಗವಿದೆ. ಕೆಲವು ವ್ಯವಹಾರಗಳಲ್ಲಿ ನಿರ್ಧಾರಗಳು ಇದ್ದಕ್ಕಿದ್ದಂತೆ ಬದಲಾಗುತ್ತವೆ. ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತೀರಿ.ಆರ್ಥಿಕವಾಗಿ ಅನುಕೂಲಕರ ವಾತಾವರಣವಿರುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಮ್ಮ ಭವಿಷ್ಯವಾಣಿಗಳು ನಿಜವಾಗುತ್ತವೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
*ಸಿಂಹ ರಾಶಿ*

ಖರ್ಚುವೆಚ್ಚಗಳ ವಿಷಯದಲ್ಲಿ ಮರುಪರಿಶೀಲನೆ ಮಾಡುವುದು ಒಳ್ಳೆಯದು. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಮನೆಯ ವಾತಾವರಣ ಸಮಸ್ಯಾತ್ಮಕವಾಗಿರುತ್ತದೆ . ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಮನೆಯ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿಗಳು ಹೆಚ್ಚಾಗುತ್ತವೆ.

*ಕನ್ಯಾ ರಾಶಿ*

ಆರ್ಥಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಕಠಿಣ ಪರಿಶ್ರಮವು ಫಲ ನೀಡುವುದಿಲ್ಲ. ಮನೆಯಲ್ಲಿ ಕೆಲವು ಜನರ ವರ್ತನೆಯು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಬಂಧುಮಿತ್ರರೊಡನೆ ವಿವಾದ ಉಂಟಾಗುತ್ತದೆ. ದೂರ ಪ್ರಯಾಣಗಳು ಮುಂದೂಡಲ್ಪಡುತ್ತವೆ. ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.

*ತುಲಾ ರಾಶಿ*

ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ. ಒಂದು ವ್ಯವಹಾರದಲ್ಲಿ ಎಲ್ಲರನ್ನೂ ಒಂದು ಮಾತಿನಲ್ಲಿ ನಿಲ್ಲುವಂತೆ ಮಾಡುತ್ತೀರಿ. ಹೊಸ ವಾಹನ ಖರೀದಿ ಯೋಗವಿದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರಗಳು ಸ್ವಲ್ಪಮಟ್ಟಿಗೆ ಸಾಮಾನ್ಯವಾಗಿ ಸಾಗುತ್ತವೆ, ಉದ್ಯೋಗಗಳು ಅನುಕೂಲಕರ ವಾತಾವರಣವನ್ನು ಹೊಂದಿರುತ್ತವೆ.

*ವೃಶ್ಚಿಕ ರಾಶಿ*

ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಗೊಂದಲ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಇವರ ಪರವಾಗಿ ಕಷ್ಟಗಳು ಅನಿವಾರ್ಯ. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುವುದು ಉತ್ತಮ. ವ್ಯಾಪಾರದಲ್ಲಿ ಅಲ್ಪ ಲಾಭವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಅಧಿಕವಾಗಿರುತ್ತದೆ.

ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
*ಧನುಸ್ಸು ರಾಶಿ*

ನಿರುದ್ಯೋಗಿಗಳ ಶ್ರಮಕ್ಕೆ ಫಲವಾಗಿ ಹೊಸ ಅವಕಾಶಗಳು ದೊರೆಯುತ್ತವೆ .ಸ್ಥಿರಾಸ್ತಿ ಮಾರಾಟ ಲಾಭದಾಯಕವಾಗಿರುತ್ತದೆ.ಹೊಸ ಸ್ನೇಹಿತರು ಪರಿಚಯಗಳು ಹೆಚ್ಚಾಗುತ್ತವೆ.ಮಕ್ಕಳಿಗೆ ಶೈಕ್ಷಣಿಕ ವಿಷಯಗಳಲ್ಲಿ ಶುಭ ಸುದ್ದಿ ದೊರೆಯುತ್ತದೆ. ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ.

*ಮಕರ ರಾಶಿ*

ಹಣದ ವಿಚಾರದಲ್ಲಿ ಏರುಪೇರು ಹೆಚ್ಚಾಗಲಿದೆ. ಅನಿರೀಕ್ಷಿತ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ.ಪ್ರಮುಖ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ ಮತ್ತು ವೃತ್ತಿಪರ ಉದ್ಯೋಗಗಳು ಹೆಚ್ಚುವರಿ ಕೆಲಸದ ಹೊರೆಯನ್ನು ಹೊಂದಿರುತ್ತವೆ.

*ಕುಂಭ ರಾಶಿ*

ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ ಮತ್ತು ವ್ಯವಹಾರಗಳು ನಿರೀಕ್ಷಿತ ಲಾಭವನ್ನು ಪಡೆಯುತ್ತವೆ. ಉದ್ಯಮಿಗಳಿಗೆ ಹೊಸ ಹೂಡಿಕೆಗಳು ದೊರೆಯುತ್ತವೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದೆ. ಅಧಿಕಾರಿಗಳ ಸಹಾಯದಿಂದ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ.

*ಮೀನ ರಾಶಿ*

ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಹೊಸ ಲಾಭವನ್ನು ಪಡೆಯುತ್ತೀರಿ. ಬಾಲ್ಯದ ಗೆಳೆಯರ ಭೇಟಿ ಸಂತೋಷವನ್ನು ತರುತ್ತದೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ವಿವಾದಗಳು ಬಗೆಹರಿಯುತ್ತವೆ. ಕೈಗೆತ್ತಿಕೊಂಡ ಕೆಲಸ ವಿಳಂಬವಾದರೂ ನಿಧಾನಗತಿಯಲ್ಲಿ ಪೂರ್ಣಗೊಳಿಸುತ್ತೀರಿ. ಉದ್ಯೋಗಗಳು ಮೊದಲಿಗಿಂತ ಉತ್ತಮ ವಾತಾವರಣವನ್ನು ಹೊಂದಿರುತ್ತವೆ.

Astrology

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

Papaya : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 1 ಹಣ್ಣು ತಿನ್ನಿ ; ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿ ಪಡೆಯಿರಿ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣು (Papaya) ತಿನ್ನುವುದರಿಂದ ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿಯನ್ನು ಪಡೆಯಬಹುದು. ಹಾಗಾದ್ರೆ ಈಗ ಆ ಹಣ್ಣಿನ ಬಗ್ಗೆ ತಿಳಿಯೋಣ ಬನ್ನಿ.!

ಆರೋಗ್ಯವಂತರಾಗಿ ಬಾಳಬೇಕೆಂದರೆ, ನಮ್ಮ ದೈನಂದಿನ ಆಹಾರದಲ್ಲಿ ಪೋಷಕಾಂಶಗಳ ಸಮತೋಲನ ಅತೀ ಅತ್ಯವಶ್ಯಕ. ವಿಶೇಷವಾಗಿ ಹಣ್ಣುಗಳನ್ನು ತಿನ್ನುವ ಮೂಲಕ ದಿನದ ಪ್ರಾರಂಭ ಉತ್ತಮ ಆಯ್ಕೆ. ಇಂತಹ ಆರೋಗ್ಯಕರ ಹಣ್ಣುಗಳಲ್ಲಿ ಪಪ್ಪಾಯಿ (Papaya) ಒಂದು ಪ್ರಮುಖ ಸ್ಥಾನ ಹೊಂದಿದೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣು, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭ ನೀಡುತ್ತದೆ.

ಫ್ಯಾಟಿ ಲಿವರ್‌ಗೆ ಪಪ್ಪಾಯಿ (Papaya) ರಕ್ಷಕ :

ಪಪ್ಪಾಯಿಯಲ್ಲಿರುವ ಪಪೈನ್ ಎನ್‌ಜೈಮ್ ಮತ್ತು ಉತ್ಕೃಷ್ಟ ಆಂಟಿಆಕ್ಸಿಡೆಂಟ್‌ಗಳು ಲಿವರ್‌ನಲ್ಲಿರುವ ಅತಿರೇಕ ಕೊಳೆಯನ್ನು ಹೊರಹಾಕಲು ಸಹಾಯಕ. ಇದು ಲಿವರ್‌ಗೆ ಡಿಟಾಕ್ಸ್ (Detox) ಆಗಿ ಕೆಲಸವನ್ನು ಮಾಡುತ್ತಿದ್ದು, ಫ್ಯಾಟಿ ಲಿವರ್‌ನಂತಹ ಸಮಸ್ಯೆಗಳಿಂದ ಮುಕ್ತಗೊಳ್ಳಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಪಪ್ಪಾಯಿ ಸಹಾಯಕ :

ಪಪ್ಪಾಯಿಯಲ್ಲಿರುವ ನಾರು ಮತ್ತು ಎಂಜೈಮ್‌ಗಳು ಜೀರ್ಣಕ್ರಿಯೆಯನ್ನು ಶೀಘ್ರಗೊಳಿಸುತ್ತವೆ. ವಿಶೇಷವಾಗಿ ಮಲಬದ್ಧತೆ ಅಥವಾ ಬೊಜ್ಜು ಸಂಬಂಧಿತ ಸಮಸ್ಯೆಗಳಿಂದ ಬಳಲುವವರಿಗೆ ಇದೊಂದು ಉಪಯುಕ್ತ ಪರಿಹಾರ.

ತೂಕ ನಿಯಂತ್ರಣದಲ್ಲಿ ಸಹಾಯ :

ಫೈಬರ್ ಅಂಶ ಹೆಚ್ಚು ಇರುವುದರಿಂದ, ಪಪ್ಪಾಯಿ (Papaya) ಹೆಚ್ಚು ಹೊತ್ತಿನವರೆಗೂ ತೃಪ್ತಿ ನೀಡುತ್ತದೆ. ಇದರಿಂದ ಹಸಿವಿನ ಕಡಿಮೆಯಾಗುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ತೂಕ ನಿಯಂತ್ರಣ ಸಾಧ್ಯವಾಗುತ್ತದೆ.

ರೋಗನಿರೋಧಕ ಶಕ್ತಿ ಬಲಪಡಿಸಲು ಸಹಾಯ :

ಪಪ್ಪಾಯಿಯಲ್ಲಿ ವಿಟಮಿನ್ ‘ಸಿ’ ಅಧಿಕವಿದ್ದು, ಅದು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ಕೃಷ್ಟಪಡಿಸುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಶೀತ, ಕೆಮ್ಮು ಮುಂತಾದ ಸೋಂಕುಗಳಿಂದ ದೇಹವನ್ನು ರಕ್ಷಿಸಲು ಪಪ್ಪಾಯಿ ತುಂಬಾ ಪರಿಣಾಮಕಾರಿ.

ಪಪ್ಪಾಯಿ ತಿನ್ನುವುದು ಹೇಗೆ ಉತ್ತಮ?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬಟ್ಟಲು ಮಾಗಿದ ಪಪ್ಪಾಯಿ (Papaya) ತಿನ್ನುವುದು ಅತ್ಯುತ್ತಮ. ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿದರೆ ಇನ್ನಷ್ಟು ಲಾಭ ಪಡೆಯಬಹುದು.

ಸಂಪಾದಕೀಯ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ ಸುಧಾರಣೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿ (Liver detox, improved digestion, weight control, and immunity) ಬಲಪಡಿಸುವಂತಹ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು.

Yawning : ನೀವೂ ಹಾವೂಗಳು ಆಕಳಿಸುವುದನ್ನು ನೋಡಿದಿರಾ.? ಇಲ್ವಾ, ಹಾಗಾದ್ರೆ ಈ ವಿಡಿಯೋ ನೋಡಿ.!

Snake yawning

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೀವೂ ಹಾವೂಗಳು ಆಕಳಿಸುವು (yawning) ದನ್ನು ನೋಡಿದಿರಾ.? ಇಲ್ವಾ, ಹಾಗಾದ್ರೆ ಇಲ್ಲಿದೆ ನೋಡಿ ಹಾವೂ ಆಕಳಿಸುವ ವಿಡಿಯೋ. ಇಲ್ಲಿ ನಿಮಗೆ ಕೆಲ ಪ್ರಶ್ನೆಗಳು ಉದ್ಭವಿಸಿಬಹುದು.

ಹಾವುಗಳು ಮನುಷ್ಯರಂತೆ ಆಕಳಿಸುತ್ತವೆಯಾ? ಈ ಪ್ರಶ್ನೆಗೆ ನೇರ ಉತ್ತರ ಇಲ್ಲದಿದ್ದರೂ, ಇತ್ತೀಚೆಗೆ ವೈರಲ್ ಆದ ಒಂದು ವೀಕ್ಷಣೀಯ ದೃಶ್ಯವು ಎಲ್ಲರ ದೃಷ್ಠಿಯನ್ನು ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಂದು ದೈತ್ಯ ಹೆಬ್ಬಾವು ಬಾಯಿಯನ್ನು ತುಂಬಾ ಅಗಲವಾಗಿ ತೆರೆದು ಆಕಳಿಸು (yawning) ತ್ತಿರುವಂತೆ ಕಾಣಿಸುತ್ತದೆ.

ಹಾಗಾದ್ರೆ ವೈರಲ್ ವಿಡಿಯೋದಲ್ಲಿ ಏನಿದೆ?

ಈ ಅಪರೂಪದ ದೃಶ್ಯವನ್ನು @lauraisabelaleon ಎಂಬ Instagram ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿ ದೈತ್ಯ ಹೆಬ್ಬಾವು ಬಾಯಿಯನ್ನು ವಿಶಾಲವಾಗಿ ತೆರೆದು ನಿಟ್ಟುಸಿರೆ ಬಿಟ್ಟಂತೆ ಕಾಣಿಸುತ್ತಿರುವುದು ವಿಡಿಯೋ ಸ್ಪಷ್ಟವಾಗಿದೆ. ಈ ದೃಶ್ಯ ಮನುಷ್ಯರ ಆಕಳಿಸುವ ಹಾವಭಾವಕ್ಕೆ ಹತ್ತಿರವಾಗಿದ್ದು, ಹಲವಾರು ಬಳಕೆದಾರರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!

ವೈರಲ್‌ ವಿಡಿಯೋವನ್ನು ಈವರೆಗೆ 34 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಓರ್ವರು, “ನಾನು ಹಾವುಗಳು ಹೀಗೆ ಆಕಳಿಸುತ್ತವೆ ಎಂದು ಇದೇ ಮೊದಲು ನೋಡಿದ್ದೇನೆ” ಎಂದಿದ್ದಾರೆ. ಮತ್ತೋಬ್ಬ ಬಳಕೆದಾರರು, “ಇದು ನಿಜವೋ ಅಥವಾ AI ಕ್ರಿಯೇಷನ್ನಾ?” ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಹೀಗೆ ಹಲವಾರು ಬಾಳಕೆದಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹಾವುಗಳು ನಿಜವಾಗಿಯೂ ಆಕಳಿಸು (yawning) ತ್ತವೆಯೇ?

ಜೀವಶಾಸ್ತ್ರಜ್ಞರ ಪ್ರಕಾರ, ಹಾವುಗಳು ದೊಡ್ಡ ಆಹಾರವನ್ನು ನುಂಗಿದ ನಂತರ ತಮ್ಮ ದವಡೆಗಳ ಜೋಡಣೆಯನ್ನು ಮತ್ತೆ ಸರಿಹೊಂದಿಸಲು ಬಾಯಿಯನ್ನು ಅಗಲವಾಗಿ ತೆರೆದು ನಿರ್ವಹಣೆಯ ಕ್ರಿಯೆಯನ್ನು ನಡೆಸುತ್ತವೆ. ಈ ಸಂದರ್ಭ ಮನುಷ್ಯನಂತೆ “ಆಕಳಿಸುತ್ತಿರುವ (yawning)” ಭಾವನೆ ಉಂಟಾಗಬಹುದು.

ಹಾಗಾದರೆ, ಇದು ನಿಜವಾದ ಆಕಳಿಕೆ (yawning) ಯಲ್ಲ. ಆದರೆ ಈ “Snake Yawning” ಎಂಬ ದೃಶ್ಯ ಮಾನವ ಕಣ್ಣಿಗೆ ಆಕರ್ಷಕವಾಗಿ ಕಾಣಿಸುತ್ತದೆ.

ವೈರಲ್‌ ವಿಡಿಯೋ :

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.