Saturday, July 12, 2025

Janaspandhan News

HomeViral VideoRomance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್‌ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
spot_img
spot_img

Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್‌ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನಿರ್ಜನವಾದ ರಸ್ತೆಯೊಂದರ ಮೇಲೆ ಪ್ರೇಮಿಗಳಿಬ್ಬರು ಹಾಯಾಗಿ ಬೈಕ್‌ ಮೇಲೆ ರೋಮ್ಯಾನ್ಸ್‌ (Romance on bike) ಮಾಡುತ್ತಿರುವ ದೃಶ್ಯವೊಂದು ರಸ್ತೆದೀಪದ ಬೆಳಕಿನಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್‌ ಆಗಿದೆ.

ಹೆದ್ದಾರಿಯೊಂದರ ಮೇಲೆ ಅದು ರಾತ್ರಿ ವೇಳೆ (Night Time) ಯಾರು ಇಲ್ಲದ ನಿರ್ಜನ ರಸ್ತೆಯಲ್ಲಿ ಬೈಕ್‌ವೊಂದರ ಮೇಲೆ ಯುವ ಪ್ರೇಮಿಗಳಿಬ್ಬರು ಹಾಯಾಗಿ ರೋಮ್ಯಾನ್ಸ್‌ (Romance on bike) ಮಾಡುತ್ತ ಸಾಗಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ.

ಇದನ್ನು ಓದಿ : Belagavi : ಮೂಡಲಗಿ ತಾಲೂಕಿನ 4 ಸೇತುವೆಗಳು ಜಲಾವೃತ ; ಸಂಚಾರ ಸ್ಥಗಿತ.

ವೇಗವಾಗಿ ಚಲಿಸುತ್ತಿದ್ದ ಬೈಕ್‌ನಲ್ಲಿ (Romance on bike) ಪ್ರೇಮಿಗಳಿಬ್ಬರು ಯಾವುದೇ ಆತಂಕ ಇಲ್ಲದೇ ನಿರ್ಜನ ರಸ್ತೆಯಲ್ಲಿ ಯಾವುದೇ ಅಪಾಯವನ್ನು ಲಕ್ಷಿಸದೆ ಹಾಯಾಗಿ ರೋಮ್ಯಾನ್ಸ್‌ನಲ್ಲಿ ತೊಡಗಿರುವ ಆತಂಕಕಾರಿ (disquieting) ಘಟನೆ ಇದಾಗಿದೆ.

ಈ ರೀತಿಯ ರೊಮ್ಯಾಂಟಿಕ್ (Romance on bike) ನಡವಳಿಕೆಗಳು ಸಾರ್ವಜನಿಕ ರಸ್ತೆ ಮೇಲೆ ತಮ್ಮ ಪ್ರೇಮವನ್ನು ಪ್ರಪಂಚಕ್ಕೆ ತೋರಿಸಲು ಹೇಳಿ ಮಾಡಿಸಿದ ಹಾಗಿದೆ. ಆದರೆ ರಸ್ತೆ ಸುರಕ್ಷತೆಯ ದೃಷ್ಟಿಕೋನದಿಂದ ಇದು ಅತೀವ ಅಪಾಯಕರ. ಯುವಕನೊಬ್ಬ ತನ್ನ ಪ್ರೇಯಸಿಯನ್ನು ಮುಂದೆ ಕುಳ್ಳಿರಿಸಿಕೊಂಡು ಬೈಕ್ ಓಡಿಸುತ್ತಿರುವುದು ಕೇವಲ ಚಲನಚಿತ್ರಗಳಲ್ಲದೆ ನೈಜ ಜೀವನದಲ್ಲೂ ಎದುರಾಗುವ ಘಟನೆ ಎಂಬುದನ್ನು ಈ ದೃಶ್ಯ ತೋರಿಸುತ್ತದೆ.

ಇದನ್ನು ಓದಿ : Savadatti ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ; ರೂ. 1.04 ಕೋಟಿ ಕಾಣಿಕೆ ಸಂಗ್ರಹ.!

ಇಲ್ಲಿ ವೈರಲ್‌ ಆಗಿರುವ ದೃಶ್ಯದಲ್ಲಿ, ಬೈಕ್‌ನಲ್ಲಿ ಸಂಚರಿಸುತ್ತಿರುವ ಪ್ರೇಮಿಗಳ ಜೋಡಿ ರೋಮ್ಯಾನ್ಸ್‌ (Romance on bike) ಮಾಡುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದಾರೆ. ಯುವಕನು ಬೈಕ್ ಓಡಿಸುತ್ತಿದ್ದು, ಯುವತಿ ಆತನ ಮುಂದೆ ಕುಳಿತುಕೊಂಡಿದ್ದಾಳೆ. ಈ ದೃಶ್ಯ ರಾತ್ರಿ ವೇಳೆ, ರಸ್ತೆದೀಪದ ಬೆಳಕಿನಲ್ಲಿ ಮೋಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರೂ ಹೆಲ್ಮೆಟ್ (Helmat) ಧರಿಸಿಲ್ಲ, ಇದರಿಂದಾಗಿ ಇದೊಂದು ಅಪಾಯಕಾರಿಯಾದ ಕೆಲಸವಾಗಿದೆ.

ಹೀಗೆ ರೋಮ್ಯಾನ್ಸ್‌ (Romance on bike) ಸೀನ್‌ ಕಂಡುಬಂದಿದ್ದು ಫಿರೋಜಾಬಾದ್‌ನ ಆಗ್ರಾ-ಕಾನ್ಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಕ್ಲಿಪ್‌ನಲ್ಲಿ ಪ್ರೇಮಿಗಳು (Lovers) ಸಂಚಾರ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಇದನ್ನು ಓದಿ : ನೀರು ಮಿಶ್ರಿತ ಡಿಸೇಲ್‌ ; ರಸ್ತೆಯಲ್ಲಿಯೇ ನಿಂತ 19 CM ಬೆಂಗಾವಲು ವಾಹನ.!

ಬೈಕ್ ವೇಗವಾಗಿ ಚಲಿಸುತ್ತ ರಾತ್ರಿ ವೇಳೆ ಸಾರ್ವಜನಿಕವಾಗಿ ಹೆದ್ದಾರಿಯಲ್ಲಿ ರೋಮ್ಯಾನ್ಸ್‌ ಮಾಡುತ್ತ ತಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದ್ದಾರೆ ಇದನ್ನು ವಿಡಿಯೋದಲ್ಲಿ ಕಾಣಬಹುದು.

Romance on bike ವೈರಲ್ ವಿಡಿಯೋ ಕೇವಲ 34 ಸೆಕೆಂಡುಗಳ ಕ್ಲಿಪ್‌ ಇದಾಗಿದ್ದು, ಹೆಲ್ಮೆಟ್ ಇಲ್ಲದೆ ಜೋಡಿ ದ್ವಿಚಕ್ರ ವಾಹನವನ್ನು ಚಲಾಯಿಸಲಾಗುತ್ತಿದೆ. ಯುವಕ ಬೈಕ್‌ ಚಲಾಯಿಸುತ್ತಿದ್ದರೆ, ಯುವತಿ ಬೈಕ್‌ನ ಇಂಧನ ಟ್ಯಾಂಕ್ ಮೇಲೆ ಮಲಗಿರುವುದನ್ನು ಕಾಣಬಹುದು.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 27 ರ ದ್ವಾದಶ ರಾಶಿಗಳ ಫಲಾಫಲ.!

ಜೋಡಿಗಳ ಈ ರೋಮ್ಯಾನ್ಸ್‌ ದೃಶ್ಯವನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯವರು ಎಚ್ಚರಿಕೆ ನೀಡುತ್ತಿದ್ದು, ಪ್ರೀತಿಯ ಹೆಸರಿನಲ್ಲಿ ಜೀವನದ ಅಪಾಯದ ಆಟವಾಡಬಾರದು ಎಂಬ ಸಂದೇಶ ಸ್ಪಷ್ಟವಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 28 ರ ದ್ವಾದಶ ರಾಶಿಗಳ ಫಲಾಫಲ.!

ಈ ವಿಡಿಯೋವನ್ನು ಓರ್ವರು Jun 28, 2025, 8:37 AM ಗೆ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 54.7K Views ಪಡೆದುಕೊಂಡಿದೆ.

ರಾತ್ರಿ ವೇಳೆ ಬೈಕ್‌ ಮೇಲೆ ರೋಮ್ಯಾನ್ಸ್‌ (Romance on bike) ಮಾಡುವ ವೈರಲ್‌ ವಿಡಿಯೋ :

ಕಾಲೇಜ್‌ ಆವರಣದಲ್ಲಿಯೇ ಕಾನೂನು ವಿದ್ಯಾರ್ಥಿನಿ ಮೇಲೆ Gang rape.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕಾಲೇಜಿನ ಆವರಣದಲ್ಲೇ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ (Gang rape) ವೊಂದು ದಕ್ಷಿಣ ಕೋಲ್ಕತ್ತಾದ ಕಸ್ಬಾದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕಾನೂನು ಕಾಲೇಜಿನ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆಯೇ ಜೂನ್ 25ರ ಸಂಜೆ 7.30ರಿಂದ 10.50ರ ನಡುವೆ ಈ ಪೈಶಾಚಿತ (Gang rape) ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕೋಲ್ಕತ್ತಾದ ಕಸ್ಬಾದಲ್ಲಿರುವ ಕಾನೂನು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ (Gang rape) ದಂತಹ ಪೈಶಾಚಿತ ಘಟನೆ ನಡೆದಿರುವುದು ದೇಶವೇ ತಲೆ ತಗ್ಗಿಸುವಂತಾಗಿದೆ. ಈ ಪೈಶಾಚಿತ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷದ ನಾಯಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಇದನ್ನು ಓದಿ : Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?

24 ವರ್ಷದ ಸಂತ್ರಸ್ತೆ ವಿದ್ಯಾರ್ಥಿನಿ ಬುಧವಾರ ಪರೀಕ್ಷೆಗೆ ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡಲು ಕಾಲೇಜಿಗೆ ಬಂದಿದ್ದಳು. ಆಕೆಯ ದೂರಿನ ಪ್ರಕಾರ, ಆಕೆ ಆರಂಭದಲ್ಲಿ ಕಾಲೇಜು ಯೂನಿಯನ್ ಕೋಣೆಯೊಳಗೆ ಕುಳಿತಿದ್ದಳು.

ನಂತರ ಪ್ರಾಥಮಿಕ ಆರೋಪಿಯು ಕಾಲೇಜಿನ ಮುಖ್ಯ ಗೇಟ್ ಅನ್ನು ಲಾಕ್ ಮಾಡಲು ಸೂಚಿಸಿದನು ಮತ್ತು ನಂತರ ಕ್ಯಾಂಪಸ್‌ನಲ್ಲಿರುವ ಭದ್ರತಾ ಸಿಬ್ಬಂದಿಯ ಕೋಣೆಯೊಳಗೆ ತನ್ನ ಮೇಲೆ ಅತ್ಯಾಚಾರ (Gang rape) ಎಸಗಲಾಯಿತ್ತೆಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಇದನ್ನು ಓದಿ : First Night ದಿನವೇ “ಮುಟ್ಟಿದ್ರೆ 35 ಪೀಸ್‌ ಮಾಡ್ತೀನಿ” ಎಂದ ವಧು ; ಬೆಚ್ಚಿಬಿದ್ದ ವರ.!

ಅತ್ಯಾಚಾರವೆಸಗಿರುವ ಆರೋಪದ ಮೇಲೆ 31 ವರ್ಷದ ಮೊನೊಜಿತ್ ಮಿಶ್ರಾ, 19 ವರ್ಷದ ಜೈಬ್ ಅಹ್ಮದ್ ಮತ್ತು 20 ವರ್ಷದ ಪ್ರಮಿತ್ ಮುಖರ್ಜಿ ಎಂಬುವವರನ್ನು ಬಂಧಿಸಲಾಗಿದೆ.

ಆರೋಪಿತರಲ್ಲಿ ಜೂನ್ 26ರಂದು ತಲ್ಟಗನ್ ಕ್ರಾಸಿಂಗ್‌ನಲ್ಲಿರುವ ಸಿದ್ಧಾರ್ಥ್ ಶಂಕರ್ ಉದ್ಯಾನದ ಬಳಿ ಮನೋಜಿತ್ ಹಾಗೂ ಜೈಬ್ ಅಹ್ಮದ್‌ನನ್ನು ಬಂಧಿಸಲಾಗಿದ್ದು, ಹಾಗೆಯೇ Gang rape ಗೆ ಸಂಬಂಧಿಸಿದಂತೆ ಮೂರನೇ ಆರೋಪಿ ಪ್ರಮೀತ್‌ನನ್ನು ಇಂದು (ಜೂ. 27) ಮುಂಜಾನೆ ಆತನ ಮನೆಯಿಂದ ಬಂಧಿಸಲಾಗಿದೆ.

ಇದನ್ನು ಓದಿ : ಆರೋಪಿಗಳು ಪರಾರಿಯಾಗಲು ಸಹಕರಿಸಿದ ಆರೋಪ ; PSI ಸೇರಿ ಇಬ್ಬರು Suspended.!

ಬಳಿಕ ಮೂವರನ್ನು ದಕ್ಷಿಣ 24 ಪರಗಣದ ಅಲಿಪೋರ್‌ನಲ್ಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವೂ ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರು ಮೂವರ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನು ಓದಿ : Plane : ಟೇಕಾಫ್ ಆದ​ ಕೆಲವೇ ಕ್ಷಣಗಳಲ್ಲಿ 159 ಜನರಿದ್ದ ವಿಮಾನದಲ್ಲಿ ಬೆಂಕಿ ; ವಿಡಿಯೋ.!

ಘಟನೆ (Gang rape) ಕಾಲೇಜಿನೊಳಗೆ ನಡೆದಿದೆ, ಸಂತ್ರಸ್ತೆಯ ಆರಂಭಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಹಲವಾರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಅಪರಾಧದ (Gang rape) ಸ್ಥಳವನ್ನು ಸಹ ಸುತ್ತುವರಿಯಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗಾಗಿ ಕಾಯಲಾಗುತ್ತಿದೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments