ಜನಸ್ಪಂದನ ನ್ಯೂಸ್, ಡೆಸ್ಕ್ : “ನನ್ನನ್ನು ಮುಟ್ಟಿದ್ರೆ 35 ಪೀಸ್ ಮಾಡತಿನಿ” ಎಂದು ಕೈಯಲ್ಲಿ ಚಾಕು ಹಿಡಿದು ನವ ವಧುವೋರ್ವಳು ಫಸ್ಟ್ ನೈಟ್ (First Night) ಶಾಸ್ತ್ರಕ್ಕೆ ಕೋಣೆಗೆ ಬಂದ ಪತಿಗೆ ಬೆದರಿಕೆ ಹಾಕಿದ ರೀತಿ ಇದು. ಕೇಳಲು ಸಿನೆಮಾ ಡೈಲಾಗ್ ರೀತಿ ಕಂಡರು ಸಹ ಇಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ಖುಷಿ ಖುಷಿಯಾಗಿ ಏಪ್ರಿಲ್ 29 ರಂದು ಮದುವೆ ಸಮಾರಂಭ ಮುಗಿದೆ. ಪ್ರಯಾಗ್‌ರಾಜ್‌ನ ಎಡಿಎ ಕಾಲೋನಿಯ 26 ವರ್ಷದ ನಿಶಾದ್ ಎಂಬುವವರು ಕರ್ಚನಾ ದೇಹ್‌ನ ಲಕ್ಷ್ಮಿ ನಾರಾಯಣ್ ನಿಶಾದ್ ಅವರ ಪುತ್ರಿ ಸಿತಾರಾ ಎಂಬಾಕೆಯನ್ನು ವಿವಾಹವಾಗಿದ್ದರು.
ಇದನ್ನು ಓದಿ : BPCL : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!
ಮದುವೆಯಾದ ವರ ಫಸ್ಟ್ ನೈಟ್ (First Night) ಶಾಸ್ತ್ರಕ್ಕೆ ಎಂದು ವಧುವಿನ ಕೋಣೆಗೆ ಬರುವವರೆಗೆ ಎಲ್ಲವೂ ಚನ್ನಾಗಿಯೇ ಇತ್ತು. ಯಾವಾಗ ನವವಿವಾಹಿತ ನಿಶಾದ್ (First Night) ಕೋಣೆಗೆ ಪ್ರವೇಶಿಸಿದನೋ ಆಗ ವಿಚಿತ್ರ ಎಂಬಂತೆ ಇದ್ದಕ್ಕಿದಂತೆ ನವ ವಧು “ಕೈಯಲ್ಲಿ ಚಾಕು ಹಿಡಿದು ಫಸ್ಟ್ ನೈಟ್ (First Night) ಶಾಸ್ತ್ರಕ್ಕೆ ಕೋಣೆಗೆ ಬಂದ ಪತಿಗೆ “ನನ್ನನ್ನು ಮುಟ್ಟಿದ್ರೆ 35 ಪೀಸ್ ಮಾಡತಿನಿ” ಎಂದು ಬೆದರಿಕೆ ಹಾಕಿದ್ದಾಳೆ.
ತನ್ನ ಪತ್ನಿಯ ಈ ರೀತಿಯ ನಡುವಳಿಕೆ ಕಂಡ ಪತಿ ಗಾಬರಿಯಾಗಿದ್ದು, ಆ ರಾತ್ರಿ ವಧು ಸಿತಾರ ಹಾಸಿಗೆಯ ಮೇಲೆ ಮಲಗಿದರೆ, ವರ ನಿಶಾದ್ ಸೋಫಾದ ಮೇಲೆ ಅಂಜಿಕೆಯಿಂದಲೇ ಎಚ್ಚರವಾಗಿ ಮಲಗಿದ್ದಾರೆ.
ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಏತನ್ಮಧ್ಯೆ, ವರನು ಮೂರು ದಿನ ನಿದ್ದೆಯಿಲ್ಲದ, ಭಯಭೀತನಾಗಿ ರಾತ್ರಿಗಳನ್ನು ಕಳೆದಿದ್ದಾನೆ. ಹೀಗಿರುವಾಗ ಅಣ್ಣನ ವರ್ತನೆಯನ್ನು ಗಮನಿಸಿದ ಸಹೋದರಿಯರು ಎಲ್ಲೋ ಏನೋ ಮಿಸ್ ಹೊಡಿತ್ತಾ ಇದೇಯಲ್ಲಾ ಅಂತ ಈ ಕುರಿತು ಅಣ್ಣನ ಬಳಿ ವಿಚಾರಿಸಿದಾಗ ನಿಶಾದ್, ಈ ವಿಷಯವನ್ನು ಬಹಿರಂಗಪಡಿಸಿದರು ಎಂದು ತಿಳಿದು ಬಂದಿದೆ.
ಎರಡು ಕುಟುಂಬದ ಹಿರಿಯರೆಲ್ಲರೂ ಸೇರಿ ವಧುವನ್ನು ವಿಚಾರಿಸಿದಾಗ, ಅವಳು ಅಮನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ನಾನು ಬಲವಂತವಾಗಿ ಈ ಮದುವೆಯಾಗಿದ್ದೇನೆ. ನಾನು ಅಮನ್ ಆಸ್ತಿ, ಅವನು ಮಾತ್ರ ನನ್ನನ್ನು ಮುಟ್ಟಲು ಸಾಧ್ಯ ಎಂದು ಕಡಿಮುರಿದ ಹಾಗೆ ಹೇಳಿದ್ದಾಳೆ.
ಇದನ್ನು ಓದಿ : Kidnap : ಪತಿಗೆ ಗುಂಡು ಹಾರಿಸಿ, ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿದ ಶಸ್ತ್ರಸಜ್ಜಿತ ಗುಂಪು.!
ಎರಡೂ ಕುಟುಂಬಗಳು ಮೇ 25 ರಂದು ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ಆದರೆ ಸಿತಾರಾ ಇಷ್ಟವಿಲ್ಲದೆ ತನ್ನ ಪತಿಯೊಂದಿಗೆ ಇರಲು ಲಿಖಿತವಾಗಿ ಒಪ್ಪಿಕೊಂಡರು, ಆದರೆ ಬೆದರಿಕೆಗಳು ಮುಂದುವರೆಯುತ್ತವೆ ಎಂದಿದ್ದಾಳೆ.
ಕೊನೆಗೆ ಮೇ 30 ರಂದು ಮಧ್ಯರಾತ್ರಿಯ ಸುಮಾರಿಗೆ ಸಿತಾರಾ ಮನೆಯ ಹಿಂದಿನ ಗೋಡೆಯನ್ನು ಹಾರಿ ಮನೆಯಿಂದ ತಪ್ಪಿಸಿಕೊಂಡಿದ್ದು, ಅವಳು ಕುಂಟುತ್ತಾ ಓಡಿ ಹೋಗುವುದು ಸಿಸಿಟಿವಿ ದೃಶ್ಯದಲ್ಲಿ ಕಾಣಿಸುತ್ತದೆ.
ಎಫ್‌ಐಆರ್ ದಾಖಲಾಗಿಲ್ಲ :
ಎರಡೂ ಕುಟುಂಬಗಳು ಪ್ರಕರಣದ ಕುರಿತು ಪರಸ್ಪರ ಲಿಖಿತ ಇತ್ಯರ್ಥವನ್ನು ಮಾಡಿಕೊಂಡ ಕಾರಣ ಈ ಕುರಿತು ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ವಿಡಿಯೋ :
#BREAKING : Touch me and I’ll cut you into 35 pieces’, Bride threatens groom on wedding night in Prayagraj. later jumps wall to escape with lover.
After the Sonam murder case, a shocking incident from Prayagraj has surfaced. On the wedding night, a bride threatened her husband… pic.twitter.com/QBGDK9SjEK
— upuknews (@upuknews1) June 24, 2025
Kalaburagi : ಡಾಬಾದೊಳಗೆ ನುಗ್ಗಿ ಮೂವರನ್ನು ಹತ್ಯೆಗೈದು ಪರಾರಿಯಾದ ಹಂತಕರು.!
ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ (Kalaburagi) ಹೊರವಲಯದ ಪಟ್ನಾ ಗ್ರಾಮದ ಬಳಿ ಮಂಗಳವಾರ ರಾತ್ರಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಕೊಲೆ ಮಾಡಲಾದ ಘಟನೆ ನಡೆದಿದೆ.
ಕಲಬುರಗಿ (Kalaburagi) ಸಮೀಪದ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಯಾರೋ ದುಷ್ಕರ್ಮಿಗಳು ಡಾಬಾದೊಳಗೆ ನುಗ್ಗಿ ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 24 ರ ದ್ವಾದಶ ರಾಶಿಗಳ ಫಲಾಫಲ.!
ಹತ್ಯೆಯಾದ ದುರ್ದೈವಿಗಳನ್ನು ಸಿದ್ದಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಈ ಮೂವರು ಕೂಡ ಸಂಬಂಧಿಗಳಾಗಿದ್ದು, ಡಾಬಾದಲ್ಲಿ ಕೆಲಸ ಮಾಡ್ತಿದ್ರು.
ನಿನ್ನೆ ಅಂದರೆ ಮಂಗಳವಾರ ತಡರಾತ್ರಿ 1.30 ರ ಸುಮಾರಿಗೆ ಸಿದ್ದಾರೂಡ (32), ಜಗದೀಶ್ (25) ಹಾಗೂ ರಾಮಚಂದ್ರ (35) ಎನ್ನುವವರನ್ನು ಕಲಬುರಗಿ (Kalaburagi) ಸಮೀಪದ ಡಾಬಾದಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
ಹಳೆಯ ವೈಷಮ್ಯದಡಿಯಲ್ಲಿ ದುಷ್ಕರ್ಮಿಗಳು ಈ ಕೃತ್ಯೆ ಎಸೆಗಿರಬಹುದು ಎಂದು ಶಂಕಿಸಲಾಗಿದ್ದು, ಹಂತಕರು ಕಲೆಗೈದು ಪರಾರಿಯಾಗಿದ್ದಾರೆ.
ಈ ಸಂಬಂಧ ಸಬ್ ಅರ್ಬನ್ ಪೊಲೀಸ್ (Kalaburagi) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.