Saturday, July 12, 2025

Janaspandhan News

HomeGeneral NewsCrocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
spot_img
spot_img

Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನದಿಯ ದಡದಲ್ಲಿ ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಮೊಸಳೆ (Crocodile) ಯೊಂದು ಬಾಲಕನನ್ನು ನದಿಯೊಳಗೆ ಎಳೆದೊಯ್ದ ಘೋರವಾದ ದುರಂತ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಉಮ್ರಿ ಬೇಗಮ್‌ಗಂಜ್‌ನ ಸೋನೌಲಿ ಮೊಹಮ್ಮದ್‌ಪುರ ಗ್ರಾಮ ಪಂಚಾಯತ್‌ನ ಭಿಕಾರಿಪುರ ಹತ್ತಿರ ಇರುವ ಘಾಘ್ರಾ ನದಿಯ ದಡದಲ್ಲಿ ಎಮ್ಮೆಯನ್ನು ಸ್ನಾನ ಮಾಡಿಸಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.

ಮೊಸಳೆಗೆ (Crocodile) ಆಹಾರವಾದ ಬಾಲಕನನ್ನು 8 ನೇ ತರಗತಿಯಲ್ಲಿ ಓದುತ್ತಿರುವ ರಾಜಾ ಬಾಬು ಅಲಿಯಾಸ್ ನಾನ್ ಯಾದವ್ (13) ಎಂದು ಗುರುತಿಸಲಾಗಿದೆ.

ಇದನ್ನು ಓದಿ : Reels : ಮಳೆ ನಿಂತ ಮೇಲೆ ರೀಲ್ಸ್‌ಗೆ ಮುಂದಾದ ಯುವತಿ ; ಮುಂದೆನಾಯ್ತು.?

ಭಾನುವಾರ ಮಧ್ಯಾಹ್ನ ರಾಜಾ ಬಾಬು ಘಾಘ್ರಾ ನದಿಯ ದಡದಲ್ಲಿ ಎಮ್ಮೆಯನ್ನು ಸ್ನಾನ ಮಾಡಿಸಲು ಹೋಗಿದ್ದರು. ರಾಜಾ ಬಾಬು ದಡದಲ್ಲಿ ನಿಂತು ಎಮ್ಮೆ ಮೈ ತೊಳೆಯುತ್ತಿರಬೇಕಾದರೆ ಇದ್ದಕ್ಕಿದ್ದಂತೆ ನದಿಯಿಂದ ಹೊರಬಂದು ಮೊಸಳೆ (Crocodile) ಯೊಂದು ಅವನ ಕಾಲನ್ನು ಹಿಡಿದು ಜಗ್ಗಿದೆ. ಬಾಲಕ ಕೆಳಗೆ ಬೀಳುತ್ತಿದಂತೆಯೇ ಆತನ ಕುತ್ತಿಗೆಯನ್ನು ಹಿಡಿದು ಮೊಸಳೆ (Crocodile) ನದಿಯ ನೀರಿನಲ್ಲಿ ಎಳೆದೊಯ್ದಿದೆ.

ಮೊಸಳೆಯ ಹಿಡಿತದಿಂದ ಬಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನಾದರೂ ಸಫಲವಾಗಲಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಜನರು ಮೊಸಳೆ (Crocodile) ಯಿಂದ ಬಿಡಿಸಲು ಪ್ರಯತ್ನಿಸಿದರು, ಆದರೆ ಅವರ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ಶೀಘ್ರದಲ್ಲೇ ಮೊಸಳೆ ಮಗುವಿನೊಂದಿಗೆ ಕಣ್ಮರೆಯಾಯಿತು ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Belagavi : ರಾಸಲೀಲೆ ಆರೋಪ ; ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ ಭಕ್ತರು.!

ಅರಣ್ಯ ಇಲಾಖೆ ಮತ್ತು ಪೊಲೀಸ್ ತಂಡಗಳು ಬಲೆ ಹಾಕಿ ಮಗುವನ್ನು ಹುಡುಕಲು ಪ್ರಯತ್ನಿಸುತ್ತಿವೆ. ಆದರೆ ಬಾಲಕನ ಶವ ಇನ್ನು ಪತ್ತೆಯಾಗಿಲ್ಲ. ಇನ್ನು ಘಾಗ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ, ಮೊಸಳೆ (Crocodile) ಗಳು ವಸತಿ ಪ್ರದೇಶಗಳ ಬಳಿ ಬರುವುದು ಸಾಮಾನ್ಯವಾಗಿದೆ ಎಂದು ಜನರು ಹೇಳುತ್ತಾರೆ.

ಸದ್ಯ ಘಟನೆಯ ವಿಡಿಯೋ ಮೊಬೈಲ್‌ ಫೋನ್‌ನಲ್ಲಿ ಸೆರೆಯಾಗಿದ್ದು, ಅದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೊಸಳೆ (Crocodile) ಬಾಲಕನನ್ನು ಎಳೆದೊಯ್ಯುತ್ತಿರುವ ವಿಡಿಯೋ :

Astrology : ಹೇಗಿದೆ ಗೊತ್ತಾ.? ಜೂನ 23 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ : 2025 ಜೂನ 23 ರ ಸೋಮವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :
*ಮೇಷ ರಾಶಿ*

ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುವುದರಿಂದ ವಿಶ್ರಾಂತಿ ಇರುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವೃತ್ತಿಪರ ವ್ಯವಹಾರಗಳು ಮತ್ತಷ್ಟು ನಿರಾಶಾದಾಯಕವಾಗಿರುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯು ಕಳಪೆಯಾಗಿರುತ್ತದೆ.

*ವೃಷಭ ರಾಶಿ*

ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ಕೆಲವು ಪ್ರಮುಖ ವಿಷಯಗಳಲ್ಲಿ ಕುಟುಂಬ ಸದಸ್ಯರ ಸಲಹೆಗಳು ಕೂಡಿ ಬರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಪ್ರೋತ್ಸಾಹಗಳು ದೊರೆಯುತ್ತವೆ. ಉದ್ಯೋಗದಲ್ಲಿನ ವಿವಾದಗಳು ಬಗೆಹರಿಯುತ್ತವೆ. ಹೊಸ ವಾಹನ ಖರೀದಿಸಲಾಗುತ್ತದೆ. ಕೌಟುಂಬಿಕ ವಾತಾವರಣ ಸಡಗರದಿಂದ ಕೂಡಿರುತ್ತದೆ.

*ಮಿಥುನ ರಾಶಿ*

ಮನೆಯಲ್ಲಿ ಮದುವೆಯ ಪ್ರಸ್ತಾಪವಿರುತ್ತದೆ. ಆಲೋಚನೆಗಳನ್ನು ಆಚರಣೆಗೆ ತರಲಾಗುತ್ತದೆ. ಸಂಬಂಧಿಕರಿಂದ ಶುಭ ಸುದ್ದಿ ಬರುತ್ತದೆ. ಹೊಸ ವಸ್ತು ಮತ್ತು ವಾಹನ ಲಾಭವನ್ನು ಪಡೆಯುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಆತ್ಮವಿಶ್ವಾಸದಿಂದ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ ಮತ್ತು ಆಧ್ಯಾತ್ಮಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ.

*ಕಟಕ ರಾಶಿ*

ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದವಿರುತ್ತದೆ. ಪ್ರಯಾಣಗಳು ಇದ್ದಕ್ಕಿದ್ದಂತೆ ಮುಂದೂಡಲ್ಪಡುತ್ತವೆ. ದೈವಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಮಕ್ಕಳ ಉದ್ಯೋಗ ಶಿಕ್ಷಣದ ವಿಷಯಗಳಲ್ಲಿ ಸ್ವಲ್ಪ ಹತಾಶೆ ಉಂಟಾಗುತ್ತದೆ.

*ಸಿಂಹ ರಾಶಿ*

ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ವೃತ್ತಿಪರ ವ್ಯವಹಾರಗಳು ಒತ್ತಡ ಹೆಚ್ಚಾಗುತ್ತದೆ. ಉದ್ಯೋಗಿಗಳು ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ನಿರುದ್ಯೋಗಿಗಳಿಗೆ ಇದು ಹೆಚ್ಚು ಕಷ್ಟಕರವಾಗಿರುತ್ತದೆ.

ಇದನ್ನು ಓದಿ : Belagavi : ರಾಸಲೀಲೆ ಆರೋಪ ; ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ ಭಕ್ತರು.!
*ಕನ್ಯಾ ರಾಶಿ*

ಮಕ್ಕಳಿಗೆ ಹೊಸ ಶೈಕ್ಷಣಿಕ ಅವಕಾಶಗಳು ಸಿಗುತ್ತವೆ. ಕೆಲವು ಕೆಲಸಗಳು ಅಡೆತಡೆಗಳ ನಡುವೆಯೂ ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಹಳೆಯ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ನಷ್ಟವನ್ನು ಸರಿದೂಗಿಸಲಾಗುತ್ತದೆ. ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ತುಲಾ ರಾಶಿ*

ಪ್ರಯಾಣದಲ್ಲಿ ವಾಹನ ತೊಂದರೆ ಉಂಟಾಗುತ್ತದೆ. ನಿಗದಿತ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಬಂಧು ಮಿತ್ರರೊಂದಿಗೆ ವಿವಾದಗಳಿಂದ ದೂರವಿರುವುದು ಉತ್ತಮ. ವ್ಯಾಪಾರಿಗಳು ಅವಕಾಶಗಳನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಉದ್ಯೋಗಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳೊಂದಿಗೆ ಅನಿರೀಕ್ಷಿತ ಸಮಸ್ಯೆಗಳಿರುತ್ತವೆ.

*ವೃಶ್ಚಿಕ ರಾಶಿ*

ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ದೈವಿಕ ಸೇವಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ವ್ಯವಹಾರದಲ್ಲಿ ಹೆಚ್ಚಿನ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗಿಗಳು ತಮ್ಮ ಕಠಿಣ ಪರಿಶ್ರಮಕ್ಕಾಗಿ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ಹೊಸ ವಾಹನ ಖರೀದಿಸುತ್ತೀರಿ.

*ಧನುಸ್ಸು ರಾಶಿ*

ಮನೆಯ ಹೊರಗೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ಕೈಗೊಂಡ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ವಿವಾದಗಳಿರುತ್ತವೆ. ಸೋದರ ಬಂಧುಗಳೊಂದಿಗೆ ಆಸ್ತಿ ವಿವಾದ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದ ವಾತಾವರಣವು ನಿರುತ್ಸಾಹಗೊಳಿಸುತ್ತದೆ. ದೂರದ ಪ್ರಯಾಣದಿಂದ ದೈಹಿಕ ಶ್ರಮ ಹೆಚ್ಚಾಗುತ್ತದೆ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ.

ಇದನ್ನು ಓದಿ : Reels : ಮಳೆ ನಿಂತ ಮೇಲೆ ರೀಲ್ಸ್‌ಗೆ ಮುಂದಾದ ಯುವತಿ ; ಮುಂದೆನಾಯ್ತು.?
*ಮಕರ ರಾಶಿ*

ವೃತ್ತಿಪರ ವ್ಯವಹಾರಗಳು ಅಭಿವೃದ್ಧಿಹೊಂದುತ್ತವೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಬಂಧು ಮಿತ್ರರಿಂದ ಬೆಂಬಲ ದೊರೆಯುತ್ತದೆ. ಸ್ಥಿರಾಸ್ತಿ ವಿವಾದಗಳು ರಾಜಿಯಾಗುತ್ತವೆ. ಉದ್ಯೋಗಿಗಳು ಸಹೋದ್ಯೋಗಿಗಳ ಸಹಾಯದಿಂದ ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ. ಆರ್ಥಿಕವಾಗಿ ಅನುಕೂಲಕರ ವಾತಾವರಣ ಇರುತ್ತದೆ.

*ಕುಂಭ ರಾಶಿ*

ಯೋಜಿತ ಕಾರ್ಯಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕಗಳು ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಹೆಚ್ಚು ಉತ್ಸಾಹದಿಂದ ಕೂಡಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ.

*ಮೀನ ರಾಶಿ*

ಕುಟುಂಬ ಸದಸ್ಯರ ವರ್ತನೆ ಅಚ್ಚರಿ ಮೂಡಿಸುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ಗೊಂದಲ ಉಂಟಾಗುತ್ತದೆ. ದೀರ್ಘಾವಧಿಯ ಸಾಲದ ಒತ್ತಡದ ಹೆಚ್ಚಳದಿಂದಾಗಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ವ್ಯಾಪಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಏರಿಳಿತಗಳು ಹೆಚ್ಚಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ನಿರಾಶೆ ಗೊಳಿಸುತ್ತವೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು (Astrology) ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments