ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಯಲ್ಲಿದ್ದ`LPG’ ಸಿಲಿಂಡರ್ ಒಂದು ಗ್ಯಾಸ್ ಸೋರಿಕೆಯಾದ ಪರಿಣಾಮ ಸ್ಫೋಟವಾದ ಭಯಾನಕ ಅಘಾತಕಾರಿ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೋಬ್ಬರ ಮನೆಯಲ್ಲಿ `LPG’ (Liquid petroleum gas) ಸಿಲಿಂಡರ್ ಬಳಸಿಯೇ ಬಳಸುತ್ತಾರೆ. ಈ`LPG’ ಸಿಲಿಂಡರ್ ಬಳಸುವ ಪೂರ್ವದಲ್ಲಿ ಕೆಲ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಒಂದು ವೇಳೆ ಸ್ವಲ್ಪವೇ ಸ್ವಲ್ಪ ಯಾಮಾರಿದರು ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಇದನ್ನು ಓದಿ : ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ Stone-pelting.!
ಮನೆಯಲ್ಲಿ LPG ಬಳಸುವಾಗ ಸುರಕ್ಷತೆಗೆ ಸಂಬಂಧಿಸಿದ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಡಿ :
ಸರಿಯಾದ ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರ್ ಬಳಸುವುದು :
- ISI ಮಾರ್ಕ್ ಇರುವ ಸ್ಟೌವ್ ಮತ್ತು ರೆಗ್ಯುಲೇಟರ್‌ಗಳನ್ನು ಮಾತ್ರ ಬಳಸಿ.
- ಗ್ಯಾಸ್ ಸಿಲಿಂಡರ್ ನಿಭಾಯಿಸುವುದು ಸರಿಯಾದ ವಿಧಾನದಲ್ಲಿ ಇರಲಿ.
ಗ್ಯಾಸ್ ಲೀಕ್ ತಪಾಸಣೆ :
- ಪ್ರತಿದಿನ ಗ್ಯಾಸ್ ಬಳಸು ಮುನ್ನ “ಸ್ಮೆಲ್” ಮೂಲಕ ಲೀಕ್ ಇದೆಯೇ ಎಂದು ಪರಿಶೀಲಿಸಿ.
- ಲೀಕ್ ಅನುಮಾನವಾದರೆ ತಕ್ಷಣವೇ ಮೆಚ್‌ವಾಕ್ಸ್/ಲೈಟರ್ ಬಳಸಬೇಡಿ.
- ಗ್ಯಾಸ್ ಲೀಕ್ ಪರೀಕ್ಷೆಗೆ “ಸೋಪ್ ವಾಟರ್” ಬಳಸಿ – ಬಬಲ್ಸ್ ಬಂದರೆ ಲೀಕ್ ಇದೆ.
ಇದನ್ನು ಓದಿ : Reels : ಮಳೆ ನಿಂತ ಮೇಲೆ ರೀಲ್ಸ್‌ಗೆ ಮುಂದಾದ ಯುವತಿ ; ಮುಂದೆನಾಯ್ತು.?
ಪೈಪ್ ಮತ್ತು ರೆಗ್ಯುಲೇಟರ್ ಪರಿಶೀಲನೆ :
- ಗ್ಯಾಸ್ ಹೋಸ್ ಪೈಪ್ 3 ವರ್ಷಕ್ಕೊಮ್ಮೆ ಬದಲಾಯಿಸಿ.
- ರೆಗ್ಯುಲೇಟರ್ ಅನ್ನು ಸರಿಯಾಗಿ ಅಳವಡಿಸಿ; ತದ್ವಾರ ಗ್ಯಾಸ್ ಸರಿಯಾಗಿ ನಿಯಂತ್ರಣವಾಗುತ್ತದೆ.
ಬೆಳಕು ಮತ್ತು ಗಾಳಿಚಾಲನೆ :
- ಅಡುಗೆ ಮನೆಯು ಗಾಳಿತನದಿಂದ ಕೂಡಿರಲಿ (ವೇಂಟಿಲೇಷನ್).
- ಅಡುಗೆ ಮಾಡುವಾಗ ಎಕ್ಝಾಸ್ಟ್ ಫ್ಯಾನ್ ಅಥವಾ ಕಿಟಕಿಗಳನ್ನು ತೆರೆದು ಇಡಿ.
ಬಳಸದಾಗ ಗ್ಯಾಸ್ ಆಫ್ ಮಾಡುವುದು :
- ಪ್ರತಿದಿನ ಅಡುಗೆ ಮುಗಿದ ಬಳಿಕ ಸಿಲಿಂಡರ್ ರೆಗ್ಯುಲೇಟರ್ ಆಫ್ ಮಾಡಿ.
ಪಟ್ಟಿಗಳು ಅಥವಾ ಸಡಿಲ ಬಟ್ಟೆಗಳು ಧರಿಸಬೇಡಿ :
- ಅಡುಗೆ ಸಮಯದಲ್ಲಿ ಸಡಿಲವಾದ ಬಟ್ಟೆ ಧರಿಸದಿರಿ, ಬೆಂಕಿಯಿಂದ ಹಾನಿಯಾಗಬಹುದು.
ಮಕ್ಕಳಿಂದ ದೂರವಿಡಿ :
- ಗ್ಯಾಸ್ ಸ್ಟೌವ್ ಬಳಕೆಯ ಸ್ಥಳಕ್ಕೆ ಮಕ್ಕಳು ಹೋಗದಂತೆ ನೋಡಿ.
ಇದನ್ನು ಓದಿ : Belagavi : ರಾಸಲೀಲೆ ಆರೋಪ ; ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ ಭಕ್ತರು.!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲೇನಿದೆ :
ವಿಡಿಯೋದಲ್ಲಿ ಸುಂದರವಾದ ಮನೆಯಲ್ಲಿ ಮಹಿಳೆಯೋರ್ವಳು ಟಡುಗೆ ಮನೆಯಿಂದ ಗ್ಯಾಸ್ ಲೀಕ್ ಆಗುತ್ತಿರುವ LPG ಸಿಲಿಂಡರ್ ಹಿಡಿದು ಹೊರ ತರಲು ಪ್ರಯತ್ನಿಸುತ್ತಿದ್ದಾರೆ. ದೃಶ್ಯದಲ್ಲಿ ಕಾಣುವಂತೆ ಗ್ಯಾಸ್ ಸ್ಟೌವ್‌ಗೆ ಕನೇಕ್ಟ ಮಾಡಿರುವ ಪೈಪ್ ಕಿತ್ತಿರುವುದು ಕಾಣುತ್ತದೆ.
ಸ್ಟೌವ್‌ಗೆ ಜೋಡಿಸಿರುವ ಪೈಪ್ ಕಿತ್ತ ಪರಿಮಾಣ LPG ಗ್ಯಾಸ್ ಪೈಪ್ ಮೂಲಕ ವೇಗವಾಗಿ ಹೊರ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮುಂದಿನ ಅನಾಹುತದ ಬಗ್ಗೆ ತಿಳಿದ ಗಟ್ಟಿಗಿತ್ತಿ ಮಹಿಳೆ ಆ ಸಿಲಿಂಡರ್ ನ್ನು ಮನೆಯಿಂದ ಹೊರ ತರಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ : Kidnap : ಪತಿಗೆ ಗುಂಡು ಹಾರಿಸಿ, ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿದ ಶಸ್ತ್ರಸಜ್ಜಿತ ಗುಂಪು.!
ಆದರೆ ಯಾವಾಗ ಸಿಲಿಂಡರ್‌ನಿಂದ LPG ಗ್ಯಾಸ್ ಅತಿಯಾಗಿ ಸೋರಿಕೆ ಆಗಲು ಪ್ರಾರಂಭಿಸಿತೋ, ಆಗ ಮಹಿಳೆಗೆ ಧೈರ್ಯ ಸಾಲದೇ ಹಿನ್ನಲೇಯಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಸೋರಿಕೆಯಾಗುತ್ತಿರುವ ಸಿಲಿಂಡರ್ ನೆಯಲ್ಲಿಯೇ ಬಿಟ್ಟು ಹೊರ ಓಡುವುದನ್ನು ದೃಶ್ಯದಲ್ಲಿ ಕಾಣಬಹುದು.
ಸುಮಾರು 1-2 ನಿಮಿಷಗಳ ಕಾಲ ಸಿಲಿಂಡರ್‌ನಲ್ಲಿದ್ದ ಗ್ಯಾಸ್ ಸೋರಿಕೆಯಾಗಿದೆ. ಈ ವೇಳೆ ಮಹಿಳೆ ಮನೆಯ ಹಿಂದಿನ ಬಾಗಿಲಿಗೆ ಬಂದು ಒಳಗಿನ ಪರಿಸ್ಥಿತಿಯನ್ನು ಗಮನಿಸಿಸುತ್ತಾರೆ ಮತ್ತು ಸಿಲಿಂಡರ್ ನಿಂದ ಗ್ಯಾಸ್ ಲೀಕ್ ಆಗುವುದು ನಿಂತಿರುವುದನ್ನು ಮನಗಂಡು ಮನೆ ಒಳಗೆ ಬರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದೇ ವೇಳೆ ಯುವಕನೋರ್ವ ಮುಂದಿನ ಬಾಗಿಲಿನಿಂದ ಒಳ ಬರುತ್ತಾನೆ. ಇನ್ನೇನು ಸೋರಿಕೆಯಾದ ಸಲಿಂಡರ್ ಹೊರಗೆ ತರಬೇಕು ಎನ್ನುವಷ್ಟರಲ್ಲಿಯೇ ಅಡುವೆ ಕೋಣೆಯಲ್ಲಿ ಹೇಗೋ ಕಾಣಿಸಿಕೊಂಡ ಸಣ್ಣ ಬೆಂಕಿ ಕಿಡಿ ಕ್ಷಣದಲ್ಲಿಯೇ ಮನೆಯನ್ನೆಲ್ಲಾ ಆವರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 23 ರ ದ್ವಾದಶ ರಾಶಿಗಳ ಫಲಾಫಲ.!
ಪವಾಡಸದೃಶವಾಗಿ ಸೋರಿಕೆಯಿಂದಾಗಿ ಭಾರೀ ಬೆಂಕಿಯಿಂದ ತುಂಬಿದ್ದ ಮನೆಯಿಂದ ಅವರು ಹೊರಗೆ ಓಡಿಹೋಗುದನ್ನು ಸಹ ವೀಡಿಯೊ ತೋರಿಸಲಾಗಿದೆ. ಸದ್ಯ ಇದರ CCTV ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಭಯಾನಕ ಅಘಾತಕಾರಿ ಘಟನೆಯ ನಿಖರವಾದ ಸ್ಥಳ ತಿಳಿದಿಲ್ಲ, ಆದಾಗ್ಯೂ, CCTV ದೃಶ್ಯಾವಳಿಗಳು ಬುಧವಾರ (ಜೂನ್ 18) ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ತೋರಿಸುತ್ತದೆ.
ಭಯಾನಕ ಅಘಾತಕಾರಿ ಘಟನೆಯ ವಿಡಿಯೋ :
They were lucky that all the doors and windows were open, which allowed much of the gas to escape outside and significantly reduced the impact of the explosion. pic.twitter.com/HhS9TTz6m8
— Satyam Raj (@Satyamraj_in) June 22, 2025
Belagavi : ರಾಸಲೀಲೆ ಆರೋಪ ; ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ ಭಕ್ತರು.!
ಜನಸ್ಪಂದನ ನ್ಯೂಸ್, ಮೂಡಲಗಿ (ಬೆಳಗಾವಿ) : ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಬಂಧದ ಆರೋಪದ ಹಿನ್ನಲೆಯಲ್ಲಿ ಮಠದಿಂದ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇಡೀ ಗ್ರಾಮಸ್ಥರು ಅಡವಿ ಸಿದ್ದೇಶ್ವರ ಮಠದ (Belagavi Dist) ಅಡವಿಸಿದ್ದರಾಮ ಸ್ವಾಮೀಜಿಯನ್ನು ಮಠದಿಂದ ಹೊರಹಾಕಬೇಕೆಂಬ ಒತ್ತಡದ ಹಿನ್ನೆಲೆ ಅಡವಿಸಿದ್ದರಾಮ ಸ್ವಾಮಿಯನ್ನು ಗ್ರಾಮದ ಹಿರಿಯರು ಮಠದಿಂದ ಉಚ್ಛಾಟಿಸಿ ಹೊರಹಾಖಿರುವ ಘಟನೆ ರವಿವಾರದಂದು ನಡೆಸಿದೆ.
ಮೂಡಲಗಿ (Belagavi) ಮಠದಲ್ಲಿಯ ಘಟನೆ ವಿವರ :
ಶನಿವಾರದಂದು ಬಿಜಾಪುರ ಜಿಲ್ಲೆಯ ತಾಳಿಕೋಟಿಯ ಮಹಿಳೆಯೋಬ್ಬಳು ತನ್ನ ಮಗಳೊಂದಿಗೆ ಅಡವಿ ಸಿದ್ದೇಶ್ವರ ಮಠಕ್ಕೆ ಆಗಮಿಸಿದರು ಎನ್ನಲಾಗುತ್ತಿದೆ. ರಾತ್ರಿ 10 ಗಂಟೆಗೆ ಸುಮಾರಿಗೆ ಸ್ಥಳೀಯ ಯುವಕರು ಸ್ವಾಮೀಜಿಯ ಕೊಠಡಿಯೊಳಗೆ ಆ ಮಹಿಳೆ ಇರುವುದನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಸ್ವಾಮಿಯನ್ನ ಹಾಗೂ ಮಹಿಳೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ಜರುಗಿತ್ತು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 22 ರ ದ್ವಾದಶ ರಾಶಿಗಳ ಫಲಾಫಲ.!
ಈ ವೇಳೆ ಗ್ರಾಮದ ಪ್ರಮುಖರು ರಾತ್ರಿ ವೇಳೆ ಮಠದಲ್ಲಿ ಅದು ಯಾರು ಇಲ್ಲದ ವೇಳೆ ಆ ಮಹಿಳೆ ತಮ್ಮ ಕೊಠಡಿಯೊಳಗೆ ಇರುವುದು ಯಾಕೆ.? ಎಂದು ಸ್ವಾಮೀಜಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ವಾಮೀಜಿ ವೇಳೆಯಾಗಿದ್ದರಿಂದ ಇಲ್ಲೇ ಉಳಿದುಕೊಂಡಿದ್ದಾರೆ ಎಂದು ಸಮಜಾಯಿಸಿ ನೀಡಲು ಮುಂದಾಗಿದ್ದಾರೆ.
ಅಲ್ಲದೇ ನಾನು ಯಾವುದೇ ತಪ್ಪನು ಮಾಡಿಲ್ಲ ಎಂದು ಮನವರಿಕೆ ಮಾಡಿದರು ಸಹ ಅದಕ್ಕೆ ಗ್ರಾಮಸ್ಥರು ಒಪ್ಪಿಲ್ಲ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ತಡರಾತ್ರಿ ಆ ಮಹಿಳೆ ಮತ್ತು ಅವಳ ಮಗಳನ್ನು ಸಾಂತ್ವಾನ ಕೇಂದ್ರಕ್ಕೆ ಬಿಟ್ಟಿದ್ದಾರೆ.
ರವಿವಾರ ದಿನವಾದ ಇಂದು (ಜೂ.22) ಇಡೀ ಗ್ರಾಮಸ್ಥರು ಮಠದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಯಾವುದೇ ಕಾರಣಕ್ಕೂ ಸ್ವಾಮೀಜಿ ಮಠದಲ್ಲಿ ಇರಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಮಠದಿಂದ ಹೊರಹಾಕಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ Stone-pelting.!
ಈ ಸಂದರ್ಭದಲ್ಲಿ ಸಿಪಿಐ ಶ್ರೀಶೈಲ್ ಬ್ಯಾಕೋಡ್, ಪಿಎಸ್ಐ ರಾಜು ಪೂಜೇರಿ ಹಾಗೂ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.