Saturday, July 12, 2025

Janaspandhan News

HomeBelagavi NewsBelagavi : ರಾಸಲೀಲೆ ಆರೋಪ ; ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ ಭಕ್ತರು.!
spot_img
spot_img

Belagavi : ರಾಸಲೀಲೆ ಆರೋಪ ; ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ ಭಕ್ತರು.!

- Advertisement -

ಜನಸ್ಪಂದನ ನ್ಯೂಸ್,‌ ಮೂಡಲಗಿ (ಬೆಳಗಾವಿ) : ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಬಂಧದ ಆರೋಪದ ಹಿನ್ನಲೆಯಲ್ಲಿ ಮಠದಿಂದ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಇಡೀ ಗ್ರಾಮಸ್ಥರು ಅಡವಿ ಸಿದ್ದೇಶ್ವರ ಮಠದ (Belagavi Dist) ಅಡವಿಸಿದ್ದರಾಮ ಸ್ವಾಮೀಜಿಯನ್ನು ಮಠದಿಂದ ಹೊರಹಾಕಬೇಕೆಂಬ ಒತ್ತಡದ ಹಿನ್ನೆಲೆ ಅಡವಿಸಿದ್ದರಾಮ ಸ್ವಾಮಿಯನ್ನು ಗ್ರಾಮದ ಹಿರಿಯರು ಮಠದಿಂದ ಉಚ್ಛಾಟಿಸಿ ಹೊರಹಾಖಿರುವ ಘಟನೆ ರವಿವಾರದಂದು ನಡೆಸಿದೆ.

ಮೂಡಲಗಿ (Belagavi) ಮಠದಲ್ಲಿಯ ಘಟನೆ ವಿವರ :

ಶನಿವಾರದಂದು ಬಿಜಾಪುರ ಜಿಲ್ಲೆಯ ತಾಳಿಕೋಟಿಯ ಮಹಿಳೆಯೋಬ್ಬಳು ತನ್ನ ಮಗಳೊಂದಿಗೆ ಅಡವಿ ಸಿದ್ದೇಶ್ವರ ಮಠಕ್ಕೆ ಆಗಮಿಸಿದರು ಎನ್ನಲಾಗುತ್ತಿದೆ. ರಾತ್ರಿ 10 ಗಂಟೆಗೆ ಸುಮಾರಿಗೆ ಸ್ಥಳೀಯ ಯುವಕರು ಸ್ವಾಮೀಜಿಯ ಕೊಠಡಿಯೊಳಗೆ ಆ ಮಹಿಳೆ ಇರುವುದನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಸ್ವಾಮಿಯನ್ನ ಹಾಗೂ ಮಹಿಳೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ಜರುಗಿತ್ತು.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 22 ರ ದ್ವಾದಶ ರಾಶಿಗಳ ಫಲಾಫಲ.!

ಈ ವೇಳೆ ಗ್ರಾಮದ ಪ್ರಮುಖರು ರಾತ್ರಿ ವೇಳೆ ಮಠದಲ್ಲಿ ಅದು ಯಾರು ಇಲ್ಲದ ವೇಳೆ ಆ ಮಹಿಳೆ ತಮ್ಮ ಕೊಠಡಿಯೊಳಗೆ ಇರುವುದು ಯಾಕೆ.? ಎಂದು ಸ್ವಾಮೀಜಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ವಾಮೀಜಿ ವೇಳೆಯಾಗಿದ್ದರಿಂದ ಇಲ್ಲೇ ಉಳಿದುಕೊಂಡಿದ್ದಾರೆ ಎಂದು ಸಮಜಾಯಿಸಿ ನೀಡಲು ಮುಂದಾಗಿದ್ದಾರೆ.

ಅಲ್ಲದೇ ನಾನು ಯಾವುದೇ ತಪ್ಪನು ಮಾಡಿಲ್ಲ ಎಂದು ಮನವರಿಕೆ ಮಾಡಿದರು ಸಹ ಅದಕ್ಕೆ ಗ್ರಾಮಸ್ಥರು ಒಪ್ಪಿಲ್ಲ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ತಡರಾತ್ರಿ ಆ ಮಹಿಳೆ ಮತ್ತು ಅವಳ ಮಗಳನ್ನು ಸಾಂತ್ವಾನ ಕೇಂದ್ರಕ್ಕೆ ಬಿಟ್ಟಿದ್ದಾರೆ.

ರವಿವಾರ ದಿನವಾದ ಇಂದು (ಜೂ.22) ಇಡೀ ಗ್ರಾಮಸ್ಥರು ಮಠದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಯಾವುದೇ ಕಾರಣಕ್ಕೂ ಸ್ವಾಮೀಜಿ ಮಠದಲ್ಲಿ ಇರಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಮಠದಿಂದ ಹೊರಹಾಕಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ Stone-pelting.!

ಈ ಸಂದರ್ಭದಲ್ಲಿ ಸಿಪಿಐ ಶ್ರೀಶೈಲ್ ಬ್ಯಾಕೋಡ್, ಪಿಎಸ್ಐ ರಾಜು ಪೂಜೇರಿ ಹಾಗೂ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.

Reels : ಮಳೆ ನಿಂತ ಮೇಲೆ ರೀಲ್ಸ್‌ಗೆ ಮುಂದಾದ ಯುವತಿ ; ಮುಂದೆನಾಯ್ತು.?

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕೆಲವರಿಗೆ ರೀಲ್ಸ್‌ (Reels) ಅಂದರೆ ಎನೋ ಒಂದು ಹುಚ್ಚು. ಈ ರೀಲ್ಸ್‌ ಹುಚ್ಚಿನವರು ಯಾವಾಗ ತಮ್ಮ ಮನಸ್ಸಿಗೆ ಏನು ಬರುತ್ತದೆಯೋ ಅದನ್ನು ಅಲ್ಲಿಯೇ ಮಾಡಲು ಮುಂದಾಗುತ್ತಾರೆ.

ಹೀಗೆ 15 ರಿಂದ 90 ಸೆಕೆಂಡುಗಳೊಳಗಿನ ಚಿಕ್ಕಚಿಕ್ಕ ರೀಲ್ಸ್‌ (Reels) ಮಾಡೋದು ಅವುಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಯೂಟ್ಯೂಬ್‌ ಶಾರ್ಟ್ಸ್‌ನಲ್ಲಿ ಸೇರಿಸುತ್ತಾರೆ.

ಈ ರೀಲ್ಸ್ ವಿಭಿನ್ನ ಶೈಲಿಯಲ್ಲಿ ತಯಾರಿಸಿ ಅವುಗಳನ್ನು ಜನರೊಂದಿಗೆ ಹಂಚಿಕೊಳ್ಳುವುದರಿಂದ Views ಮತ್ತು Likes ಪಡೆದು ಹೆಚ್ಚು followers ಗಳಿಸುವುದೇ ಆಗಿರುತ್ತದೆ. ಈ ರೀಲ್ಸ್‌ಗಳನ್ನು ದೈನಂದಿನ ಘಟನೆಗಳು, ಹಾಸ್ಯ, ಮಾಹಿತಿ, ಸಿನೆಮಾ, ಆರೋಗ್ಯ, ಆಹಾರ ಅಥವಾ ಶಿಕ್ಷಣದಂತಹ ಯಾವುದೇ ವಿಷಯದ ಮೇಲೆ ಮಾಡಬಹುದಾಗಿದ್ದು, ಅದು ಆ ರೀಲ್ಸ್‌ (Reels) ಮಾಡೋರ ಮನಸ್ಸಿನಿಚ್ಚೆಯಂತೆ ಮಾಡುತ್ತಾರೆ.

ಇದನ್ನು ಓದಿ : ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ Stone-pelting.!

ಇನ್ನು ಕೆಲವರಂತೆ ಡೇಂಜರಸ್ ಸ್ಥಳಗಳಲ್ಲಿ ಹೋಗಿ ರೀಲ್ಸ್‌ ಮಾಡಲು ಮುಂದಾಗುತ್ತಾರೆ. ಹೀಗೆ ಮಾಡಲು ಹೋಗಿ ಎಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಈ ವಿಷಯ ಈಗೇಕೆ ಅಂದ್ರೆ, ಇಲ್ಲೊಬ್ಬಳು ಕೆಂಪು ಸೀರೆಯುಟ್ಟ ಯುವತಿ ಮಳೆ ಬಂದು ಹೋದ ಖುಷಿಯಲ್ಲಿ ಅಂಗಳಕ್ಕೆ ಬಂದು ರೀಲ್ಸ್‌ (Reels) ಮಾಡಲು ಮುಂದಾಗಿ ಪಜೀತಿಗೆ ಸಿಕ್ಕಿ ಎಡವಟ್ಟು ಮಾಡಿಕೊಂಡಿದ್ದಾಳೆ.

ಸದ್ಯ ಎಡವಟ್ಟು ಮಾಡಿಕೊಂಡ ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಬಳಕೆದಾರರು ಸುಮ್ನಿರತ್ತಾರಾ? ಖಂಡಿತ ಇಲ್ಲಾ. ಅವರು ತಮ್ಮ ಭಾವನೆಗಳಿಗೆ ತಕ್ಕಂತೆ ಕಾಮೆಂಟ್‌ ಮಾಡಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 22 ರ ದ್ವಾದಶ ರಾಶಿಗಳ ಫಲಾಫಲ.!

ವಿಡಿಯೋದಲ್ಲೇನಿದೆ ಅಂದ್ರೆ, ಮಳೆ ಮಳೆ ಸುರಿದು ಹೋಗಿದೆ. ಮಳೆ ಬಂದು ಅಂಗಳ ಒದ್ದೆಯಾಗಿದ್ದು ವೆದರ್ ಚೆನ್ನಾಗಿದೆ ಅಂತ ಅಂದುಕೊಂಡು ಇದೇ ಖುಷಿಯಲ್ಲಿ ಯುವತಿಯೋರ್ವಳು ತನ್ನ ಮನೆಯ ಅಂಗಳದಲ್ಲಿ ರೀಲ್ಸ್‌ (Reels) ಮಾಡಲೆಂದು ಹೊರ ಬರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹೀಗೆ ಮನೆಯಿಂದ ಬಂದು ಅದೇ ಖುಷಿಯಲ್ಲಿ ಸಖತ್ ಆಗಿ ಡಾನ್ಸ್ ಮಾಡಬೇಕೆನ್ನುವುದರಲ್ಲಿ ಆಕೆಯ ಟೈಮ್‌ ಕೆಟ್ಟಿತ್ತು ಅಂತ ಕಾಣುತ್ತೆ, ಯುವತಿ ದೊಪ್ಪನೆ ಜಾರಿ ಬಿದ್ದು ಪಜೀತಿಗೆ ಸಿಲುಕಿ ಮುಗ್ಗರಿಸಿ ಬಿದ್ದಿದ್ದಾಳೆ. ಈ ವಿಡಿಯೋದಲ್ಲಿ ಯುವತಿಯೂ ಅಂಗಳದಲ್ಲಿ ಡಾನ್ಸ್ ಮಾಡುವ ಭರದಲ್ಲಿ ಕಾಲು ಜಾರಿ ಬೀಳುವ ದೃಶ್ಯವನ್ನು ಕಾಣಬಹುದಾಗಿದೆ.

ಹೀಗೆ ರೀಲ್ಸ್‌ ಮಾಡಲು ಮುಂದಾಗಿ ದೊಪ್ಪೆಂದು ಬಿದ್ದ ಯುವತಿಯ ಈ ವಿಡಿಯೋ ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನು ಓದಿ : ಯುವಕನಿಗೆ ಕಚ್ಚಿದ 5 ನಿಮಿಷದಲ್ಲಿಯೇ ನೆಗೆದುಬಿದ್ದ ವಿಷಕಾರಿ Sneck.!

ಈ ವಿಡಿಯೋವನ್ನು papakiparimampi ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇನ್ನು ಇಂತಹ ವಿಡಿಯೋ ನೋಡಿದ ನಮ್ಮ ನೆಟ್ಟಿಗರು ಸುಮ್ನಿರತ್ತಾರಾ.? ಖಂಡಿತಾ ಇಲ್ಲ. ಯುವತಿಯ ಕುರಿತಾಗಿ ತಮ್ಮದೇ ಆದ ಭಾವನೆಯಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ 5 ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಈಗಾಗಲೇ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, 19,427 likes ಕೂಡ ಪಡೆದಿದೆ.

ಈ ವಿಡಿಯೋ ನೋಡಿದ ನಂತರ ನಗು ತಡೆಯಲು ಆಗುತ್ತಿಲ್ಲ ಎಂದು ಒಬ್ಬ ನೆಟ್ಟಿಗರೆ ಹೇಳಿದರೆ, ಮತ್ತೊಬ್ಬರು, ಅದಕ್ಕೆ ಹೇಳೋದು ಅತಿಯಾಗಿ ಆಡಿದ್ರೆ ಹೀಗೆ ಆಗೋದು ಎಂದು ಕಾಮೆಂಟ್ ಮಾಡಿದ್ದಾರೆ. ಈ ಪ್ರೀತಿಯಲ್ಲಿ ಬೀಳೊದು ಅಂದ್ರೆ ಹೀಗೇನೆ ಇರ್ಬೇಕು ಎಂದು ಕೂಡ ಓರ್ವ ತಮಾಷೆ ಮಾಡಿ ಕಾಮೆಂಟ್ ಮಾಡಿದ್ದಾರೆ.

ಯುವತಿಯ ಪಜೀತಿಯ ವಿಡಿಯೋ (Reels) ಇಲ್ಲಿದೆ :

 

View this post on Instagram

 

A post shared by Mampi (@papa_ki_pari_mampi)

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments