ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರಿಗೆ ರೀಲ್ಸ್ (Reels) ಅಂದರೆ ಎನೋ ಒಂದು ಹುಚ್ಚು. ಈ ರೀಲ್ಸ್ ಹುಚ್ಚಿನವರು ಯಾವಾಗ ತಮ್ಮ ಮನಸ್ಸಿಗೆ ಏನು ಬರುತ್ತದೆಯೋ ಅದನ್ನು ಅಲ್ಲಿಯೇ ಮಾಡಲು ಮುಂದಾಗುತ್ತಾರೆ.
ಹೀಗೆ 15 ರಿಂದ 90 ಸೆಕೆಂಡುಗಳೊಳಗಿನ ಚಿಕ್ಕಚಿಕ್ಕ ರೀಲ್ಸ್ (Reels) ಮಾಡೋದು ಅವುಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ನಲ್ಲಿ ಸೇರಿಸುತ್ತಾರೆ.
ಈ ರೀಲ್ಸ್ ವಿಭಿನ್ನ ಶೈಲಿಯಲ್ಲಿ ತಯಾರಿಸಿ ಅವುಗಳನ್ನು ಜನರೊಂದಿಗೆ ಹಂಚಿಕೊಳ್ಳುವುದರಿಂದ Views ಮತ್ತು Likes ಪಡೆದು ಹೆಚ್ಚು followers ಗಳಿಸುವುದೇ ಆಗಿರುತ್ತದೆ. ಈ ರೀಲ್ಸ್‌ಗಳನ್ನು ದೈನಂದಿನ ಘಟನೆಗಳು, ಹಾಸ್ಯ, ಮಾಹಿತಿ, ಸಿನೆಮಾ, ಆರೋಗ್ಯ, ಆಹಾರ ಅಥವಾ ಶಿಕ್ಷಣದಂತಹ ಯಾವುದೇ ವಿಷಯದ ಮೇಲೆ ಮಾಡಬಹುದಾಗಿದ್ದು, ಅದು ಆ ರೀಲ್ಸ್ (Reels) ಮಾಡೋರ ಮನಸ್ಸಿನಿಚ್ಚೆಯಂತೆ ಮಾಡುತ್ತಾರೆ.
ಇದನ್ನು ಓದಿ : ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ Stone-pelting.!
ಇನ್ನು ಕೆಲವರಂತೆ ಡೇಂಜರಸ್ ಸ್ಥಳಗಳಲ್ಲಿ ಹೋಗಿ ರೀಲ್ಸ್ ಮಾಡಲು ಮುಂದಾಗುತ್ತಾರೆ. ಹೀಗೆ ಮಾಡಲು ಹೋಗಿ ಎಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಈ ವಿಷಯ ಈಗೇಕೆ ಅಂದ್ರೆ, ಇಲ್ಲೊಬ್ಬಳು ಕೆಂಪು ಸೀರೆಯುಟ್ಟ ಯುವತಿ ಮಳೆ ಬಂದು ಹೋದ ಖುಷಿಯಲ್ಲಿ ಅಂಗಳಕ್ಕೆ ಬಂದು ರೀಲ್ಸ್ (Reels) ಮಾಡಲು ಮುಂದಾಗಿ ಪಜೀತಿಗೆ ಸಿಕ್ಕಿ ಎಡವಟ್ಟು ಮಾಡಿಕೊಂಡಿದ್ದಾಳೆ.
ಸದ್ಯ ಎಡವಟ್ಟು ಮಾಡಿಕೊಂಡ ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಬಳಕೆದಾರರು ಸುಮ್ನಿರತ್ತಾರಾ? ಖಂಡಿತ ಇಲ್ಲಾ. ಅವರು ತಮ್ಮ ಭಾವನೆಗಳಿಗೆ ತಕ್ಕಂತೆ ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 22 ರ ದ್ವಾದಶ ರಾಶಿಗಳ ಫಲಾಫಲ.!
ವಿಡಿಯೋದಲ್ಲೇನಿದೆ ಅಂದ್ರೆ, ಮಳೆ ಮಳೆ ಸುರಿದು ಹೋಗಿದೆ. ಮಳೆ ಬಂದು ಅಂಗಳ ಒದ್ದೆಯಾಗಿದ್ದು ವೆದರ್ ಚೆನ್ನಾಗಿದೆ ಅಂತ ಅಂದುಕೊಂಡು ಇದೇ ಖುಷಿಯಲ್ಲಿ ಯುವತಿಯೋರ್ವಳು ತನ್ನ ಮನೆಯ ಅಂಗಳದಲ್ಲಿ ರೀಲ್ಸ್ (Reels) ಮಾಡಲೆಂದು ಹೊರ ಬರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.
ಹೀಗೆ ಮನೆಯಿಂದ ಬಂದು ಅದೇ ಖುಷಿಯಲ್ಲಿ ಸಖತ್ ಆಗಿ ಡಾನ್ಸ್ ಮಾಡಬೇಕೆನ್ನುವುದರಲ್ಲಿ ಆಕೆಯ ಟೈಮ್ ಕೆಟ್ಟಿತ್ತು ಅಂತ ಕಾಣುತ್ತೆ, ಯುವತಿ ದೊಪ್ಪನೆ ಜಾರಿ ಬಿದ್ದು ಪಜೀತಿಗೆ ಸಿಲುಕಿ ಮುಗ್ಗರಿಸಿ ಬಿದ್ದಿದ್ದಾಳೆ. ಈ ವಿಡಿಯೋದಲ್ಲಿ ಯುವತಿಯೂ ಅಂಗಳದಲ್ಲಿ ಡಾನ್ಸ್ ಮಾಡುವ ಭರದಲ್ಲಿ ಕಾಲು ಜಾರಿ ಬೀಳುವ ದೃಶ್ಯವನ್ನು ಕಾಣಬಹುದಾಗಿದೆ.
ಹೀಗೆ ರೀಲ್ಸ್ ಮಾಡಲು ಮುಂದಾಗಿ ದೊಪ್ಪೆಂದು ಬಿದ್ದ ಯುವತಿಯ ಈ ವಿಡಿಯೋ ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನು ಓದಿ : ಯುವಕನಿಗೆ ಕಚ್ಚಿದ 5 ನಿಮಿಷದಲ್ಲಿಯೇ ನೆಗೆದುಬಿದ್ದ ವಿಷಕಾರಿ Sneck.!
ಈ ವಿಡಿಯೋವನ್ನು papakiparimampi ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇನ್ನು ಇಂತಹ ವಿಡಿಯೋ ನೋಡಿದ ನಮ್ಮ ನೆಟ್ಟಿಗರು ಸುಮ್ನಿರತ್ತಾರಾ.? ಖಂಡಿತಾ ಇಲ್ಲ. ಯುವತಿಯ ಕುರಿತಾಗಿ ತಮ್ಮದೇ ಆದ ಭಾವನೆಯಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ 5 ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಈಗಾಗಲೇ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, 19,427 likes ಕೂಡ ಪಡೆದಿದೆ.
ಈ ವಿಡಿಯೋ ನೋಡಿದ ನಂತರ ನಗು ತಡೆಯಲು ಆಗುತ್ತಿಲ್ಲ ಎಂದು ಒಬ್ಬ ನೆಟ್ಟಿಗರೆ ಹೇಳಿದರೆ, ಮತ್ತೊಬ್ಬರು, ಅದಕ್ಕೆ ಹೇಳೋದು ಅತಿಯಾಗಿ ಆಡಿದ್ರೆ ಹೀಗೆ ಆಗೋದು ಎಂದು ಕಾಮೆಂಟ್ ಮಾಡಿದ್ದಾರೆ. ಈ ಪ್ರೀತಿಯಲ್ಲಿ ಬೀಳೊದು ಅಂದ್ರೆ ಹೀಗೇನೆ ಇರ್ಬೇಕು ಎಂದು ಕೂಡ ಓರ್ವ ತಮಾಷೆ ಮಾಡಿ ಕಾಮೆಂಟ್ ಮಾಡಿದ್ದಾರೆ.
ಯುವತಿಯ ಪಜೀತಿಯ ವಿಡಿಯೋ (Reels) ಇಲ್ಲಿದೆ :
View this post on Instagram
ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ Stone-pelting.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಎಸ್‌ಆರ್ ಬೆಂಗಳೂರು-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (22691) ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ (Stone-pelting) ನಡೆಸಿರುವ ಬಗ್ಗೆ ವರದಿಯಾಗಿದ್ದು, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ತನಿಖೆ ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಕೆಎಸ್‌ಆರ್ ಬೆಂಗಳೂರು-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (22691) ರೈಲಿಗೆ ರಾತ್ರಿ ರಾಣಿ ಕಮಲಪತಿ (ಹಬೀಬ್‌ಗಂಜ್) ಮತ್ತು ಭೋಪಾಲ್ ನಿಲ್ದಾಣಗಳ ನಡುವೆ ಇದ್ದಾಗ ಯಾರೊ ಕಿಡಿಗೇಡಿಗಳು ಕಲ್ಲು ತೂರಾಟ (Stone-pelting) ನಡೆಸಿದ್ದಾರೆ, ಸುದೈವಶಾತ್ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ : ಬ್ಲಡ್ ಶುಗರ್ ಸಮಸ್ಯೆಯೇ.? ಕುಡಿಯಿರಿ 1 ಚಮಚ ಈ Fruit ನ ಎಲೆಯ ರಸ.!
ಈ ಘಟನೆ (Stone-pelting) ಸಂಭವಿಸುತ್ತಿರುವ ವೇಳೆ ಓರ್ವ ಪ್ರಯಾಣಿಕ ಊಟ ಮಾಡುತ್ತಿದ್ದಾಗ ಕಿಟಕಿ ಗಾಜು ಒಡೆದು ತನ್ನ ತಟ್ಟೆಯ ಮೇಲೆ ಬಿದ್ದಿದೆ ಎಂದು ಹೇಳಿದ್ದಾರೆ. ಆರ್‌ಪಿಎಫ್ ಭೋಪಾಲ್ ವಿಭಾಗದ ಕಮಾಂಡೆಂಟ್ ಪ್ರಶಾಂತ್ ಯಾದವ್ “B-4 ಕೋಚ್‌ನಲ್ಲಿ ಸೀಟ್ ಸಂಖ್ಯೆ 41 ರಲ್ಲಿದ್ದ ದೀಪಕ್ ಕುಮಾರ್ ಎಂಬವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ” ಎಂದಿದ್ದಾರೆ.
ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ “ರಾತ್ರಿ 10.30 ರ ಸುಮಾರಿಗೆ ಕಲ್ಲು ತೂರಾಟ (Stone-pelting) ನಡೆಸಲಾಗಿದ್ದು, ರಾತ್ರಿ 10.42 ಕ್ಕೆ ರೈಲ್ ಮದದ್ ಪೋರ್ಟಲ್ ಮೂಲಕ ದೂರು ನೀಡಲಾಗಿದೆ. ಸದ್ಯ ತನಿಖೆ ನಡೆಯುತ್ತಿದ್ದು ಒಂದೇರಡು ದಿನಗಳಲ್ಲಿ ಆರೋಪಿತರನ್ನು ಪತ್ತೆ ಮಾಡಲಾಗುವುದೆಂದು ಅವರು ಹೇಳಿದರು.
ಇದನ್ನು ಓದಿ : ಯುವಕನಿಗೆ ಕಚ್ಚಿದ 5 ನಿಮಿಷದಲ್ಲಿಯೇ ನೆಗೆದುಬಿದ್ದ ವಿಷಕಾರಿ Sneck.!
ಮಹಾರಾಷ್ಟ್ರದ ಬಿಜೆಪಿ ನಾಯಕ ಚಂದನ್ ಗೋಸ್ವಾಮಿ ದೆಹಲಿಯಿಂದ ಪಿಟಿಐಗೆ ಮಾಹಿತಿ ನೀಡುತ್ತಾ, ಬಿ-4 ಕೋಚ್‌ನ ಸೀಟ್ ಸಂಖ್ಯೆ 9 ರಲ್ಲಿ ಕುಳಿತಿರುವುದಾಗಿ ಮತ್ತು ಈ ಕೋಚ್ ಗುರಿಯಾಗಿಸಿಕೊಂಡರು ಕಲ್ಲು ತೂರಾಟ (Stone-pelting) ಮಾಡಲಾಗಿದೆ. “ಅದೃಷ್ಟವಶಾತ್, ಕಲ್ಲುಗಳು ಕಿಟಕಿಯ ಗಾಜಿನ ಕೆಳಗೆ ತಗುಲಿ ನಾನು ತಪ್ಪಿಸಿಕೊಂಡೆ” ಎಂದು ಗೋಸ್ವಾಮಿ ಹೇಳಿದ್ದಾರೆ.
ಇಂತಹ (Stone-pelting) ವಿಧ್ವಂಸಕರನ್ನು ತಕ್ಷಣವೇ ಬಂಧಿಸಬೇಕು, ಭವಿಷ್ಯದಲ್ಲಿ ಇಂತಹ (Stone-pelting) ಘಟನೆಗಳು ಮತ್ತೆ ಸಂಭವಿಸದಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಎಂದು ಅವರು ಆಗ್ರಹಿಸಿದ್ದಾರೆ. ನಂತರ ರೈಲಿನ ಒಡೆದ ಕಿಟಕಿ ಗಾಜನ್ನು ಬದಲಾಯಿಸಿದೆ ಎಂದು ತಿಳಿದು ಬಂದಿದೆ.