ಜನಸ್ಪಂದನ ನ್ಯೂಸ್, ಡೆಸ್ಕ್ : ಅಜಾಗರೂಕತೆಯಿಂದ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿರುವ ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು ಸಂಭವಿಸಿರುವ ದುರಂತ ಘಟನೆ ಘಟಿಸಿದ್ದು, ಈ ಘಟನೆಯ ವಿಡಿಯೋ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಮಹಿಳೆಯರಿಬ್ಬರು ರೈಲು ಹಳಿ (Railway Track) ದಾಟುವ ವೇಳೆ ಸಂಭವಿಸಿದ ಭೀಕರ ದುರಂತದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಜನರಿಗೆ ಎಚ್ಚರಿಕೆಯ ಗಂಟೆ (Warning) ಆಗಿ ಪರಿಣಮಿಸಿದೆ.
ವಿಡಿಯೋದಲ್ಲೇನಿದೆ :
ವಿಡಿಯೋದಲ್ಲಿ, ರೈಲ್ವೇ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಕೈ-ಕೈ ಹಿಡಿದುಕೊಂಡೇ ಹಳಿ ದಾಟಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಆದರೆ, ಹಳಿಯ ಎತ್ತರ ಮತ್ತು ಅವಸರದಿಂದಾಗಿ ಅವರು ವೇಗವಾಗಿ ಮೇಲಕ್ಕೆ ಏರಲು ಸಾಧ್ಯವಾಗುವುದಿಲ್ಲ.
ಪ್ಲಾಟ್‌ಫಾರ್ಮ್ ಮೇಲೆ ಹತ್ತಲು ಆಗದಿದ್ದಾಗ ಅದೇ ಸ್ಥಳದಲ್ಲಿದ್ದ ವ್ಯಕ್ತಿಗಳು ಸಹಾಯಕ್ಕಾಗಿ ಮುಂದೆ ಬಂದಿದ್ದಾರೆ. ಮಹಿಳೆಯರನ್ನು ಕೈ ಹಿಡಿದು ಮೇಲಕ್ಕೆತ್ತಬೇಕು ಅನ್ನುವಷ್ಟರಲ್ಲಿ ಅದೇ line ಮೇಲೆ ವೇಗವಾಗಿ ಬರುತ್ತಿರುವ ರೈಲಿನ ದೃಶ್ಯ ಕಂಡ ವ್ಯಕ್ತಿಗಳು ಹಿಂದೆ ಸರಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕ್ಷಣಾರ್ಧದಲ್ಲಿಯೇ ಅತೀವ ವೇಗದಲ್ಲಿ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲು (Express Train) ಅವರಿಗೆ ಡಿಕ್ಕಿ ಹೊಡೆದು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು ಸಂಭವಿಸಿರುವ ದುರಂತದ ದೃಶ್ಯ CCTV ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನು ಓದಿ : ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: CCB ದಾಳಿ; 4 ಜನರ ಬಂಧನ, ಮಹಿಳೆಯರ ರಕ್ಷಣೆ.
ರೈಲಿನ ಭಾರೀ ವೇಗ ಮತ್ತು ರಭಸದಿಂದ ಇಬ್ಬರೂ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ದೃಶ್ಯಗಳು ಅತೀವ ಹೃದಯವಿದ್ರಾವಕವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
3. Dünya Savaşı @ww3mediaa ಎನ್ನುವ ಸಾಮಾಜಿಕ ಜಾಲತಾಣದ ಖಾತೆಯಲ್ಲಿ May 5, 2026 ರಂದು ಈ ವಿಡಿಯೋ ಹಂಚಿಕೊಂಡಿದ್ದು, ಸದ್ಯ 1.5M Views ಪಡೆದುಕೊಂಡಿದೆ. ಭಾರತದಲ್ಲಿ, ಪ್ಲಾಟ್‌ಫಾರ್ಮ್ ತಲುಪಲು ಹಳಿ ದಾಟಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಮಹಿಳೆಯರು ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು (In India, two women were struck by a train and killed while attempting to cross the tracks to reach the platform) ಎಂಬ ಬರೆದುಕೊಂಡಿದ್ದಾರೆ.
ಈ ಬರಹದಿಂದ ತಿಳಿದು ಬರುವುದೆನೆಂದರೆ, ಘಟನೆ ಭಾರತದಲ್ಲಿ ನಡೆದಿರುವುದು ಗೊತ್ತಾಗುತ್ತದೆ, ಆದರೆ ಎಲ್ಲಿ ಮತ್ತು ಯಾವಾಗ ಅಂತ ತಿಳಿದು ಬಂದಿಲ್ಲ.
ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು, ವಿಡಿಯೋ :
🔴(HASSAS)
Hindistan’da iki kadın, tren raylarını geçerek perona çıkmaya çalışırken trenin altında kaldı. pic.twitter.com/z9ajQHMSuH
— 3. Dünya Savaşı (@ww3mediaa) May 5, 2026
Courtesy : Social Media / Twitter
ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು ಸಂಭವಿಸಿದ ಈ ಘಟನೆ, ಮತ್ತೊಮ್ಮೆ ರೈಲು ಹಳಿ ದಾಟುವಾಗ ಜಾಗರೂಕತೆಯ ಅಗತ್ಯವನ್ನು ನೆನಪಿಸಿದೆ. ಅಧಿಕಾರಿಗಳು ಸದಾ ಫುಟ್‌ಓವರ್ ಬ್ರಿಡ್ಜ್ (Foot Over Bridge) ಅಥವಾ ಅಂಡರ್‌ಪಾಸ್ (Underpass) ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ.
ಸಂಪಾದಕೀಯ :
- ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಹಳಿ ದಾಟುವುದು ತುಂಬಾ ಅಪಾಯಕಾರಿ, ಆದ್ದರಿಂದ ಸಾಧ್ಯವಾದಷ್ಟು ತಪ್ಪಿಸಬೇಕು.
- ಯಾವಾಗಲೂ ಫುಟ್ ಓವರ್ ಬ್ರಿಡ್ಜ್ (FOB) ಅಥವಾ ಅಂಡರ್‌ಪಾಸ್ ಬಳಸುವುದು ಅತ್ಯಂತ ಸುರಕ್ಷಿತ ವಿಧಾನ.
- ರೈಲು ಬರುತ್ತಿದೆಯೇ ಎಂದು ಎರಡು ಕಡೆ ಗಮನಿಸಿ, ತುರ್ತು ಅವಸರದಲ್ಲಿ ಹಳಿ ದಾಟಲು ಹೋಗಬೇಡಿ.
- ಕಿವಿಯಲ್ಲಿ ಹೆಡ್‌ಫೋನ್ ಹಾಕಿಕೊಂಡು ಅಥವಾ ಮೊಬೈಲ್‌ನಲ್ಲಿ ಮಾತನಾಡುತ್ತಾ ಹಳಿ ದಾಟುವುದು ಜೀವಕ್ಕೆ ಅಪಾಯಕಾರಿಯಾಗಿದೆ.
ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
- ಮಕ್ಕಳು ಮತ್ತು ವೃದ್ಧರನ್ನು ಹಳಿ ಬಳಿ ಒಬ್ಬರೇ ಬಿಡದೆ ಕಾಳಜಿ ವಹಿಸಬೇಕು.
- ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಇಂತಹ ದುರ್ಘಟನೆಗಳನ್ನು ಸುಲಭವಾಗಿ ತಪ್ಪಿಸಬಹುದು.
Disclaimer: ಈ ಸುದ್ದಿ (ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಲಭ್ಯ ಮಾಹಿತಿಗಳ ಆಧಾರದ ಮೇಲೆ ರಚಿಸಲಾಗಿದೆ. ದೃಶ್ಯಗಳು ಅಸ್ವಸ್ಥಗೊಳಿಸುವಂತಿರಬಹುದು. ದಯವಿಟ್ಟು ಸುರಕ್ಷತಾ ನಿಯಮಗಳನ್ನು ಪಾಲಿಸಿ.




