Saturday, July 12, 2025

Janaspandhan News

HomeGeneral Newsಆರೋಪಿಗಳು ಪರಾರಿಯಾಗಲು ಸಹಕರಿಸಿದ ಆರೋಪ ; PSI ಸೇರಿ ಇಬ್ಬರು Suspended.!
spot_img
spot_img

ಆರೋಪಿಗಳು ಪರಾರಿಯಾಗಲು ಸಹಕರಿಸಿದ ಆರೋಪ ; PSI ಸೇರಿ ಇಬ್ಬರು Suspended.!

- Advertisement -

‌ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆರೋಪಿಗಳು ಪರಾರಿಯಾಗಲು ಜೂನ್ 12ರಂದು ಸಹಕರಿಸಿದ ಹಿನ್ನಲೆಯಲ್ಲಿ ಇಬ್ಬರು ಪೊಲೀಸರನ್ನು ಅಮಾನತು (Suspended) ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಬ್ಬರು ಆರೋಪಿಗಳು ಪೊಲೀಸರ ಕಣ್ಣೆದುರೇ ಅದರಲ್ಲೂ ಒಬ್ಬಾತ ಸೂಟ್​ಕೇಸ್​ ಹಿಡಿದು ಪರಾರಿಯಾಗುತ್ತಾನೆ. ಈ ಘಟನೆ ನಡೆಯುವಾಗ ಆರೋಪಿಗಳು ಕಣ್ಮುಂದಿದ್ದರೂ ಸಹ ಅವರನ್ನು ಹಿಡಿಯದೇ ಅವರಿಗೆ ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತು (Suspended) ಮಾಡಲಾಗಿದೆ.

ಜೂನ್ 12ರಂದು ಆರೋಪಿಗಳಿಬ್ಬರು ಬೈಕ್​​ನಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ ಅದೇ ಸಮಯದಲ್ಲಿ ಗಸ್ತು ಬಂದ ಇಬ್ಬರು ಪೊಲೀಸರು ಆರೋಪಿಗಳನ್ನು ನೋಡಿಯೂ ನೋಡದಂತೆ ಇರುತ್ತಾರೆ. ಈ ದೃಶ್ಯ ಸ್ಥಳದಲ್ಲಿದ್ದ CCTV ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 23 ರ ದ್ವಾದಶ ರಾಶಿಗಳ ಫಲಾಫಲ.!

ಜೂನ್ 12, 2025 ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspended) ಗೊಳಿಸಲಾಗಿದೆ. ವಿಡಿಯೋದಲ್ಲಿ ಕೆಲವೇ ಕ್ಷಣಗಳ ಮೊದಲು ಬೇಕಾಗಿರುವ ಶಂಕಿತ ವ್ಯಕ್ತಿಗೆ ಸ್ಥಳದಿಂದ ಹೊರಹೋಗಲು ಅವಕಾಶ ನೀಡುತ್ತಿರುವುದನ್ನು ಈ ಘಟನೆ ತೋರಿಸಿದೆ. ಈ ಘಟನೆಯು ಆಂತರಿಕ ತನಿಖೆಗೆ ನಾಂದಿ ಹಾಡಿದ್ದು, ಔಪಚಾರಿಕ ಪ್ರಕರಣ ದಾಖಲಿಸಲಾಗಿದೆ.

ಬೇಕಾಗಿರುವ ಶಂಕಿತ ಅನೂಪ್ ಶುಕ್ಲಾ ಮತ್ತು ಇನ್ನೋರ್ವ ಬೈಕ್‌ ಒಂದರ ಮೇಲೆ ಕುಳಿತು ನಗುತ್ತಾ ಸಂಭಾಷಣೆಯಲ್ಲಿ ತೋಡಗಿರುತ್ತಾರೆ. ಈ ವೇಳೆ ಗಸ್ತು ಬೈಕ್‌ನಲ್ಲಿ ಬಂದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಅವರನ್ನು ನೋಡಿಯೂ ನೋಡದ ಹಾಗೆ ಇರುತ್ತಾರೆ.

ಈ ವೇಳೆ ಶುಕ್ಲಾ ಟ್ರಾಲಿ ಬ್ಯಾಗ್‌ನೊಂದಿಗೆ ಇದ್ದ ಸ್ಥಳದಿಂದ ಹೊರಟು ಹೊಗುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ಇದೇ ಸಮಯಕ್ಕೆ ಅಂದರೆ ಆರೋಪಿತರು ಹೋದ ಕೆಲವೇ ಸೆಕೆಂಡುಗಳ ನಂತರ, ನವಾಬ್‌ಗಂಜ್ ಮತ್ತು ಕೊಹ್ನಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಅದೇ ಸ್ಥಳಕ್ಕೆ ಆಗಮಿಸಿ ಹೊರಟುಹೋದ ಶಂಕಿತನನ್ನು ಬೆನ್ನಟ್ಟುತ್ತಿದ್ದಾರೆ ಎಂದು ದೃಶ್ಯ ತೋರುತ್ತದೆ.

ಪೊಲೀಸ್ ಕೇಂದ್ರ ಉಪ ಆಯುಕ್ತ ಶ್ರವಣ್ ಕುಮಾರ್ ಸಿಂಗ್, ವಿಡಿಯೋ ತ್ವರಿತ ಕ್ರಮಕ್ಕೆ ಕಾರಣವಾಯಿತು ಎಂದು ದೃಢಪಡಿಸಿದರು. “ಮೊದಲ ನೋಟಕ್ಕೆ, ವೈರಲ್ ವಿಡಿಯೋದಲ್ಲಿ ಸಬ್-ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಪಾತ್ರ ಅನುಮಾನಾಸ್ಪದವಾಗಿ ಕಾಣುತ್ತದೆ” ಎಂದು ಸಿಂಗ್ ಹೇಳಿದರು.

ಅಮಾನತಿಗೆ (Suspended) ಕಾರಣವಾದ ವಿಡಿಯೋ :

ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!

“ತನಿಖೆಯಲ್ಲಿ, ಪ್ರಾಥಮಿಕವಾಗಿ ಇಬ್ಬರೂ ಪೊಲೀಸರ ಪಾತ್ರವು ಅನುಮಾನಾಸ್ಪದವಾಗಿ ಕಂಡುಬಂದಿದೆ ಮತ್ತು ಆರೋಪಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆಂದು ಕಂಡುಬಂದ ಕಾರಣ, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspended) ಗೊಳಿಸಲಾಗಿದೆ” ಎಂದು ಸಿಂಗ್ ದೃಢಪಡಿಸಿದರು.

Suspended ಆದವರ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ, ತನಿಖೆಯನ್ನು ತಕ್ಷಣವೇ ಸಹಾಯಕ ಪೊಲೀಸ್ ಆಯುಕ್ತ ಕರ್ನಲ್‌ಗಂಜ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ವಿವರಿಸಿದರು.

ಗ್ಯಾಸ್‌ ಸೋರಿ ಮನೆಯಲ್ಲಿದ್ದ `LPG’ ಸಿಲಿಂಡರ್ ಸ್ಪೋಟ ; ವಿಡಿಯೋ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮನೆಯಲ್ಲಿದ್ದ`LPG’ ಸಿಲಿಂಡರ್ ಒಂದು ಗ್ಯಾಸ್‌ ಸೋರಿಕೆಯಾದ ಪರಿಣಾಮ ಸ್ಫೋಟವಾದ ಭಯಾನಕ ಅಘಾತಕಾರಿ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೋಬ್ಬರ ಮನೆಯಲ್ಲಿ `LPG’ (Liquid petroleum gas) ಸಿಲಿಂಡರ್ ಬಳಸಿಯೇ ಬಳಸುತ್ತಾರೆ. ಈ`LPG’ ಸಿಲಿಂಡರ್ ಬಳಸುವ ಪೂರ್ವದಲ್ಲಿ ಕೆಲ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಒಂದು ವೇಳೆ ಸ್ವಲ್ಪವೇ ಸ್ವಲ್ಪ ಯಾಮಾರಿದರು ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಇದನ್ನು ಓದಿ : ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ Stone-pelting.!
ಮನೆಯಲ್ಲಿ LPG ಬಳಸುವಾಗ ಸುರಕ್ಷತೆಗೆ ಸಂಬಂಧಿಸಿದ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಡಿ :

ಸರಿಯಾದ ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರ್ ಬಳಸುವುದು :

  • ISI ಮಾರ್ಕ್ ಇರುವ ಸ್ಟೌವ್ ಮತ್ತು ರೆಗ್ಯುಲೇಟರ್‌ಗಳನ್ನು ಮಾತ್ರ ಬಳಸಿ.
  • ಗ್ಯಾಸ್ ಸಿಲಿಂಡರ್ ನಿಭಾಯಿಸುವುದು ಸರಿಯಾದ ವಿಧಾನದಲ್ಲಿ ಇರಲಿ.

ಗ್ಯಾಸ್ ಲೀಕ್ ತಪಾಸಣೆ :

  • ಪ್ರತಿದಿನ ಗ್ಯಾಸ್ ಬಳಸು ಮುನ್ನ “ಸ್ಮೆಲ್” ಮೂಲಕ ಲೀಕ್ ಇದೆಯೇ ಎಂದು ಪರಿಶೀಲಿಸಿ.
  • ಲೀಕ್ ಅನುಮಾನವಾದರೆ ತಕ್ಷಣವೇ ಮೆಚ್‌ವಾಕ್ಸ್/ಲೈಟರ್ ಬಳಸಬೇಡಿ.
  • ಗ್ಯಾಸ್ ಲೀಕ್ ಪರೀಕ್ಷೆಗೆ “ಸೋಪ್ ವಾಟರ್” ಬಳಸಿ – ಬಬಲ್ಸ್ ಬಂದರೆ ಲೀಕ್ ಇದೆ.
ಇದನ್ನು ಓದಿ : Reels : ಮಳೆ ನಿಂತ ಮೇಲೆ ರೀಲ್ಸ್‌ಗೆ ಮುಂದಾದ ಯುವತಿ ; ಮುಂದೆನಾಯ್ತು.?

ಪೈಪ್ ಮತ್ತು ರೆಗ್ಯುಲೇಟರ್ ಪರಿಶೀಲನೆ :

  • ಗ್ಯಾಸ್ ಹೋಸ್ ಪೈಪ್ 3 ವರ್ಷಕ್ಕೊಮ್ಮೆ ಬದಲಾಯಿಸಿ.
  • ರೆಗ್ಯುಲೇಟರ್ ಅನ್ನು ಸರಿಯಾಗಿ ಅಳವಡಿಸಿ; ತದ್ವಾರ ಗ್ಯಾಸ್ ಸರಿಯಾಗಿ ನಿಯಂತ್ರಣವಾಗುತ್ತದೆ.

ಬೆಳಕು ಮತ್ತು ಗಾಳಿಚಾಲನೆ :

  • ಅಡುಗೆ ಮನೆಯು ಗಾಳಿತನದಿಂದ ಕೂಡಿರಲಿ (ವೇಂಟಿಲೇಷನ್).
  • ಅಡುಗೆ ಮಾಡುವಾಗ ಎಕ್ಝಾಸ್ಟ್ ಫ್ಯಾನ್ ಅಥವಾ ಕಿಟಕಿಗಳನ್ನು ತೆರೆದು ಇಡಿ.

ಬಳಸದಾಗ ಗ್ಯಾಸ್ ಆಫ್ ಮಾಡುವುದು :

  • ಪ್ರತಿದಿನ ಅಡುಗೆ ಮುಗಿದ ಬಳಿಕ ಸಿಲಿಂಡರ್ ರೆಗ್ಯುಲೇಟರ್ ಆಫ್ ಮಾಡಿ.

ಪಟ್ಟಿಗಳು ಅಥವಾ ಸಡಿಲ ಬಟ್ಟೆಗಳು ಧರಿಸಬೇಡಿ :

  • ಅಡುಗೆ ಸಮಯದಲ್ಲಿ ಸಡಿಲವಾದ ಬಟ್ಟೆ ಧರಿಸದಿರಿ, ಬೆಂಕಿಯಿಂದ ಹಾನಿಯಾಗಬಹುದು.

ಮಕ್ಕಳಿಂದ ದೂರವಿಡಿ :

  • ಗ್ಯಾಸ್ ಸ್ಟೌವ್ ಬಳಕೆಯ ಸ್ಥಳಕ್ಕೆ ಮಕ್ಕಳು ಹೋಗದಂತೆ ನೋಡಿ.
ಇದನ್ನು ಓದಿ : Belagavi : ರಾಸಲೀಲೆ ಆರೋಪ ; ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ ಭಕ್ತರು.!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರೋ ವಿಡಿಯೋದಲ್ಲೇನಿದೆ :

ವಿಡಿಯೋದಲ್ಲಿ ಸುಂದರವಾದ ಮನೆಯಲ್ಲಿ ಮಹಿಳೆಯೋರ್ವಳು ಟಡುಗೆ ಮನೆಯಿಂದ ಗ್ಯಾಸ್‌ ಲೀಕ್‌ ಆಗುತ್ತಿರುವ LPG ಸಿಲಿಂಡರ್‌ ಹಿಡಿದು ಹೊರ ತರಲು ಪ್ರಯತ್ನಿಸುತ್ತಿದ್ದಾರೆ. ದೃಶ್ಯದಲ್ಲಿ ಕಾಣುವಂತೆ ಗ್ಯಾಸ್ ಸ್ಟೌವ್‌ಗೆ ಕನೇಕ್ಟ ಮಾಡಿರುವ ಪೈಪ್‌ ಕಿತ್ತಿರುವುದು ಕಾಣುತ್ತದೆ.

ಸ್ಟೌವ್‌ಗೆ ಜೋಡಿಸಿರುವ ಪೈಪ್‌ ಕಿತ್ತ ಪರಿಮಾಣ LPG ಗ್ಯಾಸ್‌ ಪೈಪ್‌ ಮೂಲಕ ವೇಗವಾಗಿ ಹೊರ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮುಂದಿನ ಅನಾಹುತದ ಬಗ್ಗೆ ತಿಳಿದ ಗಟ್ಟಿಗಿತ್ತಿ ಮಹಿಳೆ ಆ ಸಿಲಿಂಡರ್‌ ನ್ನು ಮನೆಯಿಂದ ಹೊರ ತರಲು ಪ್ರಯತ್ನಿಸಿದ್ದಾರೆ.

ಇದನ್ನು ಓದಿ : Kidnap : ಪತಿಗೆ ಗುಂಡು ಹಾರಿಸಿ, ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿದ ಶಸ್ತ್ರಸಜ್ಜಿತ ಗುಂಪು.!

ಆದರೆ ಯಾವಾಗ ಸಿಲಿಂಡರ್‌ನಿಂದ LPG ಗ್ಯಾಸ್‌ ಅತಿಯಾಗಿ ಸೋರಿಕೆ ಆಗಲು ಪ್ರಾರಂಭಿಸಿತೋ, ಆಗ ಮಹಿಳೆಗೆ ಧೈರ್ಯ ಸಾಲದೇ ಹಿನ್ನಲೇಯಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಸೋರಿಕೆಯಾಗುತ್ತಿರುವ ಸಿಲಿಂಡರ್‌ ನೆಯಲ್ಲಿಯೇ ಬಿಟ್ಟು ಹೊರ ಓಡುವುದನ್ನು ದೃಶ್ಯದಲ್ಲಿ ಕಾಣಬಹುದು.

ಸುಮಾರು 1-2 ನಿಮಿಷಗಳ ಕಾಲ ಸಿಲಿಂಡರ್‌ನಲ್ಲಿದ್ದ ಗ್ಯಾಸ್‌ ಸೋರಿಕೆಯಾಗಿದೆ. ಈ ವೇಳೆ ಮಹಿಳೆ ಮನೆಯ ಹಿಂದಿನ ಬಾಗಿಲಿಗೆ ಬಂದು ಒಳಗಿನ ಪರಿಸ್ಥಿತಿಯನ್ನು ಗಮನಿಸಿಸುತ್ತಾರೆ ಮತ್ತು ಸಿಲಿಂಡರ್‌ ನಿಂದ ಗ್ಯಾಸ್‌ ಲೀಕ್‌ ಆಗುವುದು ನಿಂತಿರುವುದನ್ನು ಮನಗಂಡು ಮನೆ ಒಳಗೆ ಬರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದೇ ವೇಳೆ ಯುವಕನೋರ್ವ ಮುಂದಿನ ಬಾಗಿಲಿನಿಂದ ಒಳ ಬರುತ್ತಾನೆ. ಇನ್ನೇನು ಸೋರಿಕೆಯಾದ ಸಲಿಂಡರ್‌ ಹೊರಗೆ ತರಬೇಕು ಎನ್ನುವಷ್ಟರಲ್ಲಿಯೇ ಅಡುವೆ ಕೋಣೆಯಲ್ಲಿ ಹೇಗೋ ಕಾಣಿಸಿಕೊಂಡ ಸಣ್ಣ ಬೆಂಕಿ ಕಿಡಿ ಕ್ಷಣದಲ್ಲಿಯೇ ಮನೆಯನ್ನೆಲ್ಲಾ ಆವರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 23 ರ ದ್ವಾದಶ ರಾಶಿಗಳ ಫಲಾಫಲ.!

ಪವಾಡಸದೃಶವಾಗಿ ಸೋರಿಕೆಯಿಂದಾಗಿ ಭಾರೀ ಬೆಂಕಿಯಿಂದ ತುಂಬಿದ್ದ ಮನೆಯಿಂದ ಅವರು ಹೊರಗೆ ಓಡಿಹೋಗುದನ್ನು ಸಹ ವೀಡಿಯೊ ತೋರಿಸಲಾಗಿದೆ. ಸದ್ಯ ಇದರ CCTV ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಭಯಾನಕ ಅಘಾತಕಾರಿ ಘಟನೆಯ ನಿಖರವಾದ ಸ್ಥಳ ತಿಳಿದಿಲ್ಲ, ಆದಾಗ್ಯೂ, CCTV ದೃಶ್ಯಾವಳಿಗಳು ಬುಧವಾರ (ಜೂನ್ 18) ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ತೋರಿಸುತ್ತದೆ.

ಭಯಾನಕ ಅಘಾತಕಾರಿ ಘಟನೆಯ ವಿಡಿಯೋ :

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments