ಜನಸ್ಪಂದನ ನ್ಯೂಸ್, ಡೆಸ್ಕ್ : ಕೋಚಿಂಗ್‌ನಿಂದ ಮನೆಗೆ ಹಿಂತಿರುಗುತ್ತಿದ್ದ ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ (Sexual) ದೌರ್ಜನ್ಯ ಎಸಗಿದ ಆರೋಪಿ ಯುವಕನನ್ನು ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ (Sexual) ದೌರ್ಜನ್ಯ ಎಸಗಿದ ಆರೋಪಿ ಯುವಕನನ್ನು ಹಾಲು ಮಾರಾಟ ಮಾಡುತ್ತಿರುವ ಮಠ್ ಕಮಲ್ ನಯನ್‌ಪುರ ನಿವಾಸಿಯಾದ ಮುಸಬ್ಬೀರ್ ಎಂದು ಗುರುತಿಸಲಾಗಿದೆ. ಕೋಚಿಂಗ್‌ನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ (Sexual harassment) ನಡೆದಿದೆ ಎಂದು ಹೇಳಲಾಗುತ್ತಿದೆ.
ಸಂಸ್ರಸ್ತೆ ಅಪ್ರಾಪ್ತ ಬಾಲಕಿ ಕೋಚಿಂಗ್‌ನಿಂದ ಶಾಲಾ ಡ್ರೆಸ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಸವಾರನೊಬ್ಬ ಆಕೆಯ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕ (Sexual) ದೌರ್ಜನ್ಯ ಎಸಗಿದ್ದಾನೆ. ನಂತರ ಅಶ್ಲೀಲ ಕೃತ್ಯಗಳನ್ನು ಮಾಡುತ್ತಾ ಅಶ್ಲೀಲ ಹೇಳಿಕೆಗಳನ್ನು ನೀಡಿ ಪರಾರಿಯಾಗಿದ್ದಾನೆ. ರಸ್ತೆಯಲ್ಲಿರುವ ಮನೆಯ ಹೊರಗೆ ಅಳವಡಿಸಿರುವ CCTV ಕ್ಯಾಮರಾದಲ್ಲಿ ಇಡೀ ಘಟನೆಯ ದೃಶ್ಯ ಸೆರೆಯಾಗಿದೆ.
ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
ಮನೆಗೆ ಬಂದು ಬಾಲಕಿ ನಡೆದ ಘಟನೆಯ (Sexual harassment) ಬಗ್ಗೆ ಪಾಲಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಪಾಲಕರು ತಕ್ಷಣವೇ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಸಂಪೂರ್ಣ ವಿಷಯ (Sexual harassment) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರ ಗಮನಕ್ಕೆ ಬಂದಾಗ, ಅವರು ತಕ್ಷಣ ಇಜ್ಜತ್‌ನಗರ ಪೊಲೀಸ್ ಠಾಣೆ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ ಎಸ್‌ಒಜಿ ಜಂಟಿ ತಂಡಗಳನ್ನು ರಚಿಸಿದರು.
ತಂಡಗಳು CCTV ದೃಶ್ಯಾವಳಿಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ ಆರೋಪಿತನು ಇಜ್ಜತ್‌ನಗರದ ಮಠ್ ಕಮಲ್ ನಯನ್‌ಪುರದ ನಿವಾಸಿ ಮುಸಬ್ಬೀರ್ ಎಂದು, ಆತ ವೃತ್ತಿಯಲ್ಲಿ ಹಾಲು ಮಾರಾಟಗಾರನಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 24 ರ ದ್ವಾದಶ ರಾಶಿಗಳ ಫಲಾಫಲ.!
ಆರೋಪಿಯನ್ನು ಹುಡುಕುವಾಗ ಪೊಲೀಸ್ ತಂಡ ಕರ್ಮಚಾರಿ ನಗರ ಚೌಕಿ ಪ್ರದೇಶದ ಕಾಶ್ಮೀರಿ ಕೋಥಿಯ ಹಿಂಭಾಗದಲ್ಲಿರುವ ತೋಟವನ್ನು ತಲುಪಿದಾಗ ಮುಸಬ್ಬೀರ್ ಅಲ್ಲಿ ಕಂಡುಬಂದನು. ಆತನನ್ನು (Sexual harassment ಮಾಡಿದ ವ್ಯಕ್ತಿ) ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಪ್ರತಿದಾಳಿಯಾಗಿ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿ ಬಂದಿಸಿದ್ದು, ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೈಂಗಿಕ (Sexual) ಕಿರುಕುಳದ CCTV ದೃಶ್ಯಾವಳಿ :
Location: इज्जतनगर, बरेली (यूपी) pic.twitter.com/D2ISmSgFDZ
— Piyush Rai (@Benarasiyaa) June 23, 2025
Astrology : ಹೇಗಿದೆ ಗೊತ್ತಾ.? ಜೂನ 24 ರ ದ್ವಾದಶ ರಾಶಿಗಳ ಫಲಾಫಲ.!
ಜನಸ್ಪಂದನ ನ್ಯೂಸ್, ಜೋತಿಷ್ಯ : 2025 ಜೂನ 24 ರ ಮಂಗಳವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :
*ಮೇಷ ರಾಶಿ*
ಕೈಗೆತ್ತಿಕೊಂಡ ಕಾರ್ಯಗಳು ಸುಗಮವಾಗಿ ಪೂರ್ಣಗೊಳಿಸುತ್ತೀರಿ. ಮನೆಯಲ್ಲಿ ತಮ್ಮ ಆತ್ಮೀಯರೊಂದಿಗೆ ಸಂತೋಷದಿಂದ ಕಳೆಯುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತೀರಿ. ವ್ಯಾಪಾರಗಳು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ಹೊಸ ಬಟ್ಟೆ ಖರೀದಿಸುತ್ತೀರಿ.
*ವೃಷಭ ರಾಶಿ*
ವ್ಯಾಪಾರ ಚಟುವಟಿಕೆಗಳಿಂದ ನೀವು ಗೌರವವನ್ನು ಪಡೆಯಬಹುದು. ಸಮಾಜದಲ್ಲಿ ಗೌರವ ಸಂಸ್ಕಾರಗಳು ಹೆಚ್ಚಾಗುತ್ತವೆ. ವಿವಾದಗಳು ಅಂತ್ಯಗೊಳ್ಳುತ್ತವೆ. ಆರ್ಥಿಕ ಪ್ರಗತಿ ಸಾಧಿಸಲಾಗುತ್ತದೆ. ಆರ್ಥಿಕ ಅಭಿವೃದ್ಧಿ ಸಾಧಿಸಲಾಗುತ್ತದೆ. ಮನೆಯ ಹೊರಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಪ್ರೋತ್ಸಾಹವನ್ನು ಪರಿಗಣಿಸಲಾಗುತ್ತದೆ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ.
*ಮಿಥುನ ರಾಶಿ*
ನೀವು ವಿದೇಶಕ್ಕೆ ಹೋಗುವ ಅವಕಾಶಗಳನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ ಹೊಸ ವಾಹನ ಯೋಗವಿದೆ. ಸಮಾಜದ ಪ್ರಮುಖ ವ್ಯಕ್ತಿಗಳ ಪರಿಚಯಗಳು ಹೆಚ್ಚಾಗುತ್ತದೆ. ಹಣಕಾಸಿನ ಪರಿಸ್ಥಿತಿಯು ತೃಪ್ತಿಕರವಾಗಿ ಸಾಗುತ್ತವೆ. ಕೈಗೊಂಡ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ.
*ಕಟಕ ರಾಶಿ*
ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಇಂದು ಶುಭ ದಿನವಾಗಲಿದೆ. ಸಂಬಂಧಿಕರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಆರೋಗ್ಯ ಸಮಸ್ಯೆಗಳು ಸ್ವಲ್ಪ ನೋವುಂಟು ಮಾಡುತ್ತವೆ. ಕೈಗೆತ್ತಿಕೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆರ್ಥಿಕ ಪರಿಸ್ಥಿತಿ ನಿಧಾನವಾಗುತ್ತದೆ. ಹಠಾತ್ ಪ್ರಯಾಣದಿಂದ ದೈಹಿಕ ಶ್ರಮ ಉಂಟಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಕಿರಿಕಿರಿಗಳು ಉಂಟಾಗುತ್ತವೆ.
ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
*ಸಿಂಹ ರಾಶಿ*
ಯಾವುದೇ ಕೆಲಸದಲ್ಲಿ ಆತುರಪಡಬೇಡಿ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಬಂಧು ಮಿತ್ರರೊಂದಿಗೆ ವಾದ-ವಿವಾದಗಳು ಉಂಟಾಗುತ್ತವೆ. ಸ್ವಲ್ಪ ಆರೋಗ್ಯ ಸಮಸ್ಯೆಗಳಿರುತ್ತವೆ. ಶ್ರಮದಿಂದಲೂ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಸ್ಥಿರಾಸ್ತಿಯ ಒಪ್ಪಂದಗಳಲ್ಲಿ ಅಡೆತಡೆಗಳಿರುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲ ಉಂಟಾಗುತ್ತದೆ.
*ಕನ್ಯಾ ರಾಶಿ*
ಕೆಲವು ಪ್ರಮುಖ ಕೆಲಸಗಳಲ್ಲಿ ನೀವು ಯಶಸ್ಸನ್ನು ಸಾಧಿಸಬಹುದು. ವ್ಯಾಪಾರಸ್ಥರಿಗೆ ಒಳ್ಳೆಯ ದಿನ ಇರುತ್ತದೆ. ದೂರದ ಬಂಧುಗಳಿಂದ ಶುಭ ಸಮಾಚಾರ ಸಿಗುತ್ತದೆ. ಮನೆಯಲ್ಲಿ ಆಕಸ್ಮಿತವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯುತ್ತೀರಿ. ಹೊಸ ಸ್ನೇಹಿತರ ಪರಿಚಯ ಲಾಭದಾಯಕವಾಗಿರುತ್ತದೆ. ವೃತ್ತಿಪರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತೀರಿ.
*ತುಲಾ ರಾಶಿ*
ಆರ್ಥಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಭೂಮಿ, ಸಾಗಣೆ ಮತ್ತು ವಾಹನ ಖರೀದಿ ಸಾಧ್ಯ. ಹಠಾತ್ ದೂರ ಪ್ರಯಾಣದ ಸೂಚನೆಗಳಿವೆ. ಕೆಲವು ಸಂದರ್ಭಗಳಲ್ಲಿ, ತಲೆ ನೋವು ಉಂಟಾಗುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಸಮಸ್ಯೆಗಳಿರುತ್ತವೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಶಾದಾಯಕವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗುತ್ತದೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ಕೂಡಿ ಬರುವುದಿಲ್ಲ.
*ವೃಶ್ಚಿಕ ರಾಶಿ*
ಆದಾಯ ಹೆಚ್ಚಲಿದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಬಂಧುಗಳೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತೀರಿ. ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಮೌಲ್ಯಯುತವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಮತ್ತು ಕೈಗೊಂಡ ಕೆಲಸದಲ್ಲಿ ಪ್ರಗತಿ ಸಾಧಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ. ವ್ಯಾಪಾರಗಳು ಅಭಿವೃದ್ಧಿ ಹೊಂದುತ್ತವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ.
*ಧನುಸ್ಸು ರಾಶಿ*
ಹೊಸ ಕೆಲಸಗಳನ್ನು ನೀವು ಉತ್ತಮವಾಗಿ ನಿರ್ವಹಿಸುವಿರಿ. ಇಂದು ಖರ್ಚು ಹೆಚ್ಚಾಗಲಿದೆ. ದೂರ ಪ್ರಯಾಣದ ಸೂಚನೆಗಳಿವೆ. ಹಣದ ವಿಚಾರದಲ್ಲಿ ಏರುಪೇರು ಉಂಟಾಗುತ್ತದೆ. ಕೈಗೊಂಡ ಕೆಲಸವನ್ನು ಮಧ್ಯದಲ್ಲಿ ನಿಲ್ಲಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ, ಖರ್ಚು ಅಧಿಕವಾಗಿರುತ್ತದೆ. ಸಂಬಂಧಿಕರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ವ್ಯಾಪಾರಗಳು ಸಾಮಾನ್ಯವಾಗಿ ಸಾಗುತ್ತವೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 23 ರ ದ್ವಾದಶ ರಾಶಿಗಳ ಫಲಾಫಲ.!
*ಮಕರ ರಾಶಿ*
ಮನಸ್ಸು ಸಂತೋಷವಾಗಿ ಉಳಿಯುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಪ್ರಮುಖ ವ್ಯವಹಾರಗಳಲ್ಲಿ ವಿಚಾರಗಳು ಕಾರ್ಯ ರೂಪಕ್ಕೆ ಬರುತ್ತವೆ. ಪ್ರಮುಖ ವ್ಯಕ್ತಿಗಳ ಪರಿಚಯಗಳು ಉಂಟಾಗುತ್ತದೆ. ಕೆಲವರ ವರ್ತನೆ ಅಚ್ಚರಿ ಮೂಡಿಸುತ್ತದೆ. ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ವ್ಯಾಪಾರದಲ್ಲಿ ಅಭಿವೃದ್ಧಿ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಶೈಲಿಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ.
*ಕುಂಭ ರಾಶಿ*
ಸ್ನೇಹಿತರ ಸಹಾಯದಿಂದ ನೀವು ಉದ್ಯೋಗಾವಕಾಶಗಳನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ. ಆತ್ಮೀಯರಿಂದ ಶುಭಕಾರ್ಯಕ್ಕೆ ಆಹ್ವಾನವನ್ನು ಸ್ವೀಕರಿಸುತ್ತೀರಿ. ಹೊಸ ವ್ಯಕ್ತಿಗಳ ಪರಿಚಯಳು ಲಾಭದಾಯಕವಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ದಕ್ಷತೆ ಬೆಳಕಿಗೆ ಬರುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ವೇಗಗೊಳ್ಳುತ್ತವೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.
*ಮೀನ ರಾಶಿ*
ಕೆಲವರಿಗೆ ಪೂರ್ವಿಕರ ಆಸ್ತಿಯ ಲಾಭ ದೊರೆಯಬಹುದು. ವಾಹನ ಬಳಸುವಾಗ ಜಾಗರೂಕರಾಗಿರಿ, ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಕೆಲವು ವ್ಯವಹಾರಗಳಲ್ಲಿ ಇದ್ದಕ್ಕಿದ್ದಂತೆ ನಿರ್ಧಾರಗಳನ್ನು ಬದಲಾಗುತ್ತವೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯದೆ, ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚುವರಿ ಜವಾಬ್ದಾರಿಗಳಿಂದ ಉದ್ಯೋಗಿಗಳಿಗೆ ವಿಶ್ರಾಂತಿ ಸಿಗುವುದಿಲ್ಲ.
Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು (Astrology) ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.