ಜನಸ್ಪಂದನ ನ್ಯೂಸ್, ಬೆಳಗಾವಿ : ದಕ್ಷಿಣ ಭಾರತದ ಅತ್ಯಂತ ಸುಪ್ರಸಿದ್ಧ ಹಾಗೂ ಅತ್ಯಂತ ಜಾಗೃತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಸವದತ್ತಿ (Savadatti) ಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಹುಂಡಿಗಳ ಎಣಿಕೆ ಕಾರ್ಯ ಗುರುವಾರ ಮುಕ್ತಾಯಗೊಂಡಿದೆ. ಈ ಸಲ ರೂ. 1.04 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಈ ಬಗ್ಗೆ ಸವದತ್ತಿ (Savadatti) ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?
ರೂ.5.22 ಲಕ್ಷ ಮೌಲ್ಯದ 53 ಗ್ರಾಂ ಚಿನ್ನಾಭರಣ, ರೂ.1.27 ಲಕ್ಷ ಮೌಲ್ಯದ 1,276 ಗ್ರಾಂ ಬೆಳ್ಳಿ ಸಾಮಗ್ರಿ, ರೂ.98.23 ಲಕ್ಷ ನಗದು ಸವದತ್ತಿ (Savadatti) ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ ದೊರೆತಿದೆ ಎಂದು ಕಾರ್ಯದರ್ಶಿ ತಿಳಿಸಿದರು.
ಸವದತ್ತಿ (Savadatti) ಶ್ರೀ ರೇಣುಕಾ ಯಲ್ಲಮ್ಮನ ಸನ್ನಿಧಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಿಸುವ ನಿಟ್ಟಿನಲ್ಲಿ ದೇವಸ್ಥಾನದ ಹುಂಡಿಯಲ್ಲಿ, ನಗದು ಮಾತ್ರವಲ್ಲದೆ ಚಿನ್ನಾಭರಣ, ಬೆಳ್ಳಿ ಆಭರಣ ಹಾಕಿ ಭಕ್ತಿ ಸಮರ್ಪಿಸುತ್ತಾರೆ.
ಇದನ್ನು ಓದಿ : First Night ದಿನವೇ “ಮುಟ್ಟಿದ್ರೆ 35 ಪೀಸ್ ಮಾಡ್ತೀನಿ” ಎಂದ ವಧು ; ಬೆಚ್ಚಿಬಿದ್ದ ವರ.!
ಸವದತ್ತಿ (Savadatti) ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯಧರ್ಶಿ, ದೇವಸ್ಥಾನ ಅಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿ, ಸವದತ್ತಿಯ ತಹಶೀಲ್ದಾರ, ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಹುಂಡಿಗಳನ್ನು ಒಡೆಯಲಾಯಿತು.
ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ಎಂ.ಪಿ. ದ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್. ಸವದತ್ತಿ, ಎನ್.ಎಂ. ಮುದಿಗೌಡರ, ಕೆನರಾ ಬ್ಯಾಂಕ್ ಮ್ಯಾನೇಜರ್ ಚಾನಾಕ್ಷೀ, ಮಾಂತೇಶ ಕೋಡಳ್ಳಿ, ಪ್ರಭು ಹಂಜಗಿ, ಶಿವಾನಂದ ನೇಸರಗಿ, ಅನಿಲ ತೇರದಾಳ, ಜಗದೀಶ ರೇವಣ್ಣವರ, ಎಎಸ್‌ಐ ಬಿ.ಆರ್. ಸಣ್ಣಮಾಳಗೆ, ಆನಂದ ಗೊರವನಕೊಳ್ಳ, ಡಿ.ಡಿ. ನಾಗನಗೌಡರ್ ಹಾಗೂ ದೇವಸ್ಥಾನದ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.
Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?
ಜನಸ್ಪಂದನ ನ್ಯೂಸ್, ಡೆಸ್ಕ್ : ರೀಲ್ಸ್ ಹುಚ್ಚಿಗಾಗಿ ಕುಡಿದ ಅಮಲಿನಲ್ಲಿ ಯುವತಿ (Lady) ಯೋರ್ವಳು ರೈಲು ಹಳಿಯ ಮೇಲೆ ಕಾರು ಚಲಾಯಿಸಿದ ಘಟನೆಯೊಂದು ಗುರುವಾರ (ಜೂ. 26) ಹೈದರಾಬಾದ್ ಬಳಿ ನಡೆದಿದೆ. ಯುವತಿಯ ಈ ಹುಚ್ಚಾಟದಿಂದ ರೈಲು ಸಂಚಾರದಲ್ಲಿ ಸುಮಾರು ಗಂಟೆಗಳ ಕಾಲ ವ್ಯತ್ಯಯ ಉಂಟಾಗಿದೆ.
ರಂಗಾರೆಡ್ಡಿ ಜಿಲ್ಲೆಯಲ್ಲಿ ಮಹಿಳೆ (Lady) ಸುಮಾರು ಏಳು ಕಿಲೋಮೀಟರ್ ನಷ್ಟು ದೂರನ್ನು ರೈಲು ಹಳಿಗಳ ಮೇಲೆ ಕಾರನ್ನು ಚಲಾಯಿಸಿದ್ದಾಳೆ. ಪರಿಣಾಮವಾಗಿ ಬೆಳಿಗ್ಗೆ ಸುಮಾರು ಎರಡು ಗಂಟೆಗಳ ಕಾಲ ರೈಲ್ವೆ ಸಂಚಾರಕ್ಕೆ ಅಡ್ಡಿಯಾಯಿತು.
ಕೊಂಡಕಲ್‌ನಲ್ಲಿರುವ ಲೆವೆಲ್ ಕ್ರಾಸಿಂಗ್‌ನಲ್ಲಿ, ಅವಳು ಕಾರನ್ನು ಹಳಿಗೆ ಮೇಲೆ ಹತ್ತಿಸಿದ್ದಾಳೆ. ಇದನ್ನು ಕಂಡ ದಾರಿಹೋಕರಲ್ಲಿ ಭಯ ಹುಟ್ಟಿಸಿದ್ದು, ಸ್ಥಳೀಯರು ನಾಗುಲಪಲ್ಲಿಯಲ್ಲಿ ಅವಳನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ : Belagavi : ಮೂಡಲಗಿ ತಾಲೂಕಿನ 4 ಸೇತುವೆಗಳು ಜಲಾವೃತ ; ಸಂಚಾರ ಸ್ಥಗಿತ.
ಆದರೆ ಯುವತಿ (Lady) ಅವರನ್ನು ಬೆದರಿಸಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋದಳು ಎನ್ನಲಾಗಿದೆ. ಈ ವೇಳೆ ರೈಲು ಸಿಬ್ಬಂದಿ ಅವಳನ್ನು ಸುದೀರ್ಘವಾಗಿ ಬೆನ್ನಟ್ಟಿದ್ದಾರೆ. ಸ್ಥಳೀಯರ ಸಹಾಯದಿಂದ ರೈಲ್ವೆ ನೌಕರರು ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.
ನಾಗುಲಪಲ್ಲಿ ಮತ್ತು ಶಂಕರಪಲ್ಲಿ ನಡುವೆ ಸುಮಾರು ಏಳು ಕಿಲೋಮೀಟರ್ ದೂರ ಅವಳು ಕಾರನ್ನು ಓಡಿಸಿದ್ದಾಳೆ. ಇದೇ ಸಮಯಕ್ಕೆ ಅದೇ ಹಳಿಯಲ್ಲಿ ಬರುತ್ತಿದ್ದ ರೈಲಿನ ಲೋಕೋ ಪೈಲಟ್ ಕಾರನ್ನು ಗುರುತಿಸಿದ ತಕ್ಷಣ ಬ್ರೇಕ್ ಹಾಕಿ ರೈಲನ್ನು ನಿಲ್ಲಸಿದ ಪರಿಣಾಮ ಸಂಭವಿಸಬಹುದಾದ ದೊಡ್ಡ ಘಟನೆಯೊಂದು ತಪ್ಪಿದಂತಾಗಿದೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಕಾರು ಚಲಾಯಿಸಿದ ಯುವತಿ (Lady) ಯನ್ನು ಉತ್ತರ ಪ್ರದೇಶದ ಲಕ್ನೋ ಮೂಲದ ರವಿಕಾ ಸೋನಿ ಎಂದು ಗುರುತಿಸಲಾಗಿದೆ.
ಇದನ್ನು ಓದಿ : Plane : ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ 159 ಜನರಿದ್ದ ವಿಮಾನದಲ್ಲಿ ಬೆಂಕಿ ; ವಿಡಿಯೋ.!
ಆಕೆ ಹೈದರಾಬಾದ್‌ನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಇತ್ತೀಚೆಗೆ ಆಕೆ (Lady) ಯನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ವರದಿಯಾಗಿದೆ.
ರೀಲ್ಸ್ ಹುಚ್ಚಿಗಾಗಿ ಯುವತಿ (Lady) ರೈಲ್ವೆ ಹಳಿಯಲ್ಲಿ ವಾಹನ ಚಲಾಯಿಸಿದ್ದಾಳೋ ಇಲ್ಲವೋ ಎಂದು ಕಂಡುಹಿಡಿಯಲು ಪೊಲೀಸರು ಆಕೆಯನ್ನು ಪ್ರಶ್ನಿಸುತ್ತಿದ್ದಾರೆ. ಸದ್ಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ (Lady) ಯ ಕೃತ್ಯದಿಂದ ಹೈದರಾಬಾದ್-ಬೆಂಗಳೂರು ಮಾರ್ಗಗಳಲ್ಲಿ ರೈಲ್ವೆ ಸಂಚಾರಕ್ಕೆ ಅಡ್ಡಿಯಾಯಿತ್ತಲ್ಲದೆ, ಸುತ್ತಮುತ್ತಲಿನ ರೈಲ್ವೆ ನಿಲ್ದಾಣಗಳಲ್ಲಿ ಕೆಲವು ರೈಲುಗಳನ್ನು ನಿಲ್ಲಿಸಲಾಯಿತು.
ರೈಲು ಹಳಿ ಮೇಲೆ ಕಾರು ಚಲಾಯಿಸುತ್ತಿರುವ ಯುವತಿ (Lady) ಯ ವಿಡಿಯೋ :
VIDEO | Telangana: A woman drove her car on a railway track in Ranga Reddy district causing panic among people and disrupting train movement. The video of the incident has gone viral.
(Source: Third Party)
(Full video available on PTI Videos – https://t.co/n147TvrpG7) pic.twitter.com/jhrrK7fa9q
— Press Trust of India (@PTI_News) June 26, 2025