Saturday, July 12, 2025

Janaspandhan News

HomeGeneral Newsನೀರು ಮಿಶ್ರಿತ ಡಿಸೇಲ್‌ ; ರಸ್ತೆಯಲ್ಲಿಯೇ ನಿಂತ 19 CM ಬೆಂಗಾವಲು ವಾಹನ.!
spot_img
spot_img

ನೀರು ಮಿಶ್ರಿತ ಡಿಸೇಲ್‌ ; ರಸ್ತೆಯಲ್ಲಿಯೇ ನಿಂತ 19 CM ಬೆಂಗಾವಲು ವಾಹನ.!

- Advertisement -

 

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೀರು ಮಿಶ್ರಿತ ಡಿಸೇಲ್‌ ಹಾಕಿದ ಪರಿಣಾಮ ಸಿಎಂ (CM) ಬೆಂಗಾವಲು ವಾಹನಗಳು ರಸ್ತೆಯಲ್ಲಿಯೇ ಕೆಟ್ಟು ನಿಂತ ಘಟನೆಯೊಂದು ಶುಕ್ರವಾರ ನಡೆದಿದೆ. ಸಿಎಂ ಬೆಂಗಾವಲು ಪಡೆಯ 19 ಕಾರುಗಳಿಗೆ ಡಿಸೇಲ್ ಬದಲು ನೀರು ಮಿಶ್ರಿತ ಡಿಸೇಲ್ ಹಾಕಲಾಗಿದೆ. ಪರಿಣಾಮವಾಗಿ ಬೆಂಗಾವಲು ವಾಹನ ಇದ್ದಕ್ಕಿದ್ದಂತೆ ಒಂದರ ನಂತರ ಒಂದರಂತೆ ರಸ್ತೆಯಲ್ಲಿ ಕೆಟ್ಟು ನಿಂತಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

ಹೌದು, ಮಧ್ಯಪ್ರದೇಶ ಮುಖ್ಯಮಂತ್ರಿ (CM) ಡಾ. ಮೋಹನ್ ಯಾದವ್ ರತ್ಲಂನಲ್ಲಿ ಅವರ ಕಾರ್ಯಕ್ರಮಕ್ಕೆ ಒಂದು ದಿನ ಮೊದಲು, ಭೋಪಾಲ್‌ನಿಂದ ಇಂದೋರ್ ತಲುಪಿದ ವಾಹನಗಳ ಬೆಂಗಾವಲು ವಾಹನಗಳಲ್ಲಿ ಡೀಸೆಲ್ (diesel) ತುಂಬಿಸಲಾಯಿತು. ಡಿಸೇಲ್‌ ತುಂಬಿಸಿಕೊಂಡು ಸ್ವಲ್ಪ ಮುಂದೆ ಸಾಗುತ್ತಿದಂತೆಯೇ 19 ಬೆಂಗಾವಲು ವಾಹನಗಳು ಕೆಟ್ಟು ನಿಲ್ಲಲು (Starting Truble) ಬೀಳಲು ಪ್ರಾರಂಬಿಸಿದವು.

ಇದನ್ನು ಓದಿ : Plane : ಟೇಕಾಫ್ ಆದ​ ಕೆಲವೇ ಕ್ಷಣಗಳಲ್ಲಿ 159 ಜನರಿದ್ದ ವಿಮಾನದಲ್ಲಿ ಬೆಂಕಿ ; ವಿಡಿಯೋ.!

ಹೀಗೆ ಕೆಟ್ಟು ನಿಂತ ವಾಹನಗಳನ್ನು ಆರಾಮವಾಗಿ ಒಳಗೆ ಕುಳಿತಿದ್ದ ಸಿಬ್ಬಂದಿ ಅನಿವಾರ್ಯಾವಾಗಿ ಕೆಳಗಿಳಿದು ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ಪಕ್ಕಕ್ಕೆ ತಳ್ಳಬೇಕಾಯಿತು. ಇದ್ಯ ಇದರ ವಿಡಿಯೋ ಸಾಮಾಜಿಕ ಜಳತಾಣದಲ್ಲಿ ವೈರಲ್‌ ಆಗಿದೆ.

ಶುಕ್ರವಾರ ರತ್ಲಂನಲ್ಲಿ ಪ್ರಾದೇಶಿಕ ಕೈಗಾರಿಕಾ ಸಮಾವೇಶ ನಡೆಯುತ್ತಿರುವ ಹಿನ್ನಲೆಯಲ್ಲಿ CM ಡಾ. ಮೋಹನ್ ಯಾದವ್ ಈ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಈ ಭೇಟಿಯ ಹಿನ್ನಲೆಯಲ್ಲಿ ಮುಖ್ಯಮಂತ್ರಿಯ ಬೆಂಗಾವಲು ಸೇರಲು ಗುರುವಾರ ಭೋಪಾಲ್‌ನಿಂದ ಸುಮಾರು 19 ವಾಹನಗಳು ಇಂದೋರ್ ತಲುಪಿದವು. ಮುಖ್ಯಮಂತ್ರಿ (CM) ಯ ಭೇಟಿಗೆ ಮೊದಲು, ಕಾರ್ಕೇಡ್‌ನ ಪೂರ್ವಾಭ್ಯಾಸ ಮಾಡಲಾಗುವ ಹಿನ್ನಲೆಯಲ್ಲಿ ಈ ಬೆಂಗಾವಲು ವಾಹನಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು.

ಇದನ್ನು ಓದಿ : Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?

ದೋಸಿಗಾಂವ್‌ನಲ್ಲಿರುವ ಪೆಟ್ರೋಲ್ ಪಂಪ್‌ಗೆ ಡೀಸೆಲ್ ತುಂಬಿಸಲು ವಾಹನಗಳು ಬಂದವು. ಇಲ್ಲಿನ ಎಲ್ಲಾ ವಾಹನಗಳಲ್ಲಿ ನೀರಿನೊಂದಿಗೆ ಬೆರೆಸಿದ ಡೀಸೆಲ್ ತುಂಬಿಸಲಾಗಿತ್ತು ಎಂದು ಶಂಕಿಸಲಾಗಿದೆ. ಡೆಸೇಲ್‌ ತುಂಬಿದ ನಂತರ ಬೆಂಗಾವಲು ಪಡೆ ಮುಂದೆ ಸಾಗಿದ ತಕ್ಷಣ, ಎಲ್ಲಾ ವಾಹನಗಳು ಒಂದರಿಂದೇ ಮತ್ತೊಂದು ಎಂಬಂತೆ ಕೆಟ್ಟು ನಿಲ್ಲತೊಡಗಿದವು.

ಈ ಬೆಂಗಾವಲು ವಾಹನಗಳು ಸ್ವಲ್ಪ ಮುಂದೆ ಸಾಗಿ ರಸ್ತೆಯಲ್ಲಿ ಕೆಟ್ಟು ನಿಂತರೆ, ಇನ್ನು ಕೆಲವು ವಾಹನಗಳು ಪೆಟ್ರೋಲ್ ಪಂಪ್‌ನಲ್ಲಿಯೇ ಸ್ಟಾರ್ಟ್ ಆಗದೇ ನಿಂತು ಬಿಟ್ಟಿವೇ. ಈ ವಾಹನಗಳಲ್ಲಿ ಸಂಚರಿಸುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಆಡಳಿತ ಅಧಿಕಾರಿಗಳು ಕೆಟ್ಟು ನಿಂತಿ ವಾಹನಗಳನ್ನು ತಳ್ಳಿ ಪಕ್ಕಕ್ಕೆ ಸಾಗಿಸಿದರು.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 27 ರ ದ್ವಾದಶ ರಾಶಿಗಳ ಫಲಾಫಲ.!

ವಿಷಯ ತಿಳಿಯುತ್ತಿದಂತೆಯೇ ನಯಬ್ ತಹಶೀಲ್ದಾರ್ ಆಶಿಶ್ ಉಪಾಧ್ಯಾಯ ಮತ್ತು ಆಹಾರ ಮತ್ತು ಸರಬರಾಜು ಅಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದರು. ಅವರು ವಾಹನಗಳ ಡೀಸೆಲ್ ಟ್ಯಾಂಕ್‌ಗಳನ್ನು ತೆರೆದು ಪರಿಶೀಲಿಸಿದರು. 20 ಲೀಟರ್ ಡೀಸೆಲ್‌ನಲ್ಲಿ ಸುಮಾರು 10 ಲೀಟರ್ ನೀರು ಇತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಎಲ್ಲಾ ಕಾರುಗಳಲ್ಲಿಯೂ ಇದೇ ಸ್ಥಿತಿ ಇತ್ತು.

ಬೆಂಗಾವಲು ವಾಹನಕ್ಕಷ್ಟೆ ಈ ಬಿಸಿ ತಟ್ಟಿಲ್ಲ, ಈ ಪೆಟ್ರೋಲ್ ಪಂಪ್‌ನಿಂದ ಒಂದು ಟ್ರಕ್ ಕೂಡ ಸುಮಾರು 200 ಲೀಟರ್ ಡೀಸೆಲ್ ತುಂಬಿಸಿತ್ತು. ಸ್ವಲ್ಪ ದೂರ ಹೋದ ನಂತರ ಆ ಟ್ರಕ್ ಕೂಡ ನಿಂತಿತು. ಅಧಿಕಾರಿಗಳು ತಕ್ಷಣ ಭಾರತ್ ಪೆಟ್ರೋಲಿಯಂನ ಪ್ರದೇಶ ವ್ಯವಸ್ಥಾಪಕರಿಗೆ ಕರೆ ಮಾಡಿದ್ದಾರೆ. ಮಳೆಯಿಂದಾಗಿ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಪ್ರದೇಶ ವ್ಯವಸ್ಥಾಪಕರು ಹೇಳಿದರು.

ಇದನ್ನು ಓದಿ : Savadatti ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ; ರೂ. 1.04 ಕೋಟಿ ಕಾಣಿಕೆ ಸಂಗ್ರಹ.!

ವಾಹನಗಳು ಕೈ ಕೊಟ್ಟ ಪರಿಣಾಮವಾಗಿ ಅಧಿಕಾರಿಗಳು ಬೆಳಗಿನ ಜಾವ 1 ಗಂಟೆಯವರೆಗೆ ಪೆಟ್ರೋಲ್ ಪಂಪ್‌ನಲ್ಲಿಯೇ ಇದ್ದರು. ಆಹಾರ ಮತ್ತು ಸರಬರಾಜು ಇಲಾಖೆ ತಕ್ಷಣವೇ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿತು.

ಇನ್ನು ಮುಖ್ಯಮಂತ್ರಿಗಳ (CM) ಬೆಂಗಾವಲು ಪಡೆಗಾಗಿ ಇಂದೋರ್‌ನಿಂದ ಇತರ ವಾಹನಗಳನ್ನು ಕರೆಯಿಸಿ ಸಿಎಂ ಕಾರ್ಯಕ್ರಮಕ್ಕೆ ಅನಿವು ಮಾಡಿಕೊಡಲಾಯಿತು. ಮುಖ್ಯಮಂತ್ರಿ (CM) ಗಳೊಂದಿಗೆ ಅನೇಕ ಹಿರಿಯ ಅಧಿಕಾರಿಗಳು ಮತ್ತು ನಾಯಕರು ಸಹ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಕೆಟ್ಟು ನಿಂತ ಸಿಎಂ (CM) ಬೆಂಗಾವಲು ವಾಹನಗಳ ವಿಡಿಯೋ :

First Night ದಿನವೇ “ಮುಟ್ಟಿದ್ರೆ 35 ಪೀಸ್‌ ಮಾಡ್ತೀನಿ” ಎಂದ ವಧು ; ಬೆಚ್ಚಿಬಿದ್ದ ವರ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : “ನನ್ನನ್ನು ಮುಟ್ಟಿದ್ರೆ 35 ಪೀಸ್‌ ಮಾಡತಿನಿ” ಎಂದು ಕೈಯಲ್ಲಿ ಚಾಕು ಹಿಡಿದು ನವ ವಧುವೋರ್ವಳು ಫಸ್ಟ್‌ ನೈಟ್ (First Night) ಶಾಸ್ತ್ರಕ್ಕೆ ಕೋಣೆಗೆ ಬಂದ ಪತಿಗೆ ಬೆದರಿಕೆ ಹಾಕಿದ ರೀತಿ ಇದು. ಕೇಳಲು ಸಿನೆಮಾ ಡೈಲಾಗ್‌ ರೀತಿ ಕಂಡರು ಸಹ ಇಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ಖುಷಿ ಖುಷಿಯಾಗಿ ಏಪ್ರಿಲ್ 29 ರಂದು ಮದುವೆ ಸಮಾರಂಭ ಮುಗಿದೆ. ಪ್ರಯಾಗ್‌ರಾಜ್‌ನ ಎಡಿಎ ಕಾಲೋನಿಯ 26 ವರ್ಷದ ನಿಶಾದ್ ಎಂಬುವವರು ಕರ್ಚನಾ ದೇಹ್‌ನ ಲಕ್ಷ್ಮಿ ನಾರಾಯಣ್ ನಿಶಾದ್ ಅವರ ಪುತ್ರಿ ಸಿತಾರಾ ಎಂಬಾಕೆಯನ್ನು ವಿವಾಹವಾಗಿದ್ದರು.

ಇದನ್ನು ಓದಿ : BPCL : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!

ಮದುವೆಯಾದ ವರ ಫಸ್ಟ್‌ ನೈಟ್ (First Night) ಶಾಸ್ತ್ರಕ್ಕೆ ಎಂದು ವಧುವಿನ ಕೋಣೆಗೆ ಬರುವವರೆಗೆ ಎಲ್ಲವೂ ಚನ್ನಾಗಿಯೇ ಇತ್ತು. ಯಾವಾಗ ನವವಿವಾಹಿತ ನಿಶಾದ್ (First Night) ಕೋಣೆಗೆ ಪ್ರವೇಶಿಸಿದನೋ ಆಗ ವಿಚಿತ್ರ ಎಂಬಂತೆ ಇದ್ದಕ್ಕಿದಂತೆ ನವ ವಧು “ಕೈಯಲ್ಲಿ ಚಾಕು ಹಿಡಿದು ಫಸ್ಟ್‌ ನೈಟ್ (First Night) ಶಾಸ್ತ್ರಕ್ಕೆ ಕೋಣೆಗೆ ಬಂದ ಪತಿಗೆ ನನ್ನನ್ನು ಮುಟ್ಟಿದ್ರೆ 35 ಪೀಸ್‌ ಮಾಡತಿನಿ” ಎಂದು ಬೆದರಿಕೆ ಹಾಕಿದ್ದಾಳೆ.

ತನ್ನ ಪತ್ನಿಯ ಈ ರೀತಿಯ ನಡುವಳಿಕೆ ಕಂಡ ಪತಿ ಗಾಬರಿಯಾಗಿದ್ದು, ಆ ರಾತ್ರಿ ವಧು ಸಿತಾರ ಹಾಸಿಗೆಯ ಮೇಲೆ ಮಲಗಿದರೆ, ವರ ನಿಶಾದ್ ಸೋಫಾದ ಮೇಲೆ ಅಂಜಿಕೆಯಿಂದಲೇ ಎಚ್ಚರವಾಗಿ ಮಲಗಿದ್ದಾರೆ.

ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಏತನ್ಮಧ್ಯೆ, ವರನು ಮೂರು ದಿನ ನಿದ್ದೆಯಿಲ್ಲದ, ಭಯಭೀತನಾಗಿ ರಾತ್ರಿಗಳನ್ನು ಕಳೆದಿದ್ದಾನೆ. ಹೀಗಿರುವಾಗ ಅಣ್ಣನ ವರ್ತನೆಯನ್ನು ಗಮನಿಸಿದ ಸಹೋದರಿಯರು ಎಲ್ಲೋ ಏನೋ ಮಿಸ್ ಹೊಡಿತ್ತಾ ಇದೇಯಲ್ಲಾ ಅಂತ ಈ ಕುರಿತು ಅಣ್ಣನ ಬಳಿ ವಿಚಾರಿಸಿದಾಗ ನಿಶಾದ್, ಈ ವಿಷಯವನ್ನು ಬಹಿರಂಗಪಡಿಸಿದರು ಎಂದು ತಿಳಿದು ಬಂದಿದೆ.

ಎರಡು ಕುಟುಂಬದ ಹಿರಿಯರೆಲ್ಲರೂ ಸೇರಿ ವಧುವನ್ನು ವಿಚಾರಿಸಿದಾಗ, ಅವಳು ಅಮನ್‌ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ನಾನು ಬಲವಂತವಾಗಿ ಈ ಮದುವೆಯಾಗಿದ್ದೇನೆ. ನಾನು ಅಮನ್‌ ಆಸ್ತಿ, ಅವನು ಮಾತ್ರ ನನ್ನನ್ನು ಮುಟ್ಟಲು ಸಾಧ್ಯ ಎಂದು ಕಡಿಮುರಿದ ಹಾಗೆ ಹೇಳಿದ್ದಾಳೆ.

ಇದನ್ನು ಓದಿ : Kidnap : ಪತಿಗೆ ಗುಂಡು ಹಾರಿಸಿ, ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿದ ಶಸ್ತ್ರಸಜ್ಜಿತ ಗುಂಪು.!

ಎರಡೂ ಕುಟುಂಬಗಳು ಮೇ 25 ರಂದು ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ಆದರೆ ಸಿತಾರಾ ಇಷ್ಟವಿಲ್ಲದೆ ತನ್ನ ಪತಿಯೊಂದಿಗೆ ಇರಲು ಲಿಖಿತವಾಗಿ ಒಪ್ಪಿಕೊಂಡರು, ಆದರೆ ಬೆದರಿಕೆಗಳು ಮುಂದುವರೆಯುತ್ತವೆ ಎಂದಿದ್ದಾಳೆ.

ಕೊನೆಗೆ ಮೇ 30 ರಂದು ಮಧ್ಯರಾತ್ರಿಯ ಸುಮಾರಿಗೆ ಸಿತಾರಾ ಮನೆಯ ಹಿಂದಿನ ಗೋಡೆಯನ್ನು ಹಾರಿ ಮನೆಯಿಂದ ತಪ್ಪಿಸಿಕೊಂಡಿದ್ದು, ಅವಳು ಕುಂಟುತ್ತಾ ಓಡಿ ಹೋಗುವುದು ಸಿಸಿಟಿವಿ ದೃಶ್ಯದಲ್ಲಿ ಕಾಣಿಸುತ್ತದೆ.

ಎಫ್‌ಐಆರ್ ದಾಖಲಾಗಿಲ್ಲ :

ಎರಡೂ ಕುಟುಂಬಗಳು ಪ್ರಕರಣದ ಕುರಿತು ಪರಸ್ಪರ ಲಿಖಿತ ಇತ್ಯರ್ಥವನ್ನು ಮಾಡಿಕೊಂಡ ಕಾರಣ ಈ ಕುರಿತು ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments