ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಲೇಜಿನ ಆವರಣದಲ್ಲೇ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ (Gang rape) ವೊಂದು ದಕ್ಷಿಣ ಕೋಲ್ಕತ್ತಾದ ಕಸ್ಬಾದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕಾನೂನು ಕಾಲೇಜಿನ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆಯೇ ಜೂನ್ 25ರ ಸಂಜೆ 7.30ರಿಂದ 10.50ರ ನಡುವೆ ಈ ಪೈಶಾಚಿತ (Gang rape) ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕೋಲ್ಕತ್ತಾದ ಕಸ್ಬಾದಲ್ಲಿರುವ ಕಾನೂನು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ (Gang rape) ದಂತಹ ಪೈಶಾಚಿತ ಘಟನೆ ನಡೆದಿರುವುದು ದೇಶವೇ ತಲೆ ತಗ್ಗಿಸುವಂತಾಗಿದೆ. ಈ ಪೈಶಾಚಿತ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷದ ನಾಯಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಇದನ್ನು ಓದಿ : Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?
24 ವರ್ಷದ ಸಂತ್ರಸ್ತೆ ವಿದ್ಯಾರ್ಥಿನಿ ಬುಧವಾರ ಪರೀಕ್ಷೆಗೆ ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡಲು ಕಾಲೇಜಿಗೆ ಬಂದಿದ್ದಳು. ಆಕೆಯ ದೂರಿನ ಪ್ರಕಾರ, ಆಕೆ ಆರಂಭದಲ್ಲಿ ಕಾಲೇಜು ಯೂನಿಯನ್ ಕೋಣೆಯೊಳಗೆ ಕುಳಿತಿದ್ದಳು.
ನಂತರ ಪ್ರಾಥಮಿಕ ಆರೋಪಿಯು ಕಾಲೇಜಿನ ಮುಖ್ಯ ಗೇಟ್ ಅನ್ನು ಲಾಕ್ ಮಾಡಲು ಸೂಚಿಸಿದನು ಮತ್ತು ನಂತರ ಕ್ಯಾಂಪಸ್‌ನಲ್ಲಿರುವ ಭದ್ರತಾ ಸಿಬ್ಬಂದಿಯ ಕೋಣೆಯೊಳಗೆ ತನ್ನ ಮೇಲೆ ಅತ್ಯಾಚಾರ (Gang rape) ಎಸಗಲಾಯಿತ್ತೆಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಅತ್ಯಾಚಾರವೆಸಗಿರುವ ಆರೋಪದ ಮೇಲೆ 31 ವರ್ಷದ ಮೊನೊಜಿತ್ ಮಿಶ್ರಾ, 19 ವರ್ಷದ ಜೈಬ್ ಅಹ್ಮದ್ ಮತ್ತು 20 ವರ್ಷದ ಪ್ರಮಿತ್ ಮುಖರ್ಜಿ ಎಂಬುವವರನ್ನು ಬಂಧಿಸಲಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 27 ರ ದ್ವಾದಶ ರಾಶಿಗಳ ಫಲಾಫಲ.!
ಆರೋಪಿತರಲ್ಲಿ ಜೂನ್ 26ರಂದು ತಲ್ಟಗನ್ ಕ್ರಾಸಿಂಗ್‌ನಲ್ಲಿರುವ ಸಿದ್ಧಾರ್ಥ್ ಶಂಕರ್ ಉದ್ಯಾನದ ಬಳಿ ಮನೋಜಿತ್ ಹಾಗೂ ಜೈಬ್ ಅಹ್ಮದ್‌ನನ್ನು ಬಂಧಿಸಲಾಗಿದ್ದು, ಹಾಗೆಯೇ Gang rape ಗೆ ಸಂಬಂಧಿಸಿದಂತೆ ಮೂರನೇ ಆರೋಪಿ ಪ್ರಮೀತ್‌ನನ್ನು ಇಂದು (ಜೂ. 27) ಮುಂಜಾನೆ ಆತನ ಮನೆಯಿಂದ ಬಂಧಿಸಲಾಗಿದೆ.
ಬಳಿಕ ಮೂವರನ್ನು ದಕ್ಷಿಣ 24 ಪರಗಣದ ಅಲಿಪೋರ್‌ನಲ್ಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವೂ ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರು ಮೂವರ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.
ಘಟನೆ (Gang rape) ಕಾಲೇಜಿನೊಳಗೆ ನಡೆದಿದೆ, ಸಂತ್ರಸ್ತೆಯ ಆರಂಭಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಹಲವಾರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಅಪರಾಧದ (Gang rape) ಸ್ಥಳವನ್ನು ಸಹ ಸುತ್ತುವರಿಯಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗಾಗಿ ಕಾಯಲಾಗುತ್ತಿದೆ.
ನೀರು ಮಿಶ್ರಿತ ಡಿಸೇಲ್ ; ರಸ್ತೆಯಲ್ಲಿಯೇ ನಿಂತ 19 CM ಬೆಂಗಾವಲು ವಾಹನ.!
ಜನಸ್ಪಂದನ ನ್ಯೂಸ್, ಡೆಸ್ಕ್ : ನೀರು ಮಿಶ್ರಿತ ಡಿಸೇಲ್ ಹಾಕಿದ ಪರಿಣಾಮ ಸಿಎಂ (CM) ಬೆಂಗಾವಲು ವಾಹನಗಳು ರಸ್ತೆಯಲ್ಲಿಯೇ ಕೆಟ್ಟು ನಿಂತ ಘಟನೆಯೊಂದು ಶುಕ್ರವಾರ ನಡೆದಿದೆ. ಸಿಎಂ ಬೆಂಗಾವಲು ಪಡೆಯ 19 ಕಾರುಗಳಿಗೆ ಡಿಸೇಲ್ ಬದಲು ನೀರು ಮಿಶ್ರಿತ ಡಿಸೇಲ್ ಹಾಕಲಾಗಿದೆ. ಪರಿಣಾಮವಾಗಿ ಬೆಂಗಾವಲು ವಾಹನ ಇದ್ದಕ್ಕಿದ್ದಂತೆ ಒಂದರ ನಂತರ ಒಂದರಂತೆ ರಸ್ತೆಯಲ್ಲಿ ಕೆಟ್ಟು ನಿಂತಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಹೌದು, ಮಧ್ಯಪ್ರದೇಶ ಮುಖ್ಯಮಂತ್ರಿ (CM) ಡಾ. ಮೋಹನ್ ಯಾದವ್ ರತ್ಲಂನಲ್ಲಿ ಅವರ ಕಾರ್ಯಕ್ರಮಕ್ಕೆ ಒಂದು ದಿನ ಮೊದಲು, ಭೋಪಾಲ್‌ನಿಂದ ಇಂದೋರ್ ತಲುಪಿದ ವಾಹನಗಳ ಬೆಂಗಾವಲು ವಾಹನಗಳಲ್ಲಿ ಡೀಸೆಲ್ (diesel) ತುಂಬಿಸಲಾಯಿತು. ಡಿಸೇಲ್ ತುಂಬಿಸಿಕೊಂಡು ಸ್ವಲ್ಪ ಮುಂದೆ ಸಾಗುತ್ತಿದಂತೆಯೇ 19 ಬೆಂಗಾವಲು ವಾಹನಗಳು ಕೆಟ್ಟು ನಿಲ್ಲಲು (Starting Truble) ಬೀಳಲು ಪ್ರಾರಂಬಿಸಿದವು.
ಇದನ್ನು ಓದಿ : Plane : ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ 159 ಜನರಿದ್ದ ವಿಮಾನದಲ್ಲಿ ಬೆಂಕಿ ; ವಿಡಿಯೋ.!
ಹೀಗೆ ಕೆಟ್ಟು ನಿಂತ ವಾಹನಗಳನ್ನು ಆರಾಮವಾಗಿ ಒಳಗೆ ಕುಳಿತಿದ್ದ ಸಿಬ್ಬಂದಿ ಅನಿವಾರ್ಯಾವಾಗಿ ಕೆಳಗಿಳಿದು ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ಪಕ್ಕಕ್ಕೆ ತಳ್ಳಬೇಕಾಯಿತು. ಇದ್ಯ ಇದರ ವಿಡಿಯೋ ಸಾಮಾಜಿಕ ಜಳತಾಣದಲ್ಲಿ ವೈರಲ್ ಆಗಿದೆ.
ಶುಕ್ರವಾರ ರತ್ಲಂನಲ್ಲಿ ಪ್ರಾದೇಶಿಕ ಕೈಗಾರಿಕಾ ಸಮಾವೇಶ ನಡೆಯುತ್ತಿರುವ ಹಿನ್ನಲೆಯಲ್ಲಿ CM ಡಾ. ಮೋಹನ್ ಯಾದವ್ ಈ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಈ ಭೇಟಿಯ ಹಿನ್ನಲೆಯಲ್ಲಿ ಮುಖ್ಯಮಂತ್ರಿಯ ಬೆಂಗಾವಲು ಸೇರಲು ಗುರುವಾರ ಭೋಪಾಲ್‌ನಿಂದ ಸುಮಾರು 19 ವಾಹನಗಳು ಇಂದೋರ್ ತಲುಪಿದವು. ಮುಖ್ಯಮಂತ್ರಿ (CM) ಯ ಭೇಟಿಗೆ ಮೊದಲು, ಕಾರ್ಕೇಡ್‌ನ ಪೂರ್ವಾಭ್ಯಾಸ ಮಾಡಲಾಗುವ ಹಿನ್ನಲೆಯಲ್ಲಿ ಈ ಬೆಂಗಾವಲು ವಾಹನಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು.
ಇದನ್ನು ಓದಿ : Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?
ದೋಸಿಗಾಂವ್‌ನಲ್ಲಿರುವ ಪೆಟ್ರೋಲ್ ಪಂಪ್‌ಗೆ ಡೀಸೆಲ್ ತುಂಬಿಸಲು ವಾಹನಗಳು ಬಂದವು. ಇಲ್ಲಿನ ಎಲ್ಲಾ ವಾಹನಗಳಲ್ಲಿ ನೀರಿನೊಂದಿಗೆ ಬೆರೆಸಿದ ಡೀಸೆಲ್ ತುಂಬಿಸಲಾಗಿತ್ತು ಎಂದು ಶಂಕಿಸಲಾಗಿದೆ. ಡೆಸೇಲ್ ತುಂಬಿದ ನಂತರ ಬೆಂಗಾವಲು ಪಡೆ ಮುಂದೆ ಸಾಗಿದ ತಕ್ಷಣ, ಎಲ್ಲಾ ವಾಹನಗಳು ಒಂದರಿಂದೇ ಮತ್ತೊಂದು ಎಂಬಂತೆ ಕೆಟ್ಟು ನಿಲ್ಲತೊಡಗಿದವು.
ಈ ಬೆಂಗಾವಲು ವಾಹನಗಳು ಸ್ವಲ್ಪ ಮುಂದೆ ಸಾಗಿ ರಸ್ತೆಯಲ್ಲಿ ಕೆಟ್ಟು ನಿಂತರೆ, ಇನ್ನು ಕೆಲವು ವಾಹನಗಳು ಪೆಟ್ರೋಲ್ ಪಂಪ್‌ನಲ್ಲಿಯೇ ಸ್ಟಾರ್ಟ್ ಆಗದೇ ನಿಂತು ಬಿಟ್ಟಿವೇ. ಈ ವಾಹನಗಳಲ್ಲಿ ಸಂಚರಿಸುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಆಡಳಿತ ಅಧಿಕಾರಿಗಳು ಕೆಟ್ಟು ನಿಂತಿ ವಾಹನಗಳನ್ನು ತಳ್ಳಿ ಪಕ್ಕಕ್ಕೆ ಸಾಗಿಸಿದರು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 27 ರ ದ್ವಾದಶ ರಾಶಿಗಳ ಫಲಾಫಲ.!
ವಿಷಯ ತಿಳಿಯುತ್ತಿದಂತೆಯೇ ನಯಬ್ ತಹಶೀಲ್ದಾರ್ ಆಶಿಶ್ ಉಪಾಧ್ಯಾಯ ಮತ್ತು ಆಹಾರ ಮತ್ತು ಸರಬರಾಜು ಅಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದರು. ಅವರು ವಾಹನಗಳ ಡೀಸೆಲ್ ಟ್ಯಾಂಕ್‌ಗಳನ್ನು ತೆರೆದು ಪರಿಶೀಲಿಸಿದರು. 20 ಲೀಟರ್ ಡೀಸೆಲ್‌ನಲ್ಲಿ ಸುಮಾರು 10 ಲೀಟರ್ ನೀರು ಇತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಎಲ್ಲಾ ಕಾರುಗಳಲ್ಲಿಯೂ ಇದೇ ಸ್ಥಿತಿ ಇತ್ತು.
ಬೆಂಗಾವಲು ವಾಹನಕ್ಕಷ್ಟೆ ಈ ಬಿಸಿ ತಟ್ಟಿಲ್ಲ, ಈ ಪೆಟ್ರೋಲ್ ಪಂಪ್‌ನಿಂದ ಒಂದು ಟ್ರಕ್ ಕೂಡ ಸುಮಾರು 200 ಲೀಟರ್ ಡೀಸೆಲ್ ತುಂಬಿಸಿತ್ತು. ಸ್ವಲ್ಪ ದೂರ ಹೋದ ನಂತರ ಆ ಟ್ರಕ್ ಕೂಡ ನಿಂತಿತು. ಅಧಿಕಾರಿಗಳು ತಕ್ಷಣ ಭಾರತ್ ಪೆಟ್ರೋಲಿಯಂನ ಪ್ರದೇಶ ವ್ಯವಸ್ಥಾಪಕರಿಗೆ ಕರೆ ಮಾಡಿದ್ದಾರೆ. ಮಳೆಯಿಂದಾಗಿ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಪ್ರದೇಶ ವ್ಯವಸ್ಥಾಪಕರು ಹೇಳಿದರು.
ಇದನ್ನು ಓದಿ : Savadatti ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ; ರೂ. 1.04 ಕೋಟಿ ಕಾಣಿಕೆ ಸಂಗ್ರಹ.!
ವಾಹನಗಳು ಕೈ ಕೊಟ್ಟ ಪರಿಣಾಮವಾಗಿ ಅಧಿಕಾರಿಗಳು ಬೆಳಗಿನ ಜಾವ 1 ಗಂಟೆಯವರೆಗೆ ಪೆಟ್ರೋಲ್ ಪಂಪ್‌ನಲ್ಲಿಯೇ ಇದ್ದರು. ಆಹಾರ ಮತ್ತು ಸರಬರಾಜು ಇಲಾಖೆ ತಕ್ಷಣವೇ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿತು.
ಇನ್ನು ಮುಖ್ಯಮಂತ್ರಿಗಳ (CM) ಬೆಂಗಾವಲು ಪಡೆಗಾಗಿ ಇಂದೋರ್‌ನಿಂದ ಇತರ ವಾಹನಗಳನ್ನು ಕರೆಯಿಸಿ ಸಿಎಂ ಕಾರ್ಯಕ್ರಮಕ್ಕೆ ಅನಿವು ಮಾಡಿಕೊಡಲಾಯಿತು. ಮುಖ್ಯಮಂತ್ರಿ (CM) ಗಳೊಂದಿಗೆ ಅನೇಕ ಹಿರಿಯ ಅಧಿಕಾರಿಗಳು ಮತ್ತು ನಾಯಕರು ಸಹ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಕೆಟ್ಟು ನಿಂತ ಸಿಎಂ (CM) ಬೆಂಗಾವಲು ವಾಹನಗಳ ವಿಡಿಯೋ :
VIDEO | Ratlam, Madhya Pradesh: As many as 19 vehicles of CM Mohan Yadav's convoy had to be towed after water was reportedly filled instead of diesel in them. The petrol pump was later sealed over fuel contamination.#MPNews #MadhyaPradeshNews
(Full video available on PTI… pic.twitter.com/IQV9aE2Jfc
— Press Trust of India (@PTI_News) June 27, 2025