ಜನಸ್ಪಂದನ ನ್ಯೂಸ್, ಮೈಸೂರು : ಸುಳ್ಳು ಕೊಲೆ ಕೇಸ್ (False murder case) ಹಾಕಿ ಅಮಾಯಕನೋರ್ವನನ್ನು ಜೈಲಿಗೆ ಕಳುಹಿಸಿದ ಆರೋಪದ ಮೇಲೆ ಇನ್ಸ್ಪೆಕ್ಟರ್ ಸೇರಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಈ ಮೂವರು ಪೊಲೀಸ್ ಅಧಿಕಾರಿಗಳು, ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಪತಿಯ ಮೇಲೆಯೇ ಪತ್ನಿಯ ಕೊಲೆ ಆರೋಪ ಹೊರಿಸಿ, ಸುಳ್ಳು ಪ್ರಕರಣ (False murder case) ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಇಲಾಖೆ ಅಮಾನತು ಮಾಡಿದೆ.
ಇದನ್ನು ಓದಿ : ಪರಾರಿಯಾಗುತ್ತಿದ್ದ ಕೊಲೆ ಆರೋಪಿ : ಕಾರಿನ ಬಾಗಿಲಿಗೆ 1KM ನೇತಾಡಿ ಹಿಡಿಯಲೆತ್ನಿಸಿದ PSI.!
ಕೊಡಗು ಜಿಲ್ಲೆಯ ಕುಶಾಲನಗರದ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಮೈಸೂರಿನ ಇಲವಾಲ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಹೇಶ್‌ಕುಮಾರ್ ಮತ್ತು ಜಯಪುರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಎತ್ತಿನಮನಿ ಅವರನ್ನು ಅಮಾನತುಗೊಳಿಸಿ ಪೊಲೀಸ್ ಆದೇಶ ಹೊರಡಿಸಿದೆ.
ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ಸುರೇಶ್ ಎಂಬುವನ ವಿರುದ್ಧ ಅಂದು ಬೆಟ್ಟದಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್ ಸುಳ್ಳು ಚಾರ್ಜ್ಶೀಟ್ (False murder case) ಸಲ್ಲಿಸಿದ್ದರು. ಇದೀಗ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದಾಗ ಸುಳ್ಳು ಚಾರ್ಜ್ಶೀಟ್ ಹಾಕಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ (False murder case) ಹಿನ್ನೆಲೆ :
ಕುಶಾಲನಗರ ಠಾಣೆಯಲ್ಲಿ ಸುರೇಶ್ ಎಂಬುವವರು ಕಳೆದ 2020ರ ನವ್ಹಂಬರ್‌ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ದೂರು ನೀಡಿದ್ದರು. ಬೆಟ್ಟದಪುರದಲ್ಲಿ 2020ರ ನವೆಂಬರ್ 12 ರಂದು ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.
ಮಹಿಳೆ ಬಲವಾದ ಏಟಿನಿಂದ ಮೃತಪಟ್ಟಿದ್ದಾರೆ ಎಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖವಾದ ಹಿನ್ನಲೆಯಲ್ಲಿ ಮಹಿಳೆ ಕೊಲೆಯಾಗಿ ಸತ್ತಿರುವುದು ಸ್ಪಷ್ಟವಾಗಿತ್ತು.
ಇದನ್ನು ಓದಿ : Accident : ಕ್ಯಾಂಟರ್ ಮತ್ತು ಕಾರು ಡಿಕ್ಕಿ ; ನಾಲ್ವರ ದಾರುಣ ಸಾವು.!
ಆಗ ಬೆಟ್ಟದಪುರದ ಪೊಲೀಸರು ಸುರೇಶ್ ಅವರೇ ತಮ್ಮ ಪತ್ನಿಯನ್ನು ಕೊಲೆ ಮಾಡಿದ್ದಾರೆಂದು ಬಂಧಿಸಿ, ನ್ಯಾಯಾಲಯಕ್ಕೆ ಸುಳ್ಳು ಚಾರ್ಜ್ಶೀಟ್ (False murder case) ಸಲ್ಲಿಸಿ ಎರಡು ವರ್ಷ ಜೈಲಿನಲ್ಲಿದ್ದರು. ಆದರೆ ಸುರೇಶ ಮಾತ್ರ ನಾನು ಪತ್ನಿಯನ್ನು ಕೊಲೆ ಮಾಡಿಲ್ಲ, ಅವಳು ಬದುಕಿದ್ದಾಳೆ ಎಂದು ಪದೇ ಪದೆ ಮನವಿ ಮಾಡುತ್ತಲೇ ಬಂದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಜನ ಸಾಕ್ಷಿದಾರರ ವಿಚಾರಣೆಯೂ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಸುರೇಶ್ ಮತ್ತು ಮಲ್ಲಿಗೆ ದಂಪತಿಯ ಮಕ್ಕಳಾದ ಕೃಷ್ಣ, ಕೀರ್ತಿ ಎಂಬುವವರು ನಮ್ಮ ತಾಯಿ ಬದುಕಿದ್ದಾಳೆ, ನಮ್ಮ ತಾಯಿ ಸತ್ತಿಲ್ಲ ಎಂದು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು.
ಇದನ್ನು ಓದಿ : Police ಹಲ್ಲೆಯಿಂದ ರಸ್ತೆಯಲ್ಲಿಯೇ ಕುಸಿದು ಬಿದ್ದ ಅಂಗಡಿ ಮಾಲೀಕ.!
ಕೊನೆಗೆ ಸುರೇಶ ಪತ್ನಿ ಮಲ್ಲಿಗೆ ನ್ಯಾಯಾಧೀಶರ ಮುಂದೆ ಮುಂದೆ 2025ರ ಏಪ್ರಿಲ್ 2ರಂದು ಹಾಜರಾಗಿದ್ದರು. ಪರಿಣಾಮವಾಗಿ ಕೋರ್ಟ್ನಲ್ಲಿ ಪೊಲೀಸರು ಹೇಳಿದ್ದು ಕಟ್ಟುಕತೆ (False murder case) ಎಂದು ಸಾಬೀತಾಗಿತ್ತು. ಆದರೆ, ಅಪರಾಧವನ್ನೇ ಮಾಡಿರದ ಸುರೇಶ ಮಾತ್ರ ಕೊಲೆ ಆರೋಪಿಯಾಗಿ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ.
ಇದೀಗ, ಸತ್ಯ ಹೊರ ಬಂದಿರುವುದರಿಂದ ಸುರೇಶ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುರೇಶ್ ವಿರುದ್ಧ ಸುಳ್ಳು ಕೇಸ್ (False murder case) ಹಾಕಿದ್ದ ಓರ್ವ ಇನ್ಸ್‌ಪೆಕ್ಟರ್, ಇಬ್ಬರು ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
ಅಪರಾಧವನ್ನೇ ಮಾಡಿರದ ಸುರೇಶ ಕೊಲೆ ಆರೋಪಿಯಾಗಿ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದು ಒಂದು ಕಡೆಯಾದರೇ, ಬೆಟ್ಟದಪುರದಲ್ಲಿ 2020ರ ನವೆಂಬರ್ 12 ರಂದು ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿತ್ತಲ್ಲಾ ಆ ದೇಹ ಯಾರದು.? ಆ ಮಹಿಳೆಯ ಕೊಲೆಗಾರ ಯಾರು.? ಎಂಬ ಪ್ರಶ್ನೆಗಳು ಇಲ್ಲಿ ಮೂಡುವುದು ಸಹಜ.
ಹೃದಯಾಘಾತದಿಂದ Cricket ಆಡುವಾಗಲೇ ಯುವಕನ ಸಾವು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಯುವಕನೋರ್ವ ಅಚ್ಚುಮೆಚ್ಚಿನ ಕ್ರಿಕೆಟ್ (Cricket) ಆಟ ಆಡುವಾಗಲೇ ಹೃದಯಾಘಾತಕ್ಕೆ ಬಲಿಯಾದ ಹೃದಯವಿದ್ರಾವಕ ಘಟನೆಯೊಂದು ಪಂಜಾಬ್‌ನ ನಡೆದಿರುವ ಬಗ್ಗೆ ವರದಿಯಾಗಿದೆ.
ಹೃದಯಾಘಾತವನ್ನು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದೂ ಕರೆಯುತ್ತಾರೆ, ಇದು ಹೃದಯ ಸ್ನಾಯುವಿನ ಒಂದು ಭಾಗಕ್ಕೆ ರಕ್ತದ ಹರಿವನ್ನು ದೀರ್ಘಕಾಲದವರೆಗೆ ನಿರ್ಬಂಧಿಸಿದಾಗ ಸಂಭವಿಸುವ ಗಂಭೀರವಾದ ವೈದ್ಯಕೀಯ ತುರ್ತುಸ್ಥಿತಿಯಾಗಿದೆ, ಇದು ಪೀಡಿತ ಅಂಗಾಂಶದ ಹಾನಿ ಅಥವಾ ಸಾವಿಗೆ ಕಾರಣವಾಗುತ್ತದೆ.
ಇತ್ತೀಚೆಗಿನ ದಿನಗಳಲ್ಲಂತು ದಿಢೀರ್ ಹೃದಯಾಘಾತ ಪ್ರಕರಣಗಳು ಹೆಚ್ಚುತಲೇ ಇವೆ. ಹಾಸನ ಜಿಲ್ಲೆಯೊಂದರಲ್ಲಿಯೇ ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು 16 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯ ಪ್ರಕಾರ, ಕಳೆದೆರಡು ವರ್ಷಗಳ ಅಂಕಿ ಅಂಶ ಪ್ರಕಾರ 507 ಜನರು ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇವರಲ್ಲಿ 20 ರಿಂದ 30 ವಯಸ್ಸಿನ 14 ಮಂದಿ, 30 ರಿಂದ 40 ವಯಸ್ಸಿನ 40 ಹಾಗೂ 40 ವರ್ಷ ಮೇಲ್ಪಟ್ಟ 136 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬರುತ್ತಿದೆ. ಯುವ ಜನರೇ ಇಂತಹ ದಾರುಣ ಘಟನೆಯಲ್ಲಿ ಹೆಚ್ಚು ಬಲಿಯಾಗುತ್ತಿದ್ದಾರೆ ಎನ್ನುವುದು ಮಾತ್ರ ದುರಂತ.
ಇದೀಗ ಇಂತಹದೇ ಘಟನೆಯೊಂದು ಪಂಜಾಬ್‌ನ ಫಿರೋಜ್‌ಪುರ್‌ನಲ್ಲಿ ನಡೆದಿರುವುದು ವರದಿಯಾಗಿದ್ದು, ಕ್ರಿಕೆಟ್ ಆಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದ ಹಿನ್ನಲೆಯಲ್ಲಿ ಯುವಕನೋರ್ವ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಇದನ್ನು ಓದಿ : ಪರಾರಿಯಾಗುತ್ತಿದ್ದ ಕೊಲೆ ಆರೋಪಿ : ಕಾರಿನ ಬಾಗಿಲಿಗೆ 1KM ನೇತಾಡಿ ಹಿಡಿಯಲೆತ್ನಿಸಿದ PSI.!
ಪಂಜಾಬ್‌ನ ಫಿರೋಜ್‌ಪುರದ ಗುರು ಹರ್ ಸಹಾಯ್ ಪಟ್ಟಣದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ (Cricket) ಪಂದ್ಯವೊಂದರಲ್ಲಿ ಈ ಘಟನೆ ನಡೆದಿದ್ದು, ಹೃದಯಾಘಾತದಿಂದ ಮೃತಪಟ್ಟ ಯುವಕನ್ನು ಹರ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ.
ಪಂದ್ಯದಲ್ಲಿ ಬಾಲರ್ ಎಸೆದ ಚಂಡನ್ನು ಹರ್ಜಿತ್ ಸಿಂಗ್, ಸಿಕ್ಸರ್ ಬಾರಿಸಿದ ಮರು ಕ್ಷಣ ಸಹ ಆಟಗಾರರನ್ನು ಭೇಟಿಯಾಗಲು ತೆರಳಿದ್ದಾರೆ. ಅರ್ಧ ದಾರಿ ಕ್ರಮಿಸುತ್ತಿದಂತೆಯೇ ಹರ್ಜಿತ್ ಸಿಂಗ್ ಅಲ್ಲಿಯೇ ಕುಳಿತಿದ್ದಾರೆ. ಕುಳಿತ ಮರು ಕ್ಷಣವೇ ಅಲ್ಲೇ ಕುಸಿದು ಬಿದ್ದಿದ್ದಾರೆ. ಸಹ ಆಟಗಾರರು ಸಿಪಿಆರ್ ನೀಡಿದ್ದರೂ ಸಹ ಹರ್ಜಿತ್ ಬದುಕಿ ಉಳಿಯಲಿಲ್ಲ.
ಇದನ್ನು ಓದಿ : Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?
ಹರ್ಜಿತ್ ಸಿಂಗ್ ಎಂಬ ಯುವಕ Cricket ಆಡುವಾಗ ಹೃದಯಸ್ತಂಭನದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. DAV ಶಾಲಾ ಮೈದಾನದಲ್ಲಿ Cricket ಪಂದ್ಯಾವಳಿ ವೇಳೆ ನಡೆಯುತ್ತಿದ್ದ ಎನ್ನಲಾದ ಈ ಘಟನೆಯ ವಿಡಿಯೊವನ್ನು Mobile ಫೋನ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ. ಸದ್ಯ ಇದರ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಕ್ರಿಕೆಟ್ (Cricket) ಆಟದ ವಿಡಿಯೋ :
“सिक्सर मारते ही आई मौत”
पंजाब के फिरोजपुर में बल्लेबाज को क्रिकेट मैच के दौरान आया हार्ट अटैक, पिच पर ही मौत हो गई। #HeartAttack #vaccines pic.twitter.com/2fcezAtKyz
— SANJAY TRIPATHI (@sanjayjourno) June 29, 2025