ಜನಸ್ಪಂದನ ನ್ಯೂಸ್, ಡೆಸ್ಕ್ : ಆಸ್ಪತ್ರೆಯಲ್ಲಿ ಎಲ್ಲರೆದುರೆ ಯುವಕನೊಬ್ಬ 12 ನೇ ತರಗತಿ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು ಆಕೆಯ ಕತ್ತು (throat) ಸೀಳಿದ ಭಯಾನಕ ಮತ್ತು ಹಿಂಸಾತ್ಮಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಎಲ್ಲಿ ಪ್ರಾಣಗಳನ್ನು ಉಳಿಸುವ ಸ್ಥಳವೆಂದು ಅಲ್ಲಿಗೆ ಬರುತ್ತಾರೋ, ಅಲ್ಲಿಯೇ ಓರ್ವ ಯುವತಿಯ ಪ್ರಾಣ ಪಕ್ಷಿ ಹಾರಿ ಹೋಗಿರುವುದು ದುರಾದೃಟ್‌ಕರ ಸಂಗತಿ.
ಮಧ್ಯಪ್ರದೇಶದ ನರಸಿಂಗ್‌ಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯೊಳಗೆ ಜೂನ್ 27 ರಂದು, 19 ವರ್ಷದ 12 ನೇ ತರಗತಿ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು ಆಕೆಯ ಎಲ್ಲರೆದುರೆ ಆಕೆಯ ಕತ್ತು (throat) ಸೀಳಿದ್ದಾನೆ. ಈ ಹೃದಯವಿದ್ರಾವಕ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಯುವಕನ ಹಿಂಸಾತ್ಮಕ (throat) ಕೃತ್ಯವನ್ನು ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ನೋಡುತ್ತಾ ನಿಂತರೇ ವಿನಯ ಯುವತಿಯ ರಕ್ಷಣೆಗೆ ಯಾರು ಮುಂದೆ ಬರದಿರುವುದು ದುರ್ದೈವದ ಸಂಗತಿ. ಸದ್ಯ ಇದರ ದೃಶ್ಯವು CCTV ಯಲ್ಲಿ ಸೆರೆಯಾಗಿದೆ. ಯುವತಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ.
ಇದನ್ನು ಓದಿ : ಹೃದಯಾಘಾತದಿಂದ Cricket ಆಡುವಾಗಲೇ ಯುವಕನ ಸಾವು.!
ಆಸ್ಪತ್ರೆಯಲ್ಲಿ 19 ವರ್ಷದ 12 ನೇ ತರಗತಿ ವಿದ್ಯಾರ್ಥಿನಿಯ ಕತ್ತು (throat) ಸೀಳಿದ ಯುವಕನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಕಪ್ಪು ಶರ್ಟ್ ಧರಿಸಿದ ಅಭಿಷೇಕ್, ವಿದ್ಯಾರ್ಥಿನಿಯನ್ನು ಥಳಿಸಿ, ನೆಲಕ್ಕೆ ಎಸೆದು ನಂತರ ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಕತ್ತು ಸೀಳಿ ಕೊಲ್ಲುವುದು ಸ್ಥಳೀಯ CCTV ಕ್ಯಾಮರಾದಲ್ಲಿ ಕಾಣಬಹುದು.
ಈ ದುರ್ಘಟನೆ ಹಗಲು ಹೊತ್ತಿನಲ್ಲಿ ಅದು ಆಸ್ಪತ್ರೆಯ ತುರ್ತು ವಿಭಾಗದ ಸಮೀಪ ಮತ್ತು ವೈದ್ಯರು ಮತ್ತು ಕಾವಲುಗಾರರಿಂದ ಕೆಲವೇ ಮೀಟರ್ ದೂರದಲ್ಲಿ ನಡೆದಿದೆ. ಯುವಕ ಸುಮಾರು 10 ನಿಮಿಷಗಳ ಕಾಲ ಯುವತಿಯ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದು ಬರುತ್ತದೆ. ಘಟನಾ ನಂತರ ಯುವಕನು ಸಹ ತನ್ನ ಗಂಟಲ (throat) ನ್ನು ತಾನೇ ಕೊಯ್ದುಕೊಳ್ಳಲು ಪ್ರಯತ್ನಿಸಿ ಆಮೇಲೆ ಆಸ್ಪತ್ರೆಯ ಹೊರಗೆ ನಿಲ್ಲಿಸಿದ್ದ ಬೈಕನ್ನು ಸ್ಟಾರ್ಟ್ ಮಾಡಿ ಪರಾರಿಯಾಗಿದ್ದಾನೆ.
ಘಟನೆಯ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಧ್ಯಾ ಮನೆಯಿಂದ ಹೊರಟು, ಹೆರಿಗೆ ವಾರ್ಡ್‌ನಲ್ಲಿರುವ ತನ್ನ ಸ್ನೇಹಿತನ ಅತ್ತಿಗೆಯನ್ನು ಭೇಟಿ ಮಾಡುತ್ತಿರುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿ ಬಂದಿದ್ದಳು.
ಇದನ್ನು ಓದಿ : Illicit ಸಂಬಂಧ ಆರೋಪ : ಮಹಿಳೆಯ ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ.!
ಈ ವೇಳೆ ಅಭಿಷೇಕ್ ಮಧ್ಯಾಹ್ನದಿಂದ ಆಸ್ಪತ್ರೆಯಲ್ಲಿ ಸುತ್ತಾಡುತ್ತಿದ್ದ ಎಂದು ವರದಿಯಾಗಿದೆ. ಬಹುಶಃ ಅವಳಿಗಾಗಿ ಕಾಯುತ್ತಿದ್ದನೇನೋ ಅನಿಸುತ್ತೇ. ಈ ಮಧ್ಯ ಅಂದರೆ ಘಟನೆಯ ಪೂರ್ವದಲ್ಲಿ ಮೊದಲು ಇಬ್ಬರೂ ಕೊಠಡಿ ಸಂಖ್ಯೆ 22 ರ ಹೊರಗೆ ಸಂಕ್ಷಿಪ್ತವಾಗಿ ಮಾತನಾಡಿದರು ಎನ್ನಲಾಗಿದೆ.
ದುರ್ಘಟನೆಯ ವಿಷಯವನ್ನು ವಿದ್ಯಾರ್ಥಿನಿಯ ಕುಟುಂಬಕ್ಕೆ ಮಧ್ಯಾಹ್ನ 3:30 ರ ಸುಮಾರಿಗೆ ನೀಡಲಾಯಿತು. ಅವರು ಆಸ್ಪತ್ರೆಗೆ ತಲುಪುವವರಗೆ ಆಕೆಯ ದೇಹವು ಇನ್ನೂ ಕತ್ತು ಸೀಳಿದ (throat) ಸ್ಥಳದಲ್ಲಿತ್ತು. ಘಟನೆ ಪರಿಣಾಮವಾಗಿ ಕುಟುಂಬಸ್ಥರು ತೀವ್ರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಯ ಕತ್ತು (throat) ಸೀಳಿ ಕೊಲೆ ಮಾಡಿದ ಉದ್ದೇಶದ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.
False murder case : ಅಮಾಯಕ ಜೈಲಿಗೆ ; 3 ಪೊಲೀಸ್ ಅಧಿಕಾರಿಗಳು ಸಸ್ಪೆಂಡ್.!
ಜನಸ್ಪಂದನ ನ್ಯೂಸ್, ಮೈಸೂರು : ಸುಳ್ಳು ಕೊಲೆ ಕೇಸ್ (False murder case) ಹಾಕಿ ಅಮಾಯಕನೋರ್ವನನ್ನು ಜೈಲಿಗೆ ಕಳುಹಿಸಿದ ಆರೋಪದ ಮೇಲೆ ಇನ್ಸ್ಪೆಕ್ಟರ್ ಸೇರಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಈ ಮೂವರು ಪೊಲೀಸ್ ಅಧಿಕಾರಿಗಳು, ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಪತಿಯ ಮೇಲೆಯೇ ಪತ್ನಿಯ ಕೊಲೆ ಆರೋಪ ಹೊರಿಸಿ, ಸುಳ್ಳು ಪ್ರಕರಣ (False murder case) ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಇಲಾಖೆ ಅಮಾನತು ಮಾಡಿದೆ.
ಇದನ್ನು ಓದಿ : ಪರಾರಿಯಾಗುತ್ತಿದ್ದ ಕೊಲೆ ಆರೋಪಿ : ಕಾರಿನ ಬಾಗಿಲಿಗೆ 1KM ನೇತಾಡಿ ಹಿಡಿಯಲೆತ್ನಿಸಿದ PSI.!
ಕೊಡಗು ಜಿಲ್ಲೆಯ ಕುಶಾಲನಗರದ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಮೈಸೂರಿನ ಇಲವಾಲ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಹೇಶ್‌ಕುಮಾರ್ ಮತ್ತು ಜಯಪುರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಎತ್ತಿನಮನಿ ಅವರನ್ನು ಅಮಾನತುಗೊಳಿಸಿ ಪೊಲೀಸ್ ಆದೇಶ ಹೊರಡಿಸಿದೆ.
ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ಸುರೇಶ್ ಎಂಬುವನ ವಿರುದ್ಧ ಅಂದು ಬೆಟ್ಟದಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್ ಸುಳ್ಳು ಚಾರ್ಜ್ಶೀಟ್ (False murder case) ಸಲ್ಲಿಸಿದ್ದರು. ಇದೀಗ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದಾಗ ಸುಳ್ಳು ಚಾರ್ಜ್ಶೀಟ್ ಹಾಕಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ (False murder case) ಹಿನ್ನೆಲೆ :
ಕುಶಾಲನಗರ ಠಾಣೆಯಲ್ಲಿ ಸುರೇಶ್ ಎಂಬುವವರು ಕಳೆದ 2020ರ ನವ್ಹಂಬರ್‌ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ದೂರು ನೀಡಿದ್ದರು. ಬೆಟ್ಟದಪುರದಲ್ಲಿ 2020ರ ನವೆಂಬರ್ 12 ರಂದು ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.
ಮಹಿಳೆ ಬಲವಾದ ಏಟಿನಿಂದ ಮೃತಪಟ್ಟಿದ್ದಾರೆ ಎಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖವಾದ ಹಿನ್ನಲೆಯಲ್ಲಿ ಮಹಿಳೆ ಕೊಲೆಯಾಗಿ ಸತ್ತಿರುವುದು ಸ್ಪಷ್ಟವಾಗಿತ್ತು.
ಇದನ್ನು ಓದಿ : Accident : ಕ್ಯಾಂಟರ್ ಮತ್ತು ಕಾರು ಡಿಕ್ಕಿ ; ನಾಲ್ವರ ದಾರುಣ ಸಾವು.!
ಆಗ ಬೆಟ್ಟದಪುರದ ಪೊಲೀಸರು ಸುರೇಶ್ ಅವರೇ ತಮ್ಮ ಪತ್ನಿಯನ್ನು ಕೊಲೆ ಮಾಡಿದ್ದಾರೆಂದು ಬಂಧಿಸಿ, ನ್ಯಾಯಾಲಯಕ್ಕೆ ಸುಳ್ಳು ಚಾರ್ಜ್ಶೀಟ್ (False murder case) ಸಲ್ಲಿಸಿ ಎರಡು ವರ್ಷ ಜೈಲಿನಲ್ಲಿದ್ದರು. ಆದರೆ ಸುರೇಶ ಮಾತ್ರ ನಾನು ಪತ್ನಿಯನ್ನು ಕೊಲೆ ಮಾಡಿಲ್ಲ, ಅವಳು ಬದುಕಿದ್ದಾಳೆ ಎಂದು ಪದೇ ಪದೆ ಮನವಿ ಮಾಡುತ್ತಲೇ ಬಂದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಜನ ಸಾಕ್ಷಿದಾರರ ವಿಚಾರಣೆಯೂ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಸುರೇಶ್ ಮತ್ತು ಮಲ್ಲಿಗೆ ದಂಪತಿಯ ಮಕ್ಕಳಾದ ಕೃಷ್ಣ, ಕೀರ್ತಿ ಎಂಬುವವರು ನಮ್ಮ ತಾಯಿ ಬದುಕಿದ್ದಾಳೆ, ನಮ್ಮ ತಾಯಿ ಸತ್ತಿಲ್ಲ ಎಂದು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು.
ಇದನ್ನು ಓದಿ : Police ಹಲ್ಲೆಯಿಂದ ರಸ್ತೆಯಲ್ಲಿಯೇ ಕುಸಿದು ಬಿದ್ದ ಅಂಗಡಿ ಮಾಲೀಕ.!
ಕೊನೆಗೆ ಸುರೇಶ ಪತ್ನಿ ಮಲ್ಲಿಗೆ ನ್ಯಾಯಾಧೀಶರ ಮುಂದೆ ಮುಂದೆ 2025ರ ಏಪ್ರಿಲ್ 2ರಂದು ಹಾಜರಾಗಿದ್ದರು. ಪರಿಣಾಮವಾಗಿ ಕೋರ್ಟ್ನಲ್ಲಿ ಪೊಲೀಸರು ಹೇಳಿದ್ದು ಕಟ್ಟುಕತೆ (False murder case) ಎಂದು ಸಾಬೀತಾಗಿತ್ತು. ಆದರೆ, ಅಪರಾಧವನ್ನೇ ಮಾಡಿರದ ಸುರೇಶ ಮಾತ್ರ ಕೊಲೆ ಆರೋಪಿಯಾಗಿ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ.
ಇದೀಗ, ಸತ್ಯ ಹೊರ ಬಂದಿರುವುದರಿಂದ ಸುರೇಶ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುರೇಶ್ ವಿರುದ್ಧ ಸುಳ್ಳು ಕೇಸ್ (False murder case) ಹಾಕಿದ್ದ ಓರ್ವ ಇನ್ಸ್‌ಪೆಕ್ಟರ್, ಇಬ್ಬರು ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
ಅಪರಾಧವನ್ನೇ ಮಾಡಿರದ ಸುರೇಶ ಕೊಲೆ ಆರೋಪಿಯಾಗಿ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದು ಒಂದು ಕಡೆಯಾದರೇ, ಬೆಟ್ಟದಪುರದಲ್ಲಿ 2020ರ ನವೆಂಬರ್ 12 ರಂದು ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿತ್ತಲ್ಲಾ ಆ ದೇಹ ಯಾರದು.? ಆ ಮಹಿಳೆಯ ಕೊಲೆಗಾರ ಯಾರು.? ಎಂಬ ಪ್ರಶ್ನೆಗಳು ಇಲ್ಲಿ ಮೂಡುವುದು ಸಹಜ.