Saturday, July 12, 2025

Janaspandhan News

HomeGeneral Newsಹೃದಯಾಘಾತದಿಂದ Cricket ಆಡುವಾಗಲೇ ಯುವಕನ ಸಾವು.!
spot_img
spot_img

ಹೃದಯಾಘಾತದಿಂದ Cricket ಆಡುವಾಗಲೇ ಯುವಕನ ಸಾವು.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಯುವಕನೋರ್ವ ಅಚ್ಚುಮೆಚ್ಚಿನ ಕ್ರಿಕೆಟ್‌ (Cricket) ಆಟ ಆಡುವಾಗಲೇ ಹೃದಯಾಘಾತಕ್ಕೆ ಬಲಿಯಾದ ಹೃದಯವಿದ್ರಾವಕ ಘಟನೆಯೊಂದು ಪಂಜಾಬ್‌ನ ನಡೆದಿರುವ ಬಗ್ಗೆ ವರದಿಯಾಗಿದೆ.

ಹೃದಯಾಘಾತವನ್ನು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದೂ ಕರೆಯುತ್ತಾರೆ, ಇದು ಹೃದಯ ಸ್ನಾಯುವಿನ ಒಂದು ಭಾಗಕ್ಕೆ ರಕ್ತದ ಹರಿವನ್ನು ದೀರ್ಘಕಾಲದವರೆಗೆ ನಿರ್ಬಂಧಿಸಿದಾಗ ಸಂಭವಿಸುವ ಗಂಭೀರವಾದ ವೈದ್ಯಕೀಯ ತುರ್ತುಸ್ಥಿತಿಯಾಗಿದೆ, ಇದು ಪೀಡಿತ ಅಂಗಾಂಶದ ಹಾನಿ ಅಥವಾ ಸಾವಿಗೆ ಕಾರಣವಾಗುತ್ತದೆ.

ಇತ್ತೀಚೆಗಿನ ದಿನಗಳಲ್ಲಂತು ದಿಢೀರ್‌ ಹೃದಯಾಘಾತ ಪ್ರಕರಣಗಳು ಹೆಚ್ಚುತಲೇ ಇವೆ. ಹಾಸನ ಜಿಲ್ಲೆಯೊಂದರಲ್ಲಿಯೇ ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು 16 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್‌ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!

ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯ ಪ್ರಕಾರ, ಕಳೆದೆರಡು ವರ್ಷಗಳ ಅಂಕಿ ಅಂಶ ಪ್ರಕಾರ 507 ಜನರು ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಇವರಲ್ಲಿ 20 ರಿಂದ 30 ವಯಸ್ಸಿನ 14 ಮಂದಿ, 30 ರಿಂದ 40 ವಯಸ್ಸಿನ 40 ಹಾಗೂ 40 ವರ್ಷ ಮೇಲ್ಪಟ್ಟ 136 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬರುತ್ತಿದೆ. ಯುವ ಜನರೇ ಇಂತಹ ದಾರುಣ ಘಟನೆಯಲ್ಲಿ ಹೆಚ್ಚು ಬಲಿಯಾಗುತ್ತಿದ್ದಾರೆ ಎನ್ನುವುದು ಮಾತ್ರ ದುರಂತ.

ಇದೀಗ ಇಂತಹದೇ ಘಟನೆಯೊಂದು ಪಂಜಾಬ್‌ನ ಫಿರೋಜ್‌ಪುರ್‌ನಲ್ಲಿ ನಡೆದಿರುವುದು ವರದಿಯಾಗಿದ್ದು, ಕ್ರಿಕೆಟ್‌ ಆಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದ ಹಿನ್ನಲೆಯಲ್ಲಿ ಯುವಕನೋರ್ವ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಇದನ್ನು ಓದಿ : ಪರಾರಿಯಾಗುತ್ತಿದ್ದ ಕೊಲೆ ಆರೋಪಿ : ಕಾರಿನ ಬಾಗಿಲಿಗೆ 1KM ನೇತಾಡಿ ಹಿಡಿಯಲೆತ್ನಿಸಿದ PSI.!

ಪಂಜಾಬ್‌ನ ಫಿರೋಜ್‌ಪುರದ ಗುರು ಹರ್ ಸಹಾಯ್ ಪಟ್ಟಣದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ (Cricket) ಪಂದ್ಯವೊಂದರಲ್ಲಿ ಈ ಘಟನೆ ನಡೆದಿದ್ದು, ಹೃದಯಾಘಾತದಿಂದ ಮೃತಪಟ್ಟ ಯುವಕನ್ನು ಹರ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ.

ಪಂದ್ಯದಲ್ಲಿ ಬಾಲರ್‌ ಎಸೆದ ಚಂಡನ್ನು ಹರ್ಜಿತ್ ಸಿಂಗ್, ಸಿಕ್ಸರ್‌ ಬಾರಿಸಿದ ಮರು ಕ್ಷಣ ಸಹ ಆಟಗಾರರನ್ನು ಭೇಟಿಯಾಗಲು ತೆರಳಿದ್ದಾರೆ. ಅರ್ಧ ದಾರಿ ಕ್ರಮಿಸುತ್ತಿದಂತೆಯೇ ಹರ್ಜಿತ್ ಸಿಂಗ್ ಅಲ್ಲಿಯೇ ಕುಳಿತಿದ್ದಾರೆ. ಕುಳಿತ ಮರು ಕ್ಷಣವೇ ಅಲ್ಲೇ ಕುಸಿದು ಬಿದ್ದಿದ್ದಾರೆ. ಸಹ ಆಟಗಾರರು ಸಿಪಿಆರ್‌ ನೀಡಿದ್ದರೂ ಸಹ ಹರ್ಜಿತ್‌ ಬದುಕಿ ಉಳಿಯಲಿಲ್ಲ.

ಹರ್ಜಿತ್‌ ಸಿಂಗ್‌ ಎಂಬ ಯುವಕ Cricket ಆಡುವಾಗ ಹೃದಯಸ್ತಂಭನದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. DAV ಶಾಲಾ ಮೈದಾನದಲ್ಲಿ Cricket ಪಂದ್ಯಾವಳಿ ವೇಳೆ ನಡೆಯುತ್ತಿದ್ದ ಎನ್ನಲಾದ ಈ ಘಟನೆಯ ವಿಡಿಯೊವನ್ನು Mobile ಫೋನ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ. ಸದ್ಯ ಇದರ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಕ್ರಿಕೆಟ್‌ (Cricket) ಆಟದ ವಿಡಿಯೋ :

Illicit ಸಂಬಂಧ ಆರೋಪ : ಮಹಿಳೆಯ ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಹಿಳೆಯೋರ್ವಳನ್ನು ಅಕ್ರಮ (Illicit) ಸಂಬಂಧ ಆರೋಪದ ಮೇಲೆ ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ ಮಾಡಿರುವಂತಹ ಅಮಾನವೀಯ ಘಟನೆಯೊಂದು ತೆಲಂಗಾಣದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಪುರುಷ-ಮಹಿಳೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು ಬೆತ್ತಲೆಗೊಳಿಸಿ, ತಲೆ ಬೋಳಿಸಿ ಥಳಿಸಿ ಅಮಾನವೀಯತೆ ಮೆರೆದಿರುವ ಘಟನೆಯೊಂದು ತೆಲಂಗಾಣದ ಹನುಮಕೊಂಡದ ಧರ್ಮಸಾಗರ ಮಂಡಲದ ತಟಿಕಾಯ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಮಹಿಳೆಯೋರ್ವಳು ತನ್ನದೆ ಗ್ರಾಮದ ಓರ್ವ ವ್ಯಕ್ತಿಯ ಜೊತೆ ಅಕ್ರಮ (Illicit) ಸಂಬಂಧದಲ್ಲಿ ತೊಡಗಿದ್ದಾಗಲೇ ಗ್ರಾಮಸ್ಥರು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿವಸ್ರ್ತಗೊಳಿಸಿ ಕಟ್ಟಿಹಾಕಿ ಅಮಾನವೀಯವಾಗಿ ವರ್ತಿಸಿದ್ದಾರೆ.

ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್‌ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!

ಅಕ್ರಮ (Illicit) ಸಂಬಂಧದ ಹಿನ್ನಲೆಯಲ್ಲಿ ಅವರನ್ನು ಕಟ್ಟಿಹಾಕಿದ ಬಳಿಕ ಇಬ್ಬರ ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಹಗ್ಗದಿಂದ ಥಳಿಸಿದ್ದಾರೆ. ಈ ವೇಳೆ ಮಹಿಳೆಯ ಖಾಸಗಿ ಭಾಗಗಳು ರಕ್ತಸ್ರಾವವಾಗಿದ್ದರೂ ಸಹ ಕರುಣೆ ತೋರದೆ ಮೃಗಗಳಂತೆ ವರ್ತಿಸಿದ್ದಾರೆ. ಥಳಿತಗೊಳಗಾದ ಇಬ್ಬರೂ ತಮ್ಮ ತಪ್ಪಿಗೆ ಮಂಡಿಯೂರಿ ಕ್ಷಮೆ ಯಾಚಿಸಿದರೂ ಸಹ ಗ್ರಾಮಸ್ಥರು ಅಮಾನವೀಯವಾಗಿ ವರ್ತಿಸಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಮುನುಗು ಮಂಡಲದ ಬೊಲೊಲುಪಲ್ಲಿ ನಿವಾಸಿಯಾಗಿದ್ದು, ಈತ ಹತ್ತು ವರ್ಷಗಳ ಹಿಂದೆ ತಟಿಕಾಯ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.

ಆದರೆ ಈ ಹಲ್ಲೆಗೊಳಗಾದ ವ್ಯಕ್ತಿ ಇತ್ತೀಚೆಗೆ ಓರ್ವ ಮಹಿಳೆಯೊಂದಿಗೆ ಅಕ್ರಮ (Illicit) ಸಂಬಂಧ ಬೆಳಸಿದ್ದು, ಅವರು ಹತ್ತು ದಿನಗಳ ಹಿಂದೆ ಒಟ್ಟಿಗೆ ಓಡಿ ಹೋಗಿದ್ದರು. ಹೀಗೆ ಓಡಿ ಹೋದ ಹಿನ್ನಲೆಯಲ್ಲಿ ವ್ಯಕ್ತಿಯ ಕುಟುಂಬಸ್ಥರು ಹುಡುಕುತ್ತಿದ್ದರು, ಕೊನೆಗೂ ಇವರನ್ನು ಪತ್ತೆಹಚ್ಚಿದ್ದಾರೆ.

ಇದನ್ನು ಓದಿ : Shefali : ಅಪ್ಪು ಜೊತೆ ನಟಿಸಿದ್ದ ಖ್ಯಾತ ನಟಿ ಹೃದಯಾಘಾತದಿಂದ ಸಾವು.!

ನಂತರ ಇಬ್ಬರನ್ನೂ (Allegations of illicit relationship) ತಟಿಕಾಯ ಗ್ರಾಮಕ್ಕೆ ಕರೆತಂದು ಗ್ರಾಮದ ಹಿರಿಯರಿಗೆ ಮಾಹಿತಿ ನೀಡಿದ್ದಾರೆ. ಆಗ ಗ್ರಾಮದಲ್ಲಿ ಅವರಿಬ್ಬರನ್ನೂ ಕಟ್ಟಿಹಾಕಿದ್ದು, ಈ ವೆೇಳೆ ಮಹಿಳೆಯನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡರು. ಅಕ್ರಮ (Illicit) ಸಂಬಂಧ ಹೊಂದಿದ ಮಹಿಳೆಯನ್ನು ವಿವಸ್ತ್ರಗೊಳಿಸಿದಲ್ಲದೇ ಆಕೆಯ ಜನನಾಂಗಕ್ಕೆ ಹಗ್ಗದಿಂದ ಥಳಿಸಿದ್ದಾರೆ.

ಅಕ್ರಮ (Illicit) ಸಂಬಂಧ ಹೊಂದಿದ ಜೋಡಿಯನ್ನು ಹೊಡೆಯುವ ಘಟನೆಯನ್ನು ರೀಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಿಳೆಗೆ ಚಿತ್ರಹಿಂಸೆ ನೀಡಿದ ಕುಟುಂಬವನ್ನು ವಶಕ್ಕೆ ಪಡೆಯಲಾಯಿತು. ಈ ಮಧ್ಯ ಮತ್ತೆ ಕಾಣೆಯಾಗಿರುವ ವ್ಯಕ್ತಿ ಮತ್ತು ಮಹಿಳೆಯನ್ನು (Allegations of illicit relationship) ಹುಡುಕಲು ಶೋಧ ಕಾರ್ಯಾಚರಣೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments