PSIಜನಸ್ಪಂದನ ನ್ಯೂಸ್, ಡೆಸ್ಕ್ : ವೇಗವಾಗಿ ಚಲಿಸುತ್ತಿದ್ದ ಕಾರಿನ ಬಾಗಿಲಿಗೆ ಪಿಎಸ್ಐ (PSI) ಓರ್ವರು ನೇತಾಡಿ ಪರಾರಿಯಾಗುತ್ತಿದ್ದ ಕೊಲೆ ಆರೋಪಿಯನ್ನು ಹಿಡಿಯಲೆತ್ನಿಸಿದ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದೆ.
ಪೊಲೀಸರಿಗೆ ಬೇಕಾಗಿದ್ದ ಕೊಲೆ ಆರೋಪಿಯನ್ನು ಬಂಧಿಸಲು ಪೊಲೀಸ್ ಅಧಿಕಾರಿಯೊಬ್ಬರು (PSI) ಚಲಿಸುತ್ತಿದ್ದ ಕಾರಿನ ಬಾಗಿಲಿಗೆ ಜೋತುಬಿದ್ದು ಆತನನ್ನು ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಾಹಸದ ವಿಡಿಯೋ ನೋಡಿದ ಸಾರ್ವಜನಿಕರು ಪಿಎಸ್ಐ (PSI) ಕಾರ್ಯಕ್ಕೆ ಖುಷ ಆಗಿದ್ದಾರೆ.
ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ತಿರುಪತಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Shefali : ಅಪ್ಪು ಜೊತೆ ನಟಿಸಿದ್ದ ಖ್ಯಾತ ನಟಿ ಹೃದಯಾಘಾತದಿಂದ ಸಾವು.!
ಘಟನೆಯ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಆರೋಪಿತ ಅಲಗುರಾಜ ಎಂಬಾತ ಮಾಯಿಲೈ ಶಿವಕುಮಾರ ಎಂಬ ವ್ಯಕ್ತಿಯ ಕೊಲೆ ಸೇರಿದಂತೆ ಹಲವಾರು ಅಪರಾಧಗಳಿಗೆ ಪೊಲೀಸರಿಗೆ ಬೇಕಾಗಿದ್ದ ಎಂದು ಮೂಲಗಳು ತಿಳಿಸಿವೆ.
ಐಸ್ ಹೌಸ್ ಮತ್ತು ಜಾಮ್ ಬಜಾರ್ ಪೊಲೀಸ್ ಠಾಣೆಗಳಲ್ಲಿ ಅಲಗುರಾಜ ವಿರುದ್ಧ ಹಲವಾರು ಪ್ರಕರಣಗಳು ಬಾಕಿ ಇವೆ ಎಂದು ವರದಿಯಾಗಿದೆ.
ಇದನ್ನು ಓದಿ : Black Magic : ಬ್ಲ್ಯಾಕ್ ಮ್ಯಾಜಿಕ್‌ಗಾಗಿ ನಾಯಿಗಳ ಸರಣಿ ಹತ್ಯೆ ಮಾಡಿದ ಮಾಟಗಾತಿ.!
ಅಲಗುರಾಜ ತಿರುವಲ್ಲೂರು ಜಿಲ್ಲೆಯಲ್ಲಿ ಅಡಗಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಅವನನ್ನು ಹಿಡಿಯಲು ವಿಶೇಷ ತಂಡಗಳನ್ನು ರಚಿಸಿದರು. ಪೊಲೀಸ್ ತಂಡಗಳು ಹುಡುಕಲು ಬರುತ್ತಿದ್ದಂತೆಯೇ, ಅಲಗುರಾಜ ಕಾರಿನಲ್ಲಿ ಹೆದ್ದಾರಿ ಮೂಲಕ ಪರಾರಿಯಾಗಲು ಪ್ರಯತ್ನಿಸಿದ್ದಾನೆ.
ಜಾಮ್ ಬಜಾರ್ ಸಬ್ ಇನ್ಸ್‌ಪೆಕ್ಟರ್ (PSI) ಆನಂದಕುಮಾರ ಅವರು, ಆರೋಪಿ ಕಾರಿನ ಮೇಲೆ ಹಾರಿ ಅದರ ಬಾಗಿಲಿಗೆ ಜೋತು ಬಿದ್ದು ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ : SSC MTS : ತಾಂತ್ರಿಕೇತರ ಸಿಬ್ಬಂದಿ ಮತ್ತು ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ವೇಗವಾಗಿ ಚಲಿಸುತ್ತಿದ್ದ ಕಾರಿನ ಬಾಗಿಲಿಗೆ ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ಜೋತು ಬಿದ್ದು ಆರೋಪಿಯನ್ನು ಹಿಡಿಯಲು PSI ಪ್ರಯತ್ನಿಸಿದ್ದಾರೆ. ಆದರೆ ಅಂತಿಮವಾಗಿ ವಾಹನದಲ್ಲಿದ್ದವರು ಪಿಎಸ್ಐ (PSI) ಅವರನ್ನು ಹೊರಗೆ ತಳ್ಳಿದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದಾರೆ. ಈ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
ಪಿಎಸ್ಐ (PSI) ಆನಂದಕುಮಾರ ಹೆಲ್ಮೆಟ್ ಧರಿಸಿದ್ದ ಪರಿಣಾಮವಾಗಿ ಗಂಭೀರ ಗಾಯವಾಗಿದ್ದರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನು ಓದಿ : Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?
ಸದ್ಯ PSI ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆರೋಪಿ ಅಲಗುರಾಜ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.
ಆರೋಪಿಯನ್ನು ಹಿಡಿಯಲು ಕಾರಿನ ಬಾಗಿಲಿಗೆ ನೇತಾಡಿ ಹಿಡಿಯಲೆತ್ನಿಸಿದ PSI ವಿಡಿಯೋ :
तिरुवल्लूर में अपराधी को पकड़ते समय कार से लटके सब-इंस्पेक्टर आनंद कुमार, हेलमेट ने बचाई जान#CourageousCops #ViralVideo #Crime #PoliceEncounter #TamilNadu #news #viral #viralvideo #ViralVideos #Trending #shorts pic.twitter.com/PbYIUkXdK3
— News Jungal Media Pvt. Ltd. (@newsjungal) June 27, 2025
Black Magic : ಬ್ಲ್ಯಾಕ್ ಮ್ಯಾಜಿಕ್‌ಗಾಗಿ ನಾಯಿಗಳ ಸರಣಿ ಹತ್ಯೆ ಮಾಡಿದ ಮಾಟಗಾತಿ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಬ್ಲ್ಯಾಕ್ ಮ್ಯಾಜಿಕ್ (Black Magic) ಗಾಗಿ ಮಾಟಗಾತಿಯೋಬ್ಬಳು ನಾಯಿಗಳ ಸರಣಿ ಹತ್ಯೆ ಮಾಡಿರುವ ಅಮಾನಿಯ ಘಟನೆ ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಿ ಪಡೆದ ಬೆಂಗಳೂರಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದ್ದು, ಅದು ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಮಾಟ (Black Magic) ಕ್ಕಾಗಿ ನಾಯಿಯನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇಡೀ ಚಿನ್ನಪ್ಪ ಲೇಔಟ್‌ನ ಖಾಸಗಿ ಅಪಾರ್ಟ್ಮೆಂಟ್‌ನ ತುಂಬೆಲ್ಲಾ ದುರ್ನಾತ ಬೀರಿದೆ.
ಇದನ್ನು ಓದಿ : Savadatti ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ; ರೂ. 1.04 ಕೋಟಿ ಕಾಣಿಕೆ ಸಂಗ್ರಹ.!
ತ್ರಿಪಾರ್ಣ ಪಾಯ್ಕ ಎಂಬ ಪಶ್ಚಿಮ ಬಂಗಾಳದ ಮಹಿಳೆಯು ನಾಲ್ಕು ದಿನಗಳ ಹಿಂದೆ ತನ್ನದೇ ಪೋಷಣೆಯಲ್ಲಿದ್ದ ನಾಯಿಯನ್ನು ಕತ್ತು ಕೊಯ್ದು (Black Magic) ಹತ್ಯೆ ಮಾಡಿ ನಂತರ ಬಟ್ಟೆಯಿಂದ ಸುತ್ತಿಹಾಕಿ ಬಚ್ಚಿಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಮಾಟಕ್ಕಾಗಿ (Black Magic) ಹತ್ಯೆ ಮಾಡಿದ ನಾಯಿಯ ಶವದ ಸುತ್ತ ಶ್ರೀ ಯಂತ್ರವನ್ನು ಬರೆಯಲಾಗಿದ್ದು, ರೂಮಿನ ತುಂಬೆಲ್ಲಾ ದೇವರ ಪೋಟೊಗಳನ್ನ ಇಟ್ಟು ಪೂಜೆ ಮಾಡಲಾಗಿದೆ.
ಪಶ್ಚಿಮ ಬಂಗಾಳದ ಈ ಮಹಿಳೆ ನಾಲ್ಕು ಲ್ಯಾಬ್ರೋಡರ್ ನಾಯಿಗಳನ್ನ ಸಾಕಿದ್ದಳು. ಇದೇ ಮಹಿಳೆಯ ಮನೆಯೊಂದರಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆ ನಾಯಿ ಕಾಣೆಯಾಗಿತ್ತು, ಇದೀಗ ನಾಯಿಯ ಹತ್ಯೆ (Black Magic) ನಡೆದಿರುವುದು ಅನುಮಾನಕ್ಕೆ ಎಡೆಮಾಡಿದೆ.
ಇದನ್ನು ಓದಿ : Mango : ಮಾವಿನಹಣ್ಣನ್ನು Night ವೇಳೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.
ಬ್ಲ್ಯಾಕ್ ಮ್ಯಾಜಿಕ್ (Black Magic) ಗಾಗಿ ಹತ್ಯೆಯಾದ ನಾಯಿಯಿಂದ ಬರುವ ದುರ್ವಾಸನೆಯ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಹೋಗಿ ನೋಡಲಾಗಿ, ನಾಯಿಯನ್ನು ಹತ್ಯೆ ಮಾಡಿ ಬಟ್ಟೆಯಲ್ಲಿ ಸುತ್ತಿಯಿಟ್ಟಿದ್ದಾಳೆ.
ಸದ್ಯ ಹತ್ಯೆಯಾದ ನಾಯಿಯ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ನಾಲ್ಕು ದಿನಗಳ ಹಿಂದೆಯೇ ಹತ್ಯೆ ನಡೆದಿರುವುದನ್ನು ದೃಢಪಡಿಸಿದೆ. ಬ್ಲ್ಯಾಕ್ ಮ್ಯಾಜಿಕ್ (Black Magic) ಕ್ಕಾಗಿ ಹತ್ಯೆ ಮಾಡಲಾಗಿತ್ತೆಂಬ ಶಂಕೆಯೂ ವ್ಯಕ್ತವಾಗಿದೆ. ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.