ಜನಸ್ಪಂದನ ನ್ಯೂಸ್, ಡೆಸ್ಕ್ : ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಪೊಲೀಸ್ (Police) ರ ಹಲ್ಲೆಯಿಂದ ರಸ್ತೆಯಲ್ಲಿಯೇ ಅಂಗಡಿ ಮಾಲೀಕನೋರ್ವ ಪ್ರಜ್ಞೆ ಕಳೆದುಕೊಂಡು (lose consciousness) ಕುಸಿದು ಬಿದ್ದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಸಣ್ಣ ವಿಷಯಕ್ಕೆ ಪೊಲೀಸ್ (Police) ರ ಹಲ್ಲೆಯ ಪರಿಣಾಮವಾಗಿ ಅಂಗಡಿ ಮಾಲೀಕನೋರ್ವ ರಸ್ತೆಯಲ್ಲೇ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಂತಹ ಘಟನೆಯೊಂದು ರಾಜಸ್ಥಾನದ ಕೋಟಾದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
ಅಂಗಡಿ ಮಾಲೀಕನಿಗೆ ಹಲ್ಲೆ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದೆ. ಪೊಲೀಸ್ (Police) ರ ಈ ನಡೆಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿಡಿಯೋ ನೋಡಿದ ಅನೇಕರು ಹಲ್ಲೆ ಮಾಡಿದ ಸ್ಟೇಷನ್ ಆಫೀಸರ್ (SHO) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಂಗಡಿ ಮಾಲೀಕನೋರ್ವನಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ ಎಸ್‌ಹೆಚ್‌ಒ (SHO) ಪುಷ್ಪೇಂದ್ರ ಬನ್ಸಿವಾಲ್ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ :
ಕೋಟಾದ ಕೈತುನಿಪೊಲ್ (Kaithunipol area) ಪ್ರದೇಶದ ಅಂಗಡಿಯೊಂದರ ಮುಂದೆ ಯಾರೋ ಬೈಕನ್ನು ಪಾರ್ಕ್ ಮಾಡಿ ಹೋಗಿದ್ದಾರೆ. ಈ ವೇಳೆ ಪೊಲೀಸ್ (Police) ವಾಹನದಲ್ಲಿ ಬಂದ ಸಿಬ್ಬಂದಿ ಪಾರ್ಕ್ ಮಾಡಿದ್ದ ಬೈಕನ್ನು ಅಲ್ಲಿಂದ ತೆಗೆಯುವಂತೆ ಅಂಗಡಿ ಮಾಲೀಕನಿಗೆ ಸೂಚಿಸಿದ್ದಾರೆ.
ಇದನ್ನು ಓದಿ : Illicit ಸಂಬಂಧ ಆರೋಪ : ಮಹಿಳೆಯ ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ.!
ಪೊಲೀಸರು ಹಾಗೂ ಎಸ್‌ಹೆಚ್‌ಒ (SHO) ಬೈಕ್ ತೆಗೆಯಲು ಸೂಚಿಸುತ್ತಿದಂತೆಯೇ ಅಂಗಡಿ ಮಾಲೀಕ, ಆ ಬೈಕ್ ತನ್ನದಲ್ಲ ಹಾಗೂ ಅಲ್ಲಿ ನಿಲ್ಲಿಸುವ ಬೈಕ್ ಲಾಕ್ (Lock) ಆಗಿದೆ. ಹೀಗಾಗಿ ಬೈಕ್ ಆ ಸ್ಥಳದಿಂದ ತೆಗೆಯಲು ಸಾಧ್ಯವಿಲ್ಲ ಹೇಳಿದ್ದಾನೆ.
ಇಷ್ಟಕ್ಕೆ ಸಿಟ್ಟಿಗೆದ್ದ ಎಸ್‌ಹೆಚ್‌ಒ (SHO) ಪುಷ್ಪೇಂದ್ರ ಬನ್ಸಿವಾಲ್, ಅಂಗಡಿ ಮಾಲೀಕನನ್ನು ಶರ್ಟ್ ಕಾಲರ್ ಹಿಡಿದು ಹೊರಗೆ ಎಳೆದು ತಂದಿದ್ದಾರೆ.
ಇದನ್ನು ಓದಿ : ಹೃದಯಾಘಾತದಿಂದ Cricket ಆಡುವಾಗಲೇ ಯುವಕನ ಸಾವು.!
ಅಂಗಡಿಯಿಂದ ಹೊರಗೆ ಎಳೆದು ತಂದ ನಂತರ ಮಾಲೀಕನ ಕೆನ್ನೆಗೆ ಜೋರಾಗಿ SHO ಹೊಡೆದಿದ್ದಾರೆ. ಈ ವೇಳೆ ಆತನ ಜೊತೆಗಿದ್ದ ಇತರ ಪೊಲೀಸ್ (Police) ರು ಕೂಡ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸರ ಹಲ್ಲೆಯಿಂದ ಅಂಗಡಿ ಮಾಲೀಕ ಪ್ರಜ್ಞೆ ಕಳೆದುಕೊಂಡು (lose consciousness) ರಸ್ತೆಯಲ್ಲಿ ನಿಂತಿದ್ದ ಪೊಲೀಸ್ ವಾಹನದ ಸಮೀಪದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ಪೊಲೀಸರು ಆತನನ್ನು ಮೇಲೆತ್ತುವ ಪ್ರಯತ್ನ ಮಾಡುವುದು ಸಿಸಿಟಿವಿ (CCTV) ಯಲ್ಲಿ ರೆಕಾರ್ಡ್ ಆಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 30 ರ ದ್ವಾದಶ ರಾಶಿಗಳ ಫಲಾಫಲ.!
ಸದ್ಯ ಘಟನೆಯ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆಯೇ ರಾಜಸ್ಥಾನದ ಕೋಟಾ ಪೊಲೀಸ (Police) ರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕರ ಮೇಲೆ ಗೂಂಡಾಗಿರಿ ಮಾಡುತ್ತಿರುವ ಎಸ್‌ಹೆಚ್‌ಒ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.
ಈ ಘಟನೆ ಮೇ 29ರಂದು ನಡೆದಿದ್ದು, ತಿಂಗಳಾಗುತ್ತಾ ಬಂದರೂ ಸಹ ಹಲ್ಲೆ ಮಾಡಿದ ಎಸ್‌ಹೆಚ್‌ಒ (SHO) ವಿರುದ್ಧ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವಾಗ ಕೆಲ ದಿನಗಳ ಹಿಂದೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತೋ ಆಗ ಎಸ್‌ಪಿ ಅಮೃತ ದುಹಾನ್ ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಇದನ್ನು ಓದಿ : Accident : ಕ್ಯಾಂಟರ್ ಮತ್ತು ಕಾರು ಡಿಕ್ಕಿ ; ನಾಲ್ವರ ದಾರುಣ ಸಾವು.!
ಹಲ್ಲೆಯ ಈ ವೀಡಿಯೋವನ್ನು NCMIndia Council For Men Affairs ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು 6 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಪಾರ್ಕಿಂಗ್ ಮಾಡಬಾರದ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದರೆ ಪೊಲೀಸರಿಗೆ ಹಲ್ಲೆ ಮಾಡುವ ಹಕ್ಕಿಲ್ಲ. ಅವರು ಚಲನ್ ನೀಡಬಹುದು ಅಷ್ಟೇ. ಹಲ್ಲೆ ಮಾಡಿದ ಪೊಲೀಸ್ (Police) ಅಧಿಕಾರಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಆ ವ್ಯಕ್ತಿ ತನ್ನ ಸಮವಸ್ತ್ರ ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಪೊಲೀಸ್ ಹಲ್ಲೆಗೆ ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿಯ ವಿಡಿಯೋ :
Meet SHO Pushpendra Bansiwal of @KotaPolice who slapped a shopkeeper so hard that he instantly fainted and became unconscious.
It was alleged that the SHO asked the shopkeeper to remove a bike parked in front of his shop in the Kaithunipol area of Kota in Rajasthan. The… pic.twitter.com/WHC4mWeXev— NCMIndia Council For Men Affairs (@NCMIndiaa) June 29, 2025
Accident : ಕ್ಯಾಂಟರ್ ಮತ್ತು ಕಾರು ಡಿಕ್ಕಿ ; ನಾಲ್ವರ ದಾರುಣ ಸಾವು.!
ಜನಸ್ಪಂದನ ನ್ಯೂಸ್, ತುಮಕೂರು : ರಾಷ್ಟ್ರೀಯ ಹೆದ್ದಾರಿ 75 ಬಿದನಗೆರೆ ಬೈಪಾಸ್ ಬಳಿ ಕ್ಯಾಂಟರ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ (Accident) ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರ್ ನುಜ್ಜುಗುಜ್ಜಾಗಿದ್ದು, ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಸಾವಿಗೀಡಾಗಿದ್ದಾರೆ.
ಕಾರಿಗೆ ಹಾಸನ ನಡೆಯಿಂದ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ (Accident) ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದ್ದು, ಈ ಘಟನೆಗೆ ಕ್ಯಾಂಟರ್ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
ಈ ಕ್ಯಾಂಟರ್ ಮತ್ತು ಲಾರಿ ನಡುವಿನ ಅಪಘಾತ (Accident) ದ ಪರಿಣಾಮ ಕಾರಿನಲ್ಲಿದ್ದ ಪತಿ, ಪತ್ನಿ, ಮಗ, ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತ (Accident) ದಲ್ಲಿ ಮೃತ ದುರ್ದೈವಿಗಳನ್ನು ಸೀಬೆಗೌಡ (45), ಪತ್ನಿ ಶೋಭಾ (36) ಮಕ್ಕಳಾದ ದುಂಬಿಶ್ರೀ (16), ಭಾನುಕಿರಣ್ ಗೌಡ (14) ಎಂದು ಗುರುತಿಸಲಾಗಿದೆ. ಮೃತರು ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ನಟರಾಜ ಬಡಾವಣೆ ನಿವಾಸಿಗಳೆಂದು ತಿಳಿದು ಬಂದಿದೆ.
ಇದನ್ನು ಓದಿ : ಪರಾರಿಯಾಗುತ್ತಿದ್ದ ಕೊಲೆ ಆರೋಪಿ : ಕಾರಿನ ಬಾಗಿಲಿಗೆ 1KM ನೇತಾಡಿ ಹಿಡಿಯಲೆತ್ನಿಸಿದ PSI.!
ಸೀಬೆಗೌಡ ತಮ್ಮ ಮಗನಾದ ಭಾನುಕಿರಣ್ ನನ್ನು ಕುಣಿಗಲ್ ನ ಒಂದು ಇಂಟರ್ ನ್ಯಾಷನಲ್ ಶಾಲೆಗೆ ಬಿಡಲು ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಬರುವಾಗ ಈ ಅವಘಡ (Accident) ಸಂಭವಿಸಿದೆ.
ಅಪಘಾತ (Accident) ದಿಂದ ಟ್ರಾಫಿಕ್ ಜಾಮ್ :
ಬಿದನಗೆರೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಭವಿಸಿದ ಈ ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ (Accident) ದಿಂದ ಸಂಚಾರ ಅಸ್ತವ್ಯಸ್ತಗೊಂಡಿತು.
ಭಾನುವಾರವಾದ್ದರಿಂದ ವಾಹನಗಳ ಸಂಚಾರ ಈ ಮಾರ್ಗದಲ್ಲಿ ದುಪ್ಪಟ್ಟು ಇತ್ತು. ಅಪಘಾತ (Accident) ದ ಹಿನ್ನೆಲೆಯಲ್ಲಿ ಮಾರ್ಗದಲ್ಲಿ ಸಂಚಾರ ದಟ್ಟಣೆಯಿಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು.
ಇದನ್ನು ಓದಿ : SSC MTS : ತಾಂತ್ರಿಕೇತರ ಸಿಬ್ಬಂದಿ ಮತ್ತು ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ವಿಷಯ ತಿಳಿದ ಕುಣಿಗಲ್ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳದಲ್ಲಿ ಆಗಮಿಸಿ ಸಂಚಾರಿ ವ್ಯವಸ್ಥೆ ಸುಗಮಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟರು.
ನಂತರ ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.