Saturday, June 14, 2025

Janaspandhan News

HomeHealth & FitnessHeart Attack : ಇವು ಹೃದಯಾಘಾತದ ಲಕ್ಷಣಗಳು ; ಇವನ್ನು ನಿರ್ಲಕ್ಷಸದಿರಿ.!
spot_img
spot_img

Heart Attack : ಇವು ಹೃದಯಾಘಾತದ ಲಕ್ಷಣಗಳು ; ಇವನ್ನು ನಿರ್ಲಕ್ಷಸದಿರಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack) ದಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇನ್ನೂ ಬಾಳಿ ಬದುಕಬೇಕಾದ ಯುವಜನತೆಯರು, ಸಣ್ಣ ವಯಸ್ಸಿನಲ್ಲಿಯೇ ಈ ಕಾಯಿಲೆಗೆ ಬಲಿಯಾಗುತ್ತಿರುವುದು, ನಿಜಕ್ಕೂ ನೋವುಂಟು ಮಾಡುತ್ತಿದೆ.

ವಿಶೇಷವಾಗಿ ಭಾರತದಲ್ಲಿ ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದ್ರೆ, ಒಂದು ಕಾಲದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ಸಮಸ್ಯೆಗಳು ಬರುತ್ತಿದ್ದವು.

ಇದನ್ನು ಓದಿ : Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?

ಸಾಮಾನ್ಯವಾಗಿ ವ್ಯಕ್ತಿಯು ಅನಾರೋಗ್ಯಕರ ಆಹಾರ, ಅವ್ಯವಸ್ಥೆಯ ಜೀವನಶೈಲಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಿಂದ ಹೃದಯಾಘಾತಕ್ಕೆ ಒಳಗಾಗುತ್ತಾನೆ.

ಹೃದಯಾಘಾತ (Heart Attack) ಅಂದ್ರೆ ಏನು.?

ಹೃದಯಕ್ಕೆ ರಕ್ತ ಸಂಚಲನೆ ಹಠಾತ್ ಆಗಿ ಬ್ಲಾಕ್ ಆಗುತ್ತದೆ. ಇದರ ಪ್ರತಿಫಲವಾಗಿ ಹೃದಯ ಸ್ತಂಭನ ಉಂಟಾಗಿ ಬಳಿಕ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ. ಇದನ್ನು ಹೃದಯಾಘಾತ (Heart Attack) ಎನ್ನುತ್ತಾರೆ.

ಇದನ್ನು ಓದಿ : Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!

ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಮೂರು ಬಾರಿ ಹೃದಯಾಘಾತವನ್ನು ಹೊಂದಬಹುದು. ಮೊದಲ ಮತ್ತು ಎರಡನೇ ಹೃದಯಾಘಾತ (Heart Attack) ದ ನಂತರ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಮತ್ತು ಜೀವನಶೈಲಿಯನ್ನು ಸುಧಾರಿಸಿದರೆ ವ್ಯಕ್ತಿಯು ಬದುಕಬಹುದು.

ಆದರೆ ಮೂರನೇ ಹೃದಯಾಘಾತದ ನಂತರ, ಹೃದಯವು ತುಂಬಾ ದುರ್ಬಲವಾಗುತ್ತದೆ, ನಾಲ್ಕನೇ ಹೃದಯಾಘಾತದಿಂದ ಬದುಕುಳಿಯುವುದು ತುಂಬಾ ಕಷ್ಟಕರವಾಗುತ್ತದೆ.

ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
Heart Attack ಲಕ್ಷಣಗಳು :
  • ಅಧಿಕ ಬೆವರು.
  • ಎದೆಯಲ್ಲಿ ತೀವ್ರವಾದ ನೋವು ಅಥವಾ ಒತ್ತಡ.
  • ಉಸಿರಾಟದಲ್ಲಿ ತೊಂದರೆ.
  • ದೌರ್ಬಲ್ಯ ಅಥವಾ ತಲೆತಿರುಗುವಿಕೆ.
  • ಎಡಗೈ, ಕುತ್ತಿಗೆ ಅಥವಾ ದವಡೆಯಲ್ಲಿ ನೋವು.
ಇದನ್ನು ಓದಿ : Video : ಕಂಠಪೂರ್ತಿ ಕುಡಿದು ಜನನಿಬಿಡ ರಸ್ತೆಯಲ್ಲಿ ಯುವತಿಯ ಡೊಂಬರಾಟ.!
ತಡೆಯಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ :
  • ತೂಕವನ್ನು ನಿಯಂತ್ರಣದಲ್ಲಿಡಿ.
  • ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿ.
  • ದೈನಂದಿನ ವ್ಯಾಯಾಮ ಮಾಡಿ.
  • ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಿ.
  • ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಿ.
  • ಹಣ್ಣುಗಳು, ತರಕಾರಿಗಳು ಮತ್ತು ಕಡಿಮೆ ಕೊಬ್ಬಿನ ಆಹಾರಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.
ಇದನ್ನು ಓದಿ : America : ಪೊಲೀಸ್‌ ಕಾರಿಗೆ ಬೆಂಕಿ : ಹಿಂಸಾರೋಪ ಪಡೆದ ವಲಸೆ ದಮನ ವಿರೋಧಿಸಿದ ಪ್ರತಿಭಟನೆ.!
ಹೃದಯಾಘಾತ (Heart Attack) ದ ನಂತರ ನಿಮ್ಮ ಆರೋಗ್ಯ ಈ ರೀತಿ ನೋಡಿಕೊಳ್ಳಿ :

ಒಮ್ಮೆ ಹೃದಯಾಘಾತವಾಗಿದ್ದರೆ, ಅವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಮತ್ತು ಅವರು ನೀಡುವ ಎಲ್ಲಾ ಸೂಚನೆಗಳನ್ನು ಅನುಸರಿಸಬೇಕು.

ಸರಿಯಾದ ಜೀವನಶೈಲಿ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ರೂಪಿಸುವ ಮೂಲಕ, ಆರೋಗ್ಯಕರ ಆಹಾರ ಸೇವಿಸುವ ಮೂಲಕ ಹೃದಯಾಘಾತ (Heart Attack) ದ ಅಪಾಯವನ್ನು ಕಡಿಮೆ ಮಾಡಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

Video : ಕಂಠಪೂರ್ತಿ ಕುಡಿದು ಜನನಿಬಿಡ ರಸ್ತೆಯಲ್ಲಿ ಯುವತಿಯ ಡೊಂಬರಾಟ.!

ಜನಸ್ಪಂದನ ನ್ಯೂಸ್‌, ಡೆಸ್ಕ್ :‌ ಯುವತಿಯೋರ್ವಳು ಕಂಠಪೂರ್ತಿ ಕುಡಿದು ನಗರದ ಜನನಿಬಿಡ ರಸ್ತೆಯಲ್ಲಿ ಡೊಂಬರಾಟ ಮಾಡುತ್ತಿರುವ ವಿಡಿಯೋ (Video) ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದಿನಬೆಳಗಾದರೂ ಪಾರ್ಟಿ – ಪಬ್‌ ಅಂತೇಲ್ಲಾ ಹೇಳಿ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿಯೋ, ಗಟಾರದಲ್ಲಿ ಅಥವಾ ತಿಪ್ಪೆಗುಂಡಿಯಲ್ಲಿ ಬಿದ್ದು ಹೊರಳಾಡುವವರ ಸಂಖ್ಯೆಗೇನು ಕಮ್ಮಿ ಇಲ್ಲ.

ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!

ಇತ್ತೀಚಿನ ಯುವತಿಯರಾಗಿರಲ್ಲಿ ಅಥವಾ ಮಹಿಳೆಯರಾಗಿರಲ್ಲಿ ಪಾರ್ಟಿ-ಪಬ್‍ ಅಂತ ಹೋಗಿ ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ತೇಲಾಡುತ್ತಾ, ಜೊತೆಗೆ ಒಂದಿಷ್ಟು ರಂಪಾಟ ಮಾಡಿದ ಹಲವಾರು ವಿಡಿಯೊ (Video) ಗಳು ಈ ಹಿಂದೆಯೂ ಸಹ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

ಇದೀಗ ಇದೇ ಸಾಲಿಗೆ ಸೇರಿದ ಒಂದು ವಿಡಿಯೋ (Video) ಸಾಮಾಜಿಕ ಜಾಣತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವತಿಯೋರ್ವಳು ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿಯೇ ಕುಳಿತು ಶೋ ಕೊಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನು ಓದಿ : Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?

ಡೆಹ್ರಾಡೂನ್‌ನ ರಾಯ್‌ಪುರದ ಜನನಿಬಿಡ ರಸ್ತೆಯಲ್ಲಿ ಯುವತಿಯೋರ್ವಳು ಕುಡಿದ ಮತ್ತಿನಲ್ಲಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ.

ರಾಯ್‌ಪುರದ ಜನನಿಬಿಡ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯೋಬ್ಬಳು ರಸ್ತೆಯಲ್ಲಾ ನಂದೆ ಎಂಬ ಬಾವದಲ್ಲಿ ಕುಳಿತ ಹಿನ್ನಲೆಯಲ್ಲಿ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ಓದಿ : Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!

ವೈರಲ್ ವಿಡಿಯೊದಲ್ಲಿ, ಕುಡಿದ ಮತ್ತಿನಲ್ಲಿರುವ ಯುವತಿ ಕಪ್ಪು ಬಣ್ಣದ ಸ್ಲಿವ್‍ಲೆಸ್‍ ಟಾಪ್ ಮತ್ತು ಡೆನಿಮ್ ಧರಿಸಿ ರಸ್ತೆಯ ಮಧ್ಯದಲ್ಲಿ ಕುಳಿತು ಹೈಡ್ರಾಮಾ ಮಾಡಿದ್ದಾಳೆ. ನಡುರಸ್ತೆಯಲ್ಲಿ ಕುಳಿತ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದನ್ನು ನೀವೂ ವಿಡಿಯೋ (Video) ದಲ್ಲಿ ನೋಡಬಹುದಾಗಿದೆ.

ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನಲೆಯಲ್ಲಿ ಅಲ್ಲಿದ ಓರ್ವ ಭದ್ರತಾ ಸಿಬ್ಬಂದಿ ಯುವತಿಗೆ ಪಕ್ಕಕ್ಕೆ ಸರಿಯುವಂತೆ ಹೇಳುತ್ತಾರೆ. ಆದರೂ ಯುವತಿ ಮಾತ್ರ ಅಲ್ಲಿಂದ ಕದಲಲ್ಲೇ ಇಲ್ಲ. ಅದೇ ವೇಳೆ 3/4 ಧರಿಸಿದ್ದ ಓರ್ವ ವ್ಯಕ್ತಿ ಆಗಮಿಸಿ ಯುವತಿಗೆ ರಸ್ತೆಯೀಬ ಎದ್ದೇಳುವಂತೆ ಹೇಳುತ್ತಾರೆ.

ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!

ಈ ವೇಳೆ 3/4 ಧರಿಸಿದ್ದ ವ್ಯಕ್ತಿಗೆ ಕೈ ಕೊಟ್ಟು ಎಬ್ಬಿಸಲು ಕೋರುತ್ತಾಳೆ. ವ್ಯಕ್ತಿಯ ಸಹಾಯದಿಂದ ಎದ್ದ ಯುವತಿ ಎನು ಆಗಿಯೇ ಇಲ್ಲವೇನೋ ಎಂಬಂತೆ ರಸ್ತೆ ಬದಿಯಿಂದ ನಡೆಯುತ್ತ ಸಾಗುವುದನ್ನು ದೃಶ್ಯ (Video) ತೋರಿಸುತ್ತೆ.

ಸದ್ಯ Pyara Uttarakhand प्यारा उत्तराखंड (@PyaraUKofficial) ಎಂಬ ಹೆಸರಿನ X ಫ್ಲಾಟ್‌ಫಾರಂನಲ್ಲಿ ಈ ಘಟನೆಯ ವಿಡಿಯೊ (Video) ಹಂಚಿಕೊಳ್ಳಲಾಗಿದ್ದು, ಈ ವಿಷಯದ ಬಗ್ಗೆ ಪೊಲೀಸ್ ಕ್ರಮ ಕೈಗೊಂಡಿರುವ ಯಾವುದೇ ವರದಿಗಳಿಲ್ಲ.

ವಿಡಿಯೋ (Video) :

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments