ಜನಸ್ಪಂದನ ನ್ಯೂಸ್, ಬೆಂಗಳೂರು : ಸಂಜೆ ವೇಳೆ ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು (Kiss) ಎಸ್ಕೇಪ್ ಅಗುತ್ತಿದ್ದ ಎಂಬ ಆರೋಪದ ಮೇಲೆ ಓರ್ವ ಕಾಮುಕ ವ್ಯಕ್ತಿ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ.
ಓರ್ವ ಕಾಮುಕ ಸಂಜೆ ವೇಳೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯರನ್ನು ಗಟ್ಟಿಯಾಗಿ ಹಿಡಿದು ತುಟಿಗೆ (Kiss) ಮುತ್ತಿಡುವ ಪರಾರಿಯಾಗುವ ಮೂಲಕ ತನ್ನ ಕಾಮಚೇಷ್ಟೆ ಮೆರೆದಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಒಬ್ಬಂಟಿಯಾಗಿ ಸಂಜೆ ವೇಳೆಯಲ್ಲಿ ವಾಕಿಂಗ್ ಮಾಡುವ ಮಹಿಳೆಯನ್ನು ಟಾರ್ಗೆಟ್ ಮಾಡಿ ಬಲವಂತವಾಗಿ ಗಟ್ಟಿಯಾಗಿ ತಬ್ಬಿಕೊಂಡು ತುಟ್ಟಿಗೆ ಮುತ್ತಿಟ್ಟು (Kiss) ತನ್ನ ಕಾಮಚೇಷ್ಟೆ ಮೆರೆಯುತ್ತಿದ್ದ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
ಮಹಿಳೆಯರ ತಕ್ಕ ಬುದ್ದಿ ಕಲಿಸುವ ಎಚ್ಚರಿಕೆಗೆ, ನನ್ನನ್ನು ಯಾರು ಬಂದು ಏನು ಮಾಡಕ್ಕಾಗಲ್ಲ ಎಂದು ಹೇಳುತ್ತಿದ್ದ ಕಾಮುಕ ವ್ಯಕ್ತಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಹೀಗೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬಂಟಿಯಾಗಿ ಸಂಜೆ ವೇಳೆಯಲ್ಲಿ ವಾಕಿಂಗ್ ಮಾಡುವ ಮಹಿಳೆಯರಿಗೆ ಮುತ್ತಿ (Kiss) ಡುತ್ತಿದ್ದ ಕಾಮುಕನ ಹೆಸರು ಮದನ್ ಎಂದು ಗೊತ್ತಾಗಿದೆ.
ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
ಬೆಂಗಳೂರು ನಗರದ ವಿವಿಧ ಉದ್ಯಾನಗಳು, ಸಣ್ಣ ಪಾರ್ಕ್‌ಗಳು, ಮೈದಾನಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಈ ಕಾಮುಕನ ಅಟ್ಟಹಾಸ ಮಿತಿ ಮೀರಿದ್ದು, ಕಳೆದ ಜೂನ್ 6 ರಂದು ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರು ಉತ್ತರ ವಿಭಾಗದ ಕಾಕ್ಸ್‌ಟೌನ್‌ನ ಮಿಲ್ಟನ್ ಪಾರ್ಕ್ ಬಳಿ ಈನ ಘಟನೆ ನಡೆದಿದೆ.
ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಪ್ರದೇಶದಲ್ಲಿ ಆರೋಪಿ ತನ್ನ ಕೀಳಮಟ್ಟದ ಮನಸ್ಸು ಪ್ರದರ್ಶಿಸಿದ್ದಾನೆ.
ಇದನ್ನು ಓದಿ : America : ಪೊಲೀಸ್ ಕಾರಿಗೆ ಬೆಂಕಿ : ಹಿಂಸಾರೋಪ ಪಡೆದ ವಲಸೆ ದಮನ ವಿರೋಧಿಸಿದ ಪ್ರತಿಭಟನೆ.!
ಮುತ್ತು (Kiss) ಕೊಟ್ಟು ಎಸ್ಕೆಪ್ ಆಗುತ್ತಿದ್ದ ಕಾಮುಕ :
ಆರೋಪಿಯು ಮುಗ್ದನಂತೆ ವಾಕಿಂಗ್ ಬಂದಿರುವ ಮಹಿಳೆಯರ ಹತಿರ ಹೋಗಿ ಒಮ್ಮಲೇ ಗಟ್ಟಿಯಾಗಿ ತಬ್ಬಿಕೊಂಡು ಬಲವಂತವಾಗಿ ತುಟಿಗೆ ಮುತ್ತು (Kiss) ಕೊಟ್ಟಿದ್ದಾನೆ ಎನ್ನಲಾಗಿದೆ. ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯನ್ನೂ ತಬ್ಬಿ ಮುತ್ತು (Kiss) ಕೊಟ್ಟಿದ್ದಾನೆ ಎಂದು ದೂರುಗಳು ದಾಖಲಾಗಿವೆ.
ಘಟನೆ ನಂತರ ಮಹಿಳೆಯರು ಆರೋಪಿ ಬುದ್ದಿ ಕಲಿಸುವುದಾಗಿ ಹೇಳುತ್ತಿದಂತೆಯೇ ‘ನೀವು ಯಾರಿಗೇ ಹೇಳಿದರೂ ಏನು ಆಗಲ್ಲ’ ಎಂದು ಬೆದರಿಕೆ ಹಾಕಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : Heart Attack : ಇವು ಹೃದಯಾಘಾತದ ಲಕ್ಷಣಗಳು ; ಇವನ್ನು ನಿರ್ಲಕ್ಷಸದಿರಿ.!
ಕಾಮುಕನನ್ನು ಬಂಧಿಸಿದ ಪೊಲೀಸರು :
ಈ ಬಗ್ಗೆ ತಡರಾತ್ರಿ ದೂರು ದಾಖಲಿಸಿಕೊಂಡ ಪುಲಕೇಶಿನಗರ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಾಣಸವಾಡಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಪೋಕ್ಸೋ (POCSO) ಮತ್ತು ಇತರ ಸಂಬಂಧಿತ ಕಲಂ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಸದ್ಯ ಪೊಲೀಸರು ಕಾಮುಕ ಮದನ್‌ನನ್ನು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಮದನ್ ಅತಿಹೆಚ್ಚು ಅಶ್ಲೀಲವಾದ ಚಿತ್ರ ನೋಡುತ್ತಿದ್ದ. ಬಳಿಕ ರಸ್ತೆಯಲ್ಲಿ ಬಂದು ಮಹಿಳೆಯರ ಮೇಲೆ ಈ ರೀತಿ ಮಾಡುತ್ತಿದ್ದ ಎನ್ನಲಾಗಿದ್ದು, ಇತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ತಿಂಗಳ ಹಿಂದೆ ಈ ವ್ಯಕ್ತಿ ಕೆಲಸ ಬಿಟ್ಟಿದ್ದ ಎಂದು ತಿಳಿದುಬಂದಿದೆ.
Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!
ಜನಸ್ಪಂದನ ನ್ಯೂಸ್, ಡೆಸ್ಕ್ : ನದಿಗೆ ಈಜಲು ತೆರಳಿದ 10 ಜನರಲ್ಲಿ 6 ಜನರು ನದಿಯ ಪಾಲಾದ ಘಟನೆಯೊಂದು ತೆಲಂಗಾಣ (Telangana) ದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಸಂಜೆ ತೆಲಂಗಾಣ (Telangana) ದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಬಳಿಯ ಮೇಡಿಗಡ್ಡ ಬ್ಯಾರೇಜ್ ಬಳಿಯ ಗೋದಾವರಿ ನದಿಯಲ್ಲಿ ಆರು ಯುವಕರು (ಬಾಲಕರು ಸೇರಿ) ಕಾಣೆಯಾಗುವುದರೊಂದಿಗೆ ದೊಡ್ಡ ದುರಂತ ಸಂಭವಿಸಿದೆ.
ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್ ; Doctor Arrest.
ದುರ್ಘಟನೆಯಲ್ಲಿ ಸಾವಿಗೀಡಾದ ದುರ್ದೈವಿಗಳನ್ನು ತೆಲಂಗಾಣ ಮತ್ತು ಆಂದ್ರ (Telangana & Andra) ಮೂಲಕ ಮಧುಸೂಧನ್ (18), ಪಟ್ಟಿ ಶಿವ ಮನೋಜ್ (15), ತೊಗರಿ ರಕ್ಷಿತ್ (13), ಸಾಗರ್ (16), ಬೊಲ್ಲೆದ್ಲಾ ರಾಮಚರಣ್ (17) ಮತ್ತು ಪಸುಲ ರಾಹುಲ್ (19) ಎಂದು ಗುರುತಿಸಲಾಗಿದೆ.
ಮಧು ಸುಧನ್ ಮತ್ತು ಅವರ ಸಹೋದರ ಶಿವ ಮನೋಜ್ ಮೊದಲು ಈಜಲು ನೀರಿಗೆ ಇಳಿದಿದ್ದಾರೆ. ಆಗ ಅವರು ಶೀಘ್ರದಲ್ಲೇ ನದಿಯಲ್ಲಿ ಮುಳುಗಲು ಪ್ರಾರಂಭಿಸಿದರು. ಮೃತರಿಗೆ ಸರಿಯಾಗಿ ಈಜಲು ಬರದಿದೇ ಇರಬಹುದು ಅಥವಾ ನೀರಿನ ಮಟ್ಟ ಸರಿಯಾಗಿ ತಿಳಿದಿರುವ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!
ಆಗ ಸ್ಥಳದಲ್ಲಿದ್ದ ಇತರ ನಾಲ್ವರು ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಟಿ ರಕ್ಷಿತ್ (13), ಕೆ ಸಾಗರ್ (16), ಕೊರುಟ್ಲಾದ ಬಿ ರಾಮ ಚರಣ್ ಮತ್ತು ಆಂಧ್ರಪ್ರದೇಶದ ಮೂಲದ ಪಿ. ರಾಹುಲ್ ಎನ್ನುವವರು ಮುಳಗುವವರನ್ನು ರಕ್ಷಿಸಲು ಒಬ್ಬರ ಬೆನ್ನು ಹಿಂದೆ ಮತ್ತೋಬ್ಬ ನೀರಿಗೆ ಹಾರಿದ್ದಾರೆ.
ದುರದೃಷ್ಟವಶಾತ್ ಅವರಲ್ಲಿ ಯಾರೂ ಜೀವಂತವಾಗಿ ಹೊರಬರಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮೃತ ದುರ್ದೈವಿಗಳೆಲ್ಲರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದರು ಎಂದು ತೀಳಿದು ಬಂದಿದ್ದು, ಒಂದು ಮನೆತನಕ್ಕೆ ಸೇರಿದವರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
ಮಾಹಿತಿ ಪಡೆದ ನಂತರ ಕಟಾರಂ (Telangana) ಡಿಎಸ್ಪಿ ರಾಮ್ ಮೋಹನ್ ರೆಡ್ಡಿ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆಯಲು ಪ್ರಯತ್ನಸಿದ್ದಾರೆ. (ಏಜೆನ್ಸಿಸ್)