ಜನಸ್ಪಂದನ ನ್ಯೂಸ್, ಡೆಸ್ಕ್ : ಪಿಕ್ನಿಕ್ (Picnic) ಗೆ ಹೋಗಿದ್ದ 11 ಯುವಕರಲ್ಲಿ 8 ಜನ ನದಿಯ ಪಾಲಾದ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ರಾಜಸ್ಥಾನದ ಟೋಂಕ್ ಜಿಲ್ಲೆಯ ಬನಾಸ್ ನದಿ ದಡಕ್ಕೆ ಜೈಪುರದ 11 ಜನರ ಗುಂಪು ಪಿಕ್ನಿಕ್ (Picnic) ಗೆ ಹೋಗಿದ್ದರು. ಈ ವೇಳೆ ಕೆಲವರು ನದಿಯಲ್ಲಿ ಸ್ನಾನ ಮಾಡಲೆಂದು ಇಳಿದಾಗ ಈ ದುರಂತ ಮಂಗಳವಾರ (ಜೂ.10) ಸಂಭವಿಸಿದೆ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
“ಜೈಪುರದ ಹನ್ನೊಂದು ವಯಸ್ಕರು ಇಲ್ಲಿಗೆ ಪಿಕ್ನಿಕ್ (Picnic) ಗಾಗಿ ಬಂದಿದ್ದರು. ಗುಂಪಿನ ಕೆಲವು ಜನರು ನದಿಗೆ ಇಳಿದು ಸ್ನಾನ ಮಾಡುವಾಗ ಈ ಅವಘಡ ಸಂಭವಿಸಿದ್ದು, ನದಿಯ ನೀರಿನಲ್ಲಿ ಮು ಇತರರು ಅವರನ್ನು ಉಳಿಸಲು ಪ್ರಯತ್ನಿಸಿದಾಗ ಅವರೂ ಮುಳುಗಿ ಮುಳುಗಿ ಸಾವನ್ನಪ್ಪಿದ್ದಾರೆ” ಎಂದು ಎಸ್‌ಪಿ ಸಾಂಗ್ವಾನ್ ಹೇಳಿದರು.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಜೀವಹಾನಿಗೆ ಸಂತಾಪ ಸೂಚಿಸಿದರು ಮತ್ತು ಅಧಿಕಾರಿಗಳಿಗೆ ಮಾಹಿತಿ ಬಂದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಹೇಳಿದರು.
ಇದನ್ನು ಓದಿ : America : ಪೊಲೀಸ್ ಕಾರಿಗೆ ಬೆಂಕಿ : ಹಿಂಸಾರೋಪ ಪಡೆದ ವಲಸೆ ದಮನ ವಿರೋಧಿಸಿದ ಪ್ರತಿಭಟನೆ.!
“ಟೋಂಕ್ ಜಿಲ್ಲೆಯ ಬನಾಸ್ (Banas) ನದಿಯಲ್ಲಿ ಮುಳುಗಿ ಸಾವನ್ನಪ್ಪಿದವರ ಸುದ್ದಿ ಅತ್ಯಂತ ದುಃಖಕರ ಮತ್ತು ನೋವಿನಿಂದ ಕೂಡಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಜಿಲ್ಲಾಡಳಿತ ಅಧಿಕಾರಿಗಳಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತಕ್ಷಣವೇ ಕೈಗೊಳ್ಳಲು ಸೂಚಿಸಲಾಯಿತು” ಎಂದು ಶರ್ಮಾ X ನಲ್ಲಿ ಬರೆದಿದ್ದಾರೆ.
“ಮೃತರ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ದುಃಖಿತ ಕುಟುಂಬಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ : Heart Attack : ಇವು ಹೃದಯಾಘಾತದ ಲಕ್ಷಣಗಳು ; ಇವನ್ನು ನಿರ್ಲಕ್ಷಸದಿರಿ.!
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟುವ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
“ಟೋಂಕ್‌ನ ಬನಾಸ್ ನದಿಯಲ್ಲಿ ಮುಳುಗಿ 8 ಯುವಕರು ಸಾವನ್ನಪ್ಪಿರುವುದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ. ದುಃಖಿತ ಪೋಷಕರು ಮತ್ತು ಸಂಬಂಧಿಕರಿಗೆ ನನ್ನ ಆಳವಾದ ಸಂತಾಪಗಳು. ಆಡಳಿತ ಮತ್ತು ಸರ್ಕಾರವು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು” ಎಂದು ಗೆಹ್ಲೋಟ್ X ನಲ್ಲಿ ಬರೆದಿದ್ದಾರೆ.
ಇದನ್ನು ಓದಿ : Kiss : ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್.!
“ಮೃತರ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ಕುಟುಂಬ ಸದಸ್ಯರಿಗೆ ತಾಳ್ಮೆ ಮತ್ತು ಶಕ್ತಿಯನ್ನು ನೀಡಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದರು.
Courtesy : ANI
America : ಪೊಲೀಸ್ ಕಾರಿಗೆ ಬೆಂಕಿ : ಹಿಂಸಾರೋಪ ಪಡೆದ ವಲಸೆ ದಮನ ವಿರೋಧಿಸಿದ ಪ್ರತಿಭಟನೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ವಲಸೆ ದಮನ ಕ್ರಮ ವಿರೋಧಿಸಿ ಅಮೆರಿಕ (America) ದಲ್ಲಿ ನಡೆದಿದ್ದ ಪ್ರತಿಭಟನೆಗಳು ಇದೀಗ ಹಿಂಸಾರೋಪ ತಳೆದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರಂಪ್ ಅವರ ವಲಸೆ ದಮನ ಕ್ರಮ ವಿರೋಧಿಸಿ ಅಮೆರಿಕ ಪ್ರತಿಭಟನೆಗಳು ಇದೀಗ ತೀವ್ರರೂಪ ಪಡೆದು ಹಿಂಸಾರೋಪ ತಳೆದಿದೆ.
ಅಮೆರಿಕ (America) ದ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು, ಪ್ರಮುಖ ಹೆದ್ದಾರಿಯನ್ನು ತಡೆದು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನಲೆಯಲ್ಲಿ ಲಾಸ್ ಏಂಜಲೀಸ್ (America) ನಲ್ಲಿ 2000 ವಿಶೇಷ ಪಡೆ ನಿಯೋಜಿಸಲಾಗಿದೆ.
ಇದನ್ನು ಓದಿ : Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!
ಅರೆ ಸೇನಾ ಪಡೆಗಳು ಅಶ್ರುವಾಯು, ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಇದೇ ವೇಳೇ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು, ಪ್ರಮುಖ ಹೆದ್ದಾರಿಯನ್ನು ತಡೆದು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.
ಸಾರ್ವಜನಿಕ ಉದ್ಯಾನವನದಿಂದ ಕುರ್ಚಿಗಳನ್ನು ತಂದು ತಾತ್ಕಾಲಿಕ ತಡೆಗೋಡೆಯನ್ನು ನಿರ್ಮೀಸಿದ ಪ್ರತಿಭಟನಾಕಾರರು, ಪೊಲೀಸ್ ಮತ್ತು ಅವರ ವಾಹನದ ಮೇಲೆ ಪ್ರತಿಭಟನಾಕಾರರು ಕಾಂಕ್ರೀಟ್, ಕಲ್ಲುಗಳನ್ನು ಎಸೆದಿದ್ದಾರೆ.
ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
ಸ್ವಯಂ ಚಾಲಿತ ವೇಮೊ ಕಾರುಗಳಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಆಕಾಶಕ್ಕೆ ದೊಡ್ಡ ಕಪ್ಪು ಹೊಗೆ ಆವರಿಸಿದ್ದು, ರಾಷ್ಟ್ರೀಯ ಗಾರ್ಡ್ ಪಡೆಗಳು ಬಂದೂಕು ಮತ್ತು ಗುರಾಣಿಗಳನ್ನು ಹಿಡಿದು ಪ್ರತಿಭಟನೆ ಹತ್ತಿಕ್ಕಲು ಹೆಣಗಾಡುತ್ತಿದ್ದಾರೆ.
ಈ ಮಧ್ಯ ಪೊಲೀಸ್ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಗುಂಡು ಹಾರಿಸಿದ್ದಾರೆ. ಕಾನೂನು ಜಾರಿಯನ್ನು ಅಡ್ಡಿಪಡಿಸಿದ ಆರೋಪ ಹೊತ್ತಿರುವ ಪ್ರಮುಖ ಯೂನಿಯನ್ (America) ನಾಯಕ ಸೇರಿದಂತೆ ಇನ್ನೂ ಅನೇಕರನ್ನು ಬಂಧಿಸಲಾಗಿದೆ.
ಇದನ್ನು ಓದಿ : Video : ಕಂಠಪೂರ್ತಿ ಕುಡಿದು ಜನನಿಬಿಡ ರಸ್ತೆಯಲ್ಲಿ ಯುವತಿಯ ಡೊಂಬರಾಟ.!
ಅಮೇರಿಕಾ (America) ಅಧ್ಯಕ್ಷ ಟ್ರಂಪ್ ಪ್ರತಿಭಟನಾಕಾರರಿಗೆ ಪ್ರಟಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದು, ಒಂದು ವೇಳೆ ಹೀಗೆಯೇ ಮುಂದುವರೆದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. (ಏಜೇನ್ಸಿಸ್)
ಅಮೇರಿಕಾ (America) ದಲ್ಲಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ವಿಡಿಯೋ :
Multiple Waymo vehicles set ablaze here in LA pic.twitter.com/p2iVDUbEIL
— Brendan Gutenschwager (@BGOnTheScene) June 9, 2025