ಜನಸ್ಪಂದನ ನ್ಯೂಸ್, ಡೆಸ್ಕ್ : ಸಿಯಾಟಿಕಾ (Sciatica) ಎಂಬುದು ದೇಹದ ಅತಿದೊಡ್ಡ ನರದ ಕಾಯಿಲೆ. ಇದು ಬೆನ್ನುಮೂಳೆಯಿಂದ ಪಾದಗಳವರೆಗೆ ಹರಡುತ್ತದೆ.
ಸಿಯಾಟಿಕಾ (Sciatica) ಉಂಟಾದಾಗ, ನೋವು ಕ್ರಮೇಣವಾಗಿ ತೀವ್ರವಾಗುತ್ತದೆ. ಸಿಯಾಟಿಕಾ ಎಂದರೆ ಸೊಂಟಕ್ಕೆ ಸಂಬಂಧಿಸಿದ ಯಾವುದೇ ನರಗಳು ಊದಿಕೊಳ್ಳುವ ಸಮಸ್ಯೆಯಾಗಿದ್ದು (Nerve swelling problem), ಇದರಿಂದಾಗಿ ಸೊಂಟದಿಂದ ಪಾದದವರೆಗೆ ಅಸಹನೀಯ ನೋವು ಕಾಣಿಸುತ್ತದೆ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಟ್ಟ ಜೀವನಶೈಲಿಯ (bad lifestyle) ಕಾರಣ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಯುವಜನರಲ್ಲಿ ಸಹ ಕಾಣಿಸುತ್ತಿದೆ.
ಶೀತ, ಭಾರ ಎತ್ತುವುದು, ಅತಿಯಾದ ನಡಿಗೆ, ಬೆನ್ನುಮೂಳೆಯಲ್ಲಿನ ಸಮಸ್ಯೆಗಳಿಂದಾಗಿ ನರದಲ್ಲಿ ಸಿಯಾಟಿಕ್ (Sciatica) ನೋವು ಉಂಟಾಗುತ್ತದೆ. ಈ ನೋವು ಸೊಂಟದ ಕೀಲುಗಳಿಂದ ಶುರುವಾಗಿ ಕ್ರಮೇಣ ಕಾಲಿನ ಕೆಳಭಾಗಕ್ಕೆ ಹರಡುತ್ತದೆ.
ಇದನ್ನು ಓದಿ : Heart Attack : ಇವು ಹೃದಯಾಘಾತದ ಲಕ್ಷಣಗಳು ; ಇವನ್ನು ನಿರ್ಲಕ್ಷಸದಿರಿ.!
ಜನರು ಈ ನೋವನ್ನು ಸೊಂಟ ನೋವು ಎಂದು ತಿಳಿದು ಮನೆಮದ್ದುಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಆದರೆ ಇದು ನರವೈಜ್ಞಾನಿಕ ಸಮಸ್ಯೆಯಾಗಿದ್ದು (Neurological problem), ಇದಕ್ಕಾಗಿ ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆ ಅಗತ್ಯವಾಗಿದೆ.
[Sciatica is a type of nerve pain caused by irritation or compression of the sciatic nerve, which runs from the lower back down through the buttocks and into the legs. This nerve pain can manifest as a sharp, burning, or tingling sensation in the affected area, often radiating from the lower back or buttock down the back of the leg.]
ಸಿಯಾಟಿಕಾ (Sciatica) ದ ಲಕ್ಷಣಗಳು :
- ಬೆನ್ನಿನ ಕೆಳಭಾಗದಿಂದ ಪಾದಗಳವರೆಗೆ ನೋವು.
- ನಡೆಯಲು ತೊಂದರೆ.
- ಸೂಜಿಯಂತಹ ನೋವು.
- ಕಾಲ್ಬೆರಳುಗಳು ಅಥವಾ ಪಾದಗಳಲ್ಲಿ ನೋವಿನ ಜುಮ್ಮೆನಿಸುವಿಕೆ (Tingling)
ಕಾಲು ಅಥವಾ ಪಾದದಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ (Weakness or numbness in the foot).
ಇದನ್ನು ಓದಿ : Kiss : ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್.!
ಸಿಯಾಟಿಕಾ (Sciatica) ಮತ್ತು ಇತರ ಕಾರಣಗಳಿಂದ ಬೆನ್ನು ನೋವು ಬರುತ್ತದೆ. ನಾವು ಕೆಲವು ಕ್ರಮಗಳನ್ನು ಅಳವಡಿಸಿಕೊಂಡರೆ, ಈ ನೋವು ಮತ್ತೆ ಬರದಂತೆ ತಡೆಯಬಹುದು.
Sciatica ನೋವನ್ನು ತಡೆಗಟ್ಟಲು ಈ ರೀತಿ ಮುನ್ನೆಚ್ಚರಿಕೆ ವಹಿಸಿ :
- ನೀವು ಕುರ್ಚಿಯ ಮೇಲೆ ಕುಶನ್ ಬಳಸಿ, ಅದು ಬೆನ್ನಿನ ಕೆಳಭಾಗಕ್ಕೆ ಆಧಾರ ನೀಡಿ.
- ನೀವು ಭಾರವಾದದ್ದನ್ನು ಎತ್ತುವ ಸಂದರ್ಭ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಬೆನ್ನನ್ನು ನೇರವಾಗಿ ಇರಿಸಬೇಕು (back should be kept straight). ಈ ರೀತಿ ಮಾಡಿದರೆ ಸೊಂಟ ಮತ್ತು ಕಾಲುಗಳ ಮೇಲೆ ಒತ್ತಡ ಬರುತ್ತದೆ.
- ಸಿಯಾಟಿಕಾದಿಂದ ತೊಂದರೆ ಅನುಭವಿಸುತ್ತಿದ್ದರೆ, ಎದ್ದು ಕುಳಿತುಕೊಳ್ಳಲು ಸರಿಯಾದ ಮಾರ್ಗವನ್ನು ಅಳವಡಿಸಿಕೊಳ್ಳಿ. ನಡೆಯಲು, ನಿಲ್ಲಲು ಮತ್ತು ಕುಳಿತುಕೊಳ್ಳಲು ಸರಿಯಾದ ಮಾರ್ಗವನ್ನು (correct way to stand and sit) ಅಳವಡಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ : Picnic : ಪಿಕ್ನಿಕ್‌ಗೆ ಹೋಗಿದ್ದ 11 ಯುವಕರಲ್ಲಿ 8 ಜನ ನದಿಯ ಪಾಲು.!
- ನೀವು ಧೂಮಪಾನದಿಂದ ದೂರವಿರಿ. ತೂಕವನ್ನು ನಿಯಂತ್ರಣದಲ್ಲಿಡಿ, ಇಲ್ಲದಿದ್ದರೆ ಈ ಸಮಸ್ಯೆ ಹೆಚ್ಚಾಗಬಹುದು.
- ಕುರ್ಚಿಯ ಮೇಲೆ ಕುಳಿತ ವೇಳೆ ಬೆನ್ನನ್ನು ಕುರ್ಚಿಯ ಮೇಲೆ ಸರಿಯಾಗಿ ಇರಿಸಬೇಕು. ಬೆನ್ನಿಗೆ ಬೆಂಬಲವಿರುವ ಕುರ್ಚಿಯನ್ನು (Chair with back support) ಬಳಸುವುದು ಸರಿ.
- ನೀವು ಏರೋಬಿಕ್ ವ್ಯಾಯಾಮ ಮಾಡಿರಿ. ಈ ವ್ಯಾಯಾಮವು ಹೊಟ್ಟೆ ಮತ್ತು ಬೆನ್ನುಮೂಳೆಯ ಸ್ನಾಯುಗಳಿಗೆ ಶಕ್ತಿಯನ್ನು ನೀಡುತ್ತದೆ.
Picnic : ಪಿಕ್ನಿಕ್‌ಗೆ ಹೋಗಿದ್ದ 11 ಯುವಕರಲ್ಲಿ 8 ಜನ ನದಿಯ ಪಾಲು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪಿಕ್ನಿಕ್ (Picnic) ಗೆ ಹೋಗಿದ್ದ 11 ಯುವಕರಲ್ಲಿ 8 ಜನ ನದಿಯ ಪಾಲಾದ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ರಾಜಸ್ಥಾನದ ಟೋಂಕ್ ಜಿಲ್ಲೆಯ ಬನಾಸ್ ನದಿ ದಡಕ್ಕೆ ಜೈಪುರದ 11 ಜನರ ಗುಂಪು ಪಿಕ್ನಿಕ್ (Picnic) ಗೆ ಹೋಗಿದ್ದರು. ಈ ವೇಳೆ ಕೆಲವರು ನದಿಯಲ್ಲಿ ಸ್ನಾನ ಮಾಡಲೆಂದು ಇಳಿದಾಗ ಈ ದುರಂತ ಮಂಗಳವಾರ (ಜೂ.10) ಸಂಭವಿಸಿದೆ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
“ಜೈಪುರದ ಹನ್ನೊಂದು ವಯಸ್ಕರು ಇಲ್ಲಿಗೆ ಪಿಕ್ನಿಕ್ (Picnic) ಗಾಗಿ ಬಂದಿದ್ದರು. ಗುಂಪಿನ ಕೆಲವು ಜನರು ನದಿಗೆ ಇಳಿದು ಸ್ನಾನ ಮಾಡುವಾಗ ಈ ಅವಘಡ ಸಂಭವಿಸಿದ್ದು, ನದಿಯ ನೀರಿನಲ್ಲಿ ಮು ಇತರರು ಅವರನ್ನು ಉಳಿಸಲು ಪ್ರಯತ್ನಿಸಿದಾಗ ಅವರೂ ಮುಳುಗಿ ಮುಳುಗಿ ಸಾವನ್ನಪ್ಪಿದ್ದಾರೆ” ಎಂದು ಎಸ್‌ಪಿ ಸಾಂಗ್ವಾನ್ ಹೇಳಿದರು.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಜೀವಹಾನಿಗೆ ಸಂತಾಪ ಸೂಚಿಸಿದರು ಮತ್ತು ಅಧಿಕಾರಿಗಳಿಗೆ ಮಾಹಿತಿ ಬಂದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಹೇಳಿದರು.
ಇದನ್ನು ಓದಿ : America : ಪೊಲೀಸ್ ಕಾರಿಗೆ ಬೆಂಕಿ : ಹಿಂಸಾರೋಪ ಪಡೆದ ವಲಸೆ ದಮನ ವಿರೋಧಿಸಿದ ಪ್ರತಿಭಟನೆ.!
“ಟೋಂಕ್ ಜಿಲ್ಲೆಯ ಬನಾಸ್ (Banas) ನದಿಯಲ್ಲಿ ಮುಳುಗಿ ಸಾವನ್ನಪ್ಪಿದವರ ಸುದ್ದಿ ಅತ್ಯಂತ ದುಃಖಕರ ಮತ್ತು ನೋವಿನಿಂದ ಕೂಡಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಜಿಲ್ಲಾಡಳಿತ ಅಧಿಕಾರಿಗಳಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತಕ್ಷಣವೇ ಕೈಗೊಳ್ಳಲು ಸೂಚಿಸಲಾಯಿತು” ಎಂದು ಶರ್ಮಾ X ನಲ್ಲಿ ಬರೆದಿದ್ದಾರೆ.
“ಮೃತರ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ದುಃಖಿತ ಕುಟುಂಬಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ : Heart Attack : ಇವು ಹೃದಯಾಘಾತದ ಲಕ್ಷಣಗಳು ; ಇವನ್ನು ನಿರ್ಲಕ್ಷಸದಿರಿ.!
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟುವ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
“ಟೋಂಕ್‌ನ ಬನಾಸ್ ನದಿಯಲ್ಲಿ ಮುಳುಗಿ 8 ಯುವಕರು ಸಾವನ್ನಪ್ಪಿರುವುದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ. ದುಃಖಿತ ಪೋಷಕರು ಮತ್ತು ಸಂಬಂಧಿಕರಿಗೆ ನನ್ನ ಆಳವಾದ ಸಂತಾಪಗಳು. ಆಡಳಿತ ಮತ್ತು ಸರ್ಕಾರವು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು” ಎಂದು ಗೆಹ್ಲೋಟ್ X ನಲ್ಲಿ ಬರೆದಿದ್ದಾರೆ.
ಇದನ್ನು ಓದಿ : Kiss : ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್.!
“ಮೃತರ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ಕುಟುಂಬ ಸದಸ್ಯರಿಗೆ ತಾಳ್ಮೆ ಮತ್ತು ಶಕ್ತಿಯನ್ನು ನೀಡಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದರು.
Courtesy : ANI