ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆ ಎನ್ನುವುದು ಮಾನವನ ಮೂಲಭೂತ ಅಗತ್ಯವಾಗಿದ್ದು, ಸ್ವಂತ ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಆಸೆ. ಈ ಆಸೆ ಈಡೇರಿಸಲು ಕೇಂದ್ರ ಸರ್ಕಾರವು “ಪ್ರಧಾನ ಮಂತ್ರಿ ಅವಾಸ ಯೋಜನೆ” (PMAY) ಪ್ರಾರಂಭಿಸಿದೆ.
ಕೇಂದ್ರ ಸರ್ಕಾರ Pradhan Mantri Awas Yojana ಯೋಜನೆ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗಾಗಿ ಮನೆ ನಿರ್ಮಿಸಿ ಕೊಡುತ್ತಿದೆ.
ಇದನ್ನು ಓದಿ : Castor oil : ಈ 1 ಎಣ್ಣೆಯ ಸ್ನಾನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ.?
ಇನ್ನೂ ಅರ್ಜಿ ಸಲ್ಲಿಸದವರಿಗೆ ಸಿಹಿ ಸುದ್ದಿಯೊಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಯ ನೋಂದಣಿ ಗಡುವನ್ನು ಗ್ರಾಮೀಣ ಮತ್ತು ನಗರ ಫಲಾನುಭವಿಗಳಿಗೆ ಡಿಸೆಂಬರ್ 2025ರವರೆಗೆ ವಿಸ್ತರಿಸಲಾಗಿದೆ.
ಹಾಗಾದರೆ ಏನಿದು ಯೋಜನೆ? ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ಮುಂತಾದ ವಿವರ ಇಲ್ಲಿದೆ.
ಇನ್ನೂ ಸರ್ಕಾರ ನಿರ್ಮಿಸಿ ಕೊಡುವ ಈ ಮನೆ ಅಗತ್ಯ ಮೂಲ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಶೌಚಾಲಯ, ಎಲ್‌ಪಿಜಿ ಕನೆಕ್ಷನ್, ವಿದ್ಯುತ್ ಸಂಪರ್ಕ ಮತ್ತು ನೀರಿನ ಸೌಲಭ್ಯ (Electricity connection and water facility) ಹೊಂದಿರುತ್ತದೆ.
ಇದನ್ನು ಓದಿ : HFWS : ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ನಗರ ಮತ್ತು ಗ್ರಾಮೀಣ ಎನ್ನುವ ಎರಡು ವಿಧವಿದೆ.
* ನಗರ ವ್ಯಾಪ್ತಿಯ ಅರ್ಹತೆ :
ವಾರ್ಷಿಕ ಆದಾಯ :
- ₹3 ಲಕ್ಷದವರೆಗೆ, ₹3-6 ಲಕ್ಷ, ಅಥವಾ ₹6-9 ಲಕ್ಷದವರೆಗೆ ಆದಾಯ ಇರುವ ಕುಟುಂಬಗಳು.
- ಭಾರತದ ಯಾವುದೇ ಭಾಗದಲ್ಲಿ ಪಕ್ಕಾ ಮನೆ ಹೊಂದಿಲ್ಲದಿರುವುದು (Not having a permanent home).
- ನಗರದ ಅನೌಪಚಾರಿಕ ವಸತಿ ಪ್ರದೇಶಗಳಲ್ಲಿ ಅಥವಾ ಕೊಳೆಗೇರಿಗಳಲ್ಲಿ ವಾಸಿಸುವವರು ಸಹ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
* PMAY ನಗರಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ PMAY- U 2.0 ವೆಬ್‌ಸೈಟ್‌ಗೆ ಭೇಟಿ ನೀಡಿ.
ಮುಖ ಪುಟದಲ್ಲಿ ‘Apply for PMAY-U 2.0’ ಬಟನ್ ಒತ್ತಿರಿ.
ಇದನ್ನು ಓದಿ : Tongue : ನಿಮ್ಮ ನಾಲಿಗೆ ಬಣ್ಣವೇ ತಿಳಿಸುತ್ತೇ ನಿಮ್ಮ ಆರೋಗ್ಯ.!
ಮಾರ್ಗಸೂಚಿಗಳನ್ನು ಓದಿ.
- ‘Click to Proceed’ ಕ್ಲಿಕ್ ಮಾಡಿ.
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ‘Proceed’ ಕ್ಲಿಕ್ ಮಾಡಬೇಕು.
- ಅರ್ಹತಾ ಫಾರ್ಮ್ ಭರ್ತಿ ಮಾಡಿ, ‘Eligibility Check’ ಕ್ಲಿಕ್ ಮಾಡಬೇಕು.
- ಆಧಾರ್ ನಂಬರ್ ನಮೂದಿಸಿ, ನೋಂದಾಯಿತ ಮೊಬೈಲ್‌ಗೆ ಬಂದ OTP ಮೂಲಕ ಪರಿಶೀಲಿಸಬೇಕು.
- ಅರ್ಜಿ ಫಾರ್ಮ್ ಪೂರ್ಣಗೊಳಿಸಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಕ್ಯಾಪ್ಚಾ ಕೋಡ್ ನಮೂದಿಸಿ, ‘Save’ ಕ್ಲಿಕ್ ಮಾಡಿ. ಅರ್ಜಿಯನ್ನು ಮುದ್ರಿಸಿಡಿ.
ಇದನ್ನು ಓದಿ : Liver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್ ಈ 1 ಆಹಾರ ಪದಾರ್ಥ.!
* ಗ್ರಾಮೀಣ ವ್ಯಾಪ್ತಿ ಅರ್ಹತೆ :
- ಮನೆಯಿಲ್ಲದ ಅಥವಾ ಕಚ್ಚಾ ಮನೆಯಲ್ಲಿ ವಾಸಿಸುವ ಕುಟುಂಬ
- ಡೇಟಾದಲ್ಲಿ ಪಟ್ಟಿ ಮಾಡಲ್ಪಟ್ಟವರು.
- ಕಾರು, ₹50,000ಕ್ಕಿಂತ ಹೆಚ್ಚಿನ ಕಿಸಾನ್ ಕ್ರೆಡಿಟ್ ಕಾರ್ಡ್, ಪಕ್ಕಾ ಮನೆ, ಮೋಟಾರ್ ಸೈಕಲ್, ಟ್ರಾಕ್ಟರ್, ಕೃಷಿ ಉಪಕರಣ, ರೆಫ್ರಿಜರೇಟರ್, ಆದಾಯ ತೆರಿಗೆ/ ವೃತ್ತಿಪರ ತೆರಿಗೆ ಪಾವತಿಸುವವರು, ಸರ್ಕಾರಿ ಉದ್ಯೋಗಿಗಳು, ಲ್ಯಾಂಡ್‌ಲೈನ್ ಫೋನ್ ಅಥವಾ ದೊಡ್ಡ ಭೂಮಿ ಹೊಂದಿರುವವರು ಯೋಜನೆಗೆ ಅರ್ಹರಲ್ಲ.
ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್ ತಾರೆಯ ಹತ್ಯೆ.!
* ಅಗತ್ಯ ದಾಖಲೆಗಳು :
- ಆಧಾರ್ ಕಾರ್ಡ್ (ಸ್ವತಃ ಮತ್ತು ಕುಟುಂಬದ ಎಲ್ಲ ಸದಸ್ಯರದ್ದು)
- ಭೂಮಿ ಮಾಲೀಕತ್ವ ದಾಖಲೆಗಳು
- ಆಧಾರ್- ಲಿಂಕ್ ಮಾಡಿದ ಬ್ಯಾಂಕ್ ಖಾತೆ ವಿವರ
- ಸ್ವಚ್ಛ ಭಾರತ್ ಮಿಷನ್ (SBM) ಸಂಖ್ಯೆ
- ಮಾನ್ಯ ಆದಾಯ ಪುರಾವೆ
- MGNREGA ಜಾಬ್ ಕಾರ್ಡ್
- ಪಕ್ಕಾ ಮನೆ ಇಲ್ಲ ಎಂಬ ಅಫಿಡವಿಟ್
* PMAY ಗ್ರಾಮೀಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಿಕೆ :
ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅಧಿಕೃತ PMAY-U 2.0 ವೆಬ್‌ಸೈಟ್‌ಗೆ ಭೇಟಿ ನೀಡಿ.
- ವೈಯಕ್ತಿಕ ಮಾಹಿತಿ (Personal information) ಭರ್ತಿ ಮಾಡಬೇಕು. ಬಳಿಕ ಒಪ್ಪಿಗೆ ಫಾರ್ಮ್ ಅಪ್‌ಲೋಡ್ ಮಾಡಿ, ‘Search’ ಕ್ಲಿಕ್ ಮಾಡಿ.
- ಶೋಧ ಫಲಿತಾಂಶದಿಂದ ನಿಮ್ಮ ಹೆಸರನ್ನು ಆಯ್ಕೆ ಮಾಡಿ, ‘Select to Register’ ಕ್ಲಿಕ್ ಮಾಡಿ.
- ಫಲಾನುಭವಿಯ ವಿವರಗಳು ಸ್ವಯಂ ಭರ್ತಿಯಾಗುತ್ತವೆ ; ಬ್ಯಾಂಕ್ ಖಾತೆ ವಿವರ ಮತ್ತು ಯೋಜನೆ ಸಂಗಮ ಮಾಹಿತಿಯನ್ನು ಹಸ್ತಚಾಲಿತವಾಗಿ ನಮೂದಿಸಿ.
- ಇನ್ನೂ ಅರ್ಜಿಯ ಅಂತಿಮ ವಿಭಾಗವನ್ನು ಗೊತ್ತುಪಡಿಸಿದ ಕಚೇರಿ ಸಿಬ್ಬಂದಿ ಪೂರ್ಣಗೊಳಿಸುವರು
* ಆಫ್‌ಲೈನ್ ಮೂಲಕವೂ ನೀವು ಅರ್ಜಿ ಸಲ್ಲಿಬಹುದು. ಇದಕ್ಕಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (Common Service Center) ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ 1800-11-3377, 1800-11-3388 ನಂಬರ್‌ಗೆ ಕರೆ ಮಾಡಿ.
ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!
2015ರ ಜೂನ್‌ನಲ್ಲಿ ಪ್ರಾರಂಭವಾದ ಈ ಯೋಜನೆ ಎಲ್ಲ ಅರ್ಹ ನಗರ ಫಲಾನುಭವಿಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳನ್ನು ಒದಗಿಸುವ ಗುರಿ ಹೊಂದಿದೆ.
Source : PMAY
ಫೋನ್ ಪೇ ಮೂಲಕ ಲಂಚ ; ಲೋಕಾಯುಕ್ತ ಬಲೆಗೆ ಅಧಿಕಾರಿ.!
ಜನಸ್ಪಂದನ ನ್ಯೂಸ್, ಯಾದಗಿರಿ : ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಅಧಿಕಾರಿ ಬಿದ್ದಿರುವ ಘಟನೆ ಯಾದಗಿರಿ (Yadagiri) ಯಲ್ಲಿ ನಡೆದಿದೆ..
ಯಾದಗಿರಿ ತೋಟಗಾರಿಕೆ ಸಹಾಯಕ ನಿರ್ದೇಶಕ (Assistant Director of Horticulture, Yadgiri) ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.
ತೋಟಗಾರಿಕೆ ಸಹಾಯಕ ನಿರ್ದೇಶಕ ಅಧಿಕಾರಿ ಶಿವದತ್ತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈರುಳ್ಳಿ ಶೆಡ್ ನಿರ್ಮಾಣದ (Construction of onion shed) ಸಬ್ಸಿಡಿ ಹಣದಲ್ಲಿ 20 ಸಾವಿರ ರೂ. ಹಣ ಬೇಡಿಕೆ ಇಟ್ಟು ಬಳಿಕ 5 ಸಾವಿರ ರೂ. ಫೋನ್ ಪೇ ಮೂಲಕ ಹಣವನ್ನು ಪಡೆದಿದ್ದ.
ಇದನ್ನು ಓದಿ : Health : ನೀವು ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.
ಬದ್ದೆಪಲ್ಲಿ ಗ್ರಾಮದ ರೈತರೊಬ್ಬರು ಈರುಳ್ಳಿ ಶೆಡ್ ನಿರ್ಮಾಣ ಮಾಡಿದ್ದರು. ಸರಕಾರದಿಂದ ಎಂಬತ್ತು ಸಾವಿರ ರೂ. ಸಬ್ಸಿಡಿ ಹಣ ಬಂದಿತ್ತು. ಈ ಹಣದಲ್ಲಿ ಅಧಿಕಾರಿಯು ಸುಮಾರು 20 ಸಾವಿರ ರೂ. ಬೇಡಿಕೆ (demand) ಇಟ್ಟಿದ್ದನು.
ರೈತನ ಬಳಿ ಇಂದು (ಗುರುವಾರ) ಅಧಿಕಾರಿಯು ಹಣ ಪಡೆಯಲು ಫೋನ್ ಪೇ ನಂಬರ್ ಕೊಟ್ಟಿದ್ದನು. ಆ ನಂಬರಿಗೆ ರೈತ 5 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಿದ್ದರು.
ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?
ಅಲ್ಲದೇ ರೈತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಹಿನ್ನಲೆ, ಯಾದಗಿರಿಯ ಅಂಬೇಡ್ಕರ್ ನಗರದಲ್ಲಿರುವ ತೋಟಗಾರಿಕೆ ಸಹಾಯಕ ನಿರ್ದೇಶಕ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು.