Saturday, June 14, 2025

Janaspandhan News

HomeJobISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img

ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಲ್ಲಿ ಖಾಲಿ ಇರುವ ವಿವಿಧ ಶಾಖೆಗಳಲ್ಲಿ ಒಟ್ಟು 320 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌(Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಇಸ್ರೋ ಅಧಿಕೃತ ವೆಬ್‌ಸೈಟ್‌ (ISRO Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!
ISRO ದಲ್ಲಿರುವ ಹುದ್ದೆಗಳ ಮಾಹಿತಿ :
  • ನೇಮಕಾತಿ ಸಂಸ್ಥೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO).
  • ಹುದ್ದೆಗಳ ಹೆಸರು : ಸೈಂಟಿಸ್ಟ್/ಎಂಜಿನಿಯರ್.
  • ಹುದ್ದೆಗಳ ಸಂಖ್ಯೆ : 320.
ISRO ದಲ್ಲಿರುವ ಹುದ್ದೆಗಳ ಹೆಸರು :
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್).
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಮೆಕ್ಯಾನಿಕಲ್).
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್).
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) – ಪಿಆರ್‌ಎಲ್.
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) – ಪಿಆರ್‌ಎಲ್.
ಇದನ್ನು ಓದಿ : Kiss : ರಸ್ತೆಯಲ್ಲಿಯೇ ಮಹಿಳೆಗೆ ಮುತ್ತಿಟ್ಟು ಪರಾರಿಯಾದ ಬೈಕ್‌ ಸವಾರ.!
ISRO ದಲ್ಲಿರುವ ಹುದ್ದೆಗಳ ಸಂಖ್ಯೆ :
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) : 113 ಹುದ್ದೆಗಳು.
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಮೆಕ್ಯಾನಿಕಲ್) : 160 ಹುದ್ದೆಗಳು.
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) : 44 ಹುದ್ದೆಗಳು.
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) – ಪಿಆರ್‌ಎಲ್ : 02 ಹುದ್ದೆಗಳು.
  • ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) – ಪಿಆರ್‌ಎಲ್ : 01 ಹುದ್ದೆ.
ISRO ವಿದ್ಯಾರ್ಹತೆ :
  • ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಬಿಇ ಅಥವಾ ಬಿ.ಟೆಕ್ ಪದವಿ (BE or B.Tech degree) ಹೊಂದಿರಬೇಕು.
ಇದನ್ನು ಓದಿ : Sexual harassment : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ; ಡ್ಯಾನ್ಸ್ ಮಾಸ್ಟರ್ ಅರೆಸ್ಟ್.!
ಅರ್ಜಿ ಶುಲ್ಕ :

ಎಲ್ಲಾ ಅಭ್ಯರ್ಥಿಗಳು : ಎಲ್ಲಾ ಹುದ್ದೆಗಳಿಗೆ ಅರ್ಜಿ ಶುಲ್ಕ 250 ರೂ. (ಪ್ರತಿ ಅರ್ಜಿಗೆ 750 ರೂ.ಗಳನ್ನು ಸಂಸ್ಕರಣಾ ಶುಲ್ಕ)

Note : ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಸಂಸ್ಕರಣಾ ಶುಲ್ಕ ಮರುಪಾವತಿಸಲಾಗುತ್ತದೆ. [ಮಹಿಳೆಯರು, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕರಿಗೆ (For Women, SC, ST, PwBD, Ex-Servicemen) ಪೂರ್ಣ ಮರುಪಾವತಿ ಇರಲಿದೆ].

ಅರ್ಜಿ ಸಲ್ಲಿಸುವುದು ಹೇಗೆ?
  • ಮೊದಲು ಇಸ್ರೋ ವೆಬ್‌ಸೈಟ್‌ಗೆ ಹೋಗಿ.
  • ನೇಮಕಾತಿ ವಿಭಾಗದಲ್ಲಿ ನೀಡಿರುವ Link ಮೇಲೆ Click ಮಾಡಿ.
  • NCS ಪೋರ್ಟಲ್‌ನಲ್ಲಿ ನೋಂದಾಯಿಸಿ.
  • ಈಗ ‘Apply Now’ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
  • ನಿಮ್ಮ ದಾಖಲೆಗಳನ್ನು Upload ಮಾಡಿ ಮತ್ತು ಶುಲ್ಕವನ್ನು ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿದ ನಂತರ ಒಂದು ಕಾಪಿಯನ್ನು Print ತೆಗೆದಿಟ್ಟುಕೊಳ್ಳಿ.
ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.
ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?
  • ಲಿಖಿತ ಪರೀಕ್ಷೆ (Written Exam) :

>> ಇದರಲ್ಲಿ ತಾಂತ್ರಿಕ ಮತ್ತು ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.’

  • ಸಂದರ್ಶನ (Interveiw) :

>> ಇದರಲ್ಲಿ ನಿಮ್ಮ ಚಿಂತನೆ, ತಾಂತ್ರಿಕ ತಿಳುವಳಿಕೆ ಮತ್ತು ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ : 16 ಜೂನ್ 2025.
ಇದನ್ನು ಓದಿ : Yadagiri : ಫೋನ್ ಪೇ ಮೂಲಕ ಲಂಚ ; ಲೋಕಾಯುಕ್ತ ಬಲೆಗೆ ಅಧಿಕಾರಿ.!
ಪ್ರಮುಖ ಲಿಂಕ್‌ (Link) :
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ (Fire) ಹಚ್ಚಿಕೊಂಡ ಘಟನೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣ (Social network) ದಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫಾನಾ ಠಾಣೆ ವ್ಯಾಪ್ತಿಯ ಅಮ್ದರಿಯಾ ಎಂಬಲ್ಲಿ ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ (Fire) ಹಚ್ಚಿಕೊಂಡ ಘಟನೆ ನಡೆದಿದೆ.

ಇದನ್ನು ಓದಿ : ಬೇರೊಬ್ಬಳೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಿಬಿದ್ದ ಲವರ್ ; ಪ್ರೇಯಸಿ ಮಾಡಿದ್ದೇನು ಗೊತ್ತಾ? Video ನೋಡಿ

ಹೀಗೆ ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ವಿಡಿಯೋ ಸಾಮಾಜಿಕ ಜಾಲತಾಣ (Social network) ದಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫಾನಾ ಠಾಣೆ (Fefana Station) ವ್ಯಾಪ್ತಿಯ ಅಮ್ದರಿಯಾ ಎಂಬಲ್ಲಿ ಯುವತಿ ಮದುವೆಗೆ ಒಪ್ಪದಿದ್ದಕ್ಕೆ ಈ ಯುವಕ ಆಕೆಯ (ಯುವತಿಯ) ಮನೆಯ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!

ಯುವತಿಯ ಮನೆಗೆ ಕೆಲಸ ಮುಗಿಸಿ ನೇರವಾಗಿ ಬಂದ ಯುವಕ, ಪೆಟ್ರೋಲ್ ಸುರಿಕೊಂಡು ಮದುವೆಯಾಗಲು ಒಪ್ಪುವಂತೆ ಒತ್ತಡ (Pressure) ಹೇರಿದ್ದಾನೆ. ಆಗ ಯುವತಿಯು ಯುವಕನ ಬೇಡಿಕೆಯನ್ನು ನಿರಾಕರಿಸಿದ್ದಾರೆ.

ಮದುವೆಗೆ ಯುವತಿ ನಿರಾಕರಿಸಿದ ಹಿನ್ನಲೆಯಲ್ಲಿ ಕೋಪಗೊಂಡ ಯುವಕ ಮನೆಯ ಹೊರಗೆ ಪೆಟ್ರೋಲ್ (Petrol) ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social network) ವೈರಲ್‌ ಆಗಿದೆ.

ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!

ಇನ್ನು ಸಿಟ್ಟಿನ ಭರದಲ್ಲಿ ಬೆಂಕಿ ಹಚ್ಚಿಕೊಂಡ ಯುವಕನ ರಕ್ಷಣೆಗೆ ಸ್ಥಳದಲ್ಲಿದ್ದವರು ಪ್ರಯತ್ನಿಸಿದ್ದಾರೆ. ಆದರೆ ಅದಾಗಲೇ ಬೆಂಕಿ ಮೈಯಲ್ಲಾ (body is on fire.) ಹರಡಿದ ಪರಿಣಾಮ ಸುಮ್ಮನಾದೆವೂ ಎಂದು ಹೇಳಿದ್ದಾರೆ.

ಸದ್ಯ ತೀವ್ರವಾಗಿ ಸುಟ್ಟಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಗಂಭೀರ ಸ್ವರೂಪದ ಗಾಯಗಾಳಾದ ಪರಿಣಾಮ ಯುವಕನನ್ನು ವಾರಣಾಸಿಯ ಬಿಎಚ್‌ಯು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನು ಓದಿ : Sexual harassment : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ; ಡ್ಯಾನ್ಸ್ ಮಾಸ್ಟರ್ ಅರೆಸ್ಟ್.!

ಯುವಕ ಕೂಗಾಡುತ್ತ, ಬೆಂಕಿ ಹಚ್ಚಿಕೊಳ್ಳುವ ಸಂಪೂರ್ಣ ಘಟನೆಯ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಬಲ್ಲಿಯಾ ಪೊಲೀಸರು, ತನಿಖೆ ನಡೆಯುತ್ತಿದೆ, ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.

ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?
ಬೆಂಕಿ (‌Fire) ಹಚ್ಚಿಕೊಂಡ ಯುವಕನ ವೈರಲ್ ವಿಡಿಯೋ :

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments