Saturday, June 14, 2025

Janaspandhan News

HomeHealth & FitnessLiver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್‌ ಈ 1 ಆಹಾರ ಪದಾರ್ಥ.!
spot_img
spot_img

Liver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್‌ ಈ 1 ಆಹಾರ ಪದಾರ್ಥ.!

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಹದ ಒಂದು ಪ್ರಮುಖ ಭಾಗಗಳಲ್ಲಿ ಲಿವರ್‌ (Liver) ಒಂದು. ಇದನ್ನು ದೇಹದ ರಾಸಾಯನಿಕ ಶಾಲೆ (Body chemistry school) ಎಂದೂ ಕರೆಯಲಾಗುತ್ತದೆ.

ಲಿವರ್ ದೇಹದೊಳಗೆ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವುದು. ಯಕೃತ್ತು (Liver) ಪಿತ್ತರಸವನ್ನು ಉತ್ಪಾದಿಸಿದರೆ ಇದು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವುದು (Helping to digest fat).

ಇದನ್ನು ಓದಿ : NH : ಪುಣೆ‌ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ; 3 ಸಾವು.!

ದೇಹವನ್ನು ಪ್ರವೇಶಿಸುವ ವಿಷಕಾರಿ ವಸ್ತುಗಳನ್ನು ನಿರುಪದ್ರವವಾಗಿಸುವ ಲಿವರ್, ದೇಹದಿಂದ ಅವುಗಳನ್ನು ತೆಗೆದುಹಾಕುತ್ತದೆ. ಲಿವರ್‌ (Liver) ಹಾರ್ಮೋನ್ ಮಟ್ಟವನ್ನು ಕಾಪಾಡಿಕೊಳ್ಳವಲ್ಲಿ ಸಹಾಯಕವಾಗಿದೆ.

ರಕ್ತ ಹೆಪ್ಪುಗಟ್ಟುವಿಕೆಯನ್ನು (Blood clotting) ರೂಪಿಸಲು, ಔಷಧಿಗಳನ್ನು ಒಡೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಅನೇಕ ರೀತಿಯ ಪ್ರೋಟೀನ್‌ಗಳನ್ನು ಇದು ಉತ್ಪಾದಿಸುತ್ತದೆ.

ಇದನ್ನು ಓದಿ : Car-Bike ನಡುವೆ ಭೀಕರ ಅಪಘಾತ : ಬಾನೇತ್ತಕ್ಕೆ ಹಾರಿದ 4 ಬೈಕ್‌ ಸವಾರರು ; ವಿಡಿಯೋ.!

ಆದರೆ ವಿಸ್ಕಿ, ಲಿವರ್ (Liver) ಸೇವಿಸುವುದರಿಂದ ಲಿವರ್‌ ಹಾಳಾಗುತ್ತದೆ. ಆದರೆ ಆಘಾತಕಾರಿ ವಿಷಯವೇನೆಂದರೆ ನಾವು ಪ್ರತಿದಿನವೂ ಆಹಾರಗಳು ಕೂಡ ಲಿವರ್‌ (Liver) ಗೆ ತೊಂದರೆಯನ್ನುಂಟು ಮಾಡುತ್ತವೆ. ಅವು ಯಾವುವು ಮತ್ತು ಅವುಗಳಿಂದ ಯಾವ ರೀತಿ ಲಿವರ್ ಗೆ ಹಾನಿಯಾಗುತ್ತದೆ ಅಂತ ತಿಳಿಯಿರಿ.

* ಜಂಕ್ ಫುಡ್ (Junk food) ಮತ್ತು ಹೆಚ್ಚು ಹುರಿದ ಆಹಾರಗಳು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ. ಇದು ಫ್ಯಾಟಿ ಲಿವರ್‌ (Fatty liver) ಕಾಯಿಲೆಗೆ ಕಾರಣವಾಗಬಹುದು.

* ಅತಿಯಾದ ಸಕ್ಕರೆ ತಿನ್ನುವುದರಿಂದ ಯಕೃತ್ತಿನ ಕಾಯಿಲೆಗಳು ಬರಬಹುದು. ಸಕ್ಕರೆ ಭರಿತ ಪಾನೀಯ ಮತ್ತು ಆಹಾರ ಸೇವಿಸುವುದರಿಂದ ಯಕೃತ್ತಿನ ಮೇಲೆ ಒತ್ತಡ (stress) ಉಂಟಾಗಬಹುದು. ಇದು ಲಿವರ್‌ (Liver) ನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್‌ ವಿಡಿಯೋ ನೋಡಿ.!

* ಆಲ್ಕೋಹಾಲ್ ಯಕೃತ್ತಿನ ಮೇಲೆ ನೇರ ಪರಿಣಾಮ ಬೀರುವುದು. ಅಲ್ಲದೇ ಕೊಬ್ಬಿನ (Fatty) ಪಿತ್ತಜನಕಾಂಗದ ಕಾಯಿಲೆಗೆ (liver disease) ಕಾರಣವಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ ಯಕೃತ್ತಿನ ಕೋಶಗಳಿಗೆ ಹಾನಿಯುಂಟಾಗುತ್ತದೆ.

ಅಲ್ಲದೇ ಸಿರೋಸಿಸ್‌ಗೆ ಕಾರಣವಾಗಬಹುದು. ಸಿರೋಸಿಸ್ (Cirrhosis) ಒಂದು ಗಂಭೀರ ಕಾಯಿಲೆಯಾಗಿದ್ದು, ಈ ಕಾಯಿಲೆಗೆ ಚಿಕಿತ್ಸೆ ನೀಡಲು ಕಷ್ಟ. ಆಲ್ಕೋಹಾಲ್ (Alcohol) ಸೇವನೆ ಲಿವರ್‌ ಕ್ಯಾನ್ಸರ್ ಅಪಾಯ ತಂದೊಡ್ಡಬಹುದು.

ಇದನ್ನು ಓದಿ : Tongue : ನಿಮ್ಮ ನಾಲಿಗೆ ಬಣ್ಣವೇ ತಿಳಿಸುತ್ತೇ ನಿಮ್ಮ ಆರೋಗ್ಯ.!

* ಸಂಸ್ಕರಿಸಿದ ಆಹಾರಗಳಲ್ಲಿ ಯಕೃತ್ತಿಗೆ ಹಾನಿ ಮಾಡುವ ಹಲವು ರೀತಿಯ ರಾಸಾಯನಿಕಗಳು ಇರುತ್ತವೆ. ಚೀಸ್, ಕೇಕ್‌, ಡಬ್ಬಿಯಲ್ಲಿಟ್ಟ ತರಕಾರಿಗಳು, ಬ್ರೆಡ್, ಪೈಗಳು, ಸಾಸೇಜ್ ರೋಲ್‌, ಪೇಸ್ಟ್ರಿ (Bread, pies, sausage rolls, pastries) ಇತ್ಯಾದಿ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು.

* ಹೆಪಟೊಟಾಕ್ಸಿಕ್ ಔಷಧಗಳು (Hepatotoxic drugs) ಯಕೃತ್ತಿಗೆ ಹಾನಿಯುಂಟು ಮಾಡಬಹುದು. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಈ ಔಷಧಿಯನ್ನು ತೆಗೆದುಕೊಳ್ಳಿ.

ಇದನ್ನು ಓದಿ : McClure : ಸಂಸತ್ತಿನಲ್ಲಿ ತನ್ನದೇ ನಗ್ನ ಚಿತ್ರ ಪ್ರದರ್ಶಿಸಿದ ರಾಜಕಾರಣಿ.!
ಇತರ ಕಾರಣಗಳು :

* ಗಾಳಿ ಮತ್ತು ನೀರಿನಲ್ಲಿ ಇರುವ ಮಾಲಿನ್ಯಕಾರಕಗಳು ಯಕೃತ್ತಿ (Liver) ಗೆ ಹಾನಿ ಮಾಡುತ್ತವೆ.

* ಹೆಪಟೈಟಿಸ್/Hepatitis – B ಮತ್ತು C ಯಂತಹ ವೈರಸ್‌ಗಳು ಯಕೃತ್ತಿಗೆ ಉರಿಯೂತದ ಸಮಸ್ಯೆಯನ್ನು ಉಂಟು ಮಾಡಬಹುದು. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಇದನ್ನು ಓದಿ : Train : ನೀವೂ ಕೂಡಾ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತೀರಾ.? ವಿಡಿಯೋ.!
ಲಿವರ್‌ನ್ನು ಆರೋಗ್ಯವಾಗಿಡಲು ಈ ರೀತಿ ಮಾಡಿ :

* ಹೆಪಟೈಟಿಸ್ B ಮತ್ತು C ಲಸಿಕೆಗಳನ್ನು ಪಡೆಯಬೇಕು.

* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಾವು ನಿಯಮಿತವಾಗಿ ವ್ಯಾಯಾಮ (Exercise regularly) ಮಾಡಬೇಕು.

* ಮದ್ಯಪಾನ ಸೇವನೆ ಕಡಿಮೆ ಮಾಡಿ ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ.

ಇದನ್ನು ಓದಿ : Sex workers : ದೇಶದಲ್ಲೇ ಅತೀ ಹೆಚ್ಚು ಸೆಕ್ಸ್‌ ವರ್ಕರ್‌ ಇರುವ ರಾಜ್ಯ ಯಾವುದು ಗೊತ್ತೇ.?

* ಒತ್ತಡ (Stress) ವನ್ನು ಕಡಿಮೆ ಮಾಡಿರಿ.

* ಸಾಕಷ್ಟು ನಿದ್ರೆ ಮಾಡಿ.

* ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿರಿ.

ದೇಶದಲ್ಲೇ ಅತೀ ಹೆಚ್ಚು ಸೆಕ್ಸ್‌ ವರ್ಕರ್‌ ಇರುವ ರಾಜ್ಯ ಯಾವುದು ಗೊತ್ತೇ.?

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇದು ನಿಮಗೆ ಗೊತ್ತೇ.? ದೇಶದಲ್ಲಿಯೇ ಅತೀ ಹೆಚ್ಚು ಮಹಿಳಾ ಲೈಂಗಿಕ ಕಾರ್ಯಕರ್ತೆಯ (sex workers) ರಿರುವ ರಾಜ್ಯ ಯಾವುದು ಗೊತ್ತೇ.? ಕರ್ನಾಟಕದಲ್ಲಿರುವ ಮಹಿಳಾ ಲೈಂಗಿಕ ಕಾರ್ಯಕರ್ತೆ (sex workers) ಯರ ಸಂಖ್ಯೆ ಎಷ್ಟು.?

ಒಂದು ಅಧ್ಯಯಣದ ಪ್ರಕಾರ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತು ತೆಲಂಗಾಣದಲ್ಲಿ ದೇಶದಲ್ಲೇ ಅಧಿಕ ಮಹಿಳಾ ಲೈಂಗಿಕ ಕಾರ್ಯಕರ್ತೆ (sex workers) ಯರಿರುವ ರಾಜ್ಯಗಳಾಗಿವೆ.

ಇದನ್ನು ಓದಿ : Car-Bike ನಡುವೆ ಭೀಕರ ಅಪಘಾತ : ಬಾನೇತ್ತಕ್ಕೆ ಹಾರಿದ 4 ಬೈಕ್‌ ಸವಾರರು ; ವಿಡಿಯೋ.!

ಮಹಿಳಾ ಲೈಂಗಿಕ ಕಾರ್ಯಕರ್ತೆಯರ/sex workers ಸಂಖ್ಯೆ :

ಪ್ರೋಗ್ರಾಮ್ಯಾಟಿಕ್ ಮ್ಯಾಪಿಂಗ್ ಮತ್ತು ಜನಸಂಖ್ಯಾ ಗಾತ್ರದ ಅಂದಾಜು (PMPSC) ಪ್ರಕಾರ, ಕರ್ನಾಟಕವು ಶೇ. 15.4 ರೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಆಂಧ್ರಪ್ರದೇಶ (ಶೇ. 12.0), ಮಹಾರಾಷ್ಟ್ರ (ಶೇ. 9.6), ದೆಹಲಿ (ಶೇ. 8.9) ಮತ್ತು ತೆಲಂಗಾಣ (ಶೇ. 7.6) ಇವೆ ಎಂದು ಹೇಳಿದೆ.

ಭಾರತವು ವಿಶ್ವದ ಎರಡನೇ ಅತಿದೊಡ್ಡ ಎಚ್‌ಐವಿ (HIV) ಹೊರೆಯನ್ನು ಹೊಂದಿದೆ ಎಂದು ಗಮನಿಸಿದ ಅಧ್ಯಯನವು, ಮಹಿಳಾ ಲೈಂಗಿಕ ಕಾರ್ಯಕರ್ತೆಯರು (Female sex workers), ಪುರುಷರೊಂದಿಗೆ ಲೈಂಗಿಕ ಸಂಬಂಧ (Sexual relationship) ಹೊಂದಿರುವ ಪುರುಷರು (MSM), ಟ್ರಾನ್ಸ್‌ಜೆಂಡರ್ (TG) ಜನರು ಮತ್ತು ಔಷಧಿಗಳನ್ನು ಚುಚ್ಚುಮದ್ದು ಮಾಡುವ ಜನರು (PWID) HIV ಸಾಂಕ್ರಾಮಿಕ ರೋಗದಿಂದ ಅಸಮಾನವಾಗಿ ಪ್ರಭಾವಿತರಾಗಿದ್ದಾರೆ ಎಂದು ಹೇಳಿದೆ.

ಇದನ್ನು ಓದಿ : McClure : ಸಂಸತ್ತಿನಲ್ಲಿ ತನ್ನದೇ ನಗ್ನ ಚಿತ್ರ ಪ್ರದರ್ಶಿಸಿದ ರಾಜಕಾರಣಿ.!
ಹಾಟ್‌ಸ್ಪಾಟ್‌ಗಳು :

ಹಾಟ್‌ಸ್ಪಾಟ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ. 55.1) ಮನೆ ಆಧಾರಿತ, ನಂತರ ಶೇ. 16.1 ಬೀದಿ ಆಧಾರಿತ ಸ್ಥಳಗಳು ಮತ್ತು ಶೇ. 5.9 ವೇಶ್ಯಾಗೃಹ ಆಧಾರಿತ.

HIV (PLHIV) ಪೀಡಿತರ ಸಂಖ್ಯೆ :

HIV (PLHIV) ಪೀಡಿತರ ಸಂಖ್ಯೆ ಅಂದಾಜು 2.54 ಮಿಲಿಯನ್ ಆಗಿದ್ದು, ಭಾರತವು ಜಾಗತಿಕವಾಗಿ ಎರಡನೇ ಅತಿ ದೊಡ್ಡ PLHIV ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ ಎಂದು ಅಧ್ಯಯನವು ತಿಳಿಸಿದೆ.

ಇದನ್ನು ಓದಿ : Train : ನೀವೂ ಕೂಡಾ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತೀರಾ.? ವಿಡಿಯೋ.!

ರಾಷ್ಟ್ರೀಯ ಏಡ್ಸ್ ಮತ್ತು STD ನಿಯಂತ್ರಣ ಕಾರ್ಯಕ್ರಮ (NACP) ಸಾಂಕ್ರಾಮಿಕ ರೋಗವನ್ನು ನಿರ್ಬಂಧಿಸುವ ಮೂಲಕ ಯಶಸ್ವಿಯಾಗಿ ಪ್ರತಿಕ್ರಿಯಿಸಿದೆ.

ತನ್ನ ಸಮಗ್ರ ಮತ್ತು ಸ್ಪಷ್ಟ ಉಪಕ್ರಮಗಳ ಮೂಲಕ, 2010 ರಿಂದ 2023 ರವರೆಗೆ ಭಾರತದಲ್ಲಿ ಹೊಸ HIV ಸೋಂಕುಗಳಲ್ಲಿ ಸುಮಾರು 44 ಪ್ರತಿಶತದಷ್ಟು ಕಡಿತ ಮತ್ತು AIDS-ಸಂಬಂಧಿತ ಸಾವುಗಳಲ್ಲಿ ಗಮನಾರ್ಹವಾದ 79 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ ಎಂದು ಅಂದಾಜಿಸಲಾಗಿದೆ.

Courtesy : PTI
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments