Saturday, June 14, 2025

Janaspandhan News

HomeViral VideoTrain : ನೀವೂ ಕೂಡಾ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತೀರಾ.? ವಿಡಿಯೋ.!
spot_img
spot_img

Train : ನೀವೂ ಕೂಡಾ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತೀರಾ.? ವಿಡಿಯೋ.!

ಜನಸ್ಪಂದನ ನ್ಯೂಸ್, ಡೆಸ್ಕ್ : ನೀವೂ ಕೂಡಾ ಚಲಿಸುವ ರೈಲು (Train) ಹತ್ತಲು ಪ್ರಯತ್ನಿಸುತ್ತೀರಾ.? ಹಾಗಾದ್ರೆ ಈ ವಿಡಿಯೋ.! ಹಾ, ಚಲಿಸುತ್ತಿರುವ ರೈಲು ಹತ್ತುವುದು ನಮ್ಮ ಸಾವಿಗೆ ನಾವೇ ಆಹ್ವಾನ ಕೊಟ್ಟ ಹಾಗೆ ಮರೆಯಬೇಡಿ.

ಚಲಿಸುತ್ತಿರುವ ರೈಲು (Train) ಹತ್ತಲು ಹೋಗಿ ಬಹಳಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ (Losing life trying to board a moving Train). ಇದೀಗ ರೈಲು ಹತ್ತುವಾಗ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ಆಗಬಹುದಾದ ಅನಾಹುತದಿಂದ ಜಸ್ಟ್ ಮಿಸ್ ಆದ ಘಟನೆ ನಡೆದಿದೆ.

ಇದನ್ನು ಓದಿ : Pain : ನೋವು ನಿವಾರಕ ಮಾತ್ರೆ ಅಥವಾ ಜೆಲ್ : ಇವುಗಳಲ್ಲಿ ಯಾವುದು ಉತ್ತಮ ಗೊತ್ತಾ.?

ಮಧ್ಯಪ್ರದೇಶದ ಭೋಪಾಲ್‌ನಲ್ಲಿ (Bhopal, Madhya Pradesh) ಈ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಕ್ತಿಯು ಚಲಿಸುತ್ತಿದ್ದ ರೈಲು (Train) ಹತ್ತುವಾಗ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ರೈಲ್ವೆ ಉದ್ಯೋಗಿಯೊಬ್ಬರು ಆತನನ್ನು ರಕ್ಷಿಸುವ ಮೂಲಕ ಸಂಭವಿಸಬಹುದಾದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ (A major disaster has been averted).

ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್‌ ವಿಡಿಯೋ ನೋಡಿ.!

ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರಿ ಬೆಚ್ಚಿ ಬೀಳುವಂತೆ ಮಾಡಿದೆ. ಅಲ್ಲದೇ ರೈಲ್ವೆ ಉದ್ಯೋಗಿಯ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ (The employee’s work was also appreciated).

ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲು (Train) ಹತ್ತಲು ಹೋಗಿದ್ದು, ರೈಲಿನ ಚಕ್ರಗಳ ಪಕ್ಕದಲ್ಲಿ ಬಿದ್ದಿದ್ದಾನೆ. ತಕ್ಷಣ ರೈಲ್ವೆ ಉದ್ಯೋಗಿ ಆತನನ್ನು ಕಾಪಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ಓದಿ : Car-Bike ನಡುವೆ ಭೀಕರ ಅಪಘಾತ : ಬಾನೇತ್ತಕ್ಕೆ ಹಾರಿದ 4 ಬೈಕ್‌ ಸವಾರರು ; ವಿಡಿಯೋ.!

ರೈಲಿನಲ್ಲಿದ್ದ ಇತರ ಪ್ರಯಾಣಿಕರು ಈ ಘಟನೆಯನ್ನು ಕಂಡ ಕೂಡಲೇ, ರೈಲಿನ ಚೈನ್‍ ಎಳೆದಿದ್ದಾರೆ. ಇದರಿಂದ ರೈಲು ನಿಂತಿದ್ದು, ಬಳಿಕ ಕೆಳಗೆ ಬಿದ್ದಿದ್ದ ವ್ಯಕ್ತಿ ರೈಲು ಹತ್ತಿ ಸುರಕ್ಷಿತವಾಗಿ ತನ್ನ ಪಯಣ ಮುಂದುವರಿಸಿದ್ದಾನೆ.

ಭೋಪಾಲ್ ರೈಲು (Train) ನಿಲ್ದಾಣದ ಹಳಿ ಪಕ್ಕದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Tongue : ನಿಮ್ಮ ನಾಲಿಗೆ ಬಣ್ಣವೇ ತಿಳಿಸುತ್ತೇ ನಿಮ್ಮ ಆರೋಗ್ಯ.!

ಕೆಲ ದಿನಗಳ ಹಿಂದೆ ಮಧ್ಯ ಪ್ರದೇಶದ ದಾಬ್ರಾ ರೈಲು ನಿಲ್ದಾಣದಲ್ಲಿ ಇಂತಹದ್ದೆ ಒಂದು ಭೀಕರ ಘಟನೆ ನಡೆದಿತ್ತು. ಇಬ್ಬರು ಮಹಿಳೆಯರು ವೇಗವಾಗಿ ಚಲಿಸುತ್ತಿದ್ದ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬಳು ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬಳು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಆಘಾತಕಾರಿ ಘಟನೆ ನಡೆದಿತ್ತು.

ಆಘಾತಕಾರಿ ಘಟನೆ (Moving Train) ವಿಡಿಯೋ :

 

View this post on Instagram

 

A post shared by Bhopal Newz Newz (@bhopal_news__)

ಎಚ್ಚರಿಕೆ :  ಚಲಿಸುವ ರೈಲಿನಲ್ಲಿ ಹತ್ತುವುದು ಅಪಾಯಕಾರಿಯಾಗಿದೆ. ಇದು ತೀವ್ರ ಗಾಯ ಅಥವಾ ಪ್ರಾಣಾಪಾಯಕ್ಕೂ ಕಾರಣವಾಗಬಹುದು. ರೈಲು ಚಲನೆಯಲ್ಲಿದ್ದಾಗ ತಕ್ಷಣ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಸುರಕ್ಷತೆಗೆ ರೈಲ್ವೆ (railway) ನಿಯಮಗಳನ್ನು ಪಾಲಿಸಬೇಕು. ರೈಲು ನಿಲ್ಲಿಸಿದ ನಂತರ ಮಾತ್ರ ಹತ್ತುವುದು ಸುರಕ್ಷಿತ. ಮುಖ್ಯವಾಗಿ ಗಮನಿಸಿ, ನಮ್ಮ ಬರುವಿಕೆಗಾಗಿ ನಮ್ಮ ಕುಟುಂಬಸ್ಥರು ಕಾಯುತ್ತಿರುತ್ತಾರೆ ಎನ್ನುವುದನ್ನು ಮರೆಯಬೇಡಿ.

Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್‌ ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಓರ್ವ ವ್ಯಕ್ತಿ ಅಪಘಾತದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗ್ರೇಟ್‌ ಎಸ್ಕೇಪ್‌ (Great Escape) ಆದ ಘಟನೆ ನಡೆದಿದ್ದು,  ಸದ್ಯ ಘಟನೆಯ ವಿಡಿಯೋ ವೈರಲ್‌ ಆಗಿದೆ.

ಥಾಮ ಕ್ರೂಸ್ ರೀತಿಯಲ್ಲಿ ಗ್ರೇಟ್‌ ಎಸ್ಕೇಪ್‌ ಆದ ವ್ಯಕ್ತಿಯ ವೈರಲ್‌ ವಿಡಿಯೋ ನೋಡಿದ ನೆಟ್ಟಿಗರು, ವಾವ್ಹ್‌, ʼಗ್ರೇಟ್‌ ಎಸ್ಕೇಪ್‌ʼ ಎಂದು ಕೊಂಡಾಡಿದ್ದಾರೆ.

ಇದನ್ನು ಓದಿ : Belagavi : ಬಾಲಕಿ ಮೇಲೆ 6 ಜನರಿಂದ ಸಾಮೂಹಿಕ ಅತ್ಯಾಚಾರ.!

ಥಾಮಸ್ ಕ್ರೂಸ್ ಮ್ಯಾಪೋಥರ್ IV ಒಬ್ಬ ಅಮೇರಿಕನ್ ನಟ ಮತ್ತು ಚಲನಚಿತ್ರ ನಿರ್ಮಾಪಕ. ಹಾಲಿವುಡ್ ಐಕಾನ್ ಎಂದು ಪರಿಗಣಿಸಲ್ಪಟ್ಟ ಅವರು, ನಾಲ್ಕು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳ ಜೊತೆಗೆ, ಗೌರವ ಪಾಮ್ ಡಿ’ಓರ್ ಮತ್ತು ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ಸೇರಿದಂತೆ ವಿವಿಧ ಪುರಸ್ಕಾರಗಳನ್ನು ಪಡೆದಿದ್ದಾರೆ.

ಟಾಮ್ ಕ್ರೂಸ್ ಓರ್ವ ಸಿಕ್ಕಾಪಟ್ಟೆ ಸ್ಟಂಟ್​ಗಳನ್ನು ಮಾಡಿ ಪ್ರಸಿದ್ಧಿ ಪಡೆದ ವ್ಯಕ್ತಿ. ಟಾಮ್ ಕ್ರೂಸ್ ಅವರು ತಮ್ಮ ಚಿತ್ರಗಳಲ್ಲಿ ನಿರ್ಭೀತಿಯಿಂದ ತಾವೇ ಸ್ಟಂಟ್ ಮಾಡಿ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

ಇದನ್ನು ಓದಿ : NH : ಪುಣೆ‌ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ; 3 ಸಾವು.!

ಈ  ಟಾಮ್ ಕ್ರೂಸ್ ರೀತಿಯಲ್ಲಿಯೋ ಇಲ್ಲೋಬ್ಬ ಭೂಪ ಅಪಘಾತದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗ್ರೇಟ್‌ ಎಸ್ಕೇಪ್‌ (Great Escape) ಆಗಿದ್ದು, ವಿಡಿಯೋ ನೋಡಿದರೆ ನೀವು ನಗಲಾರದೆ ಇರಲಾರಿರಿ.

ʼಗ್ರೇಟ್‌ ಎಸ್ಕೇಪ್‌ʼ (Great Escape) ವಿಡಿಯೋದಲ್ಲೇನಿದೆ :

ಸರ್ಕಲ್‌ ಹತ್ತಿರ ವ್ಯಾನ್‌ ರೀತಿಯ ವಾಹನ ಒಂದು ಬರುತ್ತಿದೆ. ಸರ್ಕಲ್‌ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿ ಒಂದು ನೀರಿನ ಕಾಲುವೆ ಇದ್ದು, ಆ ಕಾಲುವೆ ದಾಟಲು ಬ್ರಿಡ್ಜ್‌ ಇದೆ. ಮುಖ್ಯ ರಸ್ತೆ ಮೂಲಕ ಬಂದ ವಾಹನ ಎಡ ಬದಿಗೆ ತಿರುಗಿ ಬ್ರಿಡ್ಜ್‌ ಮೂಲಕ ಕಾಲುವೆ ದಾಟಲು ತಿರುಗಿದೆ. ಇದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನು ಓದಿ : BPCL : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!

ಮೂವರು ಇದೇ ವೇಳೆ ಬೈಕ್‌ನಲ್ಲಿ ಸಾಧಾರಣ ವೇಗದಲ್ಲಿ ಇದೇ ಬ್ರಿಡ್ಜ್‌ ಕಡೆಗೆ ಬರುತ್ತಾರೆ. ವಾಹನ ಬ್ರಿಡ್ಜ್‌ ಹತ್ತಿರ ಬರುತ್ತಿದಂತೆಯೇ ಈ ಬೈಕ್‌ ಕೂಡ ಅದೇ ಸ್ಥಳಕ್ಕೆ ಬಂದು ಬಿಟ್ಟಿದೆ. ಬ್ರಿಡ್ಜ್‌ ದಾಟಲು ಸಾಕಷ್ಟು ಸ್ಥಳಾವಕಾಶವಿದ್ದರು ಕೂಡ ಚಾಲಕನ ನಿಯಂತ್ರಣ ತಪ್ಪಿದ ಬೈಕ್‌ ಕಾಲುವೆಗೆ ಹಾರಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.

ಬೈಕ್‌ ಇನ್ನೇನು ಕಾಲುವೆಗೆ ಹಾರುತ್ತಿದೆ ಅನ್ನುವಷ್ಟರಲ್ಲಿ ಫಟ್ ಅಂತ ಮೂರನೇ ವ್ಯಕ್ತಿಯಾಗಿ ಬೈಕ್‌ ಮೇಲೆ ಕುಳಿತ ವ್ಯಕ್ತಿ ಟಾಮ್ ಕ್ರೂಸ್ ರೀತಿಯಲ್ಲಿ ಗ್ರೇಟ್‌ ಎಸ್ಕೇಪ್‌ (Great Escape) ಆಗಿದ್ದಾನೆ. ಆತ ಗ್ರೇಟ್‌ ಎಸ್ಕೇಪ್‌ ಆಗುವ ರೀತಿ ನೋಡಿದರೆ ನಗಲಾರದೇ ಇರಲಾರಿರಿ.

ಇದನ್ನು ಓದಿ : Pain : ನೋವು ನಿವಾರಕ ಮಾತ್ರೆ ಅಥವಾ ಜೆಲ್ : ಇವುಗಳಲ್ಲಿ ಯಾವುದು ಉತ್ತಮ ಗೊತ್ತಾ.?

ಈ ಘಟನೆ ವಿಯೇಟ್ನಾಂನಲ್ಲಿ ನಡೆದಿದೆ. @jsuryareddy ಎಂದ ಹೆಸರಿನ X ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, “Is the third person Tom Cruise’s stunt double?” ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ವಿಡಿಯೋ ನೋಡಿದ ನಮ್ಮ ನೆಟ್ಟಿಗರು ಸುಮ್ನಿರತ್ತಾರಾ? ಖಂಡಿತ ಇಲ್ಲ. ಅವರು ತಮ್ಮದೇ ಆದ ಭಾವದಲ್ಲಿ ಕಾಮೆಂಟ್‌ ಮಾಡಿದ್ದಾರೆ.

ʼಗ್ರೇಟ್‌ ಎಸ್ಕೇಪ್‌ʼ (Great Escape) ವಿಡಿಯೋ ಇಲ್ಲಿದೆ ನೋಡಿ :

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments