ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ದೇಹದಲ್ಲಿ ಗಾಯವಾದಾಗ ಅಥವಾ ಉಳುಕಿದಾಗ (When injured or sprained in the body) ನೋವು ಅನುಭವಿಸುವುದು ಸಹಜ. ಕೆಲವೊಮ್ಮೆ ನೋವು ವಿಪರೀತವಾಗಿದ್ದರೆ, ಇನ್ನು ಕೆಲವೊಮ್ಮೆ ನೋವು ಸಾಧಾರಣವಾಗಿರುತ್ತದೆ.
ಕೆಲವರು ಈ ನೋವನ್ನು (pain) ಕಡಿಮೆ ಮಾಡಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡ ಬಳಿಕ ನೋವು ಕಡಿಮೆಯಾಗುತ್ತದೆ. ಇನ್ನೂ ಕೆಲವರು ನೋವಿನ ಜಾಗಕ್ಕೆ ಜೆಲ್‌ಗಳನ್ನು ಸಹ ಹಚ್ಚಿಕೊಳ್ಳುತ್ತಾರೆ. ಅದು ಕೂಡ ನೋವು ಕಡಿಮೆ ಮಾಡುತ್ತದೆ.
ಇದನ್ನು ಓದಿ : Facebook : ಫೇಸ್‌ಬುಕ್ ಗೆಳೆಯನ ಮನೆಗೆ ಊಟಕ್ಕೆ ಹೋದ ಯುವತಿ ; ಮುಂದೆನಾಯ್ತು.?
ಈ ಎರಡರಲ್ಲಿ ಯಾವುದು ಉತ್ತಮ ಅಂತ ಗೊತ್ತಾ.?
ಒಬ್ಬ ವ್ಯಕ್ತಿಯು ಸ್ನಾಯುಗಳಲ್ಲಿ ಅಥವಾ ಕೀಲುಗಳಲ್ಲಿ (In muscles or joints) ನೋವು ಅನುಭವಿಸುತ್ತಿದ್ದರೆ, ಅವರ ದೈಹಿಕ ಸ್ಥಿತಿಯನ್ನು ಅವಲಂಬಿಸಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಪಡೆಯುವ ಮೊದಲು, ಯಾವ ರೀತಿಯ ನೋವು ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.
ವಿಧಗಳು :
* ದೀರ್ಘಕಾಲದ ನೋವು (Chronic pain)
* ನೋಕಿಸೆಪ್ಟಿವ್ ನೋವು
* ನರ ನೋವು ಇತ್ಯಾದಿ
* ಒತ್ತಡ, ಜ್ವರ, ಶೀತ, ನಿದ್ರೆಯ ಕೊರತೆ, ನಿರ್ಜಲೀಕರಣ ಹಾಗೂ ಗಾಯಗಳು ಸಹ ನೋವನ್ನು ಉಂಟು ಮಾಡಬಹುದು.
ಇದನ್ನು ಓದಿ : Belagavi : ಬಾಲಕಿ ಮೇಲೆ 6 ಜನರಿಂದ ಸಾಮೂಹಿಕ ಅತ್ಯಾಚಾರ.!
ನೋವು (Pain) ನಿವಾರಕಗಳ ಬಳಕೆ ಆರೋಗ್ಯಕ್ಕೆ ಉತ್ತಮವೇ.?
ಬಹಳಷ್ಟು ಜನರು ತಮ್ಮ ಬಿಡುವಿಲ್ಲದ ಜೀವನದಲ್ಲಿ ನೋವಿನಿಂದ ತ್ವರಿತ ಪರಿಹಾರಕ್ಕಾಗಿ, ನೋವು ನಿವಾರಕಗಳನ್ನು (Pain reliever) ಉಪಯೋಗಿಸುತ್ತಾರೆ. ಇದು ನೋವನ್ನು ಬಹಳ ಬೇಗನೆ ಕಮ್ಮಿ ಮಾಡುವುದು. ಆದರೆ, ಇದರಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ನೀವು ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಅಥವಾ ಜೆಲ್ ಬಳಸುವುದಕ್ಕಿಂತ ಮುಂಚೆ ವೈದ್ಯರನ್ನು ಸಂಪರ್ಕಿಸಿ.
ಏಕೆಂದರೆ, ನೋವು ನಿವಾರಕ ಮಾತ್ರೆಗಳು ವಾಂತಿ, ಎದೆಯುರಿ, ಹುಣ್ಣು ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ (Bad effect on kidneys too) ಬೀರುತ್ತವೆ. ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಾಶಮಾಡುತ್ತವೆ. ಅವು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತವೆ. ಮಾತ್ರೆಗಳನ್ನು ದೀರ್ಘಕಾಲ ತೆಗೆದುಕೊಳ್ಳುವುದರಿಂದ ದೇಹದ ಆಂತರಿಕ ಅಂಗಗಳಿಗೆ ಹಾನಿಯಾಗಬಹುದು. ಆದ್ದರಿಂದ ಅಂತಹ ಟ್ಯಾಬ್ಲೆಟ್ಸ್ ಬದಲಿಗೆ, ನೋವು ನಿವಾರಕ ಜೆಲ್‌ಗಳ ಬಳಕೆ ಉತ್ತಮ.
ಇದನ್ನು ಓದಿ : HFWS : ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮಾತ್ರೆಗಿಂತ ಜೆಲ್ ಬಳಕೆ ಒಳ್ಳೆಯದೇ.?
ನೋವು ನಿವಾರಕ ಜೆಲ್ ದೇಹಕ್ಕೆ ಹಾನಿ ಮಾಡುವುದಿಲ್ಲ. ಅವು ನೋವು ಇರುವ ಪ್ರದೇಶವನ್ನು ಮಾತ್ರ ಆವರಿಸುತ್ತವೆ (Cover only the painful area). ಹೀಗಾಗಿ ಅವುಗಳಿಂದ ದೇಹದ ಉಳಿದ ಭಾಗಗಳಿಗೆ ಹಾನಿ ಉಂಟಾಗುವುದಿಲ್ಲ.
ಇನ್ನೂ ಬಹಳ ದಿನಗಳವರೆಗೆ ನೋವು ನಿವಾರಕ ಜೆಲ್‌ಗಳನ್ನು ಬಳಸಿದರೂ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೇ ಜೆಲ್‌ಗಳು ನೋವು ನಿವಾರಕ ಮಾತ್ರೆಗಳಿಗಿಂತ ಹೆಚ್ಚು ವೇಗವಾಗಿ ನೋವನ್ನು ಕಡಿಮೆ ಮಾಡುತ್ತವೆ ಎನ್ನಲಾಗಿದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿ ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.
ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ಬಳಿಕ ; ತೂಕ ಇಳಿಕೆಗೆ ಯಾವ ನಡಿಗೆ ಪರಿಣಾಮಕಾರಿ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳಿಗ್ಗೆ ಅಥವಾ ಸಾಯಂಕಾಲ ಬಹಳಷ್ಟು ಜನರು ವಾಕಿಂಗ್ ಹೋಗಿ ಬರುತ್ತಾರೆ. ಇನ್ನೂ ಈ ವಾಕಿಂಗ್ ತೂಕವನ್ನು ಕ್ರಮೇಣವಾಗಿ, ಸಮರ್ಥವಾಗಿ ಕಳೆದುಕೊಳ್ಳಲು ಅತ್ಯಂತ ಪರಿಣಾಮಕಾರಿ ವಿಧಾನ.
ಅಲ್ಲದೇ ಪ್ರತಿ ದಿನ ನಡೆಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು (Good for physical and mental health) ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.
ಇದನ್ನು ಓದಿ : Tiger : ಹುಲಿಯ ಜೊತೆ ಸೆಲ್ಫಿಗೆ ಮುಂದಾದ ಯುವಕ ; ಮುಂದೆನಾಯ್ತು.? ವಿಡಿಯೋ.
ಆದರೆ ನಡಿಗೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಬೆಳಗಿನ ನಡಿಗೆಯು ಒಂದು. ತೂಕ ಇಳಿಸಿಕೊಳ್ಳಬೇಕು ಎಂದು ಬಯಸುವವರು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುವುದನ್ನು (Burns calories quickly) ಖಚಿತಪಡಿಸಿಕೊಳ್ಳಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳಗಿನ ನಡಿಗೆಗೆ ಆದ್ಯತೆ ನೀಡುತ್ತಾರೆ.
ಆದರೆ ಅಜೀರ್ಣ ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದ ಬಗ್ಗೆ ಆತಂಕ ಇರುವವರು ಊಟದ ನಂತರದ ನಡಿಗೆಯನ್ನು ಆರಿಸಿಕೊಳ್ಳುತ್ತಾರೆ.
ಇದನ್ನು ಓದಿ : NH : ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ; 3 ಸಾವು.!
ತೂಕ ಇಳಿಸಿಕೊಳ್ಳಲು, ಖಾಲಿ ಹೊಟ್ಟೆಯಲ್ಲಿ (empty stomach) ಅಥವಾ ಊಟದ ಬಳಿಕ ನಡೆಯುವುದು (after a meal). ಇವುಗಳಲ್ಲಿ ಯಾವುದು ಬೆಸ್ಟ್.?
ಖಾಲಿ ಹೊಟ್ಟೆಯಲ್ಲಿ ನಡೆಯುವುದು ಆಗುವ ಆರೋಗ್ಯ ಪ್ರಯೋಜನಗಳು :
- ಖಾಲಿ ಹೊಟ್ಟೆಯ ನಡಿಗೆಯು ಹೊಟ್ಟೆಯ ಕೊಬ್ಬು ಸೇರಿದಂತೆ ದೇಹದ ಎಲ್ಲಾ ರೀತಿಯ ಕೊಬ್ಬು ನಷ್ಟಕ್ಕೆ ಪರಿಣಾಮಕಾರಿ (Effective for fat loss).
- ಬೆಳಗಿನ ಉಪಾಹಾರದ ಮೊದಲು ಯಾವುದೇ ವ್ಯಾಯಾಮವನ್ನು ಮಾಡುವುದರಿಂದ ಕೊಬ್ಬಿನ ಆಕ್ಸಿಡೀಕರಣವನ್ನು (Fat oxidation) ಹೆಚ್ಚಿಸುತ್ತದೆ.
- ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡುವುದರಿಂದ ಚಯಾಪಚಯವನ್ನು ಸುಧಾರಿಸಬಹುದು (Improve metabolism).
- ಖಾಲಿ ಹೊಟ್ಟೆಯಲ್ಲಿ ವ್ಯಾಯಾಮವು ತೂಕ ಮತ್ತು ಕೊಬ್ಬನ್ನು ಸುಡುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
- ಇದು ತೂಕ ನಷ್ಟ ಉತ್ಸಾಹಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
- ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ದೇಹವು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
- ಖಾಲಿ ಹೊಟ್ಟೆಯಲ್ಲಿ ನಡೆಯುವುದರಿಂದ ದಿನವಿಡೀ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದಾಗಿದೆ.
- ವಿಟಮಿನ್ ಡಿ ಕೊರತೆಯಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಮೂಡ್ ಸ್ವಿಂಗ್, ನೋವುಗಳು ಉಂಟಾಗಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಡೆಯುವುದು ಸಹ ವಿಟಮಿನ್ ಡಿ ಅನ್ನು ಪಡೆಯಬಹುದು.
ಇದನ್ನು ಓದಿ : BPCL : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!
ಊಟದ ಬಳಿಕ ನಡೆಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು :
- ಊಟದ ಬಳಿಕ ಮಲಗುವುದು ಅಥವಾ ಕುಳಿತುಕೊಳ್ಳುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಅಭ್ಯಾಸವಾಗಿದೆ. ಇದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಬದಲಿಗೆ ಊಟದ ನಂತರ ನಡೆಯುವುದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯಕವಾಗಿದೆ.
- ಊಟದ ಬಳಿಕ ನಡೆಯುವುದು ಹೊಟ್ಟೆಯುಬ್ಬರ ಮತ್ತು ಅಸ್ವಸ್ಥತೆಯನ್ನು (Bloating and discomfort) ಅನುಭವಿಸುವ ಜನರು ಅತ್ಯುತ್ತಮವಾಗಿದೆ.
- ಉಬ್ಬುವಿಕೆಯನ್ನು ಕಡಿಮೆ ಮಾಡಲು ಮತ್ತು ಅನಿಲವನ್ನು ಬಿಡುಗಡೆ ಮಾಡಲು (To release gas and reduce bloating) ಅದ್ಭುತವಾದ ಮಾರ್ಗವೆಂದರೆ ಅದು ಊಟದ ಬಳಿಕ ನಡೆಯುವುದು.
- ಊಟದ ನಂತರದ ನಡಿಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
- ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವುದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿ ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.