Saturday, June 14, 2025

Janaspandhan News

HomeGeneral NewsFacebook : ಫೇಸ್‌ಬುಕ್‌ ಗೆಳೆಯನ ಮನೆಗೆ ಊಟಕ್ಕೆ ಹೋದ ಯುವತಿ ; ಮುಂದೆನಾಯ್ತು.?
spot_img
spot_img

Facebook : ಫೇಸ್‌ಬುಕ್‌ ಗೆಳೆಯನ ಮನೆಗೆ ಊಟಕ್ಕೆ ಹೋದ ಯುವತಿ ; ಮುಂದೆನಾಯ್ತು.?

ಜನಸ್ಪಂದನ ನ್ಯೂಸ್, ಡೆಸ್ಕ್ : Facebook ಗೆಳೆಯನ ಮನೆಗೆ ಊಟಕ್ಕೆ ಹೋದ ಯುವತಿ ; ಮುಂದೆನಾಯ್ತು.? ಅಂತ ಈ ಸುದ್ದಿ ಓದಿ.

ಸೋಶಿಯಲ್ ಮೀಡಿಯಾದ ಮೂಲಕ ಪರಿಚಯವಾದ ಯುವಕನೊಬ್ಬ ತನ್ನ ಮನೆಗೆ ಊಟಕ್ಕೆಂದು ಕರೆದು ಯುವತಿಗೆ ಊಟದಲ್ಲಿ ಮಾದಕ ದ್ರವ್ಯ ಬೆರೆಸಿ ಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹೈದರಾಬಾದ್​ನ ಬಂಜಾರ ಹಿಲ್ಸ್ ರಸ್ತೆ ಸಂಖ್ಯೆ 7 ರಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದು,‌ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡಿದ್ದು, ಆಕೆಗೆ ಪೊಲೀಸರಿಗೆ ತಿಳಿಸಿದ್ದಾಳೆ.

ಇದನ್ನು ಓದಿ : Health : ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!

ಯುವಕ ಫೇಸ್‌ಬುಕ್‌ ಮೂಲಕ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡ. ಆಕೆಗೆ ತಾನು ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದ ಎಂದು ವರದಿಯಾಗಿದೆ.

ಇಬ್ಬರ ಪರಿಚಯ ಆಳವಾಯಿತು. ಬಳಿಕ ಯುವಕ ಮನೆಗೆ ಊಟ ಮಾಡಲು ಬಾ ಎಂದು ಆಹ್ವಾನಿಸಿದ್ದ. ಈ ವೇಳೆ ಊಟದಲ್ಲಿ ಮಾದಕ ದ್ರವ್ಯವನ್ನು ಬೆರೆಸಿ, ಆಕೆಗೆ ಕೊಟ್ಟಿದ್ದನು. ಅದನ್ನು ಸೇವಿಸಿದ ಸಂತ್ರಸ್ತೆ ತಕ್ಷಣ ನಿದ್ರೆಗೆ ಜಾರಿದಳು. ಈ ವೇಳೆ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ : Mahirakhan : ಖ್ಯಾತ ನಟಿಯ ಖಾಸಗಿ ಅಂಗಕ್ಕೆ ಕೈ ಹಾಕಿದ ಭದ್ರತಾ ಸಿಬ್ಬಂದಿ ; ವಿಡಿಯೋ.!

ನಿದ್ರೆಯಿಂದ ಎಚ್ಚರಗೊಂಡಾಗ ತನ್ನ ಸ್ಥಿತಿಯನ್ನು ನೋಡಿ ಸಂತ್ರಸ್ತೆ ಆಘಾತಕ್ಕೆ ಒಳಗಾದಳು. ಈ ವೇಳೆ ಆತ, ಫೋಟೋ ಮತ್ತು ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದ.

ಅಲ್ಲದೇ ಫೋಟೋ ಮತ್ತು ವಿಡಿಯೋ ತೋರಿಸಿ, ಆಕೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಹೀಗಾಗಿ ಆಕೆ 20 ಲಕ್ಷ ರೂ. ವರೆಗೆ ಹಣ ನೀಡಿದ್ದಳು. ಆದರೆ, ಆರೋಪಿಯ ಕಿರುಕುಳ ದಿನೇ ದಿನೇ ಹೆಚ್ಚಾಯಿತು. ಕೊನೆಗೆ ಆತನ ಕಿರುಕುಳ ಸಹಿಸಿಕೊಳ್ಳಲಾಗದೇ ಬಂಜಾರ ಹಿಲ್ಸ್ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!

ಆರೋಪಿಯ ವಿರುದ್ಧ IPC ಸೆಕ್ಷನ್ 64(1), 308(2), 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಹಿಂದಿನ ಸುದ್ದಿ : Health : ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯನಿಗೆ ಆರೋಗ್ಯ (Health) ದಲ್ಲಿ ಆಗಾಗ ಏರುಪೇರು ಆಗುತ್ತಿರುತ್ತದೆ.

ಅದರಲ್ಲಿ ತಲೆನೋವು ಸಾಮಾನ್ಯ. ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!

ಪುದೀನಾ (Papermint) :

ಹೌದು, ಪುದೀನಾ ಹಲವಾರು ಆಹಾರದ ಉಪಯೋಗಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಸಾಮಾನ್ಯ ಶೀತ, ಕೆಮ್ಮು, ಬಾಯಿ ಮತ್ತು ಗಂಟಲಿನ ಉರಿಯೂತ, ಸೈನಸ್ ಸೋಂಕುಗಳು ಮತ್ತು ಉಸಿರಾಟದ ಸೋಂಕುಗಳು (Sinus infections and respiratory infections) ಬರದಂತೆ ತಡೆಯುವುದು.

ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.

ಪುದೀನಾದಲ್ಲಿರುವ ಔಷಧೀಯ ಗುಣಗಳು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. Vitamin A, Vitamin B ಮತ್ತು Vitamin C ಕಾಂಪ್ಲೆಕ್ಸ್ ಅನ್ನು ಹೊಂದಿದೆ.

* ಪುದೀನಾ ಎಲೆಗಳನ್ನು ಜಜ್ಜಿ ವಾಸನೆ (smell) ತಗೊಂದ್ರೆ, ತಲೆನೋವು, ತಲೆ ಸುತ್ತುವಿಕೆ ಶಮನವಾಗುತ್ತದೆ.

ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!

* ಪುದೀನದಲ್ಲಿ ಇರುವ ಸಾರಭೂತ ತೈಲವು ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು. ಜೀರ್ಣಕಾರಿ ಕಿಣ್ವಗಳು ಪೋಷಕಾಂಶಗಳನ್ನು ಹೀರಿಕೊಳ್ಳಲು (Digestive enzymes help absorb nutrients) ಸಹಾಯ ಮಾಡುತ್ತದೆ. ಇದರಿಂದಾಗಿ ಚಯಾಪಚಯ ಕ್ರಿಯೆಯು ಉತ್ತಮವಾಗುತ್ತದೆ. ಉತ್ತಮ ಜೀರ್ಣ ಕ್ರಿಯೆಯಿಂದ ಸುಲಭವಾಗಿ ತೂಕ ಇಳಿಸಬಹುದು.

* ಪುದೀನಾ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಕುಡಿಯುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಇದನ್ನು ಓದಿ : Rain : ಹೊಳೆಯಲ್ಲಿ ಹರಿವ ತೆಂಗಿನಕಾಯಿ ತರುವ ತುಂಟ ನಾಯಿಯ ವಿಡಿಯೋ.!

* ಪುದೀನವನ್ನು ನಿಯಮಿತವಾಗಿ ಸೇವಿಸುವಾಗ ಮಿತವಾಗಿ ಹಾಗೂ ಹಿತವಾಗಿ ಸೇವಿಸಬೇಕು (Should be consumed in moderation and in moderation). ಆಗ ಮಿದುಳಿನ ಆರೋಗ್ಯ ಉತ್ತಮವಾಗಿ ಸುಧಾರಿಸುತ್ತದೆ.

* ಪುದೀನದಲ್ಲಿ ಇರುವ ಸಾರಭೂತ ತೈಲಗಳು ಬಲವಾದ ಆಂಟಿಬ್ಯಾಕ್ಟೀರಿಯಾ ಮತ್ತು ನಂಜು ನಿರೋಧಕ ಪರಿಣಾಮಗಳನ್ನು ಹೊಂದಿರುತ್ತವೆ.

ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

* ಪುದೀನ ರಸವನ್ನು ಹಣೆಯ ಮೇಲೆ ಅನ್ವಯಿಸಿಕೊಂಡರೆ ತಲೆನೋವು (headache) ನಿವಾರಣೆಯಾಗುವುದು. ತಲೆನೋವು ನಿವಾರಣೆಗೆ ಪುದೀನಾದ ಮುಲಾಮು ಅಥವಾ ಎಣ್ಣೆಯನ್ನು ಹಣೆ ಮತ್ತು ಪೀಡಿತ ಪ್ರದೇಶದಲ್ಲಿ ಹಚ್ಚಿಕೊಳ್ಳಬಹುದು.

* ಹೊಟ್ಟೆಯ ಸೆಳೆತವನ್ನು ಶಾಂತಗೊಳಿಸುತ್ತದೆ. ವಾಯು ಮತ್ತು ಆಮ್ಲೀಯತೆಯನ್ನು ಹಿಡಿತದಲ್ಲಿ ಇಡಲು ಸಹಾಯ ಮಾಡುತ್ತದೆ.

ಇದನ್ನು ಓದಿ : Health : ತಾಮ್ರದ ಬಾಟಲಿಗಳಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.

* ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಡುತ್ತದೆ. ಮೂಗಿನಲ್ಲಿ ಕಟ್ಟಿಕೊಂಡ ಪೊರೆಗಳನ್ನು ಕುಗ್ಗಿಸಿ ಸುಲಭವಾಗಿ ಉಸಿರಾಡಲು ಇದು ಸಹಾಯಕ.

* ಪುದೀನಾ ರಸಕ್ಕೆ ಅರಿಶಿಣವನ್ನು ಬೆರೆಸಿ ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡುವುದರಿಂದ ತುರಿಕೆ, ಉರಿ ಮುಂತಾದ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತವೆ (Skin diseases like itching and burning are relieved). ದೇಹದಲ್ಲಿನ ಉಷ್ಣ ಕಡಿಮೆಯಾಗುತ್ತದೆ.

* ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಭಾವನೆಯನ್ನು ಬಹುಬೇಗ ನಿವಾರಿಸುವ ಕೆಲಸ ಮಾಡುತ್ತದೆ ಪುದೀನಾದ ರಸ ಮತ್ತು ಪರಿಮಳ.

ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ ಉದ್ಯೋಗವಕಾಶ.!

* ಪುದೀನಾ ಉಲ್ಲಾಸಕರವಾದ ವಾಸನೆಯನ್ನು ಹೊಂದಿದ್ದು, ಅದು ಬಹುಬೇಗ ಶಾಂತ ಹಾಗೂ ಉಲ್ಲಾಸದ ಭಾವನೆಯನ್ನು ನೀಡುತ್ತದೆ

* ಪುದೀನ ರಸವನ್ನು ಮುಖಕ್ಕೆ ಹಚ್ಚಿದರೆ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು

* ಆರೋಗ್ಯಕರ ಹಲ್ಲುಗಳು ಮತ್ತು ಒಸಡುಗಳನ್ನು ಹೊಂದಲು ಸಹಾಯವಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments