Saturday, June 14, 2025

Janaspandhan News

HomeViral VideoRain : ಹೊಳೆಯಲ್ಲಿ ಹರಿವ ತೆಂಗಿನಕಾಯಿ ತರುವ ತುಂಟ ನಾಯಿಯ ವಿಡಿಯೋ.!
spot_img
spot_img

Rain : ಹೊಳೆಯಲ್ಲಿ ಹರಿವ ತೆಂಗಿನಕಾಯಿ ತರುವ ತುಂಟ ನಾಯಿಯ ವಿಡಿಯೋ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಳೆಗಾಲದಲ್ಲಿ ಜೋರಾಗಿ ಸುರಿಯುವ ಮಳೆ (Rain) ಯಿಂದಾಗಿ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಕೆಲವೊಂದು ಕಡೆ ರಣಭೀಕರ ಮಳೆಗೆ ಕಾರು, ಬೈಕ್ ಹರಿದು ಹೋಗುತ್ತವೆ.

Rain :

ಅದರಂತೆ ಮಲೆನಾಡು ಪ್ರದೇಶದ ವಿಚಾರಕ್ಕೆ ಬಂದರೆ ತೋಟದಲ್ಲಿರುವ ಅಡಿಕೆ, ತೆಂಗಿನ ಕಾಯಿಗಳು ಜೋರಾಗಿ ಸುರಿದ ಮಳೆಯಲ್ಲಿ (In the pouring rain) ಹಾಗೆಯೇ ಹರಿದುಕೊಂಡು ಹೋಗಿ ಬಿಡುತ್ತವೆ.

ಇದನ್ನು ಓದಿ : DRDO ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹೀಗೆ ನೀರಿನಲ್ಲಿ ತೇಲಿಕೊಂಡು ಹೋಗುವ ತೆಂಗಿನಕಾಯಿ, ಅಡಿಕೆಯನ್ನು (Coconut, areca nut) ಹಿಡಿಯುವುದೇ ಮಳೆಗಾಲದಲ್ಲಿ ಅನೇಕರ ಹವ್ಯಾಸವಾಗಿದೆ. ಕೇರಳ ಹಾಗೂ ಕರ್ನಾಟಕದ ಕರಾವಳಿ ಕಡೆ ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ.

ಜೋರಾಗಿ ಸುರಿಯುವ ಮಳೆ ಹಾಗೂ ಗಾಳಿಗೆ ಮರದಲ್ಲಿರುವ ತೆಂಗಿನ ಕಾಯಿ ಕೆಳಗೆ ಬಿದ್ದು ನದಿ ಸೇರುತ್ತವೆ. ಹೀಗಾಗಿ ನದಿಯ ಸಮೀಪ ತೆಂಗಿನ ಕಾಯಿ ಬರುತ್ತೆ ಅಂತ ಅನೇಕರು ಚೀಲ, ಕೋಲು ಹಿಡಿದುಕೊಂಡು ಕಾಯುತ್ತಾ ಕುಳಿತಿರುತ್ತಾರೆ. ಇದು ಮಲೆನಾಡು, ಕರಾವಳಿ ಭಾಗದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ.

ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

ಅಂತೆಯೇ ಹೊಳೆಯಲ್ಲಿ ಸಾಗಿ ಬರುವ ತೆಂಗಿನ ಕಾಯಿಯನ್ನು ನಾಯಿಯೂ ಓಡಿ ಓಡಿ ಹೋಗಿ ಹಿಡಿಯುತ್ತಿದ್ದು (dog is running after the coconut), ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಾಯಿಯೊಂದು ಈ ಹೊಳೆಯಲ್ಲಿ ಬರುವ ತೆಂಗಿನ ಕಾಯಿಯನ್ನು ಓಡಿ ಹೋಗಿ ಹಿಡಿಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ಓದಿ : Ballari : ಟಿಪ್ಪರ್‌ಗೆ ಕಾರು ಡಿಕ್ಕಿ ; ಇಬ್ಬರು ಮಕ್ಕಳು ಸೇರಿ 4 ಸಾವು.!

santhoshharikrishnan ಎಂಬುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಣ್ಣಪುಟ್ಟ ಆಟಗಳನ್ನೆಲ್ಲಾ ನಿಲ್ಲಿಸಿ ತೆಂಗಿನ ಕಾಯಿ ವ್ಯವಹಾರಕ್ಕೆ ಇಳಿದ ಡಾಗೇಶನ್ ಎಂದು ಮಲೆಯಾಳಂನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ನಾಯಿಯೊಂದು ನೀರಿನಲ್ಲಿ ತೇಲಿ ಬಂದ 5ಕ್ಕೂ ಹೆಚ್ಚು ತೆಂಗಿನ ಕಾಯಿಗಳನ್ನು ಹಿಡಿದು ತೆಂಗಿನ ಮರದ ಕೆಳಗೆ ತಂದು ಗುಡ್ಡೆ ಹಾಕುತ್ತಿದೆ. ಮಾಲೀಕ ಕೋಲು ಹಿಡಿದು ಹೊಳೆಯ ನಡುವೆ ತೇಲುವ ತೆಂಗಿನ ಕಾಯಿಯನ್ನು ಪಕ್ಕಕ್ಕೆ ಸರಿಸಿದರೆ ಈ ಶ್ವಾನ ಅದನ್ನು ತೆಗೆದು ತಂದು ನೆಲದ ಮೇಲೆ ಇರಿಸುತ್ತಿದೆ.

ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ ಉದ್ಯೋಗವಕಾಶ.!

ವಿಡಿಯೋ ನೋಡಿದ ಅನೇಕರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಬೆಲೆ ಏರಿಕೆಯ ಈ ಸಮಯದಲ್ಲಿ ಜೀವನ ಮಾಡುವುದು ಹೇಗೆ ಎಂದು ಈ ಶ್ವಾನ ಚೆನ್ನಾಗಿ ಕಲಿತಿದೆ (The dog has learned well). ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇಡೀ ದಿನ ಬಹಳ ಶ್ರಮದಿಂದ ಕೆಲಸ ಮಾಡಲು ಈ ನಾಯಿ ನಿರ್ದರಿಸಿದಂತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಒಬ್ಬತು ನನ್ನ ಕಣ್ಣು ತಪ್ಪಿ ಒಂದೇ ಒಂದು ತೆಂಗಿನಕಾಯಿ ದೂರ ಹೋಗಬಾರದು ಎಂದು ಈ ಶ್ವಾನ ನಿರ್ಧರಿಸಿದಂತಿದೆ ಎಂದು ಕಮೆಂಟ್ ಮಾಡಿದರೆ, ಈ ಶ್ವಾನದ ಅದೃಷ್ಟವಂತ ಮಾಲೀಕ ಯಾರು ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ ಮತ್ತೊಬ್ಬರು.

ತುಂಟ ನಾಯಿಯ ವಿಡಿಯೋ :

ಹಿಂದಿನ ಸುದ್ದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 Tablets (ಮಾತ್ರೆಗಳ) ಗುಣಮಟ್ಟದಲ್ಲಿ ಫೇಲ್ ಆಗಿವೆ.

ಔಷಧಿಗಳ ಗುಣಮಟ್ಟದ ಬಗ್ಗೆ ಜನರು ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಸುಮಾರು 3000 ಔಷಧ ಮಾದರಿಗಳಲ್ಲಿ 196 ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿಲ್ಲ (Quality standards not met) ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (CDSCO) ಏಪ್ರಿಲ್ 2025 ರ ವರದಿಯು ಬಹಿರಂಗಪಡಿಸಿದೆ.

ಇದನ್ನು ಓದಿ : Love Marriage : ಪ್ರೀತಿಸಿ ಮನೆ ಬಿಟ್ಟು ಹೋದ ಮಗಳು ; ಕೆರೆಗೆ ಹಾರಿದ 3 ಕುಟುಂಬ ಸದಸ್ಯರು.!

ಪ್ರತಿ ತಿಂಗಳು ಬೇರೆಬೇರೆ ರಾಜ್ಯಗಳಿಂದ ಔಷಧಿಗಳ ಮಾದರಿಗಳನ್ನು ಸಂಗ್ರಹಿಸಿ ಅವುಗಳ ಗುಣಮಟ್ಟವನ್ನು ಈ ಸಂಸ್ಥೆಯು ಪರಿಶೀಲಿಸುತ್ತದೆ. ಈ ಬಾರಿ 60 ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿರುವುದು (Failure) ಕಂಡುಬಂದಿದ್ದು, ರಾಜ್ಯದ ಪ್ರಯೋಗಾಲಯಗಳಲ್ಲಿ 136 ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿರುವುದು ಕಂಡುಬಂದಿದೆ.

ಈ ಮಾದರಿಗಳನ್ನು ‘ಪ್ರಮಾಣಿತ ಗುಣಮಟ್ಟವಲ್ಲದ’ (NSQ) ವರ್ಗದಲ್ಲಿ ಇರಿಸಲಾಗಿದೆ. ಅವು ಸಂಪೂರ್ಣವಾಗಿ ಹಾನಿಕಾರಕವಲ್ಲ, ಆದರೆ ಅಗತ್ಯವಿರುವ ಗುಣಮಟ್ಟದ ಮಾನದಂಡಗಳಲ್ಲಿ ಕೊರತೆ ಕಂಡುಬಂದಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಬೇರೊಬ್ಬಳೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಿಬಿದ್ದ ಲವರ್ ; ಪ್ರೇಯಸಿ ಮಾಡಿದ್ದೇನು ಗೊತ್ತಾ? Video ನೋಡಿ

Tablets :

ದಿನನಿತ್ಯದ ಕಾಯಿಲೆಗಳಿಗೆ ನೀಡಲಾಗುವ ಮೆಟ್ರೋನಿಡಜೋಲ್ (ಸೋಂಕುಗಳಿಗೆ), ಪ್ಯಾರಸಿಟಮಾಲ್ 500 ಮಿಗ್ರಾಂ, ಗ್ಲಿಮೆಪಿರೈಡ್ (ಮಧುಮೇಹಕ್ಕೆ), ಶೆಲ್ಕಲ್ 500, ಪ್ಯಾನ್ ಡಿ, ಟೆಲ್ಮಿಸಾರ್ಟನ್ (ಅಧಿಕ ರಕ್ತದೊತ್ತಡ) ಮತ್ತು ಸೆಪೋಡೆಮ್ ಎಕ್ಸ್‌ಪಿ 50 ಡ್ರೈ ಸಸ್ಪೆನ್ಷನ್ ಮಾತ್ರೆಗಳು ವಿಫಲವಾಗಿವೆ.

ಈ ಔಷಧಿಗಳು ಚಿಕಿತ್ಸೆಯನ್ನು ನಿಷ್ಪರಿಣಾಮಕಾರಿಯನ್ನಾಗಿ (Ineffectively) ಮಾಡುವುದಲ್ಲದೆ, ರೋಗಿಗಳಿಗೆ ಹೆಚ್ಚುವರಿ ಆರೋಗ್ಯ ಅಪಾಯ ಉಂಟು ಮಾಡುತ್ತವೆ. ಕೆಲವೊಮ್ಮೆ ಅವುಗಳ ಸೇವನೆಯು ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments