Saturday, June 14, 2025

Janaspandhan News

HomeCrime NewsDC ಕಚೇರಿಯಲ್ಲಿ ಶವವಾಗಿ ಪತ್ತೆಯಾದ ಕರ್ತವ್ಯನಿರತ ಮಹಿಳಾ ಕಾನ್ಸ್‌ಟೇಬಲ್.!
spot_img
spot_img

DC ಕಚೇರಿಯಲ್ಲಿ ಶವವಾಗಿ ಪತ್ತೆಯಾದ ಕರ್ತವ್ಯನಿರತ ಮಹಿಳಾ ಕಾನ್ಸ್‌ಟೇಬಲ್.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾತ್ರಿ ಕರ್ತವ್ಯನಿರತರಾಗಿದ್ದ ಮಹಿಳಾ ಕಾನ್ಸ್‌ಟೇಬಲ್‌ ಓರ್ವರು ಜಿಲ್ಲಾಧಿಕಾರಿ ಕಚೇರಿಯೊಳಗೆ (DC Office) ಶವವಾಗಿ ಪತ್ತೆಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಶವವಾಗಿ ಪತ್ತೆಯಾಗಿರುವ ರಾತ್ರಿ ಕರ್ತವ್ಯನಿರತರಾಗಿದ್ದ ಮಹಿಳಾ ಕಾನ್ಸ್‌ಟೇಬಲ್‌ ಮೈಲಾಡುತುರೈ ಜಿಲ್ಲೆಯ ಮಣಕುಡಿ ನಿವಾಸಿಯಾದ ಅಭಿನಯ ಎಂದು ತಿಳಿದು ಬಂದಿದೆ. ಅವರು ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!
ನಾಗಪಟ್ಟಣಂ ಜಿಲ್ಲಾಧಿಕಾರಿ (DC) :

ನಾಗಪಟ್ಟಣಂ ಜಿಲ್ಲಾಧಿಕಾರಿ ಕಚೇರಿಯೊಳಗೆ ಶನಿವಾರ ರಾತ್ರಿ ಕರ್ತವ್ಯನಿರತರಾಗಿದ್ದ ಮಹಿಳಾ ಕಾನ್ಸ್‌ಟೇಬಲ್‌ ಅಭಿನಯ ಭಾನುವಾರ (ಮೇ.25) ರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಅಭಿನಯ ಅವರನ್ನು ಸಶಸ್ತ್ರ ಸಿಬ್ಬಂದಿಯಾಗಿ ನೇಮಿಸಲಾಗಿತ್ತು ಮತ್ತು ಶನಿವಾರ ಜಿಲ್ಲಾಧಿಕಾರಿ ಕಚೇರಿಯೊಳಗೆ ರಾತ್ರಿ ಕರ್ತವ್ಯಕ್ಕೆ ವರದಿ ಮಾಡಲಾಗಿತ್ತು, ಜೊತೆಗೆ ಮತ್ತೊಬ್ಬ ಮಹಿಳಾ ಕಾನ್‌ಸ್ಟೆಬಲ್ ಕೂಡ ಇದ್ದರು.

ಇದನ್ನು ಓದಿ : Sex : ಹೆದ್ದಾರಿಯಲ್ಲಿಯೇ ಮಹಿಳೆಯೊಂದಿಗೆ ಬಿಜೆಪಿ ನಾಯಕನ ಅಶ್ಲೀಲ್ ಕ್ರಿಯೆ.!

ಈ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳು ಶನಿವಾರ ರಾತ್ರಿಯಿಂದ ಭಾನುವಾರದ ಬೆಳಗ್ಗೆ 6ರ ವರೆಗೆ ಜೋಡಿಯಾಗಿಯೇ ಕರ್ತವ್ಯ ನಿರ್ವಹಿಸಿದ್ದರು. ಬೆಳಗ್ಗೆ 6ರ ಸಮಯದಲ್ಲಿ ಜಿಲ್ಲಾಧಿಕಾರಿ ಕಚೇರಿಯೊಳಗಿಂದ ಗುಂಡಿನ ಶಬ್ದ ಕೇಳಿ ಬಂದಿದೆ.

ಶಬ್ದ ಬರುತ್ತಿದಂತೆಯೇ ಇನ್ನೋರ್ವ ಮಹಿಳಾ ಕಾನ್ಸ್‌ಟೇಬಲ್ ಒಳ ಓಡಿ ನೋಡಿದರೆ ಕಾನ್ಸ್‌ಟೇಬಲ್‌ ಅಭಿನಯ ರಕ್ತದ ಮಡುವಿನಲ್ಲಿ ಬಿದ್ದಿದರು. ಇದನ್ನು ಗಾಬರಿಯಾದ ಮತ್ತೋರ್ವ ಮಹಿಳಾ ಕಾನ್ಸ್‌ಟೇಬಲ್‌ ಕೂಡಲೇ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ಇದನ್ನು ಓದಿ : Ghaziabad : ಪೊಲೀಸ್ ಠಾಣೆಯ ಮೇಲ್ಛಾವಣಿ ಕುಸಿದು ಪಿಎಸ್‌ಐ ಸಾವು.!

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಭಿನಯ ಅವರ ಕತ್ತಿಗೆ ಗುಂಡು ತಗಲಿ ಸತ್ತಿರುವುದು ಕಂಡು ಬಂದಿದ್ದು, ಮೃತದೇಹವನ್ನು ನಾಗಪಟ್ಟಣಂ ಸರ್ಕಾರಿ ಆಸ್ಪತ್ರಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನಷ್ಟೆ ಇದು ಆಕಸ್ಮಿಕವಾಗಿ ನಡೆದ ಘಟನೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿದುಬರಬೇಕಾಗಿದೆ.

ಹಿಂದಿನ ಸುದ್ದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 Tablets (ಮಾತ್ರೆಗಳ) ಗುಣಮಟ್ಟದಲ್ಲಿ ಫೇಲ್ ಆಗಿವೆ.

ಔಷಧಿಗಳ ಗುಣಮಟ್ಟದ ಬಗ್ಗೆ ಜನರು ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಸುಮಾರು 3000 ಔಷಧ ಮಾದರಿಗಳಲ್ಲಿ 196 ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿಲ್ಲ (Quality standards not met) ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (CDSCO) ಏಪ್ರಿಲ್ 2025 ರ ವರದಿಯು ಬಹಿರಂಗಪಡಿಸಿದೆ.

ಇದನ್ನು ಓದಿ : Love Marriage : ಪ್ರೀತಿಸಿ ಮನೆ ಬಿಟ್ಟು ಹೋದ ಮಗಳು ; ಕೆರೆಗೆ ಹಾರಿದ 3 ಕುಟುಂಬ ಸದಸ್ಯರು.!

ಪ್ರತಿ ತಿಂಗಳು ಬೇರೆಬೇರೆ ರಾಜ್ಯಗಳಿಂದ ಔಷಧಿಗಳ ಮಾದರಿಗಳನ್ನು ಸಂಗ್ರಹಿಸಿ ಅವುಗಳ ಗುಣಮಟ್ಟವನ್ನು ಈ ಸಂಸ್ಥೆಯು ಪರಿಶೀಲಿಸುತ್ತದೆ. ಈ ಬಾರಿ 60 ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿರುವುದು (Failure) ಕಂಡುಬಂದಿದ್ದು, ರಾಜ್ಯದ ಪ್ರಯೋಗಾಲಯಗಳಲ್ಲಿ 136 ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿರುವುದು ಕಂಡುಬಂದಿದೆ.

ಈ ಮಾದರಿಗಳನ್ನು ‘ಪ್ರಮಾಣಿತ ಗುಣಮಟ್ಟವಲ್ಲದ’ (NSQ) ವರ್ಗದಲ್ಲಿ ಇರಿಸಲಾಗಿದೆ. ಅವು ಸಂಪೂರ್ಣವಾಗಿ ಹಾನಿಕಾರಕವಲ್ಲ, ಆದರೆ ಅಗತ್ಯವಿರುವ ಗುಣಮಟ್ಟದ ಮಾನದಂಡಗಳಲ್ಲಿ ಕೊರತೆ ಕಂಡುಬಂದಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಬೇರೊಬ್ಬಳೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಿಬಿದ್ದ ಲವರ್ ; ಪ್ರೇಯಸಿ ಮಾಡಿದ್ದೇನು ಗೊತ್ತಾ? Video ನೋಡಿ

Tablets :

ದಿನನಿತ್ಯದ ಕಾಯಿಲೆಗಳಿಗೆ ನೀಡಲಾಗುವ ಮೆಟ್ರೋನಿಡಜೋಲ್ (ಸೋಂಕುಗಳಿಗೆ), ಪ್ಯಾರಸಿಟಮಾಲ್ 500 ಮಿಗ್ರಾಂ, ಗ್ಲಿಮೆಪಿರೈಡ್ (ಮಧುಮೇಹಕ್ಕೆ), ಶೆಲ್ಕಲ್ 500, ಪ್ಯಾನ್ ಡಿ, ಟೆಲ್ಮಿಸಾರ್ಟನ್ (ಅಧಿಕ ರಕ್ತದೊತ್ತಡ) ಮತ್ತು ಸೆಪೋಡೆಮ್ ಎಕ್ಸ್‌ಪಿ 50 ಡ್ರೈ ಸಸ್ಪೆನ್ಷನ್ ಮಾತ್ರೆಗಳು ವಿಫಲವಾಗಿವೆ.

ಈ ಔಷಧಿಗಳು ಚಿಕಿತ್ಸೆಯನ್ನು ನಿಷ್ಪರಿಣಾಮಕಾರಿಯನ್ನಾಗಿ (Ineffectively) ಮಾಡುವುದಲ್ಲದೆ, ರೋಗಿಗಳಿಗೆ ಹೆಚ್ಚುವರಿ ಆರೋಗ್ಯ ಅಪಾಯ ಉಂಟು ಮಾಡುತ್ತವೆ. ಕೆಲವೊಮ್ಮೆ ಅವುಗಳ ಸೇವನೆಯು ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments