ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಪೊಲೀಸ್ ಠಾಣೆಯ ಮೇಲ್ಛಾವಣಿ ಕುಸಿದು ಸಬ್ ಇನ್ಸ್‌ಪೆಕ್ಟರ್ (SI) ಸಾವನ್ನಪ್ಪಿರುವ ದುರ್ಘಟನೆಯೊಂದು ಗಾಜಿಯಾಬಾದ್ (Ghaziabad) ನಲ್ಲಿ ನಡೆದಿದೆ.
58 ವರ್ಷದ ಸಬ್ ಇನ್ಸ್‌ಪೆಕ್ಟರ್ ಓರ್ವರು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಪೊಲೀಸ್ ಠಾಣೆಯ ಮೇಲ್ಛಾವಣಿ ಕುಸಿದು ಸಾವನ್ನಪ್ಪಿದ್ದಾರೆ.
ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ.!
Ghaziabad :
ಉತ್ತರ ಪ್ರದೇಶದ (UP) ಗಾಜಿಯಾಬಾದ್‌ನಲ್ಲಿ ನಡೆದ ಈ ದುರ್ಘಟನೆಯಲ್ಲಿ ಸಾವಿಗೀಡಾದ SI ಅವರನ್ನು ಅಂಕುರ್ ವಿಹಾರ್ ಕಚೇರಿಯಲ್ಲಿ ನಿಯೋಜಿತರಾಗಿದ್ದ 58 ವರ್ಷದ ವೀರೇಂದ್ರ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ.
SI ಆಗಿದ್ದ ಮಿಶ್ರಾ ಅವರು ರಾತ್ರಿ ಕಚೇರಿಯಲ್ಲಿ ಮಲಗಿದ್ದ ಸಮಯದಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಚೇರಿಯ ಛಾವಣಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನು ಓದಿ : Sex : ಹೆದ್ದಾರಿಯಲ್ಲಿಯೇ ಮಹಿಳೆಯೊಂದಿಗೆ ಬಿಜೆಪಿ ನಾಯಕನ ಅಶ್ಲೀಲ್ ಕ್ರಿಯೆ.!
ಅವರು ಶ್ರೀ ಮಿಶ್ರಾ ಅವರನ್ನು ಅವರನ್ನು ಅವಶೇಷಗಳಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
SI ವೀರೇಂದ್ರ ಕುಮಾರ್ ಮಿಶ್ರಾ ಇಟಾವಾ ಜಿಲ್ಲೆಯವರಾಗಿದ್ದು, ಅವರ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ಕುಟುಂಬಕ್ಕೆ ತಿಳಿಸಲಾಯಿತು.
ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!
ದೆಹಲಿ-ಎನ್‌ಸಿಆರ್ (Dehli-NCR) ನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ನೀರು ನಿಂತಿದ್ದು, ರಸ್ತೆಗಳು ಕೊಳಗಳಂತೆ ಕಾಣುತ್ತಿದ್ದು, ವಾಹನಗಳ ಸಂಚಾರ ಕಷ್ಟಕರವಾಗುತ್ತಿದೆ. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲೂ ಭಾರಿ ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿವೆ. ಭಾರತ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಿಸಿದೆ.
ಹಿಂದಿನ ಸುದ್ದಿ : Belagavi : ಇನ್ನೇರಡೇ ವರ್ಷದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಹೊಸ ಲುಕ್.!
ಜನಸ್ಪಂದನ ನ್ಯೂಸ್, ಬೆಳಗಾವಿ : ಉತ್ತರ ಕರ್ನಾಟಕದ ಪ್ರಸಿದ್ಧ ಸುಕ್ಷೇತ್ರ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಸಿದ್ಧಪಡಿಸಿದ ‘ಮಾಸ್ಟರ್ ಪ್ಲ್ಯಾನ್’ಗೆ ಅನುಮೋದನೆ ಸಿಕ್ಕಿದೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಇನ್ನೇನು ಕೇವಲ ಒಂದು ವಾರದಲ್ಲಿ ಟೆಂಡರ್ ಕರೆದು, ಎರಡು ವಾರಗಳಲ್ಲಿ ಕೆಲಸ ಶುರು ಮಾಡಲಾಗುವುದು ಅಲ್ಲದೇ ಬರುವ ಎರಡು ವರ್ಷಗಳ ಒಳಗೆ ಗುಡ್ಡಕ್ಕೆ ಹೊಸ ಕಳೆ ಬರಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಹೇಳಿದರು.
ಇದನ್ನು ಓದಿ : Belagavi : ಕೊಗನೊಳ್ಳಿ ಟೋಲ್ ನಾಕಾದಲ್ಲಿ ಅಗ್ನಿ ಅವಘಡ.!
ಇನ್ನು ಈ ಸುಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಳೀಯ ಜನರು ತಮ್ಮ ವೈಯಕ್ತಿಕ ಲಾಭ ಬದಿಗಿಟ್ಟು ಸಹಕರಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಸುಮಾರು ಪ್ರತಿ ವರ್ಷ 3 ಕೋಟಿಗೂ ಅಧಿಕ ಭಕ್ತರು ಸವದತ್ತಿ ‘ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡುತ್ತಾರೆ. ಇಂಥ ದೇವಸ್ಥಾನದ ಅಭಿವೃದ್ಧಿಗೆ ಇಷ್ಟು ವರ್ಷ ವೇಗವಾಗಿ ನಡೆದಿಲ್ಲ. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ರೂ.300 ಕೋಟಿಯಲ್ಲಿ ವೈವಿಧ್ಯಮಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು DC ತಿಳಿಸಿದ್ದಾರೆ.
ಇದನ್ನು ಓದಿ : Health : ಮೊಣಕಾಲು ನೋವಿಗೆ ತಕ್ಷಣ ಪರಿಹಾರ ನೀಡುತ್ತೆ ಈ ಎಣ್ಣೆ.!
‘ಗುಡ್ಡದಲ್ಲಿ 1,098 ಎಕರೆ ಜಾಗವಿದೆ. ಇದರಲ್ಲಿ 100 ಎಕರೆ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸ್ಥಿರಾಸ್ತಿ ಇದೆ. ಉಳಿದ ಜಮೀನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಿದೆ.
ದೇವಸ್ಥಾನದ ಸ್ವರೂಪ :
ಮೂಲ ದೇವಸ್ಥಾನದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ವೃತ್ತಾಕಾರದ ಪ್ರದೇಶ ಗುರುತಿಸಲಾಗುವುದು. ಅಲ್ಲಿ ಭಕ್ತಿ ಚಟುವಟಿಕೆ ಬಿಟ್ಟರೆ ಬೇರೇನೂ ಮಾಡಲು ಅವಕಾಶ ಇರುವುದಿಲ್ಲ. ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ. ಆ ಪ್ರದೇಶವನ್ನು ವಾಹನ- ಚಕ್ಕಡಿಗಳ ಪಾರ್ಕಿಂಗ್, ಮೇವು ದಾಸೋಹಕ್ಕೆ ಬಳಸಲಾಗುವುದು. ದೇವಿಗೆ ನೈವೇದ್ಯ ಸಿದ್ಧಪಡಿಸುವವರಿಗಾಗಿ ‘ಓಪನ್ ಕಿಚನ್’ಗಳನ್ನೂ ಕಟ್ಟಲಾಗುವುದು’ ಎಂದರು.
‘ತಿರುಪತಿ ಮಾದರಿಯಲ್ಲಿ ಬೃಹತ್ ‘ಕ್ಯೂ ಕಾಂಪ್ಲೆಕ್ಸ್’ ನಿರ್ಮಿಸಿ, ಅಲ್ಲಿ 16 ಸಭಾಂಗಣ ಕಟ್ಟಲಾಗುವುದು. ಅದರೊಳಗೆ ಊಟ, ಉಪಾಹಾರ, ಶೌಚಾಲಯ, ನೀರು, ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗುವುದು. ಹುಣ್ಣಿಮೆಗಳ ಸಂದರ್ಭದಲ್ಲಿ 10ರಿಂದ 15 ಲಕ್ಷ ಜನ ಸೇರುತ್ತಾರೆ. ಸದ್ಯ 50 ಸಾವಿರ ಜನ ಮಾತ್ರ ದರ್ಶನ ಪಡೆಯುವಂಥ ಸ್ಥಿತಿ ಇದೆ. ಕ್ಯೂ ಕಾಂಪ್ಲೆಕ್ಸ್ ಮೂಲಕ ಎಲ್ಲರಿಗೂ ದರ್ಶನ ಒದಗಿಸುವ ವಿಶಿಷ್ಟ ವ್ಯವಸ್ಥೆ ಆಗಲಿದೆ’ ಎಂದೂ ವಿವರಿಸಿದರು.
ಇದನ್ನು ಓದಿ : ಕಾರು-ಖಾಸಗಿ ಬಸ್ ಅಪಘಾತ ; ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 6 ಮಂದಿ ಸಾವು.!
‘ಧರ್ಮಸ್ಥಳ ಮಾದರಿಯಲ್ಲಿ ದಾಸೋಹ ಭವನ ಕಟ್ಟಲಾಗುವುದು. ಏಕಕಾಲಕ್ಕೆ 5,000 ಜನ ಊಟ ಮಾಡಬಹುದು. ಒಂದೇ ದಿನದಲ್ಲಿ ಲಕ್ಷಾಂತರ ಜನರಿಗೆ ದಾಸೋಹ ಒದಗಿಸಲು ಸಾಧ್ಯವಾಗಲಿದೆ. ಇನ್ನೊಂದೆಡೆ ಬೃಹದ್ದಾದ ‘ಕಮಾಂಡ್ ಸೆಂಟರ್’ ಕಟ್ಟಡ ಇರಲಿದೆ. ಇದರಲ್ಲಿ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷ, ಪ್ರಾಧಿಕಾರದ ಕಾರ್ಯದರ್ಶಿ ಕಚೇರಿಗಳು, ಸಿಬ್ಬಂದಿ, ಭದ್ರತೆ, ಸಿಸಿಟಿವಿ, ಪಾರ್ಕಿಂಗ್… ಎಲ್ಲವೂ ಒಂದೇ ಸ್ಥಳದಿಂದ ನಿರ್ವಹಣೆ ಆಗಲಿವೆ. ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ವಸತಿ ಸಮುಚ್ಛಯಗಳು ತಲೆ ಎತ್ತಲಿವೆ’ ಎಂದು ಮೊಹಮ್ಮದ್ ತಿಳಿಸಿದರು.
ರಸ್ತೆ ವಿಸ್ತರಣೆಗೆ ರೂ.30 ಕೋಟಿ :
‘ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಎಲ್ಲ ರಸ್ತೆಗಳನ್ನೂ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ₹30 ಕೋಟಿ ಪ್ರತ್ಯೇಕ ಅನುದಾನವನ್ನು ಸಚಿವ ಸತೀಶ ಜಾರಕಿಹೊಳಿ ಮಂಜೂರು ಮಾಡಿದ್ದಾರೆ’ ಎಂದು ಮೊಹಮ್ಮದ್ ರೋಷನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನು ಓದಿ : ED : ಗೃಹಸಚಿವ ಜಿ. ಪರಮೇಶ್ವರ್ ಒಡೆತನದ ಕಾಲೇಜಿನ ಮೇಲೆ ED ದಾಳಿ.!
‘ದೇವಸ್ಥಾನದಿಂದ 300 ಮೀಟರ್ ದೂರದಲ್ಲಿ ವಾಣಿಜ್ಯ ಕೇಂದ್ರ ಇರಲಿದೆ. ಈಗಾಗಲೇ ಯಾರು ಮಳಿಗೆಗಳನ್ನು ಹೊಂದಿದ್ದಾರೋ ಅವರಿಗೇ ಮೊದಲ ಆದ್ಯತೆ ನೀಡಿ ಮಳಿಗೆ ಕೊಡಲಾಗುವುದು. ಹಂಗಾಮಿ ವರ್ತಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೇ ಪ್ರಾಧಾನ್ಯತೆ ನೀಡಲಾಗುವುದು’ ಎಂದೂ ಹೇಳಿದರು.
ಶೌಚಾಲಯ ಅಲ್ಲ ; ಗೌರವ ಘಟಕ :
‘ಶುಚಿತ್ವ ಕಾಪಾಡಲು ಸಾಕಷ್ಟು ಸಂಖ್ಯೆಯ ‘ಗೌರವ ಘಟಕ’ಗಳನ್ನು ನಿರ್ಮಿಸಲಾಗುವುದು. ಇವು ಶೌಚಾಲಯಗಳು ಮಾತ್ರವಲ್ಲ; ಸ್ನಾನಕ್ಕೂ, ಅಲಂಕಾರಕ್ಕೂ ಅನುಕೂಲವಾಗುತ್ತವೆ. ಪಾನ್- ಗುಟಕಾ, ಮದ್ಯ ಮಾರಾಟ ನಿಯಂತ್ರಿಸಿ ಸಂಪೂರ್ಣ ಸ್ವಚ್ಛತೆ ಕಾಪಾಡಲಾಗುವುದು. ಪ್ರವಾಸೋದ್ಯಮ ಆಕರ್ಷಣೆಗಾಗಿ ಜೋಗುಳಬಾವಿಯಿಂದ ಗುಡ್ಡದ ಮೇಲಿನ ದೇವಸ್ಥಾನದವರೆಗೆ ‘ರೋಪ್ ವೇ’ ನಿರ್ಮಿಸಲಾಗುವುದು. ಇ- ದರ್ಶನ, ಇ-ಹುಂಡಿಯಂಥ ಯೋಜನೆಗಳೂ ಮುಂದೆ ಬರಲಿವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
Courtesy : ಪ್ರಜಾವಾಣಿ.