Saturday, June 14, 2025

Janaspandhan News

HomeHealth & FitnessHealth : ಮೊಣಕಾಲು ನೋವಿಗೆ ತಕ್ಷಣ ಪರಿಹಾರ ನೀಡುತ್ತೆ ಈ ಎಣ್ಣೆ.!
spot_img
spot_img

Health : ಮೊಣಕಾಲು ನೋವಿಗೆ ತಕ್ಷಣ ಪರಿಹಾರ ನೀಡುತ್ತೆ ಈ ಎಣ್ಣೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಹಿರಿಯರು, ಕಿರಿಯರೆನ್ನದೆ ಇತ್ತೀಚಿನ ದಿನಗಳಲ್ಲಿ ಕಾಲು ನೋವು, ಮಂಡಿ ನೋವು ಹಾಗೆಯೇ ಮೂಳೆಗಳ ನೋವು (Bone pain) ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ನಾವು ಕೆಲಸ ಮಾಡಲೀ ಬಿಡಲೀ ನೋವು ಮಾತ್ರ ಕಾಡದೆ ಬಿಡದು. ಹಲವರಿಗೆ ಹಗಲಿನ ಸಮಯದಲ್ಲಿ ನೋವು ಉಂಟಾದರೆ ಕೆಲವರಿಗೆ ರಾತ್ರಿ ಆಗುತ್ತಿದ್ದಂತೆ ನೋವು ಪ್ರಾಣ ಹಿಂಡುತ್ತದೆ.

ಇದನ್ನು ಓದಿ : Accident : ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು ; ಮೂವರ ಸಾವು.!

ಈ ಮೊಣಕಾಲು ನೋವನ್ನು (Knee pain) ಹೋಗಲಾಡಿಸಲು ಆಯುರ್ವೇದ ತೈಲವನ್ನು ಬಳಸಬೇಕು. ಮೊಣಕಾಲು ನೋವನ್ನು ನಿವಾರಿಸುವ ಆಯುರ್ವೇದ ಎಣ್ಣೆಯನ್ನು (Ayurveda Oil) ಮನೆಯಲ್ಲಿಯೇ ತಯಾರಿಸುವುದು ಸುಲಭ. ಈ ಎಣ್ಣೆಯ ಬಳಕೆಯಿಂದ ಮಂಡಿ ನೋವು ನಿವಾರಣೆಯಾಗುತ್ತದೆ.

ಈ ಆಯುರ್ವೇದ ತೈಲವು ನೋವನ್ನು ನಿವಾರಿಸಿ, ಊತವನ್ನು ಕಡಿಮೆ (Reduce swelling) ಮಾಡುತ್ತದೆ. ಇದನ್ನು ಹಚ್ಚುವುದರಿಂದ ರಕ್ತ ಸಂಚಾರವೂ ಉತ್ತಮಗೊಳ್ಳುತ್ತದೆ.

ಇದನ್ನು ಓದಿ : Phone : ಫೋನಿನ ಬ್ಯಾಕ್ ಕವರ್ ಬಣ್ಣ ಬದಲಾಗುವುದೇಕೆ ಗೊತ್ತಾ.?

ಇನ್ನೂ ಈ ಎಣ್ಣೆಯನ್ನು ಮನೆಯಲ್ಲೇ ತಯಾರಿಸಬಹುದು. ಕೀಲು ನೋವು ಮತ್ತು ಇತರ ದೇಹದ ನೋವುಗಳನ್ನು ಗುಣಪಡಿಸಲು ನೀವು ಈ ಎಣ್ಣೆಯನ್ನು ಬಳಸಬಹುದು. ಆ ಎಣ್ಣೆ ಯಾವುದೆಂದರೆ ಅದು ಬೆಳ್ಳುಳ್ಳಿ ಎಣ್ಣೆ (Garlic oil).

ಈ ಬೆಳ್ಳುಳ್ಳಿ ಎಣ್ಣೆಯನ್ನು ತಯಾರಿಸುವುದು ಹೇಗೆ.?

  • ಮೂರರಿಂದ ನಾಲ್ಕು ಎಸಳು ಬೆಳ್ಳುಳ್ಳಿ, ಎರಡು ಚಮಚ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಬೇಕು.
  • ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಸರಿಯಾಗಿ ಬಿಸಿ ಮಾಡಬೇಕು.
  • ಬಿಸಿಯಾದ ನಂತರ ಅದಕ್ಕೆ ಬೆಳ್ಳುಳ್ಳಿ ಎಸಳು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಫ್ರೈ ಮಾಡಬೇಕು.
  • ಬೆಳ್ಳುಳ್ಳಿ ಬಣ್ಣವನ್ನು ಬದಲಾಯಿಸಿದಾಗ ಅನಿಲವನ್ನು ಆಫ್ ಮಾಡಿ.
ಇದನ್ನು ಓದಿ : SBI : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,323 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಈಗ ಈ ಎಣ್ಣೆ ಸ್ವಲ್ಪ ಬೆಚ್ಚಗಿರುವಾಗ ನೋವಿನ ಕೀಲುಗಳಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು (Massage gently). ಇದರ ನಿಯಮಿತ ಬಳಕೆಯು ನೋವಿನ ದೂರುಗಳನ್ನು ನಿವಾರಿಸುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಹಿಂದಿನ ಸುದ್ದಿ : Accident : ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು ; ಮೂವರ ಸಾವು.!

ಜನಸ್ಪಂದನ ನ್ಯೂಸ್, ಚಿಕ್ಕಬಳ್ಳಾಪುರ : ಚಾಲಕನ ನಿಯಂತ್ರಣ ತಪ್ಪಿ (Driver lost control) ಬಾವಿಗೆ ಕಾರು ಬಿದ್ದು ಮೂವರು ಸಾವಿಗೀಡಾದ ಘಟನೆ ನಡೆದಿದೆ.

ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ (Annamaya district of Andhra Pradesh) ಕುರವಪಲ್ಲಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಕರ್ನಾಟಕ ಮೂಲದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಇದನ್ನು ಓದಿ : ಪಾಕ್ ಪರ ಬೇಹುಗಾರಿಕೆ : ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಜನ ಅರೆಸ್ಟ್.!

ಮೃತಪಟ್ಟವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ (Chintamani from Chikkaballapur district) ತಾಲೂಕಿನ ಚಂದ್ರನಹಳ್ಳಿ ನಿವಾಸಿ ಶಿವಾನಂದ, ಮುತ್ತಕದದಲ್ಲಿಯ ಲೋಕೇಶ್ ಹಾಗೂ ಕೋಲಾರ ಜಿಲ್ಲೆಯ ಸುಗಟೂರಿನ ಚಲಪತಿ ಎಂದು ತಿಳಿದು ಬಂದಿದೆ.

ಅಡುಗೆ ಕೆಲಸಕ್ಕಾಗಿ (For cooking work) ಕಾರಿನಲ್ಲಿ ಒಟ್ಟು ಐವರು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ವಾಹನವು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ. ಪರಿಣಾಮ ಲೋಕೇಶ್, ಶಿವಾನಂದ, ಚಲಪತಿ ಮೃತಪಟ್ಟಿದ್ದಾರೆ.

ಇದನ್ನು ಓದಿ : Health : ಬೆಳಿಗ್ಗೆ ಈ ನೀರು ಕುಡಿದರೆ ಸಾಕು ; ಬೆಣ್ಣೆಯಂತೆ ಕರಗಿ ಹೋಗುವುದು ಬೊಜ್ಜು.!

ಈ ಅಪಘಾತದಲ್ಲಿ ಸುನೀಲ್‌, ತಿಪ್ಪಾರೆಡ್ಡಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು (serious injuries), ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಪೀಲೇರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments