ಜನಸ್ಪಂದನ ನ್ಯೂಸ್, ಚಿಕ್ಕಬಳ್ಳಾಪುರ : ಚಾಲಕನ ನಿಯಂತ್ರಣ ತಪ್ಪಿ (Driver lost control) ಬಾವಿಗೆ ಕಾರು ಬಿದ್ದು ಮೂವರು ಸಾವಿಗೀಡಾದ ಘಟನೆ ನಡೆದಿದೆ.
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ (Annamaya district of Andhra Pradesh) ಕುರವಪಲ್ಲಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಕರ್ನಾಟಕ ಮೂಲದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಇದನ್ನು ಓದಿ : ಪಾಕ್ ಪರ ಬೇಹುಗಾರಿಕೆ : ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಜನ ಅರೆಸ್ಟ್.!
ಮೃತಪಟ್ಟವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ (Chintamani from Chikkaballapur district) ತಾಲೂಕಿನ ಚಂದ್ರನಹಳ್ಳಿ ನಿವಾಸಿ ಶಿವಾನಂದ, ಮುತ್ತಕದದಲ್ಲಿಯ ಲೋಕೇಶ್ ಹಾಗೂ ಕೋಲಾರ ಜಿಲ್ಲೆಯ ಸುಗಟೂರಿನ ಚಲಪತಿ ಎಂದು ತಿಳಿದು ಬಂದಿದೆ.
ಅಡುಗೆ ಕೆಲಸಕ್ಕಾಗಿ (For cooking work) ಕಾರಿನಲ್ಲಿ ಒಟ್ಟು ಐವರು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ವಾಹನವು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ. ಪರಿಣಾಮ ಲೋಕೇಶ್, ಶಿವಾನಂದ, ಚಲಪತಿ ಮೃತಪಟ್ಟಿದ್ದಾರೆ.
ಇದನ್ನು ಓದಿ : Health : ಬೆಳಿಗ್ಗೆ ಈ ನೀರು ಕುಡಿದರೆ ಸಾಕು ; ಬೆಣ್ಣೆಯಂತೆ ಕರಗಿ ಹೋಗುವುದು ಬೊಜ್ಜು.!
ಈ ಅಪಘಾತದಲ್ಲಿ ಸುನೀಲ್, ತಿಪ್ಪಾರೆಡ್ಡಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು (serious injuries), ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪೀಲೇರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.