Saturday, June 14, 2025

Janaspandhan News

HomeJobDRDO ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img

DRDO ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ, ನೌಕರಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Rave party : 7 ಯುವತಿಯರು ಸೇರಿ 30 ಜನ ಪೊಲೀಸ್‌ ವಶಕ್ಕೆ.!
DRDO ಹುದ್ದೆಗಳ ಮಾಹಿತಿ :
  • ಸಂಸ್ಥೆಯ ಹೆಸರು : DRDO, ADA ಮತ್ತು ಮೀಸಲು ವರ್ಗಗಳ ಹುದ್ದೆಗಳು.
  • ಒಟ್ಟು ಹುದ್ದೆಗಳು : ಒಟ್ಟು 148 ಹುದ್ದೆಗಳು.
ವಿದ್ಯಾರ್ಹತೆ :
  • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ನಿಯಮನುಸಾರ B.Tech/BE /ME/MA/MSE ಪದವಿಯನ್ನು ಅಭ್ಯರ್ಥಿಗಳು ಪೂರ್ಣಗೊಳಿಸಿರಬೇಕು.
ಇದನ್ನು ಓದಿ : Ghaziabad : ಪೊಲೀಸ್ ಠಾಣೆಯ ಮೇಲ್ಛಾವಣಿ ಕುಸಿದು ಪಿಎಸ್‌ಐ ಸಾವು.!
ಹುದ್ದೆಯ ಸ್ಥಳ :
  • ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ವಿವಿಧ ಕಡೆ ಕೆಲಸ ನಿರ್ವಹಿಸಬೇಕಾಗುತ್ತದೆ.
ಅರ್ಜಿ ಶುಲ್ಕ :
  • ಎಸ್ಸಿ/ಎಸ್ಟಿ/PWBD/ಮಹಿಳಾ ಅಭ್ಯರ್ಥಿಗಳಿಗೆ : 0 ಶುಲ್ಕ (ಅರ್ಜಿ ಶುಲ್ಕ ಇರುವುದಿಲ್ಲ).
  • ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳಿಗೆ : 100 /- ರೂ. ಅರ್ಜಿ ಶುಲ್ಕ ಇರುತ್ತದೆ.
  • ಮೋಡ್‌ : Online ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಇದನ್ನು ಓದಿ : Rainy season : ಈ ಪದಾರ್ಥಗಳನ್ನು ತಿನ್ನಿ ; ಸೋಂಕು ತಗಲುವುದೇ ಇಲ್ಲ.!
ವೇತನ :

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO RAC Recruitment In Kannada 2025) ಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 56,100/- ರಿಂದ ರೂ.1,00,000/- ವರೆಗೆ ವೇತನ ನೀಡಲಾಗುತ್ತದೆ.

ವಯೋಮಿತಿ :
  • ಸಾಮಾನ್ಯ/EWS ಅಭ್ಯರ್ಥಿಗಳಿಗೆ : 35 ವರ್ಷ.
  • ಒಬಿಸಿ ಅಭ್ಯರ್ಥಿಗಳಿಗೆ : 38 ವರ್ಷ.
  • ಎಸ್ಸಿ/ಎಸ್ಟಿ/PWBD ಅಭ್ಯರ್ಥಿಗಳಿಗೆ : 40 ವರ್ಷ.
ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?
ವಯೋಮಿತಿ ಸಡಿಲಿಕೆ :

ಸರ್ಕಾರಿ ನಿಯಮಾವಳಿಗಳ ಪ್ರಕಾರ ಮಿಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಿದೆ.

ಪ್ರಮುಖ ದಿನಾಂಕಗಳು :
  • ಅರ್ಜಿ ಪ್ರಾರಂಭದ ದಿನಾಂಕ : 20 ಮೇ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09 ಜೂನ್‌ 2025. 
ಪ್ರಮುಖ ಲಿಂಕ್‌ :
ಇದನ್ನು ಓದಿ : Ballari : ಟಿಪ್ಪರ್‌ಗೆ ಕಾರು ಡಿಕ್ಕಿ ; ಇಬ್ಬರು ಮಕ್ಕಳು ಸೇರಿ 4 ಸಾವು.!
ಆಯ್ಕೆ ಪ್ರಕ್ರಿಯೆ :
  • ಗೇಟ್ ಸ್ಕೋರ್/GATE Score.
  • ವೈದ್ಯಕೀಯ ಪರೀಕ್ಷೆ/Medical Test.
  • ಸಂದರ್ಶನ/Interview.
ಅರ್ಜಿ ಸಲ್ಲಿಸುವ ಪ್ರಮುಖ ವಿಧಾನ :
  • ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪ್ರಕಟಣೆ (Official website ನಲ್ಲಿ) ಯನ್ನು ಸಂಪೂರ್ಣವಾಗಿ ಓದಿ.
  • ಅರ್ಹತೆ, ಆಯ್ಕೆ ಪ್ರಕ್ರಿಯೆ, ಹಾಗೂ ಅಗತ್ಯ ದಾಖಲೆಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಿ.
  • ಅಧಿಕೃತ ಲಿಂಕ್‌ಗೆ ಭೇಟಿ ನೀಡಿ.
  • ಸರಿಯಾದ E-mail ಮತ್ತು ಫೋನ್ ನಂಬರನ್ನು ಹೊಂದಿರಿ.
  • ವಯಸ್ಸಿನ ಪ್ರೂಫ್, ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳು, ರೆಸ್ಯೂಮ್ ಅಥವಾ ಅನುಭವವಿದ್ದರೆ ಅನುಭವ ಪ್ರಮಾಣಪತ್ರ.
  • ಯಾವುದೇ ಪಠ್ಯೇತರ ಅರ್ಹತೆ/ಪ್ರಶಸ್ತಿ ಪ್ರಮಾಣಪತ್ರಗಳು.
  • ತುಂಬಿದ ಅರ್ಜಿಯನ್ನು ಮತ್ತೋಮ್ಮೆ ಸರಿಯಾಗಿ ಪರಶೀಲಿಸಿ submit ಮಾಡಿರಿ.
  • ಕೊನೆಯದಾಗಿ Printe ತೆಗೆದಿಟ್ಟುಕೊಳ್ಳಲು ಮರೆಯಬೇಡಿ.
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

ಜನಸ್ಪಂದನ ನ್ಯೂಸ್‌, ಬೆಂಗಳೂರು : ಮದ್ಯದ ನಶೆಯಲ್ಲಿದ ವ್ಯಕ್ತಿಯೋರ್ವ ಪೊಲೀಸರ ಮೇಲೆಯೇ ಕಾರು ಹರಿಸಲು ಯತ್ನಿಸಿದ ಘಟನೆಯೊಂದು ಬೆಂಗಳೂರಿನ (Bengaluru) ಕೋರಮಂಗಲದ (Koramangal) ಜ್ಯೋತಿ ನಿವಾಸ ಕಾಲೇಜು ಬಳಿ ನಡೆದಿದೆ.

ಮದ್ಯದ ನಶೆಯಲ್ಲಿದ ಈ ವ್ಯಕ್ತಿ ಒನ್​ ವೇ (One way) ಯಲ್ಲಿ ಕಾರು ನುಗ್ಗಿಸಿ ಹಲವು ವಾಹನಗಳಿಗೆ ಹಾನಿ ಉಂಟು ಮಾಡಿದ್ದಲ್ಲದೆ, ತಡೆಯಲು ಬಂದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾನೆ. ಆ ಆರೋಪಿಯನ್ನು ನಂದಕೃಷ್ಣ ಎಂದು ಗುರುತಿಸಲಾಗಿದೆ.

ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!
Bengaluru :

ಮೇ 25, 2025 ರಂದು, ಬೆಳಗಿನ ಜಾವ 1:30 ರ ಸುಮಾರಿಗೆ, ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನ ಎದುರಿನ ಕೋರಮಂಗಲದಲ್ಲಿ ಅಜಾಗರೂಕತೆಯಿಂದ ಕುಡಿದು ವಾಹನ ಚಲಾಯಿಸಿದ ಆಘಾತಕಾರಿ ಘಟನೆ ನಡೆದಿದೆ.

ತಡರಾತ್ರಿಯ ಪಾರ್ಟಿಯಿಂದ ಹಿಂತಿರುಗುತ್ತಿದ್ದಾಗ ಅತಿಯಾದ ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ತನ್ನ ವಾಹನದ ನಿಯಂತ್ರಣ ಕಳೆದುಕೊಂಡು ಅತಿ ವೇಗದಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳಿಗೂ ಡಿಕ್ಕಿ ಹೊಡೆದಿದ್ದಾನೆ. ಚಾಲಕ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿ ವಹಿಸಲಿಲ್ಲ, ರಸ್ತೆಯಲ್ಲಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಜನರು ಗಾಯಗೊಂಡಿದ್ದಾರೆ.

ಇದನ್ನು ಓದಿ : Rave party : 7 ಯುವತಿಯರು ಸೇರಿ 30 ಜನ ಪೊಲೀಸ್‌ ವಶಕ್ಕೆ.!

ಕಾರು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ನೇರವಾಗಿ ಡಿಕ್ಕಿ ಹೊಡೆದು ಕಾರಣವಾದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ವಾಹನವು ಜನದಟ್ಟಣೆಯ ಪ್ರದೇಶದಲ್ಲಿ ಅಜಾಗರೂಕತೆಯಿಂದ ಚಲಿಸಿದ್ದರಿಂದ ಹಲವಾರು ಸಾರ್ವಜನಿಕರು ಗಾಯಗೊಂಡರು. ಚಾಲಕ ನಿಯಂತ್ರಣ ಮೀರಿ ಕುಡಿದಿದ್ದು, ಆತನಿಗೆ ಸುತ್ತಮುತ್ತಲಿನ ಬಗ್ಗೆ ಸಂಪೂರ್ಣವಾಗಿ ತಿಳುವಳಕೆ ಇದ್ದಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ನಂತರ ಪೊಲೀಸರು ಕಾರಿನ ಗಾಜು ಒಡೆದು ನಂದಕೃಷ್ಣನನ್ನು ಹೊರತೆಗೆಯುತ್ತಿರುವ ವಿಡಿಯೋವನ್ನು ಕಾಣಬಹುದಾಗಿದೆ.

ಇದನ್ನು ಓದಿ : Ghaziabad : ಪೊಲೀಸ್ ಠಾಣೆಯ ಮೇಲ್ಛಾವಣಿ ಕುಸಿದು ಪಿಎಸ್‌ಐ ಸಾವು.!

ಈ ವಿಡಿಯೋವನ್ನು “Karnataka Portfolio” ಎಂಬ X ಖಾತೆಯಲ್ಲಿ ಹಂಚಿಕೊಳ್ಖಲಾಗಿದ್ದು, ಈ ವಿಡಿಯೋವನ್ನು 19.4K ಗೂ ಹೆಚ್ಚು Views ಪಡೆದುಕೊಂಡಿದೆ.

ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಈ ಘಟನೆ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದ್ದು, ಕಠಿಣ ಕ್ರಮ ಕೈಗೊಳ್ಳುವ ಮೊದಲು ಇನ್ನೂ ಎಷ್ಟು ಜೀವಗಳನ್ನು ಅಪಾಯಕ್ಕೆ ಸಿಲುಕಬೇಕೋ ಏನೋ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.
ವಿಡಿಯೋ ನೋಡಿ :

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments