Saturday, June 14, 2025

Janaspandhan News

HomeViral VideoTiger : ಹುಲಿಯ ಜೊತೆ ಸೆಲ್ಫಿಗೆ ಮುಂದಾದ ಯುವಕ ; ಮುಂದೆನಾಯ್ತು.? ವಿಡಿಯೋ.
spot_img
spot_img

Tiger : ಹುಲಿಯ ಜೊತೆ ಸೆಲ್ಫಿಗೆ ಮುಂದಾದ ಯುವಕ ; ಮುಂದೆನಾಯ್ತು.? ವಿಡಿಯೋ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಓರ್ವ ಯುವಕ ಹುಲಿ (Tiger) ಯ ಜೊತೆ ಸೆಲ್ಫಿಗೆ ಮುಂದಾದಾಗ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೌದು, ಥೈಲ್ಯಾಂಡ್‌ನ ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್‌ನಲ್ಲಿ ಕಾಡು ಪ್ರಾಣಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ ಮಾಡಿದೆ.

ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

ಟೈಗರ್ ಕಿಂಗ್‌ಡಮ್ ಥೈಲ್ಯಾಂಡ್‌ನ ಫುಕೆಟ್‌ನಲ್ಲಿರುವ ವನ್ಯಜೀವಿ ಆಕರ್ಷಣೆಯಾಗಿದ್ದು, ವಿವಿಧ ವಯಸ್ಸಿನ ಮತ್ತು ಗಾತ್ರದ ಹುಲಿ (Tiger) ಗಳೊಂದಿಗೆ ನಿಕಟವಾಗಿ ಸಂವಹನ ನಡೆಸಲು ಸಂದರ್ಶಕರಿಗೆ ಅವಕಾಶವನ್ನು ನೀಡುತ್ತಿರುವ ಸ್ಥಳವಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ವೈರಲ್‌ ವಿಡಿಯೋದಲ್ಲಿ ಓರ್ವ ತರಬೇತುದಾರ ಯುವಕ ಹುಲಿ (Tiger) ಯನ್ನು ಕುತ್ತಿಗೆಗೆ ಸರಪಳಿಯಿಂದ ಕಟ್ಟಿ ಅದನ್ನು ಹಿಡಿದು ಬರುತ್ತಿರುವುದು ದೃಶ್ಯದಲ್ಲಿ  ಕಂಡುಬರುತ್ತದೆ.

ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.

ಹೀಗೆ ತರಬೇತುದಾರ ಯುವಕ ಹುಲಿಯನ್ನು ಹಿಡಿದು ಬರುತ್ತಿಬೇಕಾದರೆ, ಓರ್ವ ಭಾರತೀಯ ಯುವಕ ಹುಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾನೆ. ಈ ವೇಳೆ ತರಬೇತುದಾರ ಹುಲಿಯ ಪಕ್ಕದಲ್ಲಿ ಮಂಡಿಯೂರಿ ಕುಳಿತುಕೊಳ್ಳುತ್ತಾನೆ.

ಆಗ ಭಾರತೀಯ ಯುವಕ ಹುಲಿ (Tiger) ಯ ಜೊತೆಗೆ ಸೆಲ್ಫಿಗೆ ಮುಂದಾಗುತ್ತಿದಂತೆಯೇ ಇದ್ದಕ್ಕಿದ್ದಂತೆ ಹುಲಿ ದಾಳಿ ಮಾಡಿ ಯುವಕನನ್ನು ನೆಲಕ್ಕೆ ಕೆಡವುತ್ತದೆ. ಇದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನು ಓದಿ : Health : ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!

ಸೆಲ್ಫಿಗೆ ಮುಂದಾಗಿದ ಯುವಕ ತಕ್ಷಣವೇ ತನ್ನ ರಕ್ಷಣೆಗಾಗಿ ಕಿರುಚಲು ಆರಂಭಿಸುತ್ತಾನೆ. ತರಬೇತುದಾರ ಯುವಕ ಹುಲಿಯನ್ನು ಸುಧಾರಿಸಲು ಪ್ರಯತ್ನಿಸಿರಬಹುದು. ಆದರೆ ಮುಂದೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿಡಿಯೋ ಮುಗಿಯುವವರೆಗೂ ಪ್ರವಾಸಿಗರ ಕಿರುಚಾಟ ಕೇಳಿಬರುತ್ತಿತ್ತು.

ಆದರೆ ಆ ಹುಲಿ ಸೆಲ್ಫಿಗೆ ಮುಂದಾದ ಯುವಕನ ಮೇಲೆ ಯಾಕೆ ದಾಳಿ ಮಾಡಿತು? ಹೀಗೊಂದು ಪ್ರಶ್ನೆ ಮೂಡುತ್ತದೆ. ಈ ವಿಡಿಯೋ ಪ್ರತಿಕ್ರಿಯೆಗಳ ಸುರಿಮಳೆಗೆ ಕಾರಣವಾಗಿದ್ದು ಹೆಚ್ಚಾಗಿ ಹುಲಿಯ ಬಗ್ಗೆ ಸಹಾನುಭೂತಿ ಮತ್ತು ವನ್ಯಜೀವಿ ಪ್ರವಾಸೋದ್ಯಮದ ಅಭ್ಯಾಸವನ್ನು ಟೀಕಿಸಿದ್ದಾರೆ.

ಇದನ್ನು ಓದಿ : HFWS : ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

“ಹುಲಿಗೆ ಉತ್ತಮ ಊಟ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಆಶಾದಾಯಕವಾಗಿ, ಇದು ಅಧಿಕಾರಿಗಳು ಈ ಸ್ಥಳಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತ ಇದು ಸರಳ ಕ್ರೌರ್ಯ,” ಎಂದು ಒಬ್ಬ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.

“ಕಾಡಲ್ಲಿರಬೇಕಾದದ್ದು ಕಾಡಿನಲ್ಲಿಯೇ ಇರಬೇಕು” ಎಂದು ಮತ್ತೊಬ್ಬ ಎಕ್ಸ್ ಬಳಕೆದಾರರು ಹೇಳಿದರು.

ಹುಲಿ (Tiger) ಯ ಆಕ್ರಮಣದ ವಿಡಿಯೋ ಇಲ್ಲಿದೆ :

ನೀವು ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.

ಜನಸ್ಪಂದನ ನ್ಯೂಸ್, ಡೆಸ್ಕ್ : ನೀವು ನಿಮ್ಮ ಮನೆಗಳಲ್ಲಿ ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.

ಪ್ರತಿನಿತ್ಯವೂ ಎಲ್ಲರೂ ಬಳಸುವ ಆಹಾರ ಪದಾರ್ಥವೆಂದರೆ ಅದು ಹಾಲು (Milk). ಮಕ್ಕಳ ಆರೋಗ್ಯಕ್ಕೂ ಹಾಲು ಬಹಳ ಮುಖ್ಯವಾಗಿದೆ.

ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂ ದೇಹಕ್ಕೆ ಬಹಳ ಮುಖ್ಯ (Calcium is very important for the body). ಅಷ್ಟೇ ಅಲ್ಲ ದೇಹಕ್ಕೆ ಹಾಲಿನಿಂದ ಬಹಳಷ್ಟು ಪ್ರಯೋಜನವಿದೆ. ಈಗ ಬಹಳ ಜನರು ದನಗಳಿಂದ ನೇರವಾಗಿ ಹಾಲು ಪಡೆಯುವುದು ಬಹಳ ಕಡಿಮೆಯಾಗಿದೆ. ಹಳ್ಳಿಗಳಲ್ಲಿಯೂ ಈಗ ಪ್ಯಾಕೆಟ್ ಮಾಡಲಾದ ಹಾಲನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.

ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

ಏವಿಯನ್ ಇನ್ಫ್ಲುಯೆನ್ಸ ವೈರಸ್, ಮೈಕೋಬ್ಯಾಕ್ಟೀರಿಯಂ, ಇ. ಕೋಲಿ, ಲಿಸ್ಟೇರಿಯಾ ಮತ್ತು ಕ್ಯಾಂಪಿಲೋಬ್ಯಾಕ್ಟರ್ ಅನ್ನು ಕೊಲ್ಲಲು ಹಾಲನ್ನು ಸಾಮಾನ್ಯವಾಗಿ 71 ಡಿಗ್ರಿ ಸೆಲ್ಸಿಯಸ್ನಲ್ಲಿ ಬಿಸಿ ಮಾಡಲಾಗುತ್ತದೆ. ಇವೆಲ್ಲವೂ ವಿವಿಧ ಕಾಯಿಲೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದಾದ ಬ್ಯಾಕ್ಟೀರಿಯಾಗಳಾಗಿವೆ ಎಂಬುದು ತಜ್ಞರ ಅಭಿಪ್ರಾಯ.

ಟೈಫಾಯಿಡ್ ಜ್ವರ, ಲಿಸ್ಟೀರಿಯೊಸಿಸ್, ಕ್ಷಯ, ಡಿಫ್ತೀರಿಯಾ ಮತ್ತು ಬ್ರೂಸೆಲೋಸಿಸ್ ಹರಡುವಿಕೆ ಬ್ಯಾಕ್ಟೀರಿಯಾವನ್ನು ಪಾಶ್ಚರೀಕರಣವು ಕೊಲ್ಲುತ್ತದೆ (Pasteurization kills bacteria). ಇದು ಆ ಹಾಲಿನ ಯಾವುದೇ ರುಚಿಯ ಮೇಲೆ ಪರಿಣಾಮ ಬೀರುವುದಿಲ್ಲ ಹೀಗಾಗಿ ಹಾಲನ್ನು ಹೆಚ್ಚು ಕುದಿಸಿಡುವುದು ಸರಿಯಲ್ಲ.

ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!

ಮನೆಯಲ್ಲಿ ಹಾಲನ್ನು ಬಳಸುವಾಗ ಈ ಹಾಲನ್ನು ಸರಿಯಾದ ತಾಪಮಾನದಲ್ಲಿ ಕುದಿಸದೇ ಇದ್ದರೆ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಬೆಳವಣಿಗೆಯಾಗುವ ಸಾಧ್ಯತೆ ಇರುತ್ತದೆ.

ಹಾಲನ್ನು ಕುದಿಸುವುದು ಅದರಲ್ಲಿರುವ ಮಧ್ಯಮ ಹಾಗೂ ಸಣ್ಣ ಫ್ಯಾಟಿ ಆಸಿಡ್‌ಗಳ ಹಾಜರಾತಿಯನ್ನು ಹೆಚ್ಚಿಸುತ್ತದೆ. ಈ ಫ್ಯಾಟಿ ಆಮ್ಲ ಅಥವಾ ಆಸಿಡ್ ಹಾಲಿನಿಂದ ಅಜೀರ್ಣ ಹಾಗೂ ಅಲರ್ಜಿ ಸಮಸ್ಯೆಯುಳ್ಳವರಿಗೆ ಉಪಯುಕ್ತವಾಗಿದೆ.

ಇದನ್ನು ಓದಿ : Health : ತಾಮ್ರದ ಬಾಟಲಿಗಳಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.

ಇನ್ನೂ‌ ಹಾಲನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಡಿಗ್ರಿಯಲ್ಲಿ ಪ್ಯಾಶ್ಚರೈಸ್ ಮಾಡುವುದರಿಂದ ಹಾಲಿನಲ್ಲಿರುವ ಕೆಲವೊಂದು ವಿಟಮಿನ್ ಹಾಗೂ ಮಿನರಲ್‌ಗಳು ನಷ್ಟವಾಗುತ್ತವೆ. ಅಲ್ಲದೇ ಬಿ2, ಬಿ3, ಬಿ6 ಹಾಗೂ ಫೋಲಿಕ್ ಆಮ್ಲ ನಷ್ಟಗೊಳ್ಳಬಹುದು.

ತಜ್ಞರು ಸಹ ಸಾಕಷ್ಟು ಸಮಯದವರೆಗೆ ಹಾಲನ್ನು ಕುದಿಸುವುದು ವಿಟಮಿನ್ ಡಿ ಅಂಶವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿರುವ ಕ್ಯಾಲ್ಸಿಯಂ ಹೀರುವಿಕೆಗೆ ಋಣಾತ್ಮಕ ಪರಿಣಾಮ (negative effect) ಬೀರುತ್ತದೆ. ನ್ಯೂಟ್ರಿಯಂಟ್ ನಷ್ಟವನ್ನು ಕಡಿಮೆ ಮಾಡಲು, ಹಾಲನ್ನು ನಾಲ್ಕರಿಂದ ಐದು ನಿಮಿಷ ಕುದಿಸಿದರೆ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನು ಓದಿ : Job : ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನಲ್ಲಿ ಟ್ರೇಡ್ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹಾಲನ್ನು ಯಾವಾಗಲೂ ದೊಡ್ಡದಾದ ಪಾತ್ರೆಯಲ್ಲಿ ಕುದಿಸಲು ಇಡಿ. ತಳ ಗಟ್ಟಿಯಾಗಿರುವ ಪಾತ್ರೆಯನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ. ಇದರಿಂದ ಹಾಲು ಉಕ್ಕದಂತೆ ತಡೆಯಬಹುದು. ತಳ ಗಟ್ಟಿ ಇದ್ದರೆ ಹಾಲು ಪಾತ್ರೆ ತಳ ಹಿಡಿದುಕೊಳ್ಳುವುದಿಲ್ಲ.

ಹಾಲನ್ನು ಕುದಿಸುವಾಗ ಪಾತ್ರೆಯ ಮೇಲ್ಭಾಗದಲ್ಲಿ ಅಡ್ಡಲಾಗಿ ಮರದ ಸೌಟನ್ನು ಇರಿಸಿ. ಇದರಿಂದ ಹಾಲು ಉಕ್ಕುವಾಗ ಅದು ಕೆಳಕ್ಕೆ ಹರಿಯದಂತೆ ಸೌಟು ತಡೆಯುತ್ತದೆ. ಇನ್ನು ಚಿಟಿಕೆ ಉಪ್ಪು ಸೇರಿಸುವುದರಿಂದ ಕೂಡ ಹಾಲು ಉಕ್ಕದಂತೆ ತಡೆಯಬಹುದಾಗಿದೆ.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments