ಜನಸ್ಪಂದನ ನ್ಯೂಸ್, ಡೆಸ್ಕ್ : ಎಸ್‌ಯುವಿ ಕಾರ್ ಮತ್ತು ಬೈಕ್ (Car-Bike) ನಡುವೆ ಭೀಕರ ರಸ್ತೆ ಸಂಭವಿಸಿದ್ದು, ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ-ವಾರಣಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದೆ.
ವೇಗವಾಗಿ ಬಂದ ಎಸ್‌ಯುವಿ ಕಾರೊಂದು ಬೈಕ್‌ಗೆ (Car-Bike) ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ನಾಲ್ವರು ಬಾನೇತ್ತರಕ್ಕೆ ಹಾರಿ ನೆಲಕ್ಕೆ ಬಿದ್ದಿದ್ದಾರೆ. ಈ ಭೀಕರ ರಸ್ತೆ ಅಪಘಾತದ ದೃಶ್ಯ CCTV ಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : NH : ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ; 3 ಸಾವು.!
ಈ ಭೀಕರ ಅಪಘಾತದಲ್ಲಿ ಮೃತರಾದ ದುರ್ದೈವಿಗಳನ್ನು ಸುನಿಲ್ ಕುಮಾರ್ (22), ಪ್ರದ್ಯುಮ್ನ ಕುಮಾರ್ (22), ಅರವಿಂದ್ ಕುಮಾರ್ (23) ಮತ್ತು ರಾಹುಲ್ ಕುಮಾರ್ (22) ಎಂದು ಗುರುತಿಸಲಾಗಿದೆ.
ಎಸ್‌ಯುವಿ ಕಾರು ವೇಗವಾಗಿ ಬಂದು ಬೈಕ್‌ಗೆ (Car-Bike) ಡಿಕ್ಕಿ ಹೊಡೆದಿದೆ. ಕಾರಿನ ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ನಾಲ್ವರು ಗಾಳಿಗೆ ಹಾರಿ ಹೋಗುವ ಎಲೆಗಳಂತೆ ಗಿರಿಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ. ಹೀಗಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದುರ್ದೈವಶಾತ್ ನಾಲ್ವರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಇದನ್ನು ಓದಿ : BPCL : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!
ಕಾರ್ ಮತ್ತು ಬೈಕ್ Car-Bike ನಡುವಿನ ಭೀಕರ ರಸ್ತೆ ಅಪಘಾತದ ಸಂಪೂರ್ಣ ದೃಶ್ಯ ಪಕ್ಕದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್ ಆಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ವರು ಒಂದೇ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ ಅನ್ನು ಹಿಂದಿಕ್ಕುವ ಭರದಲ್ಲಿ ವೇಗವಾಗಿ ಸಾಗಿದ್ದಾರೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಎಸ್‌ಯುವಿ ಕಾರು ಬೈಕ್‌ಗೆ ವೇಗವಾಗಿ ಢಿಕ್ಕಿ ಹೊಡೆದಿದೆ.
ಇದನ್ನು ಓದಿ : Pain : ನೋವು ನಿವಾರಕ ಮಾತ್ರೆ ಅಥವಾ ಜೆಲ್ : ಇವುಗಳಲ್ಲಿ ಯಾವುದು ಉತ್ತಮ ಗೊತ್ತಾ.?
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ (Car-Bike) ನಾಲ್ವರ ಪೈಕಿ ಮೂವರು ಗಾಳಿಯಲ್ಲಿ ತೂರಲ್ಪಟ್ಟು ರಸ್ತೆಗೆ ಬಿದ್ದರೆ, ಓರ್ವ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಬಾನೆಟ್‌ನಲ್ಲಿ ಸಿಲುಕಿ ಸುಮಾರು ನೂರು ಮೀಟರ್ ದೂರ ಎಳೆದೊಯ್ಯದ್ದು ತೂರಲ್ಪಟ್ಟಿದ್ದಾನೆ.
ಅಫಘಾತ ಸಂಭವಿಸುತ್ತಿದಂತೆಯೇ ಸ್ಥಳೀಯರು ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ನಾಲ್ವರು ಮೃತಪಟ್ಟಿರುವುದಾಗಿ ಪರಿಶೀಲಿಸಿದ ವೈದ್ಯರು ತಿಳಿಸಿದ್ದಾರೆ.
ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್ ವಿಡಿಯೋ ನೋಡಿ.!
ಇನ್ನು ಈ ಭೀಕರ ರಸ್ತೆ ಅಪಘಾತ ಸಂಭವಿಸುತ್ತಿದ್ದಂತೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
ರಾಹುಲ್ ಕುಮಾರ್ (22) ಎಂಬಾತನಿಗೆ ಜೂನ್ 1 ರಂದು ನಿಶ್ಚಿತಾರ್ಥ ನಿಗದಿಯಾಗಿತ್ತು, ಅದಕ್ಕೂ ಮೊದಲೇ ನಾಲ್ವರೂ ಸ್ನೇಹಿತರು ಅಪಘತದಲ್ಲಿ ಸಾವನ್ನಪ್ಪಿದ್ದಾರೆ.
Car-bike Accident Vedio :
4 youths including three cousins riding on a bike died after hit by a Grand Vitara car on Gorakhpur Varanasi Highway in Barhalganj, Gorakhpur.
3 of them got thrown 20 feet up after the collision and fell down while 1got stuck on the bonnet of the car @Uppolice @myogiadityanath pic.twitter.com/sGCGZDlXuJ— Shreepad Gokhale (@SriVallabh5453) June 1, 2025
ನೀವು ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.
ಜನಸ್ಪಂದನ ನ್ಯೂಸ್, ಡೆಸ್ಕ್ : ನೀವು ನಿಮ್ಮ ಮನೆಗಳಲ್ಲಿ ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.
ಪ್ರತಿನಿತ್ಯವೂ ಎಲ್ಲರೂ ಬಳಸುವ ಆಹಾರ ಪದಾರ್ಥವೆಂದರೆ ಅದು ಹಾಲು (Milk). ಮಕ್ಕಳ ಆರೋಗ್ಯಕ್ಕೂ ಹಾಲು ಬಹಳ ಮುಖ್ಯವಾಗಿದೆ.
ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂ ದೇಹಕ್ಕೆ ಬಹಳ ಮುಖ್ಯ (Calcium is very important for the body). ಅಷ್ಟೇ ಅಲ್ಲ ದೇಹಕ್ಕೆ ಹಾಲಿನಿಂದ ಬಹಳಷ್ಟು ಪ್ರಯೋಜನವಿದೆ. ಈಗ ಬಹಳ ಜನರು ದನಗಳಿಂದ ನೇರವಾಗಿ ಹಾಲು ಪಡೆಯುವುದು ಬಹಳ ಕಡಿಮೆಯಾಗಿದೆ. ಹಳ್ಳಿಗಳಲ್ಲಿಯೂ ಈಗ ಪ್ಯಾಕೆಟ್ ಮಾಡಲಾದ ಹಾಲನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.
ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?
ಏವಿಯನ್ ಇನ್ಫ್ಲುಯೆನ್ಸ ವೈರಸ್, ಮೈಕೋಬ್ಯಾಕ್ಟೀರಿಯಂ, ಇ. ಕೋಲಿ, ಲಿಸ್ಟೇರಿಯಾ ಮತ್ತು ಕ್ಯಾಂಪಿಲೋಬ್ಯಾಕ್ಟರ್ ಅನ್ನು ಕೊಲ್ಲಲು ಹಾಲನ್ನು ಸಾಮಾನ್ಯವಾಗಿ 71 ಡಿಗ್ರಿ ಸೆಲ್ಸಿಯಸ್ನಲ್ಲಿ ಬಿಸಿ ಮಾಡಲಾಗುತ್ತದೆ. ಇವೆಲ್ಲವೂ ವಿವಿಧ ಕಾಯಿಲೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದಾದ ಬ್ಯಾಕ್ಟೀರಿಯಾಗಳಾಗಿವೆ ಎಂಬುದು ತಜ್ಞರ ಅಭಿಪ್ರಾಯ.
ಟೈಫಾಯಿಡ್ ಜ್ವರ, ಲಿಸ್ಟೀರಿಯೊಸಿಸ್, ಕ್ಷಯ, ಡಿಫ್ತೀರಿಯಾ ಮತ್ತು ಬ್ರೂಸೆಲೋಸಿಸ್ ಹರಡುವಿಕೆ ಬ್ಯಾಕ್ಟೀರಿಯಾವನ್ನು ಪಾಶ್ಚರೀಕರಣವು ಕೊಲ್ಲುತ್ತದೆ (Pasteurization kills bacteria). ಇದು ಆ ಹಾಲಿನ ಯಾವುದೇ ರುಚಿಯ ಮೇಲೆ ಪರಿಣಾಮ ಬೀರುವುದಿಲ್ಲ ಹೀಗಾಗಿ ಹಾಲನ್ನು ಹೆಚ್ಚು ಕುದಿಸಿಡುವುದು ಸರಿಯಲ್ಲ.
ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!
ಮನೆಯಲ್ಲಿ ಹಾಲನ್ನು ಬಳಸುವಾಗ ಈ ಹಾಲನ್ನು ಸರಿಯಾದ ತಾಪಮಾನದಲ್ಲಿ ಕುದಿಸದೇ ಇದ್ದರೆ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಬೆಳವಣಿಗೆಯಾಗುವ ಸಾಧ್ಯತೆ ಇರುತ್ತದೆ.
ಹಾಲನ್ನು ಕುದಿಸುವುದು ಅದರಲ್ಲಿರುವ ಮಧ್ಯಮ ಹಾಗೂ ಸಣ್ಣ ಫ್ಯಾಟಿ ಆಸಿಡ್‌ಗಳ ಹಾಜರಾತಿಯನ್ನು ಹೆಚ್ಚಿಸುತ್ತದೆ. ಈ ಫ್ಯಾಟಿ ಆಮ್ಲ ಅಥವಾ ಆಸಿಡ್ ಹಾಲಿನಿಂದ ಅಜೀರ್ಣ ಹಾಗೂ ಅಲರ್ಜಿ ಸಮಸ್ಯೆಯುಳ್ಳವರಿಗೆ ಉಪಯುಕ್ತವಾಗಿದೆ.
ಇದನ್ನು ಓದಿ : Health : ತಾಮ್ರದ ಬಾಟಲಿಗಳಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.
ಇನ್ನೂ ಹಾಲನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಡಿಗ್ರಿಯಲ್ಲಿ ಪ್ಯಾಶ್ಚರೈಸ್ ಮಾಡುವುದರಿಂದ ಹಾಲಿನಲ್ಲಿರುವ ಕೆಲವೊಂದು ವಿಟಮಿನ್ ಹಾಗೂ ಮಿನರಲ್‌ಗಳು ನಷ್ಟವಾಗುತ್ತವೆ. ಅಲ್ಲದೇ ಬಿ2, ಬಿ3, ಬಿ6 ಹಾಗೂ ಫೋಲಿಕ್ ಆಮ್ಲ ನಷ್ಟಗೊಳ್ಳಬಹುದು.
ತಜ್ಞರು ಸಹ ಸಾಕಷ್ಟು ಸಮಯದವರೆಗೆ ಹಾಲನ್ನು ಕುದಿಸುವುದು ವಿಟಮಿನ್ ಡಿ ಅಂಶವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿರುವ ಕ್ಯಾಲ್ಸಿಯಂ ಹೀರುವಿಕೆಗೆ ಋಣಾತ್ಮಕ ಪರಿಣಾಮ (negative effect) ಬೀರುತ್ತದೆ. ನ್ಯೂಟ್ರಿಯಂಟ್ ನಷ್ಟವನ್ನು ಕಡಿಮೆ ಮಾಡಲು, ಹಾಲನ್ನು ನಾಲ್ಕರಿಂದ ಐದು ನಿಮಿಷ ಕುದಿಸಿದರೆ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನು ಓದಿ : Job : ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹಾಲನ್ನು ಯಾವಾಗಲೂ ದೊಡ್ಡದಾದ ಪಾತ್ರೆಯಲ್ಲಿ ಕುದಿಸಲು ಇಡಿ. ತಳ ಗಟ್ಟಿಯಾಗಿರುವ ಪಾತ್ರೆಯನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ. ಇದರಿಂದ ಹಾಲು ಉಕ್ಕದಂತೆ ತಡೆಯಬಹುದು. ತಳ ಗಟ್ಟಿ ಇದ್ದರೆ ಹಾಲು ಪಾತ್ರೆ ತಳ ಹಿಡಿದುಕೊಳ್ಳುವುದಿಲ್ಲ.
ಹಾಲನ್ನು ಕುದಿಸುವಾಗ ಪಾತ್ರೆಯ ಮೇಲ್ಭಾಗದಲ್ಲಿ ಅಡ್ಡಲಾಗಿ ಮರದ ಸೌಟನ್ನು ಇರಿಸಿ. ಇದರಿಂದ ಹಾಲು ಉಕ್ಕುವಾಗ ಅದು ಕೆಳಕ್ಕೆ ಹರಿಯದಂತೆ ಸೌಟು ತಡೆಯುತ್ತದೆ. ಇನ್ನು ಚಿಟಿಕೆ ಉಪ್ಪು ಸೇರಿಸುವುದರಿಂದ ಕೂಡ ಹಾಲು ಉಕ್ಕದಂತೆ ತಡೆಯಬಹುದಾಗಿದೆ.