Saturday, June 14, 2025

Janaspandhan News

HomeCrime NewsTelangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!
spot_img
spot_img

Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!

ಜನಸ್ಪಂದನ ನ್ಯೂಸ್, ಡೆಸ್ಕ್ : ನದಿಗೆ ಈಜಲು ತೆರಳಿದ 10 ಜನರಲ್ಲಿ 6 ಜನರು ನದಿಯ ಪಾಲಾದ ಘಟನೆಯೊಂದು ತೆಲಂಗಾಣ (Telangana) ದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಶುಕ್ರವಾರ ಸಂಜೆ ತೆಲಂಗಾಣ (Telangana) ದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಬಳಿಯ ಮೇಡಿಗಡ್ಡ ಬ್ಯಾರೇಜ್ ಬಳಿಯ ಗೋದಾವರಿ ನದಿಯಲ್ಲಿ ಆರು ಯುವಕರು (ಬಾಲಕರು ಸೇರಿ) ಕಾಣೆಯಾಗುವುದರೊಂದಿಗೆ ದೊಡ್ಡ ದುರಂತ ಸಂಭವಿಸಿದೆ.

ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್‌ ; Doctor Arrest.

ದುರ್ಘಟನೆಯಲ್ಲಿ ಸಾವಿಗೀಡಾದ ದುರ್ದೈವಿಗಳನ್ನು ತೆಲಂಗಾಣ ಮತ್ತು ಆಂದ್ರ (Telangana & Andra) ಮೂಲಕ ಮಧುಸೂಧನ್ (18), ಪಟ್ಟಿ ಶಿವ ಮನೋಜ್ (15), ತೊಗರಿ ರಕ್ಷಿತ್ (13), ಸಾಗರ್ (16), ಬೊಲ್ಲೆದ್ಲಾ ರಾಮಚರಣ್ (17) ಮತ್ತು ಪಸುಲ ರಾಹುಲ್ (19) ಎಂದು ಗುರುತಿಸಲಾಗಿದೆ.

ಮಧು ಸುಧನ್ ಮತ್ತು ಅವರ ಸಹೋದರ ಶಿವ ಮನೋಜ್ ಮೊದಲು ಈಜಲು ನೀರಿಗೆ ಇಳಿದಿದ್ದಾರೆ. ಆಗ ಅವರು ಶೀಘ್ರದಲ್ಲೇ ನದಿಯಲ್ಲಿ ಮುಳುಗಲು ಪ್ರಾರಂಭಿಸಿದರು. ಮೃತರಿಗೆ ಸರಿಯಾಗಿ ಈಜಲು ಬರದಿದೇ ಇರಬಹುದು ಅಥವಾ ನೀರಿನ ಮಟ್ಟ ಸರಿಯಾಗಿ ತಿಳಿದಿರುವ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!

ಆಗ ಸ್ಥಳದಲ್ಲಿದ್ದ ಇತರ ನಾಲ್ವರು ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಟಿ ರಕ್ಷಿತ್ (13), ಕೆ ಸಾಗರ್ (16), ಕೊರುಟ್ಲಾದ ಬಿ ರಾಮ ಚರಣ್ ಮತ್ತು ಆಂಧ್ರಪ್ರದೇಶದ ಮೂಲದ ಪಿ. ರಾಹುಲ್ ಎನ್ನುವವರು ಮುಳಗುವವರನ್ನು ರಕ್ಷಿಸಲು ಒಬ್ಬರ ಬೆನ್ನು ಹಿಂದೆ ಮತ್ತೋಬ್ಬ ನೀರಿಗೆ ಹಾರಿದ್ದಾರೆ.

ದುರದೃಷ್ಟವಶಾತ್ ಅವರಲ್ಲಿ ಯಾರೂ ಜೀವಂತವಾಗಿ ಹೊರಬರಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮೃತ ದುರ್ದೈವಿಗಳೆಲ್ಲರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದರು ಎಂದು ತೀಳಿದು ಬಂದಿದ್ದು, ಒಂದು ಮನೆತನಕ್ಕೆ ಸೇರಿದವರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ :‌ PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!

ಮಾಹಿತಿ ಪಡೆದ ನಂತರ ಕಟಾರಂ (Telangana) ಡಿಎಸ್ಪಿ ರಾಮ್ ಮೋಹನ್ ರೆಡ್ಡಿ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆಯಲು ಪ್ರಯತ್ನಸಿದ್ದಾರೆ. (ಏಜೆನ್ಸಿಸ್)

Helicopter : ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ; ದೃಶ್ಯ ಕ್ಯಾಮೆರಾದಲ್ಲಿ ಸೆರೆ.

ಜನಸ್ಪಂದನ ನ್ಯೂಸ್, ಡೆಸ್ಕ್ : ಖಾಸಗಿ ಹೆಲಿಕಾಪ್ಟರ್ (Helicopter) ಒಂದು ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಘಟನೆಯೊಂದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ನಡಿದಿದೆ.

ಖಾಸಗಿ ಹೆಲಿಕಾಪ್ಟರ್ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಪರಿಣಾಮವಾಗಿ ಪಕ್ಕಲಿದ್ದ ಕಾರೊಂದು ಹೆಲಿಕಾಪ್ಟರ್ (Helicopter) ನ ರೆಕ್ಕೆ ತಾಗಿ ಪುಡಿಪುಡಿಯಾಗಿದೆ. ತಾಂತ್ರಿಕ ದೋಷವನ್ನು ವೀಕ್ಷಿಸಿದ ಪೈಲಟ್ ಗುಪ್ತ್ ಕಾಶಿ ಪ್ರದೇಶದಲ್ಲಿ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಕಾಪ್ಟರ್ ಪೈಲಟ್ (Helicopter) ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಆದರೆ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್​​ (Helicopter) ನ ರೆಕ್ಕೆ ಡಿಕ್ಕಿ ಹೊಡೆದ ಕಾರು ಪುಡಿಪುಡಿಯಾಗಿದೆ. ಸುದೈವಶಾತ್ ಈ ಅಪಘಾತದ ಸಮಯದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಕೇದಾರನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಹೆಲಿಕಾಪ್ಟರ್ (Helicopter) ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಹೆಲಿಕಾಪ್ಟರ್ ಕೇದಾರನಾಥಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.

ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣುತ್ತಿದಂತೆಯೇ ಪೈಲೆಟ್ ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?

ಹೆಲಿಕಾಪ್ಟರ್ (Helicopter) ಎಮರ್ಜೆನ್ಸಿ ಲ್ಯಾಂಡಿಂಗ್ ಆಗುವ ವೇಳೆ ಹೆದ್ದಾರಿ ಬದಿ ನಿಂತಿದ್ದ ಕಾರು, ಹಾಗು ಮನೆಗಳಿಗೆ ಹಾನಿಯಾಗಿದ್ದು ಜೊತೆಗೆ ಹೆಲಿಕಾಪ್ಟರ್ ನ ಕೆಲ ಭಾಗಗಳಿಗೂ ಹಾನಿಯಾಗಿವೆ ಎಂದು ಹೇಳಲಾಗಿದೆ.

Helicopter Video :

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments