ಜನಸ್ಪಂದನ ನ್ಯೂಸ್, ಆರೋಗ್ಯ : ನಿಮಗಿದು ಗೊತ್ತೇ? ಸಕ್ಕರೆಗೆ ಹೋಲಿಕೆ ಮಾಡಿದರೆ ಬೆಲ್ಲವು (Jaggery) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕ್ಯಾಲ್ಸಿಯಂ, ಮೆಗ್ನೀ ಸಿಯಂ, ಪೊಟ್ಯಾಸಿಯಂ, ಸೋಡಿಯಂ, ಕಬ್ಬಿಣ, ಮ್ಯಾಂಗನೀಸ್ ಸೇರಿದಂತೆ ಹಲವು ಖನಿಜಗಳಿಂದ ಈ ಬೆಲ್ಲವು (Jaggery) ಸಮೃದ್ಧವಾಗಿದೆ.
ಇದನ್ನು ಓದಿ : Suspension : ಪೊಲೀಸ್ ಕಮಿಷನರ್ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್ ಪ್ರತಿಭಟನೆ.!
ನೈಸರ್ಗಿಕ ಸಿಹಿಕಾರಕವಾಗಿರುವುದರಿಂದ ಬೆಲ್ಲದ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ.
ಆಯುರ್ವೇದಲ್ಲೂ ಬೆಲ್ಲದ (Jaggery) ಸೇವನೆ ಬಗ್ಗೆ ಹೇಳಲಾಗಿದ್ದು, ಬೆಲ್ಲವನ್ನು ಉತ್ತಮ ಎಂದು ಪರಿಗಣಿಸಲಾಗಿದೆ.
ಇದನ್ನು ಓದಿ : Pakistan : ಜೀನ್ಸ್ ಮತ್ತು ಟಾಪ್ ಧರಿಸಿ ಮಾರ್ಕೆಟ್‌ಗೆ ಬಂದ 2 ಯುವತಿಯರು ; ವಿಡಿಯೋ.!
ಇನ್ನು ಬೆಲ್ಲದ ನೀರನ್ನು (Jaggery Water) ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ಅಸಿಡಿಟಿ (Acidity) ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ಪರಿಹಾರ ಪಡೆಯಬಹುದು.
ಪ್ರತಿದಿನ ಬೆಳಗ್ಗೆ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ನೀರಿನೊಂದಿಗೆ ಬೆರೆಸಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಲಾಭ ಪಡೆದುಕೊಳ್ಳಬಹುದು.
ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್ ಕಾನ್ಸ್‌ಟೇಬಲ್ ಅರೆಸ್ಟ್.!
ಮೊದಲು ಬೆಲ್ಲದ (Jaggery) ನೀರನ್ನು ಹೇಗೆ ತಯಾರಿಸಬೇಕು ಅಂತ ತಿಳಿಯೋಣ.
ಬೆಲ್ಲದ (Jaggery) ನೀರನ್ನು ಹೀಗೆ ತಯಾರಿಸಿ :
ಒಂದು ಪಾತ್ರೆಯಲ್ಲಿ ನಿಮಗೆ ಬೇಕಾದಷ್ಟು ಬೆಲ್ಲವನ್ನು ತೆಗೆದುಕೊಂಡು ಅದು ಸಂಪೂರ್ಣವಾಗಿ ಕರಗುವ ತನಕ ನೀರಿನಲ್ಲಿ ಕುದಿಸಿ. ಕುದಿಸಿದ ನೀರನ್ನು ಸುಮಾರು 10-15 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಬೇಕಿದ್ದರೆ ಪುದೀನ ಎಲೆಗಳನ್ನು ಸೇರಿಸಿ ಕುಡಿಯಬಹುದು.
ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ತಿಳಿಯೋಣ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ :
ಮೆಗ್ನೀಸಿಯಮ್, ವಿಟಮಿನ್ B 1, B 6 ಮತ್ತು C ಹೊಂದಿದ್ದು, ಉತ್ಕರ್ಷಣ ನಿರೋಧಕ ಮತ್ತು ಖನಿಜಗಳಿಂದ ಬೆಲ್ಲವು (Jaggery)
ಸಮೃದ್ಧವಾಗಿದೆ.
ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಬೆಲ್ಲವು ಯಾವುದೇ ರೋಗ ಹರಡದಂತೆ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ರಕ್ತಹೀನತೆಗೆ ಉತ್ತಮ :
ಕಬ್ಬಿಣ ಮತ್ತು ಫೋಲೇಟ್ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಬೆಲ್ಲವು (Jaggery) ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ :
ಬೆಲ್ಲದ ನೀರನ್ನು ಪ್ರತಿದಿನ ಸೇವನೆ ಮಾಡಿದರೆ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮಪಡಿಸಿ ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.
ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ :
ಬೆಲ್ಲದ ನೀರನ್ನು ದಿನ ನಿತ್ಯ ಬಳಸಿದರೆ ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಸ್ಯೆಯಿಂದ ನಿವಾರಣೆ ಪಡೆಯಬಹುದು. ಬೆಲ್ಲದ (Jaggery) ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್ ತಾರೆಯ ಹತ್ಯೆ.!
ತೂಕ ಇಳಿಕೆಗೆ ಸಹಕಾರಿ :
ತೂಕ ಇಳಿಸಿಕೊಳ್ಳಲು ಸಹ ಪ್ರತಿ ದಿನ ಬೆಲ್ಲದ ನೀರು ಉತ್ತಮ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಬಿಸಿನೀರಿನೊಂದಿಗೆ ಬೆಲ್ಲವನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಮಲಬದ್ಧತೆ ನಿವಾರಣೆ :
ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರನ್ನು ಕುಡಿದರೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ದೇಹದ ಶಕ್ತಿಯ ಮಟ್ಟ ಹೆಚ್ಚಿಸಲು :
ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಿಸಿ, ದಿನ ನಿತ್ಯ ಕ್ರೀಯಾ ಶೀಲರಾಗಿ ಮತ್ತು ಉಲ್ಲಾಸದಿಂದ ಇರಲು ಬೆಲ್ಲದ ನೀರನ್ನು ಸೇವಿಸುವುದು ಉತ್ತಮ. ಹೀಗಾಗಿ ಬೆಲ್ಲದ ನೀರು ಸೇವನೆಯು ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್ ವಿಡಿಯೋ ನೋಡಿ.!
ಜ್ವರಕ್ಕೂ ರಾಮಬಾಣ :
ಇನ್ನು ಬೆಲ್ಲವು (Jaggery) ಶೀತ, ಕೆಮ್ಮು ಮತ್ತು ಜ್ವರದ ಸಮಸ್ಯೆ ನಿವಾರಿಸುತ್ತದೆ. ಇದು ಹಲವಾರು ಫೀನಾಲಿಕ್ ಸಂಯುಕ್ತಗಳಿಂದ ಕೂಡಿದೆ. ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿ ದೇಹ ವಿಶ್ರಾಂತಿ ಪಡೆಯಲು ಸಹಕಾರಿ.
ನಿಮ್ಮಶುಗರ್ ಲೇವಲ್ 120ಕ್ಕಿಂತ ಹೆಚ್ಚಿದೆಯೇ.? ಹಾಗಾದ್ರೆ ರಾತ್ರಿ ತಿನ್ನಿ ಈ ಪದ್ದಾರ್ಥಗಳನ್ನು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಒಂದು ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ (serious health problems) ಸಕ್ಕರೆ ಕಾಯಿಲೆ (Diabetes) ಒಂದು.
ಒತ್ತಡ, ಬದಲಾದ ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿನ ಕೊರತೆಯಿಂದ (Stress, changed lifestyle and dietary deficiencies) ಈ Diabetes ಕಾಯಿಲೆಯು ಹೆಚ್ಚಾಗುತ್ತದೆ.
ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್ ತಾರೆಯ ಹತ್ಯೆ.!
ಆದರೆ, ರಾತ್ರಿ ಊಟದ ವೇಳೆ ಕೆಲವು ಆರೋಗ್ಯಕರ ಆಯ್ಕೆಗಳನ್ನು (Healthy choices) ಮಾಡುವ ಮೂಲಕ ಸಕ್ಕರೆ ಕಾಯಿಲೆ (Diabetes) ಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.
ರಾತ್ರಿಯ ಊಟ (Dinner) ದಲ್ಲಿ ನಾವು ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆರೋಗ್ಯಕರ ಕೊಬ್ಬುಗಳು :
ಆರೋಗ್ಯಕರ ಕೊಬ್ಬು ಹೊಂದಿರುವ ಬಾದಾಮಿ, ಒಲಿವ್ ಎಣ್ಣೆ (Almonds, olive oil) ಅಥವಾ ಆವಕಾಡೋದಂತಹ ಆಹಾರಗಳು ಇನ್ಸುಲಿನ್ (Diabetes) ಸಂವೇದನೆಯನ್ನು ಸುಧಾರಿಸಲು (improve insulin sensitivity) ಸಹಾಯ ಮಾಡುತ್ತವೆ.
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ ಧಾನ್ಯಗಳು :
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವ ಧಾನ್ಯಗಳಾದ ಕ್ವಿನೋವಾ, ಒಟ್ಸ್ (Quinoa, oats) ಅಥವಾ ರಾಗಿಯು ರಕ್ತದ ಸಕ್ಕರೆಯನ್ನು ತಕ್ಷಣವೇ ಏರಿಳಿಕೆಯಾಗದಂತೆ ತಡೆಯಬಲ್ಲವು (prevent carousel from happening immediately). ರಾತ್ರಿಯ ಊಟಕ್ಕೆ ರಾಗಿ ರೊಟ್ಟಿ ಅಥವಾ ಕ್ವಿನೋವಾ ಸಲಾಡ್ ಉತ್ತಮ ಆಯ್ಕೆ.
ಇದನ್ನು ಓದಿ : Castor oil : ಈ 1 ಎಣ್ಣೆಯ ಸ್ನಾನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ.?
Diabetes ಗೆ ಹಸಿರು ತರಕಾರಿಗಳು :
ಪಾಲಕ್, ಇತರೆ ಸೊಪ್ಪು, ಬ್ರೊಕೋಲಿ ಮತ್ತು ಕ್ಯಾಬೇಜ್‌ನಂತಹ ಹಸಿರು ತರಕಾರಿಗಳು ಕಡಿಮೆ ಕಾರ್ಬೋಹೈದ್ರೇಟ್‌ಗಳನ್ನು ಹೊಂದಿದ್ದು, ಫೈಬರ್‌ನಿಂದ ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಸುಧಾರಣೆಯ ಜೊತೆಗೆ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ರಾತ್ರಿ ಊಟದಲ್ಲಿ ಒಂದು ಬೌಲ್‌ನಷ್ಟು ತರಕಾರಿ ಸಲಾಡ್ ಸೇವಿಸಬಹುದು.
Diabetes ಗೆ ಮಜ್ಜಿಗೆ ಅಥವಾ ಹುಳಿಮಜ್ಜಿಗೆ (Buttermilk or sour buttermilk) :
ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮಜ್ಜಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುವ ಜೊತೆಗೆ ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ಪ್ರೊಬಯಾಟಿಕ್‌ಗಳನ್ನು ಒಳಗೊಂಡಿದೆ. ರಾತ್ರಿಯ ಊಟದ ಬಳಿಕ ಒಂದು ಲೋಟ ಮಜ್ಜಿಗೆ ಸೇವಿಸುವುದು ಉತ್ತಮ ಆಯ್ಕೆ.
Diabetes ಗೆ ಪ್ರೋಟೀನ್ ಸಮೃದ್ಧ ಆಹಾರಗಳು :
ಪ್ರೋಟೀನ್ ಭರಿತ ಆಹಾರಗಳಾದ ಮೀನು, ಟೋಫು, ಚಿಕನ್ ಬ್ರೆಸ್ಟ್ ಅಥವಾ ಕಡಲೆಕಾಯಿಯಂತಹ ಆಹಾರ ಪದಾರ್ಥಗಳು ದೀರ್ಘಕಾಲದವರೆಗೆ ತೃಪ್ತಿಯ ಭಾವನೆ (Feeling satisfied for a long time) ನೀಡುತ್ತವೆ. ಅಲ್ಲದೇ ರಕ್ತದ ಸಕ್ಕರೆಯನ್ನು ಸ್ಥಿರವಾಗಿಡುತ್ತವೆ.
ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!
Diabetes, ರಾತ್ರಿ ವೇಳೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ :
- ಸಕ್ಕರೆಯುಕ್ತ ಆಹಾರಗಳು (Sugary foods) :
ಸಿಹಿತಿಂಡಿ, ಕೇಕ್, ಕುಕೀಸ್ ರಕ್ತದ ಸಕ್ಕರೆಯನ್ನು ತಕ್ಷಣವೇ ಏರಿಸುತ್ತವೆ. - ಬಿಳಿ ಅಕ್ಕಿ ಮತ್ತು ರಿಫೈಂಡ್ ಕಾರ್ಬೋಹೈಡ್ರೇಟ್‌ಗಳು (white rice and refined Carbohydrates) :
ಇವು ಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಇವುಗಳು ರಕ್ತದ ಸಕ್ಕರೆಯನ್ನು ಏರಿಳಿತಗೊಳಿಸುತ್ತವೆ. - ಎಣ್ಣೆಯಲ್ಲಿ ಕರಿದ ಆಹಾರಗಳು :
ಇವು ಜೀರ್ಣಕ್ರಿಯೆಗೆ ಭಾರವಾಗಿದ್ದು, ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು.