ಜನಸ್ಪಂದನ ನ್ಯೂಸ್, ಡೆಸ್ಕ್ : ಹರಳೆಣ್ಣೆ (Castor oil) ಸ್ನಾನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ.? ಇದರ ಉಪಯೋಗ ತಿಳಿದ್ರೆ ನೀವೂ ಕೂಡ ಯಪಯೋಗಸಬೇಕು ಅಂತ ಅಂದೆ ಅನಿಸುತ್ತೆ.
ಇತ್ತೀಚಿನ ವರ್ಷಗಳಲ್ಲಿ ಕಿರಿಯರಿಂದ ಹಿಡಿದು ಹಿರಿಯರವರೆಗೆ ಪ್ರತಿಯೊಬ್ಬರೂ ಹೊಳೆಯುವ ಮತ್ತು ಆರೋಗ್ಯಕರ ಚರ್ಮವನ್ನು (Glowing and healthy skin) ಪಡೆಯಬೇಕೆಂದು ಬಯಸುತ್ತಾರೆ. ಅದರಲ್ಲೂ ಈ ಯುವ ಜನ ತಮ್ಮ ಚರ್ಮವನ್ನು ಪ್ರಾಣಕ್ಕಿಂತಲೂ ಹೆಚ್ಚಿಗೆ ಕಾಪಾಡಲು ಪ್ರಯತ್ನಿಸುತ್ತಾರೆ.
ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್ ತಾರೆಯ ಹತ್ಯೆ.!
ಹೀಗಾಗಿ ಜನರು ದುಬಾರಿ ಚರ್ಮದ ಆರೈಕೆ ಉತ್ಪನ್ನಗಳು (Expensive skin care products) ಮತ್ತು ಸ್ಪಾ ಚಿಕಿತ್ಸೆಗೆಂದು ತೆರಳುತ್ತಾರೆ. ಆದರೆ ನಿಮ್ಮ ಮನೆಯಲ್ಲಿ ಹರಳೆಣ್ಣೆ (Castor oil) ಯನ್ನು ಬಳಸುವುದರಿಂದ ಚರ್ಮವು ಸುಂದರವಾಗುತ್ತದೆ.
Castor oil ಚರ್ಮದ ಸೋಂಕಿನಿಂದ ಪರಿಹಾರ :
ಮೈ ಮೇಲಿನ ದದ್ದುಗಳು, ತುರಿಕೆ ಸಮಸ್ಯೆ, ಶಿಲೀಂಧ್ರ ಸೋಂಕು (Itching problem, fungal infection) ಇದ್ದರೆ, ಹರಳೆಣ್ಣೆ (Castor oil) ನೀರಿನಿಂದ ಪರಿಹಾರ ದೊರೆಯುತ್ತದೆ. ಇದು ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ.
Castor oil ಯಿಂದ ಚರ್ಮವು ಹೊಳೆಯುತ್ತದೆ :
ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು (To remove dead skin cells) ಈ ಎಣ್ಣೆಯು (Castor oil) ಸಹಾಯ ಮಾಡುತ್ತದೆ. ಇದು ನಮ್ಮ ಚರ್ಮವನ್ನು ಸ್ವಚ್ಛ, ಮೃದು ಮತ್ತು ಕಾಂತಿಯುತವಾಗಿ ಮಾಡುತ್ತದೆ.
ಇದನ್ನು ಓದಿ : Romance : ಬಸ್ಸಿನಲ್ಲಿ ಸ್ಕೂಲ್ ಯೂನಿಫಾರ್ಮ್‌ನಲ್ಲಿಯೇ ವಿದ್ಯಾರ್ಥಿಗಳ ರೊಮ್ಯಾನ್ಸ್ ; ವಿಡಿಯೋ.!
Castor oil ಬೆವರಿನ ವಾಸನೆ ಹೋಗುತ್ತದೆ :
ಹರಳೆಣ್ಣೆ (Castor oil) ಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಬೆವರಿನ ವಾಸನೆಯನ್ನು ನಿವಾರಿಸುತ್ತದೆ. ದಿನನಿತ್ಯ ಹರಳೆಣ್ಣೆ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಿಂದ ಬರುವ ಕೆಟ್ಟ ವಾಸನೆಯು ಕಡಿಮೆಯಾಗುವುದು (Less bad odor).
ದೇಹದಲ್ಲಿ ತುರಿಕೆ ಪರಿಹಾರ :
ಯಾವುದೇ ಅಲರ್ಜಿಯಿಂದ ಉಂಟಾಗುವ ತುರಿಕೆ ಮತ್ತು ಸುಡುವ ಸಂವೇದನೆಯ ಸಮಸ್ಯೆಯಿಂದ ಪರಿಹಾರ (Solution to the problem of sensitivity) ಪಡೆಯಲು ಹರಳೆಣ್ಣೆ ತುಂಬಾ ಉಪಯುಕ್ತವಾಗಿದೆ. ಈ ಎಣ್ಣೆ ತಂಪಾಗಿಸುವ ಗುಣ ಹೊಂದಿದ್ದು, ಚರ್ಮಕ್ಕೆ ಪರಿಹಾರ ನೀಡುತ್ತದೆ.
ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಕಲೆಗಳನ್ನು ನಿವಾರಿಸಲು :
ಹರಳೆಣ್ಣೆಯಲ್ಲಿರುವ ನೈಸರ್ಗಿಕ ಅಂಶಗಳು ಮುಖದ ಮೇಲಿನ ಮೊಡವೆಗಳನ್ನು ಒಣಗಿಸಲು ಅಥವಾ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ.
Disclaimer : This article is based on reports and information available on the internet. Janaspandhan News is not affiliated with it and is not responsible for it.
ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಲ್ಲಿ ಖಾಲಿ ಇರುವ ವಿವಿಧ ಶಾಖೆಗಳಲ್ಲಿ ಒಟ್ಟು 320 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಇಸ್ರೋ ಅಧಿಕೃತ ವೆಬ್‌ಸೈಟ್ (ISRO Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!
ISRO ದಲ್ಲಿರುವ ಹುದ್ದೆಗಳ ಮಾಹಿತಿ :
- ನೇಮಕಾತಿ ಸಂಸ್ಥೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO).
- ಹುದ್ದೆಗಳ ಹೆಸರು : ಸೈಂಟಿಸ್ಟ್/ಎಂಜಿನಿಯರ್.
- ಹುದ್ದೆಗಳ ಸಂಖ್ಯೆ : 320.
ISRO ದಲ್ಲಿರುವ ಹುದ್ದೆಗಳ ಹೆಸರು :
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್).
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಮೆಕ್ಯಾನಿಕಲ್).
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್).
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) – ಪಿಆರ್‌ಎಲ್.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) – ಪಿಆರ್‌ಎಲ್.
ಇದನ್ನು ಓದಿ : Kiss : ರಸ್ತೆಯಲ್ಲಿಯೇ ಮಹಿಳೆಗೆ ಮುತ್ತಿಟ್ಟು ಪರಾರಿಯಾದ ಬೈಕ್ ಸವಾರ.!
ISRO ದಲ್ಲಿರುವ ಹುದ್ದೆಗಳ ಸಂಖ್ಯೆ :
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) : 113 ಹುದ್ದೆಗಳು.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಮೆಕ್ಯಾನಿಕಲ್) : 160 ಹುದ್ದೆಗಳು.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) : 44 ಹುದ್ದೆಗಳು.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) – ಪಿಆರ್‌ಎಲ್ : 02 ಹುದ್ದೆಗಳು.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) – ಪಿಆರ್‌ಎಲ್ : 01 ಹುದ್ದೆ.
ISRO ವಿದ್ಯಾರ್ಹತೆ :
- ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಬಿಇ ಅಥವಾ ಬಿ.ಟೆಕ್ ಪದವಿ (BE or B.Tech degree) ಹೊಂದಿರಬೇಕು.
ಇದನ್ನು ಓದಿ : Sexual harassment : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ; ಡ್ಯಾನ್ಸ್ ಮಾಸ್ಟರ್ ಅರೆಸ್ಟ್.!
ಅರ್ಜಿ ಶುಲ್ಕ :
ಎಲ್ಲಾ ಅಭ್ಯರ್ಥಿಗಳು : ಎಲ್ಲಾ ಹುದ್ದೆಗಳಿಗೆ ಅರ್ಜಿ ಶುಲ್ಕ 250 ರೂ. (ಪ್ರತಿ ಅರ್ಜಿಗೆ 750 ರೂ.ಗಳನ್ನು ಸಂಸ್ಕರಣಾ ಶುಲ್ಕ)
Note : ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಸಂಸ್ಕರಣಾ ಶುಲ್ಕ ಮರುಪಾವತಿಸಲಾಗುತ್ತದೆ. [ಮಹಿಳೆಯರು, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕರಿಗೆ (For Women, SC, ST, PwBD, Ex-Servicemen) ಪೂರ್ಣ ಮರುಪಾವತಿ ಇರಲಿದೆ].
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಇಸ್ರೋ ವೆಬ್‌ಸೈಟ್‌ಗೆ ಹೋಗಿ.
- ನೇಮಕಾತಿ ವಿಭಾಗದಲ್ಲಿ ನೀಡಿರುವ Link ಮೇಲೆ Click ಮಾಡಿ.
- NCS ಪೋರ್ಟಲ್‌ನಲ್ಲಿ ನೋಂದಾಯಿಸಿ.
- ಈಗ ‘Apply Now’ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ನಿಮ್ಮ ದಾಖಲೆಗಳನ್ನು Upload ಮಾಡಿ ಮತ್ತು ಶುಲ್ಕವನ್ನು ಪಾವತಿಸಿ.
- ಅರ್ಜಿಯನ್ನು ಸಲ್ಲಿಸಿದ ನಂತರ ಒಂದು ಕಾಪಿಯನ್ನು Print ತೆಗೆದಿಟ್ಟುಕೊಳ್ಳಿ.
ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.
ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?
- ಲಿಖಿತ ಪರೀಕ್ಷೆ (Written Exam) :
>> ಇದರಲ್ಲಿ ತಾಂತ್ರಿಕ ಮತ್ತು ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.’
- ಸಂದರ್ಶನ (Interveiw) :
>> ಇದರಲ್ಲಿ ನಿಮ್ಮ ಚಿಂತನೆ, ತಾಂತ್ರಿಕ ತಿಳುವಳಿಕೆ ಮತ್ತು ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ : 16 ಜೂನ್ 2025.
ಇದನ್ನು ಓದಿ : Yadagiri : ಫೋನ್ ಪೇ ಮೂಲಕ ಲಂಚ ; ಲೋಕಾಯುಕ್ತ ಬಲೆಗೆ ಅಧಿಕಾರಿ.!
ಪ್ರಮುಖ ಲಿಂಕ್ (Link) :
- ಅರ್ಜಿ ಸಲ್ಲಿಕೆಗೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ.