ಜನಸ್ಪಂದನ ನ್ಯೂಸ್, ಡೆಸ್ಕ್ : ಸಿಹಿ ಪದಾರ್ಥ ಯಾರಿಗಿಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಸಿಹಿ ತಿಂಡಿಗಳನ್ನು ಇಷ್ಟ ಪಡುತ್ತಾರೆ. ಸಕ್ಕರೆ (Suger) ಯನ್ನು ವಿಷ ಎಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರಬಹುದು ಎನ್ನುತ್ತಾರೆ.
ಆದರೆ ಈ ಸಕ್ಕರೆ (Suger) ಸೇವಿಸುವುದರಿಂದ ಮಧುಮೇಹ ಬರುವುದಿಲ್ಲ ಅಥವಾ ಯಾವುದೇ ಕಾಯಿಲೆಯ ಅಪಾಯವಿರುವುದಿಲ್ಲ ಅಂದರೆ ನೀವೂ ನಂಬಲೇ ಬೇಕು.
ಇದನ್ನು ಓದಿ : Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!
ಹೌದು, ಸಕ್ಕರೆ (Suger)ತಿನ್ನೊದ್ರಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರೋದಿಲ್ಲ. ಆದರೆ ಈ ಸಕ್ಕರೆಯನ್ನು ಯಾಗಾಗ ಮತ್ತು ಎಷ್ಟು ತಿನ್ನಬೇಕು ಅನ್ನೋದು ಮುಖ್ಯವಾಗಿರುತ್ತೆ.
ಹಾಗಾದರೆ ಸಕ್ಕರೆ (Suger) ತಿನ್ನಲು ಸರಿಯಾದ ಸಮಯ ಯಾವದಂತಾ ನೋಡೋಣ ಬನ್ನಿ.
ಆಹಾರ, ಸಿಹಿತಿಂಡಿಗಳು, ಶೇಕ್ಸ್, ಜ್ಯೂಸ್, ಎಲ್ಲವೂ ಸಕ್ಕರೆಯನ್ನು ಹೊಂದಿರುತ್ತದೆ. ಆದರೆ ಹೆಚ್ಚು ಸಕ್ಕರೆ (Suger) ಯನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದು ಮಾತ್ರವಲ್ಲದೇ ಇತರ ಆರೋಗ್ಯ ಸಮಸ್ಯೆಗಳು ಸಹ ಉಂಟಾಗುತ್ತವೆ.
ಹೀಗಾಗಿ ಸಕ್ಕರೆಯನ್ನು ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (ಸಾಕೇತ್) ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್‌ನ ಮುಖ್ಯಸ್ಥೆ (ದಕ್ಷಿಣ ವಲಯ) ರಿತಿಕಾ ಸಮದ್ದಾರ್ ಅವರು, ಸಕ್ಕರೆ ಸೇವಿಸಿದಾಗ ಅದು ಜೀರ್ಣವಾಗುತ್ತದೆ. ರಕ್ತದಿಂದ ಹೀರಲ್ಪಡುವ ಗ್ಲುಕೋಸ್ ಆಗಿ ವಿಭಜಿಸುತ್ತದೆ. ಗ್ಲೂಕೋಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದಾಗಿ ಗ್ಲೂಕೋಸ್ ಅನ್ನು ಸ್ನಾಯುಗಳು ಹೀರಿಕೊಳ್ಳುತ್ತವೆ ಮತ್ತು ಶಕ್ತಿಯನ್ನು ಒದಗಿಸುತ್ತವೆ ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ನೀವು ಅದನ್ನು ತಿನ್ನಲು ಸರಿಯಾದ ಸಮಯ ತಿಳಿದಿದ್ದರೆ, ಅದು ನಿಮ್ಮ ಜೀವವನ್ನು ಉಳಿಸಬಹುದು. ಹಾಗಾಗಿ ಸಕ್ಕರೆಯನ್ನು ಯಾವಾಗಲೂ ವಿಷ ಎಂದು ಪರಿಗಣಿಸಬೇಡಿ.
ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್ ; Doctor Arrest.
ಇನ್ನೂ ಮಾನವನ ದೇಹವು ಆಲ್ಕೋಹಾಲ್ ರೀತಿ ಸಕ್ಕರೆಯನ್ನು ಚಯಾಪಚಯಗೊಳಿಸುತ್ತದೆ. ಆದ್ದರಿಂದ ಇದು ಕಾರ್ಬೋಹೈಡ್ರೇಟ್ ಗಳನ್ನು ಕೊಬ್ಬಾಗಿ ಪರಿವರ್ತಿಸುತ್ತದೆ. ಕಾಲಾನಂತರದಲ್ಲಿ ಈ ಕೊಬ್ಬುಗಳು ಯಕೃತ್ತಿನ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ನಾವು ಬೆಳಗ್ಗೆ ಸಕ್ಕರೆ (Suger) ಅಂಶವಿರುವ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಿಂದಿನ ರಾತ್ರಿ ಆಹಾರ ಸೇವಿಸದ ನಂತರ ಬೆಳಗ್ಗೆ ಎದ್ದಾಗ, ಕಾರ್ಬೋಹೈಡ್ರೇಟ್ಗಳಿಗೆ ಹೆಚ್ಚು ಸಂವೇದನಾಶೀಲರಾಗುತ್ತೀರಿ. ಇದರೊಂದಿಗೆ ಬೆಳಗ್ಗೆ ಸಕ್ಕರೆಯನ್ನು ಸೇರಿಸುವುದು ದೇಹಕ್ಕೆ ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾಗಿದೆ.
ಇದನ್ನು ಓದಿ : Suspension : ಪೊಲೀಸ್ ಕಮಿಷನರ್ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್ ಪ್ರತಿಭಟನೆ.!
ಹೆಚ್ಚು ಸಕ್ಕರೆ (Suger) ಯನ್ನು ಸೇವಿಸಲು ಯಾವುದೇ ಪರಿಪೂರ್ಣ ಸಮಯವಿಲ್ಲದಿದ್ದರೂ, ಮಧ್ಯಾಹ್ನ ಊಟದ ಸಮಯದಲ್ಲಿ ಸೇವಿಸಬಹುದು. ನಮ್ಮ ದೇಹದ ಚಯಾಪಚಯ ಕ್ರಿಯೆಯು ದಿನದ ಮಧ್ಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ. ಆದ್ದರಿಂದ ಆ ಸಮಯವು ಸಕ್ಕರೆಗಳನ್ನು ಸಂಸ್ಕರಿಸಲು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚುವರಿಯಾಗಿ, ಯಾರಾದರೂ ಸಂಜೆ ವ್ಯಾಯಾಮ ಮಾಡುತ್ತಿದ್ದರೆ, ಊಟಕ್ಕೆ ಸಕ್ಕರೆ (Suger) ಸೇವಿಸುವುದರಿಂದ ಸ್ನಾಯುಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದನ್ನು ಮಿತವಾಗಿ ಸೇವಿಸಬೇಕು ಎಂಬುವುದನ್ನು ಮರೆಯಬೇಡಿ.
Disclaimer : This article is based on reports and information available on the internet. Janaspandhan News is not affiliated with it and is not responsible for it.
Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!
ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.? ಯಾವುದು ಆ ಎಣ್ಣೆ.? ಅದುವೇ ಸಾಸಿವೆ ಎಣ್ಣೆ(Mustard oil).
ಹೌದು, ಸಾಸಿವೆ ಎಣ್ಣೆ (Mustard oil) ಎಂದರೆ ಕೇವಲ ಅಡುಗೆಗೆ ಮಾತ್ರವಲ್ಲ, ಇದು ಆರೋಗ್ಯದ ಪಾಲಿಗೂ ಬಹುಪಯೋಗಿ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು, ತ್ವಚೆ ಹಾಗೂ ಕೂದಲಿಗೆ ಜೀವ ತುಂಬಲು, ಮಸಾಜ್ ಮೂಲಕ ಸಡಿಲತೆ ತರಲು ಸಹಾಯ ಮಾಡುತ್ತದೆ. ಈ ಎಣ್ಣೆಯ ಉಪಯೋಗಗಳ ಪಟ್ಟಿ ನೋಡಿದರೆ ನೀವು ದಂಗಾಗುತ್ತೀರಿ.!
ಇದನ್ನು ಓದಿ : Suspension : ಪೊಲೀಸ್ ಕಮಿಷನರ್ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್ ಪ್ರತಿಭಟನೆ.!
ಭಾರತೀಯ ಅಡುಗೆಯಲ್ಲಿ ಮತ್ತು ಆಯುರ್ವೇದದಲ್ಲಿ ಸಾಸಿವೆ ಎಣ್ಣೆಯನ್ನು (Mustard oil) ಶತಮಾನಗಳಿಂದ ಬಳಸಲಾಗುತ್ತಿದೆ. ಈ ಎಣ್ಣೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
* ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವೈರಸ್ ವಿರೋಧಿ ಗುಣಗಳನ್ನು (Anti- fungal, antibacterial and antiviral properties) ಸಾಸಿವೆ ಎಣ್ಣೆ (Mustard oil) ಯು ಹೊಂದಿದೆ.
* ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳ (Heart diseases) ಅಪಾಯವನ್ನು ಕಡಿಮೆ ಮಾಡುತ್ತದೆ.
* ಸಾಸಿವೆ ಎಣ್ಣೆ (Mustard oil) ಯು ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ರಸಗಳು ಮತ್ತು ಪಿತ್ತರಸದ ಸ್ರವಿಕೆಯನ್ನು (Secretion of gastric juices and bile) ಸುಗಮಗೊಳಿಸುವುದು.
ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್ ಕಾನ್ಸ್‌ಟೇಬಲ್ ಅರೆಸ್ಟ್.!
* ಸಾಸಿವೆ ಎಣ್ಣೆ (Mustard oil) ಯಿಂದ ಮಸಾಜ್ ಮಾಡುವುದರಿಂದ ಸ್ನಾಯು ನೋವು ಮತ್ತು ಕೀಲು ನೋವು (Muscle pain and joint pain) ಕಡಿಮೆಯಾಗುತ್ತದೆ.
* ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ನೆತ್ತಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ (Improves blood circulation). ಅಲ್ಲದೇ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.
* ಈ ಎಣ್ಣೆ (Mustard oil) ಯಿಂದ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಬಹುದು.
* ಒತ್ತಡದ ಸ್ನಾಯುಗಳನ್ನು ಪುನರ್ಯೌವನಗೊಳಿಸುವುದು (Rejuvenation).
ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್ ; Doctor Arrest.
* ಇದು ಚರ್ಮವನ್ನು ಮೃದುಗೊಳಿಸಿ, ಟ್ಯಾನ್ ತೆಗೆದುಹಾಕುತ್ತದೆ ಮತ್ತು ಮೊಡವೆಗಳನ್ನು ತಡೆಯಲು (prevent acne) ಉಪಯುಕ್ತವಾಗಿದೆ.
* ಸಾಸಿವೆ ಎಣ್ಣೆ (Mustard oil) ಯು ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಫ್ರೀ ರಾಡಿಕಲ್ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ.
* ಈ ಎಣ್ಣೆ ಅಲಿಲ್ ಐಸೋಥಿಯೋಸೈನೇಟ್ (allyl isothiocyanate) ಎಂಬ ಸಂಯುಕ್ತವು ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ. ಇದು ಅಸ್ತಮಾ, ಸಂಧಿವಾತ ಮತ್ತು ಕೊಲೈಟಿಸ್‌ನಂತಹ ಸಮಸ್ಯೆಗಳಿಂದ ಉಂಟಾಗುವ ಉರಿಯೂತ ಮತ್ತು ನೋವನ್ನು ಕಡಿಮೆ (Reduce inflammation and pain) ಮಾಡುತ್ತದೆ.
* ಸಾಸಿವೆ ಎಣ್ಣೆ (Mustard oil) ಯನ್ನು ಶೀತ, ಕೆಮ್ಮು ಮತ್ತು ಇತರ ಉಸಿರಾಟದ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಬಳಕೆ ಮಾಡಲಾಗುತ್ತದೆ.
Disclaimer : This article is based on reports and information available on the internet. Janaspandhan News is not affiliated with it and is not responsible for it.