Saturday, June 14, 2025

Janaspandhan News

HomeGeneral NewsMaharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!
spot_img
spot_img

Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಕೆಳಗೆ ಬಿದ್ದ ಪರಿಣಾಮವಾಗಿ 5 ಜನ ಪ್ರಯಾಣಿಕರು ಸಾವಿಗೀಡಾಗಿ, ಹಲವರು ಗಾಯಗೊಂಡ ಘಟನೆ ಮಹಾರಾಷ್ಟ್ರ (Maharashtra) ದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಲೋಕಲ್ ರೈಲಿನಿಂದ ಕನಿಷ್ಠ 10-12 ಪ್ರಯಾಣಿಕರು ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!

ಸೋಮವಾರ ದಿನವಾದ ಇಂದು (ದಿ.09) ಬೆಳಗ್ಗೆ 10 ಗಂಟೆ ಸುಮಾರಿಗೆ ಮುಂಬೈ (Maharashtra) ನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ನಿಂದ ಥಾಣೆಯ ಕಸರಾ ಪ್ರದೇಶದ ಕಡೆ ಹೋಗುತ್ತಿದ್ದ ಲೋಕಲ್ ರೈಲಿನಿಂದ ಪ್ರಯಾಣಿಕರು ಕೆಳಗೆ ಬಿದ್ದಿದ್ದರೆ.‌

ಲೋಕಲ್ ರೈಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಗಾಯಾಳುಗಳನ್ನು ಥಾಣೆ (Maharashtra) ಸಿವಿಲ್ ಆಸ್ಪತ್ರೆ ಮತ್ತು ಕಲ್ಯಾಣ್‌ನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಕೆಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!

ರೈಲಿನಲ್ಲಿ ಅತಿಯಾದ ಜನಸಂದಣಿಯಿಂದಾಗಿ ಪ್ರಯಾಣಿಕರು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸೆಂಟ್ರಲ್ ರೈಲ್ವೆ (Maharashtra) ಹೇಳಿಕೆಯಲ್ಲಿ ತಿಳಿಸಿದ್ದು, ಅಪಘಾತದ ತನಿಖೆ ನಡೆಯುತ್ತಿದೆ. ಘಟನೆಯಿಂದ ಸ್ಥಳೀಯ ಸೇವೆಗಳು ಸಹ ಅಸ್ತವ್ಯಸ್ತಗೊಂಡಿವೆ.

ರೈಲ್ವೆ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಅಪಘಾತದ ತನಿಖೆ ಆರಂಭವಾಗಿದೆ. ಘಟನೆಯಿಂದ ಸ್ಥಳೀಯ ಸೇವೆಗಳಿಗೂ ತೊಂದರೆಯಾಗಿದೆ” ಎಂದು ಅದು ಹೇಳಿದೆ.

ಇದನ್ನು ಓದಿ : Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!

ಥಾಣೆ (Maharashtra) ಜಿಲ್ಲೆಯ ಮುಂಬ್ರಾ ಮತ್ತು ದಿವಾ ನಿಲ್ದಾಣಗಳ ನಡುವಿನ ಫಾಸ್ಟ್ ಲೈನ್ ರೈಲು ಹಳಿಯಲ್ಲಿ ಕನಿಷ್ಠ ಆರು ಪ್ರಯಾಣಿಕರು ಗಾಯಗೊಂಡಿದ್ದು, ಚಲಿಸುವ ರೈಲಿನಿಂದ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ಕಸಾರಾ (Maharashtra) ಗೆ ಹೋಗುವ ರೈಲಿನ ಕಾವಲುಗಾರ ಬೆಳಿಗ್ಗೆ 9.30 ರ ಸುಮಾರಿಗೆ ಹಳಿಗಳ ಉದ್ದಕ್ಕೂ ಗಾಯಗೊಂಡ ಪ್ರಯಾಣಿಕರು ಕಂಡುಬಂದಿದ್ದಾರೆ ಎಂದು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ಪಿಟಿಐಗೆ ತಿಳಿಸಿದ್ದಾರೆ.

ಇದನ್ನು ಓದಿ : Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?

ಮುಂಬ್ರಾ-ದಿವಾ ವಿಭಾಗದಲ್ಲಿಯ ಕಾರ್ಯಾಚರಣೆಯಿಂದ ಸ್ವಲ್ಪ ಸಮಯದವರೆಗೆ ನಿಧಾನವಾದ ಪರಿಣಾಮ ಪ್ರಯಾಣಿಕರಿಗೆ ಅನಾನುಕೂಲವಾಯಿತು. ರೈಲ್ವೆ ಶೀಘ್ರದಲ್ಲೇ ಸೇವೆಗಳನ್ನು ಪುನಃಸ್ಥಾಪಿಸಲು ಕ್ರಮ ಕೈಗೊಂಡಿತು. ಪ್ರತಿದಿನ 80 ಲಕ್ಷ ಪ್ರಯಾಣಿಕರು ಮುಂಬೈ (Maharashtra) ನ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುತ್ತಾರೆ.

Maharashtra Local train incident :

Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಸಿಹಿ ಪದಾರ್ಥ ಯಾರಿಗಿಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಸಿಹಿ ತಿಂಡಿಗಳನ್ನು ಇಷ್ಟ ಪಡುತ್ತಾರೆ. ಸಕ್ಕರೆ (Suger) ಯನ್ನು ವಿಷ ಎಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರಬಹುದು ಎನ್ನುತ್ತಾರೆ.

ಆದರೆ ಈ ಸಕ್ಕರೆ (Suger) ಸೇವಿಸುವುದರಿಂದ ಮಧುಮೇಹ ಬರುವುದಿಲ್ಲ ಅಥವಾ ಯಾವುದೇ ಕಾಯಿಲೆಯ ಅಪಾಯವಿರುವುದಿಲ್ಲ ಅಂದರೆ ನೀವೂ ನಂಬಲೇ ಬೇಕು.

ಇದನ್ನು ಓದಿ : Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!

ಹೌದು, ಸಕ್ಕರೆ (Suger)ತಿನ್ನೊದ್ರಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರೋದಿಲ್ಲ. ಆದರೆ ಈ ಸಕ್ಕರೆಯನ್ನು ಯಾಗಾಗ ಮತ್ತು ಎಷ್ಟು ತಿನ್ನಬೇಕು ಅನ್ನೋದು ಮುಖ್ಯವಾಗಿರುತ್ತೆ.

ಹಾಗಾದರೆ ಸಕ್ಕರೆ (Suger) ತಿನ್ನಲು ಸರಿಯಾದ ಸಮಯ ಯಾವದಂತಾ ನೋಡೋಣ ಬನ್ನಿ.

ಆಹಾರ, ಸಿಹಿತಿಂಡಿಗಳು, ಶೇಕ್ಸ್, ಜ್ಯೂಸ್, ಎಲ್ಲವೂ ಸಕ್ಕರೆಯನ್ನು ಹೊಂದಿರುತ್ತದೆ. ಆದರೆ ಹೆಚ್ಚು ಸಕ್ಕರೆ (Suger) ಯನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದು ಮಾತ್ರವಲ್ಲದೇ ಇತರ ಆರೋಗ್ಯ ಸಮಸ್ಯೆಗಳು ಸಹ ಉಂಟಾಗುತ್ತವೆ.

ಹೀಗಾಗಿ ಸಕ್ಕರೆಯನ್ನು ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!

ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (ಸಾಕೇತ್) ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್‌ನ ಮುಖ್ಯಸ್ಥೆ (ದಕ್ಷಿಣ ವಲಯ) ರಿತಿಕಾ ಸಮದ್ದಾರ್ ಅವರು, ಸಕ್ಕರೆ ಸೇವಿಸಿದಾಗ ಅದು ಜೀರ್ಣವಾಗುತ್ತದೆ. ರಕ್ತದಿಂದ ಹೀರಲ್ಪಡುವ ಗ್ಲುಕೋಸ್ ಆಗಿ ವಿಭಜಿಸುತ್ತದೆ. ಗ್ಲೂಕೋಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದಾಗಿ ಗ್ಲೂಕೋಸ್ ಅನ್ನು ಸ್ನಾಯುಗಳು ಹೀರಿಕೊಳ್ಳುತ್ತವೆ ಮತ್ತು ಶಕ್ತಿಯನ್ನು ಒದಗಿಸುತ್ತವೆ ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ನೀವು ಅದನ್ನು ತಿನ್ನಲು ಸರಿಯಾದ ಸಮಯ ತಿಳಿದಿದ್ದರೆ, ಅದು ನಿಮ್ಮ ಜೀವವನ್ನು ಉಳಿಸಬಹುದು. ಹಾಗಾಗಿ ಸಕ್ಕರೆಯನ್ನು ಯಾವಾಗಲೂ ವಿಷ ಎಂದು ಪರಿಗಣಿಸಬೇಡಿ.

ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್‌ ; Doctor Arrest.

ಇನ್ನೂ ಮಾನವನ ದೇಹವು ಆಲ್ಕೋಹಾಲ್‌ ರೀತಿ ಸಕ್ಕರೆಯನ್ನು ಚಯಾಪಚಯಗೊಳಿಸುತ್ತದೆ. ಆದ್ದರಿಂದ ಇದು ಕಾರ್ಬೋಹೈಡ್ರೇಟ್ ಗಳನ್ನು ಕೊಬ್ಬಾಗಿ ಪರಿವರ್ತಿಸುತ್ತದೆ. ಕಾಲಾನಂತರದಲ್ಲಿ ಈ ಕೊಬ್ಬುಗಳು ಯಕೃತ್ತಿನ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ನಾವು ಬೆಳಗ್ಗೆ ಸಕ್ಕರೆ (Suger) ಅಂಶವಿರುವ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಿಂದಿನ ರಾತ್ರಿ ಆಹಾರ ಸೇವಿಸದ ನಂತರ ಬೆಳಗ್ಗೆ ಎದ್ದಾಗ, ಕಾರ್ಬೋಹೈಡ್ರೇಟ್ಗಳಿಗೆ ಹೆಚ್ಚು ಸಂವೇದನಾಶೀಲರಾಗುತ್ತೀರಿ. ಇದರೊಂದಿಗೆ ಬೆಳಗ್ಗೆ ಸಕ್ಕರೆಯನ್ನು ಸೇರಿಸುವುದು ದೇಹಕ್ಕೆ ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಹೆಚ್ಚು ಸಕ್ಕರೆ (Suger) ಯನ್ನು ಸೇವಿಸಲು ಯಾವುದೇ ಪರಿಪೂರ್ಣ ಸಮಯವಿಲ್ಲದಿದ್ದರೂ, ಮಧ್ಯಾಹ್ನ ಊಟದ ಸಮಯದಲ್ಲಿ ಸೇವಿಸಬಹುದು. ನಮ್ಮ ದೇಹದ ಚಯಾಪಚಯ ಕ್ರಿಯೆಯು ದಿನದ ಮಧ್ಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ. ಆದ್ದರಿಂದ ಆ ಸಮಯವು ಸಕ್ಕರೆಗಳನ್ನು ಸಂಸ್ಕರಿಸಲು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ, ಯಾರಾದರೂ ಸಂಜೆ ವ್ಯಾಯಾಮ ಮಾಡುತ್ತಿದ್ದರೆ, ಊಟಕ್ಕೆ ಸಕ್ಕರೆ (Suger) ಸೇವಿಸುವುದರಿಂದ ಸ್ನಾಯುಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದನ್ನು ಮಿತವಾಗಿ ಸೇವಿಸಬೇಕು ಎಂಬುವುದನ್ನು ಮರೆಯಬೇಡಿ.

Disclaimer : This article is based on reports and information available on the internet. Janaspandhan News is not affiliated with it and is not responsible for it.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments