ಜನಸ್ಪಂದನ ನ್ಯೂಸ್, ಡೆಸ್ಕ್ : ಒಂದೇ ಗರ್ಭದಲ್ಲಿ ಜನಿಸಿ ಬೆಳದು ದೊಡ್ಡವರಾದ ಅವಳಿ ಸಹೋದರಿಯರು, ಆದರೆ ತಂದೆಯರು ಮಾತ್ರ ಬೇರೆ ಬೇರೆ ಎಂಬ ಆತಂಕಕಾರಿ ಮತ್ತು ವೈದ್ಯಕೀಯ ಲೋಕದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಈ ವಿಚಿತ್ರ ಘಟನೆ ನಡೆದಿರುವವುದು ಬ್ರಿಟನ್‌ನಲ್ಲಿ.
ಬ್ರಿಟನ್‌ನಲ್ಲಿ (Britain) ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿದ ಅಪರೂಪದ ಘಟನೆ (Rare Case) ಬೆಳಕಿಗೆ ಬಂದಿದೆ. ಒಂದೇ ತಾಯಿಯ ಗರ್ಭದಲ್ಲಿ ಬೆಳೆದ ಅವಳಿ ಸಹೋದರಿಯರ DNA ಪರೀಕ್ಷೆಯಲ್ಲಿ, ಅವರಿಬ್ಬರ ತಂದೆ ಬೇರೆ ಬೇರೆ ಎಂಬ ಅಚ್ಚರಿ ಸತ್ಯ ಹೊರಬಂದಿದೆ.
ಮಿಶೆಲ್ ಮತ್ತು ಲವಿನಿಯಾ ಅವಳಿ ಸಹೋದರಿಯರು :
ಮಿಶೆಲ್ ಮತ್ತು ಲವಿನಿಯಾ ಆಸ್ಬೋರ್ನ್ (Michelle and Lavinia Osborne) ಎಂಬ ಈ ಸಹೋದರಿಯರಿಗೆ ತಮ್ಮ ತಂದೆಯ ಬಗ್ಗೆ ಹಲವು ವರ್ಷಗಳಿಂದ ಅನುಮಾನವಿತ್ತು. ಈ ಅನುಮಾನ ನಿವಾರಣೆಗೆ ಮಿಶೆಲ್ ಮನೆಯಲ್ಲೇ ಬಳಸಬಹುದಾದ DNA ಕಿಟ್ ಮೂಲಕ ಪರೀಕ್ಷೆ ನಡೆಸಿದರು. ವರದಿ ಬಂದಾಗ ಅವರು ನಂಬಿದ್ದ ವ್ಯಕ್ತಿಯೇ ತಮ್ಮ ತಂದೆಯಲ್ಲ ಎಂಬುದು ತಿಳಿದುಬಂದಿತು.
ನಂತರ ಲವಿನಿಯಾ ಕೂಡ ಪರೀಕ್ಷೆ ಮಾಡಿಸಿಕೊಂಡಾಗ ಮತ್ತೊಂದು ದೊಡ್ಡ ಸತ್ಯ ಬಹಿರಂಗವಾಯಿತು. ಅವರಿಬ್ಬರಿಗೂ ತಂದೆ ಒಬ್ಬನೇ ಅಲ್ಲ, ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಎಂಬುದು ದೃಢಪಟ್ಟಿತು.
ಯೂರಿಕ್ ಆಸಿಡ್ ಹೆಚ್ಚಾದರೆ ಏನಾಗುತ್ತದೆ? ನಿಯಂತ್ರಣಕ್ಕೆ 5 ಮನೆಮದ್ದುಗಳು.
ವಿಜ್ಞಾನದಲ್ಲಿ ಈ ಘಟನೆಯನ್ನು Heteropaternal Superfecundation ಎಂದು ಕರೆಯಲಾಗುತ್ತದೆ. ಒಂದೇ ಮಾಸಿಕ ಚಕ್ರದಲ್ಲಿ ಎರಡು ಅಂಡಾಣುಗಳು ಬಿಡುಗಡೆಯಾಗಿ, ಅವು ಬೇರೆ ಬೇರೆ ಪುರುಷರ ವೀರ್ಯಾಣುಗಳೊಂದಿಗೆ ಫಲಿಕರಣಗೊಂಡಾಗ ಈ ರೀತಿಯ ಅವಳಿ ಜನನ ಸಂಭವಿಸುತ್ತದೆ.
ವಿಶ್ವದಲ್ಲಿ ಇಂತಹ ಪ್ರಕರಣಗಳು ಅತ್ಯಂತ ವಿರಳವಾಗಿದ್ದು, 20ಕ್ಕೂ ಕಡಿಮೆ ಘಟನೆಗಳು ಮಾತ್ರ ದಾಖಲಾಗಿವೆ ಎಂದು ಹೇಳಲಾಗುತ್ತದೆ.
ಇದಲ್ಲದೆ, ಈ ಸಹೋದರಿಯರ ತಾಯಿ ಈ ಸತ್ಯವನ್ನು ಜೀವನಪರ್ಯಂತ ರಹಸ್ಯವಾಗಿಟ್ಟಿದ್ದರು. ವಿಷಾದಕರ ಸಂಗತಿಯೆಂದರೆ, DNA ವರದಿಗಳು ಸತ್ಯವನ್ನು ಹೊರಹಾಕಿದ ಸಮಯದಲ್ಲೇ 2022ರಲ್ಲಿ ಅವರ ತಾಯಿ ನಿಧನರಾದರು.
ನಂತರ ಅವಳಿ ಸಹೋದರಿಯರು ತಮ್ಮ ನಿಜವಾದ ತಂದೆಯರನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಮಿಶೆಲ್ ಅವರ ತಂದೆ ಅಲೆಕ್ಸ್ ಮತ್ತು ಲವಿನಿಯಾ ಅವರ ತಂದೆ ಆರ್ಥರ್ ಎಂದು ತಿಳಿದುಬಂದಿದೆ. ಹಲವು ವರ್ಷಗಳ ನಂತರ ತಮ್ಮ ತಂದೆಯರನ್ನು ಭೇಟಿಯಾದ ಇಬ್ಬರೂ ಇದೀಗ ಸಂತೋಷಕರ ಜೀವನ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಹೊಂಡದಲ್ಲಿ ಮುಳುಗಿ ಸಾವು.
DNA ವರದಿ ಸತ್ಯವನ್ನು ಬಯಲಿಗೆಳೆದರೂ, ಅವಳಿ ಸಹೋದರಿಯರು ಮಾತ್ರ ತಮ್ಮ ನಡುವಿನ ಪ್ರೀತಿ ಮತ್ತು ಬಾಂಧವ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲವೆಂದು ಸಹೋದರಿಯರು ತಿಳಿಸಿದ್ದಾರೆ.
DNA :
DNA ಎಂದರೆ ಡಿಒಕ್ಸಿರೈಬೋ ನ್ಯೂಕ್ಲಿಕ್ ಆಮ್ಲ (Deoxyribonucleic Acid), ಇದು ಪ್ರತಿಯೊಬ್ಬ ಜೀವಿಯ ದೇಹದ ಮೂಲ ಜೀನ್ಯತೀಯ ಮಾಹಿತಿ ಹೊಂದಿರುವ ಅಂಶ. DNA ನಮ್ಮ ದೇಹದ ರೂಪ, ಲಕ್ಷಣಗಳು ಮತ್ತು ವಂಶಪಾರಂಪರ್ಯ (Heredity) ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದು ಕೋಶಗಳ (Cells) ಒಳಗಿರುವ ಕ್ರೋಮೊಸೋಮ್‌ಗಳಲ್ಲಿ (Chromosomes) ಸಂಗ್ರಹವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ DNA ವಿನ್ಯಾಸ (Structure) ಬಹುತೇಕ ವಿಶಿಷ್ಟವಾಗಿರುತ್ತದೆ, ಅದರಿಂದಲೇ ವ್ಯಕ್ತಿಗಳನ್ನು ಗುರುತಿಸಲು DNA ಪರೀಕ್ಷೆ ಬಳಸಲಾಗುತ್ತದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
ವೈದ್ಯಕೀಯ (Medical) ಕ್ಷೇತ್ರದಲ್ಲಿ DNA ಮೂಲಕ ಅನೇಕ ರೋಗಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಜೊತೆಗೆ ಅಪರಾಧ ತನಿಖೆ (Crime Investigation)ಗಳಲ್ಲಿ ಕೂಡ DNA ಪ್ರಮುಖ ಸಾಕ್ಷ್ಯವಾಗಿರುತ್ತದೆ.
ಒಟ್ಟಿನಲ್ಲಿ, DNA ನಮ್ಮ ಜೀವನದ ಮೂಲಭೂತ ಮಾಹಿತಿ ಸಂಗ್ರಹವಾಗಿದ್ದು, ಮಾನವನ ವೈಶಿಷ್ಟ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.
Photo Credit : AI
Disclaimer: ಈ ಸುದ್ದಿ ಲಭ್ಯವಿರುವ ವರದಿಗಳು ಮತ್ತು online ನಲ್ಲಿ ಲಭ್ಯವಿರುವ ಮಾಹಿತಿ ಆಧಾರಿತವಾಗಿದೆ. ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ತಜ್ಞರ ಸಲಹೆ ಪಡೆಯುವುದು ಒಳಿತು.




