ಮೊಬೈಲ್ ನೋಡುತ್ತಾ ರಸ್ತೆಯಲ್ಲಿ ನಡೆಯುತ್ತೀರಾ? ಹಾಗಾದ್ರೆ ಈ ವೈರಲ್ ವಿಡಿಯೋ ತಪ್ಪದೇ ನೋಡಿ!

ಮೊಬೈಲ್ ನೋಡುತ್ತಾ ರಸ್ತೆಯಲ್ಲಿ ನಡೆಯುತ್ತೀರಾ?

ಡೆಸ್ಕ್‌ : ಮೊಬೈಲ್ ನೋಡುತ್ತಾ ರಸ್ತೆಯಲ್ಲಿ ನಡೆಯುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ವಿಜಯವಾಡದಲ್ಲಿ ನಡೆದ ಈ ಘಟನೆಯ ವೈರಲ್ ವಿಡಿಯೋ ನಮ್ಮೇಲ್ಲರಿಗೂ ಒಂದು ಎಚ್ಚರಿಕೆಯ ಗಂಟೆಯಾಗಬಹುದು. ಕ್ಷಣ ಕಾಲದ ನಿರ್ಲಕ್ಷ್ಯ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುವ ಈ ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದರೂ, ಅದನ್ನು ಬಳಸುವಾಗ ಸ್ವಲ್ಪೇ ಸ್ವಲ್ಪ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯವಾಗಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವ ಘಟನೆ ಬೆಳಕಿಗೆ ಬಂದಿದೆ.

ರಸ್ತೆಯಲ್ಲಿ ನಡೆಯುತ್ತಾ ಮೊಬೈಲ್‌ನಲ್ಲಿ ಮಗ್ನನಾಗಿದ್ದ ವ್ಯಕ್ತಿಯೊಬ್ಬನಿಗೆ ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದ್ದು, ಅದರ ಸಿಸಿಟಿವಿ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ ?

ವೈರಲ್ ಆಗಿರುವ ವಿಡಿಯೋದಲ್ಲಿ, ಒಡಿಶಾ ಮೂಲದ ಬಾಲು ಸಾಹು ಎಂಬ ವ್ಯಕ್ತಿ ಬಸ್ ನಿಲ್ದಾಣದ ಸಮೀಪದ ವೃತ್ತವೊಂದರ ಪ್ರಮುಖ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ಈ ವೇಳೆ ಅವರು ತಮ್ಮ ಜೇಬಿನಿಂದ ಮೊಬೈಲ್ ಫೋನ್ ತೆಗೆದು ಅದರಲ್ಲೇ ಗಮನ ಹರಿಸಿಕೊಂಡು ಮುಂದೆ ಸಾಗುತ್ತಿದ್ದರು.

ಈ ಸುದ್ದಿ ಓದಿ : ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಾ? 50 ವರ್ಷ ಮೇಲ್ಪಟ್ಟ ಪುರುಷರು ಈ ಲಕ್ಷಣವನ್ನು ನಿರ್ಲಕ್ಷಿಸಬೇಡಿ!

ಮೊಬೈಲ್‌ನಲ್ಲೇ ಸಂಪೂರ್ಣ ಗಮನ ಕೇಂದ್ರೀಕೃತವಾಗಿದ್ದರಿಂದ ಎದುರಿನಿಂದ ಬರುತ್ತಿದ್ದ ವಾಹನದ ಬಗ್ಗೆ ಅವರಿಗೆ ಯಾವುದೇ ಅರಿವು ಇರಲಿಲ್ಲ. ಅದೇ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ಬಸ್ ವ್ಯಕ್ತಿಗೆ ಪ್ರಬಲವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಬಿದ್ದು ಬಸ್‌ನ ಚಕ್ರದಡಿ ಸಿಲುಕಿದ್ದು, ತೀವ್ರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಸಂಪೂರ್ಣ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದವರ ಎದೆ ಜಲ್ಲ ಎನ್ನುವಂತಿದೆ.

Courtesy : Social Media / Twitter   

ಇದನ್ನು ಓದಿ : ರೈಲು ನಿಲ್ದಾಣದ ಹಳಿ ಮೇಲೆಯೇ ಮಹಿಳೆಗೆ ಕ್ರೂರ ಹಲ್ಲೆ; ನಿಂತು ನೋಡಿದ ಪಬ್ಲಿಕ್‌, ವಿಡಿಯೋ ವೈರಲ್.!

ಸಿಸಿಟಿವಿ ವಿಡಿಯೋ ವೈರಲ್ :

ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಹಲವರು, ಮೊಬೈಲ್ ಬಳಸುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಸ್ತೆ ದಾಟುವಾಗ ಅಥವಾ ವಾಹನ ಸಂಚಾರ ಇರುವ ಪ್ರದೇಶದಲ್ಲಿ ಮೊಬೈಲ್ ಬಳಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಪೊಲೀಸರು ತನಿಖೆ ಆರಂಭ

ಈ ಘಟನೆಗೆ ಸಂಬಂಧಿಸಿದಂತೆ ಕೃಷ್ಣಲಂಕಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯವಿದೆಯೇ ಅಥವಾ ಪಾದಚಾರಿಯ ಗಮನ ಕೊರತೆಯೇ ಅಪಘಾತಕ್ಕೆ ಪ್ರಮುಖ ಕಾರಣವೇ ಎಂಬ ಎರಡೂ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯ ಹಾಗೂ ಇತರ ಸಾಕ್ಷ್ಯಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಓದಿ : ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕರ ನೇಮಕಾತಿ; SSLC ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ!

ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ಸಂದೇಶ

ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ Orugallu Adda ಎಂಬ ಸಾಮಾಜಿಕ ಜಾಲತಾಣ ಖಾತೆ, “ವಿಜಯವಾಡದಲ್ಲಿ ಮೊಬೈಲ್ ನೋಡುತ್ತಾ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಸಂಭವಿಸಿದ ಭೀಕರ ಅಪಘಾತ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ಬಳಿ ನಡೆಯುವಾಗ ಸದಾ ಎಚ್ಚರಿಕೆಯಿಂದಿರಿ. ಯಾವುದೇ ಸಂದೇಶ ಅಥವಾ ನೋಟಿಫಿಕೇಶನ್ ನಿಮ್ಮ ಜೀವಕ್ಕಿಂತ ದೊಡ್ಡದಲ್ಲ” ಎಂಬ ಎಚ್ಚರಿಕೆ ಸಂದೇಶವನ್ನು ಪ್ರಕಟಿಸಿದೆ.

ರಸ್ತೆಯಲ್ಲಿ ಮೊಬೈಲ್ ಬಳಕೆ ಎಷ್ಟೊಂದು ಅಪಾಯಕಾರಿ?

ರಸ್ತೆ ದಾಟುವಾಗ ಅಥವಾ ವಾಹನ ಸಂಚಾರವಿರುವ ಪ್ರದೇಶದಲ್ಲಿ ಮೊಬೈಲ್ ಬಳಸುವುದರಿಂದ ವ್ಯಕ್ತಿಯ ಗಮನ ಸಂಪೂರ್ಣವಾಗಿ ಮೊಬೈಲ್‌ ಕಡೆಗೆ ತಿರುಗುತ್ತದೆ. ಇದರಿಂದ ಎದುರಿನಿಂದ ಬರುತ್ತಿರುವ ವಾಹನಗಳು, ಹಾರ್ನ್ ಶಬ್ದ ಅಥವಾ ಸಂಚಾರದ ಪರಿಸ್ಥಿತಿಯನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಇಂತಹ ನಿರ್ಲಕ್ಷ್ಯವು ಕೆಲವೇ ಕ್ಷಣಗಳಲ್ಲಿ ಜೀವಹಾನಿಗೂ ಕಾರಣವಾಗಬಹುದು.

ಈ ಘಟನೆ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆಯಾಗಿದೆ. ರಸ್ತೆ ಮೇಲೆ ನಡೆಯುವಾಗ ಮೊಬೈಲ್ ಬಳಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ, ಸುತ್ತಮುತ್ತಲಿನ ಸಂಚಾರದ ಮೇಲೆ ಸಂಪೂರ್ಣ ಗಮನ ಹರಿಸುವುದು ಸುರಕ್ಷಿತ ಪ್ರಯಾಣಕ್ಕೆ ಅತ್ಯಗತ್ಯವಾಗಿದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಕಟಿಸಲಾಗಿದೆ. ಅಪಘಾತದ ವಿಡಿಯೋವು ಕೆಲವರಿಗೆ ಅಸಹನೀಯವಾಗಿರಬಹುದು. ಓದುಗರು ವಿವೇಚನೆಯಿಂದ ವೀಕ್ಷಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದ್ದು, ಅಂತಿಮ ಮಾಹಿತಿ ಸಂಬಂಧಿತ ಅಧಿಕಾರಿಗಳ ಅಧಿಕೃತ ವರದಿಯ ಆಧಾರದ ಮೇಲೆ ಬದಲಾಗುವ ಸಾಧ್ಯತೆ ಇದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top