ಆಕಾಶದಲ್ಲೇ ಏರ್ ಬಲೂನ್‌ಗೆ ಬೆಂಕಿ; ದುರಂತದಲ್ಲಿ 8 ಮಂದಿ ಪ್ರವಾಸಿಗರ ಸಾವು, 13 ಜನರ ರಕ್ಷಣೆ.

ಆಕಾಶದಲ್ಲೇ ಏರ್ ಬಲೂನ್‌ಗೆ ಬೆಂಕಿ

ಬ್ರೆಜಿಲ್ : ಆಕಾಶದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಏರ್ ಬಲೂನ್‌ಗೆ ಬೆಂಕಿ (Hot air balloon) ತಗುಲಿ ಕನಿಷ್ಠ 8 ಜನರು ದುರಂತದಲ್ಲಿ ಸಾವಿಗೀಡಾಗಿದ್ದರೆ, 13 ಜನ ಪ್ರವಾಸಿಗರನ್ನು ರಕ್ಷಿಸಿರುವ ಘಟನೆ ಬ್ರೆಜಿಲ್ ದೇಶದಲ್ಲಿ ನಡೆದಿದೆ. ಈ ಘಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸುರಕ್ಷತಾ ಕ್ರಮಗಳ ಕುರಿತಂತೆ ಮತ್ತೆ ಪ್ರಶ್ನೆಗಳು ಎದ್ದಿವೆ.

ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ ಸುರಕ್ಷತೆ ಕುರಿತು ಆತಂಕ ಹೆಚ್ಚುತ್ತಿರುವ ನಡುವೆಯೇ, ದಕ್ಷಿಣ ಅಮೆರಿಕದ ಬ್ರೆಜಿಲ್ ದೇಶದಲ್ಲಿ ಭೀಕರ ಬೆಂಕಿ ದುರಂತವೊಂದು ಸಂಭವಿಸಿದೆ. ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೃಹತ್ ಏರ್ ಬಲೂನ್ ಹಾರಾಟದ ಮಧ್ಯೆಯೇ ಬೆಂಕಿಗೆ ಆಹುತಿಯಾಗಿ ಪತನಗೊಂಡಿದೆ.

ಏರ್ ಬಲೂನ್‌ಗೆ ಬೆಂಕಿಗೆ ಆಹುತಿಯಾಗಿ ಪರಿಣಾಮ ಅದರಲ್ಲಿದ್ದ ಅನೇಕ ಪ್ರವಾಸಿಗರ ಪೈಕಿ, ಕನಿಷ್ಠ 8 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಏರ್ ಬಲೂನ್‌ಗೆ ಬೆಂಕಿ, ವಿಡಿಯೋ :

Courtesy : Social Media / Twitter  

ಪೈಲಟ್ ಸೇರಿದಂತೆ 13 ಮಂದಿ ರಕ್ಷಣೆ :

ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಅಪಘಾತ ಸಂಭವಿಸಿದ ವೇಳೆ ಬಲೂನ್‌ನಲ್ಲಿ ಒಟ್ಟು 21 ಮಂದಿ ಪ್ರಯಾಣಿಸುತ್ತಿದ್ದರು. ದುರ್ಘಟನೆ ಸಂಭವಿಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದ್ದ ಪರಿಣಾಮ ಅದರ ಪೈಲಟ್ ಸೇರಿದಂತೆ 13 ಮಂದಿಯನ್ನು ರಕ್ಷಿಸಲಾಗಿದೆ.

ಈ ಕ್ರೈಂ ಸುದ್ದಿ ಓದಿ : ಡಿವೈಡರ್ ಗೆ ಡಿಕ್ಕಿ ಹೊಡೆದ BMW : ಡಿಕ್ಕಿ ರಭಸಕ್ಕೆ ಛಿದ್ರವಾಗಿ ಇಬ್ಬರ ಸಾವು.

ಇನ್ನು ಈ ಏರ್ ಬಲೂನ್‌ಗೆ ಬೆಂಕಿ ಆವರಿಸಿದ ಪರಿಣಾಮ ಅದರಲ್ಲಿದ್ದ ಅನೇಕ ಪ್ರವಾಸಿಗರಿಗೆ ಗಾಯಗಳಾಗಿದ್ದು, ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರ್ಘಟನೆ ದಕ್ಷಿಣ ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾ ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಪ್ರಿಯಾ ಗ್ರಾಂಡೆ ಪ್ರದೇಶದ ಬಳಿ ನಡೆದಿದೆ. ಈ ಪ್ರದೇಶ ಪ್ರಕೃತಿ ಸೌಂದರ್ಯ ಮತ್ತು ಬಲೂನ್ ಸವಾರಿಗೆ ಪ್ರಸಿದ್ಧವಾಗಿದೆ.

ಸುಮಾರು 1,000 ಮೀಟರ್ ಎತ್ತರದಲ್ಲಿದ್ದ ಬಲೂನ್‌ :

ಪ್ರಾಥಮಿಕ ಮಾಹಿತಿ ಪ್ರಕಾರ, ಈ ಅಪಘಾತಕ್ಕೀಡಾದ ಬಲೂನ್ ಆ ವೇಳೆ ಸುಮಾರು 1,000 ಮೀಟರ್ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪ್ರವಾಸಿಗರು ಕುಳಿತುಕೊಳ್ಳುವ ಬುಟ್ಟಿಯ ಒಳಭಾಗದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲವೇ ಕ್ಷಣಗಳಲ್ಲಿ ಬೆಂಕಿ ಸಂಪೂರ್ಣವಾಗಿ ವ್ಯಾಪಿಸಿದೆ.

ಈ ಸುದ್ದಿಯನ್ನು ಓದಿ : ಮೂಗಿನ ಆಕಾರ ನೋಡಿ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ತಿಳಿಯಬಹುದೇ?

ಯಾವಾಗ ಪರಿಸ್ಥಿತಿ ಗಂಭೀರವಾಯಿತೋ ಆಗ ಅನುಭವಿ ಪೈಲಟ್ ತುರ್ತು ಪರಿಸ್ಥಿತಿಯನ್ನು ಮನಗಂಡು ಬಲೂನ್ ಅನ್ನು ನೆಲದತ್ತ ಇಳಿಸಲು ಪ್ರಯತ್ನಿಸಿದ್ದಾರೆ. ಬಲೂನ್ ನೆಲದ ಸಮೀಪ ಬರುತ್ತಿದಂತೆಯೇ ಪ್ರಯಾಣಿಕರಿಗೆ ಜೀವ ಉಳಿಸಿಕೊಳ್ಳಲು ಕೆಳಕ್ಕೆ ಜಿಗಿಯುವಂತೆ ಸೂಚಿಸಲಾಗಿದೆ.

ಕೆಳಗೆ ಜಿಗಿದ ಪ್ರವಾಸಿಗರು :

ಕೆಳಗೆ ಜಿಗಿಯಲು ಸೂಚಿಸುತ್ತಿದಂತೆಯೇ ಕೆಲವು ಪ್ರಯಾಣಿಕರು ಕೆಳಕ್ಕೆ ಜಿಗಿದಿದ್ದಾರೆ. ಆಗ ತಕ್ಷಣವೇ ಬಲೂನ್‌ನ ತೂಕ ಏಕಾಏಕಿ ಕಡಿಮೆಯಾಗಿ ಅದು ಮತ್ತೆ ವೇಗವಾಗಿ ಮೇಲಕ್ಕೆ ಏರತೊಡಗಿದೆ. ನಿಯಂತ್ರಣ ಕಳೆದುಕೊಂಡ ಬಲೂನ್ ಕೊನೆಗೆ ಭಾರೀ ಪ್ರಮಾಣದಲ್ಲಿ ಬೆಂಕಿಗಾಹುತಿಯಾಗಿ ನೆಲಕ್ಕೆ ಅಪ್ಪಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತದ ನಿಖರ ಕಾರಣ ಏನು, ಸುರಕ್ಷತಾ ನಿಯಮಗಳನ್ನು ಸಂಪೂರ್ಣ ಪಾಲಿಸಲಾಗಿತ್ತೇ ಎಂಬುದರ ಕುರಿತು ಬ್ರೆಜಿಲ್ ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ತನಿಖೆ ಆರಂಭಿಸಿದೆ. ಈ ದುರ್ಘಟನೆಗೆ ಸಂಬಂಧಿಸಿ ಬ್ರೆಜಿಲ್ ಅಧ್ಯಕ್ಷ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಮರಿ ಮಂಗನ ಕಿತಾಪತಿ ನೋಡಿ ನೆಟ್ಟಿಗರು ಫಿದಾ; ವೈರಲ್ ವಿಡಿಯೋಗೆ ಭಾರೀ ಪ್ರತಿಕ್ರಿಯೆ.

ಸಂಪಾದಕೀಯ :

ಏರ್ ಬಲೂನ್‌ ಎನ್ನುವುದು ಬಿಸಿ ಗಾಳಿ ಅಥವಾ ವಿಶೇಷ ಅನಿಲದ ಸಹಾಯದಿಂದ ಆಕಾಶದಲ್ಲಿ ಹಾರುವ ಒಂದು ವೈಮಾನಿಕ ಸಾಧನವಾಗಿದೆ.

ಇದನ್ನು ಸಾಮಾನ್ಯವಾಗಿ ಪ್ರವಾಸೋದ್ಯಮ, ಸಾಹಸ ಕ್ರೀಡೆ ಹಾಗೂ ಮನರಂಜನೆಗಾಗಿ ಬಳಸಲಾಗುತ್ತದೆ. ಬಲೂನ್ ಒಳಗೆ ಇರುವ ಬಿಸಿ ಗಾಳಿಯ ಒತ್ತಡದಿಂದ ಇದು ಮೇಲಕ್ಕೆ ಏರುತ್ತದೆ ಮತ್ತು ಪೈಲಟ್ ಅದರ ದಿಕ್ಕು ಹಾಗೂ ಎತ್ತರವನ್ನು ನಿಯಂತ್ರಿಸುತ್ತಾರೆ.

ವಿಶ್ವದ ಅನೇಕ ದೇಶಗಳಲ್ಲಿ ಏರ್ ಬಲೂನ್ ಸವಾರಿ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಆದರೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಇಂತಹ ಅಪಘಾತಗಳ ಸಂಭವವೂ ಇರಬಹುದು.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಏರ್ ಬಲೂನ್‌ಗೆ ಬೆಂಕಿ (Hot Air Balloon) ಲೇಖನವು ವಿವಿಧ ಸಾರ್ವಜನಿಕ ವರದಿಗಳು ಮತ್ತು ಲಭ್ಯ ಮಾಹಿತಿಗಳ ಆಧಾರದ ಮೇಲೆ ಮಾಹಿತಿ ಉದ್ದೇಶಕ್ಕಾಗಿ ಸಿದ್ಧಪಡಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಅಧಿಕೃತ ಮಾಹಿತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top