ಡೆಸ್ಕ್ : ಇಲ್ಲೊಂದು ಮರಿ ಮಂಗನ ಕಿತಾಪತಿಗೆ ನೆಟ್ಟಿಗರು ಫಿದಾ ಆಗಿದ್ದು, ವೈರಲ್ ವಿಡಿಯೋಗೆ ಸೋಷಿಯಲ್ ಮೀಡಿಯಾ (Social Media) ದಲ್ಲಿ ಭಾರೀ ಪ್ರತಿಕ್ರಿಯೆ ಉಂಟಾಗಿದೆ. ಈ ವೈರಲ್ ವಿಡಿಯೋ ನೋಡಿದರೆ ನೀವು ಸಹ ಪಿಧಾ ಆಗೋದರಲ್ಲಿ ಸಂಶವೇ ಇಲ್ಲ.
ಇಂದಿನ ಸೋಷಿಯಲ್ ಮೀಡಿಯಾ (Social Media) ಯುಗದಲ್ಲಿ ಪ್ರತಿದಿನವೂ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ವೈರಲ್ ಆದ ಕೆಲ ವಿಡಿಯೋಗಳು ಮಾತ್ರ ಜನರಿಗೆ ಮನರಂಜನೆ ನೀಡುತ್ತ ಮುಖದಲ್ಲಿ ನಗುವು ಮೂಡಿಸುವುದರ ಜೊತೆಗೆ ಮನಸ್ಸನ್ನೂ ಗೆದ್ದುಬಿಡುತ್ತವೆ.
“ಸೋ ಕ್ಯೂಟ್” :
ಕಳೆದ ಕೆಲ ದಿನಗಳ ಹಿಂದೆ “ಮೊಬೈಲ್ ಕದ್ದ ಮರಿ ಕೋತಿ : ತಾಯಿ ಕೋತಿ ಮಾಡಿದ ಕೆಲಸ ವೈರಲ್ ; ನೆಟ್ಟಿಗರು ಫಿದಾ.! ಎಂಬ ಶೀರ್ಷಿಕೆಯಲ್ಲಿ ಮರಿ ಕೋತಿ ಬಗ್ಗೆ ಸುದಿ ಆಗಿತ್ತು. ಇದೀಗ ಅಂತಹದ್ದೇ ಒಂದು ಮರಿ ಮಂಗನ (Monkey) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು “ಸೋ ಕ್ಯೂಟ್” ಎಂದು ಕಾಮೆಂಟ್‌ಗಳ ಮಳೆಗರೆದಿದ್ದಾರೆ.
ಮನುಷ್ಯರ ಪೂರ್ವಜರು ಎಂದು ಕರೆಯಲ್ಪಡುವ ಮಂಗಗಳು ಮಾಡುವ ಕಿತಾಪತಿಗಳು (Funny Antics) ಯಾವಾಗಲೂ ಜನರ ಗಮನ ಸೆಳೆಯುತ್ತವೆ. ದೇವಸ್ಥಾನಗಳು, ಪ್ರವಾಸಿ ತಾಣಗಳು ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಂಗಗಳ ಹಾವಳಿ ಸಾಮಾನ್ಯ.
ಕೆಲವೊಮ್ಮೆ ಅವು ಬ್ಯಾಗ್ ಕಸಿದುಕೊಳ್ಳುವುದು, ಕೈಯಲ್ಲಿರುವ ಆಹಾರ ಕಿತ್ತುಕೊಳ್ಳುವುದು ಅಥವಾ ಜನರನ್ನು ಬೆದರಿಸುವಂತಹ ಘಟನೆಗಳು ನಡೆಯುತ್ತವೆ. ಆದರೆ ಮತ್ತೊಂದೆಡೆ, ಅವುಗಳ ಕೆಲವು ಚಟುವಟಿಕೆಗಳು ಜನರಿಗೆ ನಗೆಪಾಟಲಾಗಿ ಪರಿಣಮಿಸುತ್ತವೆ.
ವಿಡಿಯೋದಲ್ಲೇನಿದೆ?
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಫ್ರಾಕ್ ಧರಿಸಿ ನಿಂತಿರುವುದನ್ನು ಕಾಣಬಹುದು. ಇದೇ ವೇಳೆ ಒಂದು ಮರಿ ಕೋತಿ (Baby Monkey) ಆಟವಾಡುತ್ತಾ ಆಕೆಯ ಉಡುಪಿನೊಳಗೆ ನುಗ್ಗುತ್ತದೆ. ಈ ದೃಶ್ಯ ನೋಡಿ ಅಲ್ಲಿದ್ದವರು ಅಚ್ಚರಿಗೊಳ್ಳುತ್ತಾರೆ. ಆದರೆ ಅದರ ನಡುವಳಿಕೆ ನೋಡಿ ಎಲ್ಲರನ್ನೂ ನಗುವಿನ ಅಲೆಯಲ್ಲಿ ತೇಲಿಸಿ ಬಿಡುತ್ತದೆ.
ಇದನ್ನು ಓದಿ : ಮೊಬೈಲ್ ಕದ್ದ ಮರಿ ಕೋತಿ; ತಾಯಿ ಕೋತಿ ಮಾಡಿದ ಕೆಲಸ ವೈರಲ್.
ಮರಿ ಕೋತಿಯ ಈ ಕಿತಾಪತಿಯನ್ನು ಗಮನಿಸಿದ ತಾಯಿ ಕೋತಿ (Mother Monkey) ಕೂಡಲೇ ಯುವತಿಯ ಬಳಿ ಬಂದು, ಆಕೆಯ ಉಡುಪಿನೊಳಗೆ ನುಗ್ಗಿದ್ದ ಮರಿಯನ್ನು ಎಳೆದು ಹೊರಗೆ ತೆಗೆದುಕೊಳ್ಳುತ್ತದೆ.
ಮಂಗಗಳಿಗೂ ಮ್ಯಾನರ್ಸ್ :
ಅಷ್ಟೇ ಅಲ್ಲದೆ, ಮರಿ ಮಂಗನ ಕಿತಾಪತಿಯಿಂದ ಕೆಟ್ಟಿದ ಯುವತಿಯ ಉಡುಪನ್ನೂ ಸರಿಪಡಿಸುವಂತೆ ಕಂಡುಬರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು “ಮಂಗಗಳಿಗೂ ಮ್ಯಾನರ್ಸ್ ಇದೆ” ಎಂದು ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ.
ಈ ವಿಡಿಯೋ ಇದೀಗ ವಿವಿಧ ಸಾಮಾಜಿಕ ಜಾಲತಾಣ (Instgram) ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು (Views) ಪಡೆದಿದ್ದು, 98.7K likes, 1.1K – comments ಪಡೆದುಕೊಂಡಿದ್ದು, ಸಾವಿರಾರು ಜನರು ಶೇರ್ ಮಾಡುತ್ತಿದ್ದಾರೆ. ಅನೇಕರು “ಇದು ನಿಜಕ್ಕೂ ದಿನವನ್ನೇ ಖುಷಿಪಡಿಸುವ ವಿಡಿಯೋ” ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಮಂಗಗಳ ಕುರಿತ ವಿಚಿತ್ರ ಘಟನೆಗಳು ಹೊಸದೇನಲ್ಲ. ಕೆಲವು ದಿನಗಳ ಹಿಂದೆ ಶ್ರೀಲಂಕಾದಲ್ಲಿ (Sri Lanka) ಮಂಗವೊಂದರಿಂದ ದೇಶದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದ್ದ ಘಟನೆ ಕೂಡ ಭಾರೀ ಸುದ್ದಿಯಾಗಿತ್ತು. ಮಂಗವೊಂದು ವಿದ್ಯುತ್ ಗ್ರಿಡ್‌ಗೆ ಸಿಲುಕಿದ ಪರಿಣಾಮ ಕೆಲ ಗಂಟೆಗಳ ಕಾಲ ಜನರು ಕತ್ತಲಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಏರ್ಪಟಿತ್ತು.
ಮರಿ ಮಂಗನ ಕಿತಾಪತಿ ವಿಡಿಯೋ :
View this post on Instagram
Courtesy : Social Media / Instagram
ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಂಗಗಳ ಹಾವಳಿ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ತೋಟಗಳಿಗೆ ಗುಂಪಾಗಿ ನುಗ್ಗಿ ಬೆಳೆ ಹಾನಿ ಮಾಡುವುದು, ಮನೆಗಳ ಬಳಿ ಆಹಾರ ಕಸಿದುಕೊಳ್ಳುವುದು ಸಾಮಾನ್ಯವಾಗಿದೆ. ಆದರೂ ಕೆಲ ಸಂದರ್ಭಗಳಲ್ಲಿ ಮಂಗಗಳ ಆಟೋಪಾಟಗಳು ಜನರಿಗೆ ಮನರಂಜನೆಯ ಮೂಲವಾಗುತ್ತವೆ.
ಸದ್ಯ ವೈರಲ್ ಆಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿದ್ದು, ಮಂಗಗಳ ಬುದ್ಧಿವಂತಿಕೆ ಮತ್ತು ನಡವಳಿಕೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.
ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
Disclaimer: ಈ ಮರಿ ಮಂಗನ ಕಿತಾಪತಿ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಲಭ್ಯ ಮಾಹಿತಿಯನ್ನು ಆಧರಿಸಿ ರಚಿಸಲಾಗಿದೆ. ವಿಡಿಯೋದಲ್ಲಿನ ದೃಶ್ಯಗಳ ನಿಖರತೆ ಬಗ್ಗೆ ನಮ್ಮ ವೆಬ್‌ಸೈಟ್ ಸ್ವತಂತ್ರವಾಗಿ ದೃಢೀಕರಿಸಿರುವುದಿಲ್ಲ.





