ಡೆಸ್ಕ್ : ಪ್ರವಾಸಿಗರ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಪುಟ್ಟ ಕೋತಿ ಮರಿ ಕಿತ್ತುಕೊಂಡ ಘಟನೆ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಕೋತಿಮರಿಯ ಈ ಕಿತಾಪತಿಯ ಬಗ್ಗೆ ಪ್ರವಾಸಿಗರು ದೂರು ನೀಡಿದಾಗ, ತಾಯಿ ಕೋತಿ (ಮಂಗ) ಮಾಡಿದ ಕೆಲಸ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಹಾಗಾದ್ರೆ ಏನದು ಘಟನೆ? ಇಲ್ಲಿದೆ ನೋಡಿ ಈ ವೈರಲ್ ವಿಡಿಯೋ ಹಿಂದಿನ ಸಂಪೂರ್ಣ ಕಥೆ.!
ಸಾಮಾಜಿಕ ಜಾಲತಾಣ (Social Media) ದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ವೈರಲ್ ಆದ ವಿಡಿಯೋಗಳಲ್ಲಿ ಕೆಲ ವಿಡಿಯೋಗಳು ಕೇವಲ ಮನರಂಜನೆ (Entertainment) ನೀಡುವುದಲ್ಲ, ಮನುಷ್ಯರಿಗೆ ಪಾಠವನ್ನೂ ಕಲಿಸುತ್ತವೆ.
ಇದೀಗ ಪುಟ್ಟ ಮಂಗನ ಮರಿ ಮತ್ತು ತಾಯಿ ಕೋತಿಯ ಒಂದು ಫನ್ನಿ ಹಾಗೂ ಕುತೂಹಲಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರವಾಸಿ ತಾಣವೊಂದರಲ್ಲಿ (Tourist Spot) ನಡೆದ ಈ ಘಟನೆ ನೆಟ್ಟಿಗರ ಗಮನ ಸೆಳೆದಿದ್ದು, “ಪ್ರಾಣಿಗಳಿಗೂ ಎಷ್ಟು ಅರ್ಥವಾಗುತ್ತದೆ ನೋಡಿ!” ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
ಮೊಬೈಲ್ ಕಿತ್ತುಕೊಂಡ ಮರಿ ಕೋತಿ :
ವೈರಲ್ ಆಗಿರುವ ವಿಡಿಯೋದಲ್ಲೆನಿದೆ?
ವಿಡಿಯೋದಲ್ಲಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಪ್ರದೇಶದಲ್ಲಿ ಹಲವು ಮಂಗಗಳು ಸಂಚರಿಸುತ್ತಿರುವುದು ಕಾಣಿಸುತ್ತದೆ. ಈ ವೇಳೆ ಪ್ರವಾಸಿಗನೊಬ್ಬ ಮರಿ ಮಂಗನ ಫೋಟೋ (Photo) ತೆಗೆದುಕೊಳ್ಳಲು ತನ್ನ ಮೊಬೈಲ್ ಬಳಕೆ ಮಾಡುತ್ತಿದ್ದಾನೆ. ಆದರೆ ಕ್ಷಣಾರ್ಧದಲ್ಲಿ ಮರಿ ಮಂಗ ಆತನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಓಡಿಹೋಗುತ್ತದೆ.
जानवर समझदार होते जा रहे
और इन इंसान………शुभप्रभात pic.twitter.com/APJDD1Vd1u
— Poonam Indian (@lippy0563) May 25, 2026
Courtesy : Social Media / Instagram
ಏಕಾಏಕಿ ನಡೆದ ಈ ಘಟನೆಯಿಂದ ಪ್ರವಾಸಿಗ ಬೆಚ್ಚಿಬಿದ್ದಿದ್ದಾನೆ. ಅಲ್ಲಿದ್ದವರು ಸಹ ಕೆಲ ಕ್ಷಣ ಗಾಬರಿಗೊಂಡಿದ್ದಾರೆ. ಅಷ್ಟೆ ಅಲ್ಲ, ಮುಂದೆ ಎನು ಎಂಬ ಆತಂಕದಲ್ಲಿ ಮುಳುಗುತ್ತಾರೆ.
ತಾಯಿ ಕೋತಿಗೆ ಸೂಚನೆ ನೀಡಿದ ಸಿಬ್ಬಂದಿ :
ಈ ಘಟನೆ ಗಮನಿಸಿದ ಸ್ಥಳೀಯ ಸಿಬ್ಬಂದಿಯೊಬ್ಬರು ಆಶ್ಚರ್ಯಕರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಅಲ್ಲಿದ್ದ ತಾಯಿ ಕೋತಿಗೆ, “ನಿನ್ನ ಮಗುವಿಗೆ ಮೊಬೈಲ್ ವಾಪಸ್ ಕೊಡಲು ಹೇಳು” ಎಂಬ ರೀತಿಯಲ್ಲಿ ಕೈ ಚಲನವಲನಗಳ ಮೂಲಕ ಸೂಚನೆ ನೀಡಿದ್ದಾರೆ.
ಇದನ್ನು ಓದಿ : ಇಂದಿನ ರಾಶಿ ಭವಿಷ್ಯ: ಮೇ 24, 2026 ರವಿವಾರದ ದ್ವಾದಶ ರಾಶಿಗಳ ಫಲಗಳು.!
ಅಚ್ಚರಿಯ ಸಂಗತಿ ಏನೆಂದರೆ, ತಾಯಿ ಕೋತಿ ತಕ್ಷಣವೇ ಮರಿ ಕೋತಿಯ ಬಳಿ ಹೋಗಿ ಅದರ ಕಿವಿಯಲ್ಲಿ ಏನೋ ಹೇಳಿದಂತೆ ವರ್ತಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಮರಿ ಮಂಗನಿಂದ ಮೊಬೈಲ್ ಪಡೆದುಕೊಂಡು ಮತ್ತೆ ಪ್ರವಾಸಿಗನಿಗೆ ಹಿಂತಿರುಗಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ :
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
- “ಮಂಗಗಳ ಬುದ್ಧಿವಂತಿಕೆ (Monkey Intelligence) ಅಚ್ಚರಿ ಮೂಡಿಸುತ್ತದೆ”. ಅಂತ ಕಾಮೆಂಟ್ ಮಾಡಿದ್ದಾರೆ.
- “ಮನುಷ್ಯರಿಗಿಂತ ಪ್ರಾಣಿಗಳಲ್ಲಿ ಹೆಚ್ಚು ಶಿಸ್ತು ಇದೆ” ಎಂಬಂತ ಕಮೆಂಟ್‌ಗಳು ಹರಿದುಬರುತ್ತಿವೆ.
- “ತಾಯಿ ಎಂದರೆ ತಾಯಿಯೇ, ಅದು ಮನುಷ್ಯರಾಗಲಿ ಅಥವಾ ಪ್ರಾಣಿಯಾಗಲಿ” ಎಂದು ಇನ್ನೂ ಕೆಲವರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಾಣಿಗಳ ವರ್ತನೆ ಮತ್ತೆ ಚರ್ಚೆಗೆ
ಈ ವೈರಲ್ ವಿಡಿಯೋ ಮೂಲಕ ಪ್ರಾಣಿಗಳ ವರ್ತನೆ (Animal Behaviour) ಹಾಗೂ ಅವುಗಳ ಸಂವಹನ ಸಾಮರ್ಥ್ಯದ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ವಿಶೇಷವಾಗಿ ಕೋತಿಗಳು ಮಾನವರ ಚಲನೆ, ಅಭ್ಯಾಸ ಮತ್ತು ವಸ್ತುಗಳನ್ನು ಬೇಗನೆ ಅರ್ಥಮಾಡಿಕೊಳ್ಳುವ ಗುಣ ಹೊಂದಿವೆ ಎಂದು ತಜ್ಞರು ಹೇಳುತ್ತಾರೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
ಈ ವಿಡಿಯೋ ಈಗ ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್ ಆಗಿದ್ದು, ಹಲವರು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಆದರೆ ವಿಡಿಯೋ ಯಾವಾಗ, ಎಲ್ಲಿಯದು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಸದ್ಯ 1.9K ಜನರ ವೀಕ್ಷಣೆ ಈ ವಿಡಿಯೋ ಪಡೆದಿದೆ.
ಸಂಪಾದಕೀಯ :
ವಿಡಿಯೋ ನೋಡಿ ಅನೇಕರು ಕಾಮೆಂಟ್ ಮಾಡಿದ್ದನ್ನು ಇದೀಗ ನೀವೂ ಓದಿದ್ದೀರಿ. ಅದರಲ್ಲಿ ಓರ್ವರು “ತಾಯಿ ಎಂದರೆ ತಾಯಿಯೇ, ಅದು ಮನುಷ್ಯರಾಗಲಿ ಅಥವಾ ಪ್ರಾಣಿಯಾಗಲಿ” ಅಂತ ಹೇಳಿದ್ದಾರಲ್ಲ, ಅದು ನೂರಕ್ಕೆ ನೂರು ನಿಜ. “ತಾಯಿ ತಾಯಿಯೇ”.
ಈ ಸುದ್ದಿಯನ್ನು ಓದಿ : ದಿಢೀರ್ ಹವಾಮಾನ ಅಲರ್ಟ್: ಮುಂದಿನ ಕೆಲ ಗಂಟೆಗಳಲ್ಲಿ ಈ 3 ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ.
Disclaimer: ಈ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಹಾಗೂ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಪುನರ್‌ರಚಿಸಲಾಗಿದೆ. ವಿಡಿಯೋ ನಡೆದ ಸ್ಥಳ ಹಾಗೂ ಘಟನೆಯ ಸಂಪೂರ್ಣ ಅಧಿಕೃತ ಮಾಹಿತಿ ಲಭ್ಯವಿಲ್ಲ.





