ಮೂಗಿನ ಆಕಾರ ನೋಡಿ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ತಿಳಿಯಬಹುದೇ?

ಮೂಗಿನ ಆಕಾರ ನೋಡಿ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ತಿಳಿಯಬಹುದೇ?

ಜ್ಯೋತಿಷ್ಯ : ನಿಮ್ಮ ಮೂಗಿನ ಆಕಾರ ನೋಡಿದರೆ ತಿಳಿಯುತ್ತೇ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ಎಂದು ಈ ಬಗ್ಗೆ ಜ್ಯೋತಿಷ ಮತ್ತು ಸಾಮುದ್ರಿಕ ಶಾಸ್ತ್ರ ಏನು ಹೇಳುತ್ತದೆ? ಬನ್ನಿ ಮೂಗಿನ ಆಕಾರ ಹೀಗಿದ್ದರೆ, ಆ ವ್ಯಕ್ತಿ ಸ್ವಭಾವ, ಚಿಂತನೆ ಮತ್ತು ಜೀವನಶೈಲಿ ಹೇಗಿರುತ್ತೇ ಅಂತ ತಿಳಿಯೋಣ.!

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ನಾವು ಅವರ ಮಾತು, ನಡವಳಿಕೆ ಮತ್ತು ವರ್ತನೆಗಳನ್ನು ಗಮನಿಸುತ್ತೇವೆ. ಆದರೆ ಪ್ರಾಚೀನ ಜ್ಯೋತಿಷ್ಯ ಹಾಗೂ ಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ದೇಹದ ಕೆಲವು ಲಕ್ಷಣಗಳು ಕೂಡ ಅವರ ವ್ಯಕ್ತಿತ್ವದ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತವೆ ಎನ್ನಲಾಗುತ್ತದೆ.

ಮೂಗಿನ ಆಕಾರ :

ವ್ಯಕ್ತಿಯ ದೇಹದ ಲಕ್ಷಣ ಅದರಲ್ಲೂ ವಿಶೇಷವಾಗಿ “ಮೂಗಿನ ಆಕಾರ” ವ್ಯಕ್ತಿಯ ಸ್ವಭಾವ, ಚಿಂತನೆ ಮತ್ತು ಜೀವನಶೈಲಿಯನ್ನು ಅಂದಾಜು ಮಾಡಲು ಸಹಾಯಕವಾಗಬಹುದು ಎಂದು ಹೇಳಲಾಗುತ್ತದೆ. ಮುಖದ ಪ್ರಮುಖ ಅಂಗಗಳಲ್ಲಿ ಒಂದಾದ ಮೂಗು, ಕೇವಲ ಸೌಂದರ್ಯವನ್ನೇ ಹೆಚ್ಚಿಸುವುದಲ್ಲದೆ ವ್ಯಕ್ತಿತ್ವದ ಸಂಕೇತವೂ ಆಗಿದೆ ಎಂಬ ನಂಬಿಕೆ ಇದೆ.

ಈ ಸುದ್ದಿಯನ್ನು ಓದಿ : ಅನ್ನಭಾಗ್ಯ ಯೋಜನೆಗೆ ಬಿಗ್ ಅಪ್‌ಡೇಟ್: 14 ಲಕ್ಷ ಅನರ್ಹ BPL ಕಾರ್ಡ್‌ಗಳಿಗೆ ಬೀಳುತ್ತಾ ಕತ್ತರಿ?

ವಿವಿಧ ರೀತಿಯ ಮೂಗಿನ ಆಕಾರಗಳು ವಿಭಿನ್ನ ಗುಣಲಕ್ಷಣಗಳನ್ನು ಸೂಚಿಸುತ್ತವೆ ಎಂದು ಕೆಲವು ಅಧ್ಯಯನಗಳು ಹಾಗೂ ಪಾರಂಪರಿಕ ನಂಬಿಕೆಗಳು ತಿಳಿಸುತ್ತವೆ.

ನೇರ ಹಾಗೂ ಚೂಪಾದ ಮೂಗು :

ಕೆಲವರಿಗೆ ಮೂಗು ನೇರವಾಗಿ ಕಾಣಿಸಿಕೊಂಡು ಕೆಳಭಾಗ ಸ್ವಲ್ಪ ಇಳಿಜಾರಿನಂತೆ ಇರುತ್ತದೆ. ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ “ಕುತೂಹಲ ಸ್ವಭಾವದವರು” ಎಂದು ಪರಿಗಣಿಸಲಾಗುತ್ತದೆ. ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರಿಸುವ ಇವರು ಹೊಸ ಅವಕಾಶಗಳನ್ನು ಹುಡುಕುತ್ತಿರುತ್ತಾರೆ.

ಮಾತಿನ ಮೂಲಕ ಇತರರನ್ನು ಬೇಗನೆ ಸೆಳೆಯುವ ಗುಣ ಇವರಲ್ಲಿರುತ್ತದೆ. ಜೊತೆಗೆ ತೀಕ್ಷ್ಣವಾಗಿ ಯೋಚಿಸುವ ಹಾಗೂ ವಿಷಯಗಳನ್ನು ಬೇಗ ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಈ ನೇರ ಹಾಗೂ ಚೂಪಾದ ಮೂಗು ಇರುವವರಿಗೆ ಹೆಚ್ಚಿರುತ್ತದೆ.

ಗಿಳಿಯ ಮೂಗಿನ ಆಕಾರ :

ಗಿಳಿಯ ಕೊಕ್ಕಿನಂತೆ ಸ್ವಲ್ಪ ಬಾಗಿದ ಮೂಗು ಹೊಂದಿರುವ ಈ ವ್ಯಕ್ತಿಗಳು ಸಾಮಾನ್ಯವಾಗಿ “ಬುದ್ಧಿವಂತರು ಮತ್ತು ಪ್ರಾಮಾಣಿಕರು” ಎಂದು ಹೇಳಲಾಗುತ್ತದೆ. ಇಂತಹವರು ಯಾವುದೇ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಾರೆ.

ಈ ಕ್ರೈಂ ಸುದ್ದಿ ಓದಿ : ಕಾಕಿನಾಡ: ಇನ್‌ಸ್ಟಾಗ್ರಾಮ್ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ; 3 ತಿಂಗಳ ಬಳಿಕ ಸಿಕ್ಕಿಬಿದ್ದಿದ್ದು ಹೇಗೆ?

ನಿಷ್ಠೆ ಮತ್ತು ಶ್ರಮದಿಂದ ಕೆಲಸ ಪೂರ್ಣಗೊಳಿಸುವ ಗುಣ ಇವರಲ್ಲಿರುತ್ತದೆ. ಇತರರಿಗೆ ಸಹಾಯ ಮಾಡಲು ಸದಾ ಮುಂದಾಗುವ ಇವರು ತ್ಯಾಗ ಮನೋಭಾವ ಹೊಂದಿರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತಿದೆ.

ಅಗಲವಾದ ಮೂಗು :

ಅಗಲ ಅಥವಾ ದಪ್ಪ ಮೂಗು ಹೊಂದಿರುವವರು ಹೆಚ್ಚಾಗಿ “ನಾಯಕತ್ವ ಗುಣ” ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ನಿರ್ಧಾರ ತೆಗೆದುಕೊಳ್ಳುವಲ್ಲಿ ಆತ್ಮವಿಶ್ವಾಸ ಹೊಂದಿರುತ್ತಾರೆ.

ಸಾರ್ವಜನಿಕ ಜೀವನ, ಸಂಘಟನೆ ಅಥವಾ ನಾಯಕತ್ವದ ಕ್ಷೇತ್ರಗಳಲ್ಲಿ ಇವರು ಹೆಚ್ಚು ಸಕ್ರಿಯರಾಗುವ ಸಾಧ್ಯತೆ ಇದೆ. ಸ್ವತಂತ್ರವಾಗಿ ಬದುಕಲು ಇಷ್ಟಪಡುವ ಇವರಲ್ಲಿ ಕೆಲವೊಮ್ಮೆ ಆತ್ಮಗೌರವದ ಭಾವ ಹೆಚ್ಚುಗಿ ಈ ಅಗಲವಾದ ಮೂಗು ಹೊಂದಿದವರಲ್ಲಿ ಕಾಣಿಸಬಹುದು.

ತೀಕ್ಷ್ಣ ಮೂಗು :

ಕೆಲವರ ಮೂಗಿನ ತುದಿ ಹೆಚ್ಚು ತೀಕ್ಷ್ಣವಾಗಿ ಕಾಣಿಸುತ್ತದೆ. ಇಂತಹವರು ತಮ್ಮ ಕೆಲಸಗಳನ್ನು ಸ್ವತಃ ನಿರ್ವಹಿಸಲು ಬಯಸುವ ಸ್ವಭಾವ ಹೊಂದಿರುತ್ತಾರೆ. ಎಲ್ಲ ಕೆಲಸಗಳಲ್ಲೂ ಶಿಸ್ತನ್ನು ಇಷ್ಟಪಡುವ ಇವರು ತಮ್ಮ ಮೇಲೆ ಬಂದ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.

ಇದನ್ನು ಓದಿ : PUC ಪಾಸಾದವರಿಗೆ ಭರ್ಜರಿ ಅವಕಾಶ; KSPಯಲ್ಲಿ 1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.

ಆದರೆ ಒಮ್ಮೆ ಯಾರಾದರೂ ನಂಬಿಕೆ ದ್ರೋಹ ಮಾಡಿದರೆ ಅದನ್ನು ಸುಲಭವಾಗಿ ಮರೆತು ಬಿಡುವಂತವರಲ್ಲ ಈ ತೀಕ್ಷ್ಣ ಮೂಗು ಹೊಂದಿದವರು ಎನ್ನಲಾಗುತ್ತದೆ.

ಸಂಪಾದಕೀಯ :

ವ್ಯಕ್ತಿಯ ಸ್ವಭಾವವನ್ನು ಕೇವಲ ಮುಖದ ಆಕಾರ ಅಥವಾ ದೇಹದ ಲಕ್ಷಣಗಳಿಂದ ಅಳೆಯುವುದು ಸಂಪೂರ್ಣ ಸರಿಯೇ ಎಂಬ ಪ್ರಶ್ನೆ ಯಾವಾಗಲೂ ಇರುತ್ತದೆ. ವ್ಯಕ್ತಿತ್ವವನ್ನು ನಿರ್ಧರಿಸುವಲ್ಲಿ ಅವರ ನಡವಳಿಕೆ, ಮೌಲ್ಯಗಳು ಮತ್ತು ಸಮಾಜದೊಂದಿಗೆ ಇರುವ ಸಂಬಂಧವೇ ಮುಖ್ಯ ಪಾತ್ರ ವಹಿಸುತ್ತದೆ.

ಆದರೂ ಪಾರಂಪರಿಕ ಶಾಸ್ತ್ರಗಳು ಇಂತಹ ಲಕ್ಷಣಗಳ ಮೂಲಕ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಕೆಲವು ಸೂಚನೆಗಳನ್ನು ನೀಡುತ್ತವೆ ಎನ್ನುವುದು ಆಸಕ್ತಿದಾಯಕ ಸಂಗತಿ. ಅಂತಿಮವಾಗಿ, ಒಬ್ಬರ ಬಗ್ಗೆ ಅಭಿಪ್ರಾಯ ರೂಪಿಸುವಾಗ ಹೊರಗಿನ ಲಕ್ಷಣಕ್ಕಿಂತ ಅವರ ನಡೆ-ನುಡಿಯೇ ಹೆಚ್ಚು ಮಹತ್ವದ್ದಾಗಿದೆ.

ಮಾನವನ ಸ್ವಭಾವ ಅರ್ಥಮಾಡಿಕೊಳ್ಳಲು ನಡವಳಿಕೆಯೇ ಮುಖ್ಯವಾದರೂ, ಪ್ರಾಚೀನ ಶಾಸ್ತ್ರಗಳ ಪ್ರಕಾರ ದೇಹದ ಲಕ್ಷಣಗಳು ಕೂಡ ಕೆಲವು ಸೂಚನೆಗಳನ್ನು ನೀಡುತ್ತವೆ ಎಂಬ ನಂಬಿಕೆ ಇಂದಿಗೂ ಹಲವರಲ್ಲಿ ಕಂಡುಬರುತ್ತದೆ.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.


Disclaimer : ಮೂಗಿನ ಆಕಾರದ ಲೇಖನವು ಜ್ಯೋತಿಷ್ಯ, ಸಾಮುದ್ರಿಕ ಶಾಸ್ತ್ರ ಮತ್ತು ಪಾರಂಪರಿಕ ನಂಬಿಕೆಗಳ ಆಧಾರದ ಮೇಲೆ ಮಾಹಿತಿ ಉದ್ದೇಶಕ್ಕಾಗಿ ಸಿದ್ಧಪಡಿಸಲಾಗಿದೆ. ಇದನ್ನು ವೈಜ್ಞಾನಿಕವಾಗಿ ದೃಢೀಕರಿಸಲಾದ ಮಾಹಿತಿ ಎಂದು ಪರಿಗಣಿಸಬಾರದು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top