ಹಸು ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಎರಗಿದ ಸಿಂಹ; ಮುಂದೆನಾಯ್ತು? ವಿಡಿಯೋ ನೋಡಿ!

ಹಸು ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಎರಗಿದ ಸಿಂಹ

ಭಾವನಗರ (ಗುಜರಾತ್‌) : ಗುಜರಾತ್‌ನ ಭಾವನಗರದಲ್ಲಿ ಹಸು ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಎರಗಿದ ಸಿಂಹ ಒಂದು ದಾಳಿ ನಡೆಸಿದ ಘಟನೆ ನಡೆದಿದ್ದು, ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನುಷ್ಯರ ಮೇಲೆ ಕಾಡುಪ್ರಾಣಿಗಳ ದಾಳಿ ಹೆಚ್ಚುತ್ತಿರುವ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಜನರನ್ನು ಬೆಚ್ಚಿಬೀಳಿಸಿದೆ. ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ಸಿಂಹವೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಘಟನೆ ಭಾವನಗರ ಜಿಲ್ಲೆಯ ಪಲಿತಾನ ತಾಲೂಕಿನ ಗರಾಜಿಯಾ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಸುಮಾರು 8.30ರ ವೇಳೆಗೆ ನಡೆದಿದೆ.

ಗ್ರಾಮದ ನಿವಾಸಿಯಾಗಿರುವ ಕಲುಭಾಯ್ ಬೋಘಾಯ್ ಪರ್ಮಾರ್ ಅವರು ತಮ್ಮ ಮನೆಯ ಸಮೀಪ ಹಸುಗಳನ್ನು ಮೇಯಿಸುತ್ತಿದ್ದ ವೇಳೆ, ಸಮೀಪದ ಪೊದೆಗಳಿಂದ ಹೊರಬಂದ ಸಿಂಹವೊಂದು ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ.

ವೈರಲ್‌ ವಿಡಿಯೋದಲ್ಲೇನಿದೇ?

ವೈರಲ್ ವಿಡಿಯೋದಲ್ಲಿ ಸಿಂಹವು ಗಾಯಗೊಂಡ ವ್ಯಕ್ತಿಯನ್ನು ನೆಲಕ್ಕುರುಳಿಸಿ ಹಿಡಿದಿಟ್ಟಿರುವುದು ಕಾಣಿಸುತ್ತದೆ. ವ್ಯಕ್ತಿಯ ಒಂದು ಕಾಲನ್ನು ತನ್ನ ಪಂಜಗಳಿಂದ ಬಿಗಿಯಾಗಿ ಹಿಡಿದಿದ್ದರೆ, ಒಂದು ಕೈ ದವಡೆಯೊಳಗೆ ಕಚ್ಚಿಸಿಕೊಂಡಿರುವ ದೃಶ್ಯಗಳು ಆತಂಕ ಮೂಡಿಸುತ್ತವೆ. ಗಾಯಗೊಂಡ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದೂ, ನೋವಿನಿಂದ ನರಳುತ್ತಿರುವುದೂ ವಿಡಿಯೋದಲ್ಲಿ ಗೋಚರಿಸುತ್ತದೆ.

ಇದನ್ನು ಓದಿ : ಪೊಲೀಸ್ ಠಾಣೆ ಲಾಕಪ್‌ನಿಂದ ಪೋಕ್ಸೋ ಆರೋಪಿ ಪರಾರಿ; ಮತ್ತೆ ಬಂಧನ, 3 ಸಿಬ್ಬಂದಿ ಸಸ್ಪೆಂಡ್.

ಘಟನೆ ಗಮನಿಸಿದ ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಾಣಾಪಾಯದ ನಡುವೆಯೂ ಅವರು ಧೈರ್ಯ ಕಳೆದುಕೊಳ್ಳದೆ ಸಿಂಹವನ್ನು ಸುತ್ತುವರಿದು ಜೋರಾಗಿ ಕೂಗುತ್ತಾ ಹಾಗೂ ವಿವಿಧ ರೀತಿಯಲ್ಲಿ ಹೆದರಿಸಲು ಪ್ರಯತ್ನಿಸಿದ್ದಾರೆ. ಆರಂಭದಲ್ಲಿ ಸಿಂಹವು ವ್ಯಕ್ತಿಯನ್ನು ಬಿಡದೇ ಸತಾಯಿಸಿದರೂ ಕೂಡಾ ಗ್ರಾಮಸ್ಥರ ನಿರಂತರ ಪ್ರಯತ್ನದ ಬಳಿಕ ಆತನನ್ನು ಬಿಟ್ಟು ಕಾಡಿನ ಕಡೆಗೆ ಓಡಿ ಹೋಗಿದೆ.

ಏಕಾಏಕಿ ಎರಗಿದ ಸಿಂಹದ ವಿಡಿಯೋ :

Courtesy : Social Media / Twitter   

ಈ ಸುದ್ದಿಯನ್ನು ಓದಿ : ಮೆಟ್ರೋದಲ್ಲಿ ಯುವ ಜೋಡಿಯ ಮಿತಿಮೀರಿದ ರೋಮ್ಯಾನ್ಸ್; ವೈರಲ್ ವಿಡಿಯೋ.!

ಸಿಂಹದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕಲುಭಾಯ್ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಕುರಿತು ವೈದ್ಯಕೀಯ ಮೇಲ್ವಿಚಾರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಈ ಘಟನೆ ಬಳಿಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡುಪ್ರಾಣಿಗಳ ಚಲನವಲನದ ಬಗ್ಗೆ ನಿಗಾ ವಹಿಸಿದ್ದಾರೆ. ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸಲು ತೆರಳುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಸಂಪಾದಕೀಯ :

  • ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಸಿಂಹ ಸೇರಿದಂತೆ ಇತರೇ ಕಾಡುಪ್ರಾಣಿಗಳ ಓಡಾಟ ಸಾಮಾನ್ಯವಾಗಿದ್ದರೂ, ಇಂತಹ ಸಂದರ್ಭಗಳಲ್ಲಿ ಒಬ್ಬರೇ ತೆರಳುವುದನ್ನು ಆದಷ್ಟು ಬಿಟ್ಟು ಬಿಡಬೇಕು.
  • ಅನುಮಾನಾಸ್ಪದ ಚಲನವಲನ ಕಂಡರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಹಾಗೂ ಪ್ರಾಣಿಗಳನ್ನು ಪ್ರಚೋದಿಸದಿರುವುದು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಸುದ್ದಿ ವರದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳ ತನಿಖೆ ಮತ್ತು ಅಧಿಕೃತ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ವಿವರಗಳಲ್ಲಿ ಬದಲಾವಣೆ ಸಂಭವಿಸಬಹುದು. ವೈರಲ್ ವಿಡಿಯೊಗಳನ್ನು ಅಂತಿಮ ಸತ್ಯವೆಂದು ಪರಿಗಣಿಸುವ ಮೊದಲು ಅಧಿಕೃತ ಮಾಹಿತಿಯನ್ನು ಪರಿಶೀಲಿಸುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top