ಮುಂಬೈ: ಸಾರ್ವಜನಿಕ ಸ್ಥಳದಲ್ಲಿ ಅದು ಮುಂಬೈನ ದಾದರ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಕ್ರೂರ ಹಲ್ಲೆ ನಡೆಸಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿದ್ದ ಪಬ್ಲಿಕ್ ತಕ್ಷಣ ಮಧ್ಯಪ್ರವೇಶ ಮಾಡದೆ ನೋಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನ ದಾದರ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನೆಯ ವೇಳೆ ಅಲ್ಲಿದ್ದ ಪ್ರಯಾಣಿಕರು ಮಾತ್ರ ಕೇವಲ ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದ ದೃಶ್ಯವೂ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ತಿಳಿ ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ರೈಲು ಹಳಿಗಳ ಮೇಲೆ ಬಿದ್ದಿದ್ದ ಮಹಿಳೆಯ ಮೇಲೆ ಪದೇಪದೇ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ. ಆತ ಮಹಿಳೆಯನ್ನು ಕೈಗಳಿಂದ ಹೊಡೆಯುವುದಷ್ಟೇ ಅಲ್ಲದೆ, ಕಾಲಿನಿಂದ ಒದೆಯುವುದು ಹಾಗೂ ಎಳೆದೊಯ್ಯುವ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗಿವೆ.
ಈ ಸುದ್ದಿ ಓದಿ : ಶಾಲಾ ಬಸ್‌ನಲ್ಲಿ ಸುರಕ್ಷಿತವಾಗಿ ಮಕ್ಕಳು ಮನೆ ಸೇರುವವರೆಗೂ ಹೊಣೆ ಶಾಲೆಯದ್ದೇ : ಹೈಕೋರ್ಟ್ ಮಹತ್ವದ ತೀರ್ಪು.
ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟರೂ, ಆರೋಪಿ ಯಾವುದೇ ಕರುಣೆ ತೋರದೆ ಹಲ್ಲೆಯನ್ನು ಮುಂದುವರಿಸಿರುವುದು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದಾಗಿದೆ.
ಕ್ರೂರ ಹಲ್ಲೆಯ ವಿಡಿಯೋ :
रेलवे ट्रैक पर एक युवक महिला की बेरहमी से पिटाई करते हुए दिखा!!!
मुंबई के दादर रेलवे स्टेशन पर चौंकाने वाला नज़ारा
एक महिला को उसका पति पीट रहा था
लोग बस तमाशबीन बनकर खड़े रहे,
सोशल मीडिया पर वीडियो वायरल हुआ@CPMumbaiPolice #viralvídeo pic.twitter.com/ORoksWXCUO
— News Corridors (@News_Corridors_) July 7, 2026
Courtesy : Social Media / Twitter
ಇದನ್ನು ಓದಿ : ಹಸು ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಎರಗಿದ ಸಿಂಹ; ಮುಂದೆನಾಯ್ತು? ವಿಡಿಯೋ ನೋಡಿ!
ಪ್ರಯಾಣಿಕರ ನಿರ್ಲಕ್ಷ್ಯಕ್ಕೂ ವ್ಯಾಪಕ ಟೀಕೆ :
ರೈಲು ನಿಲ್ದಾಣದಲ್ಲಿ ಸಾಕಷ್ಟು ಜನರಿದ್ದರೂ ಕೂಡ ಓರ್ವ ಮಹಿಳೆಯ ಮೇಲೆ ವ್ಯಕ್ತಿಯೋಬ್ಬ ಅಮಾನುಷ್ಯವಾಗಿ ಕ್ರೂರ ಹಲ್ಲೆ ನಡೆಸುತ್ತಿದ್ದರೂ ಸಹ ಮಹಿಳೆಯ ನೆರವಿಗೆ ತಕ್ಷಣ ಯಾರೂ ಮುಂದಾಗದಿರುವುದು ಆತಂಕಕಾರಿ ಅಂಶವಾಗಿದೆ. ಈ ದೃಶ್ಯವನ್ನು ಕಂಡ ಸಾಮಾಜಿಕ ಜಾಲತಾಣ ಬಳಕೆದಾರರು, “ಮಾನವೀಯತೆ ಎಲ್ಲಿಗೆ ಹೋಗಿದೆ?” ಎಂದು ಪ್ರಶ್ನಿಸುತ್ತಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರ ಮೇಲೆ ಈ ರೀತಿಯ ಹಲ್ಲೆ ನಡೆಯುತ್ತಿದ್ದರೂ ಯಾರೂ ತಕ್ಷಣ ಸಹಾಯಕ್ಕೆ ಬರದಿರುವುದು ಸಮಾಜದ ಜವಾಬ್ದಾರಿಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ತುರ್ತು ಸಂದರ್ಭಗಳಲ್ಲಿ ಕೇವಲ ವಿಡಿಯೋ ಚಿತ್ರೀಕರಿಸುವುದಕ್ಕಿಂತ, ಸುರಕ್ಷಿತ ರೀತಿಯಲ್ಲಿ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಪೊಲೀಸರ ಪ್ರತಿಕ್ರಿಯೆ ಏನು?
ಕ್ರೂರ ಹಲ್ಲೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮುಂಬೈ ಪೊಲೀಸರು ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣವನ್ನು ಸರ್ಕಾರಿ ರೈಲ್ವೆ ಪೊಲೀಸ್ (GRP) ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಈ ಪ್ರಕರಣದ ಕುರಿತು ರೈಲ್ವೆ ಪೊಲೀಸರು ಇನ್ನೂ ಯಾವುದೇ ಅಧಿಕೃತ ವಿವರವನ್ನು ಬಹಿರಂಗಪಡಿಸಿಲ್ಲ. ಹಲ್ಲೆ ನಡೆಸಿದ ವ್ಯಕ್ತಿಯನ್ನು ಗುರುತಿಸಲಾಗಿದೆಯೇ, ಬಂಧಿಸಲಾಗಿದೆಯೇ ಅಥವಾ ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಈ ಸುದ್ದಿಯನ್ನು ಓದಿ : ಟಿವಿ ನೋಡಿದ್ರೆ ಮಾತ್ರ ಹಾಲು ಕೊಡುತ್ತೆ ಈ ಎಮ್ಮೆ; ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್.!
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ :
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಯ ಮೇಲೆ ನಡೆದಿರುವ ಅಮಾನುಷ ಹಲ್ಲೆಯನ್ನು ಖಂಡಿಸಿರುವ ನೆಟ್ಟಿಗರು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ಘಟನೆ ನಡೆದಾಗ ಅಲ್ಲಿದ್ದ ಪ್ರಯಾಣಿಕರು ತಕ್ಷಣ ನೆರವಿಗೆ ಬರದಿರುವುದನ್ನೂ ಅನೇಕರು ತೀವ್ರವಾಗಿ ಟೀಕಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಈ ಕ್ರೂರ ಹಲ್ಲೆಯ ಘಟನೆ ಮತ್ತೆ ಪ್ರಶ್ನೆ ಎಬ್ಬಿಸಿದ್ದು, ಇಂತಹ ಪ್ರಕರಣಗಳಲ್ಲಿ ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
ಒಟ್ಟಾರೆ, ದಾದರ್ ರೈಲು ನಿಲ್ದಾಣದಲ್ಲಿ ನಡೆದಿರುವ ಈ ಅಮಾನವೀಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯರ ಸುರಕ್ಷತೆ, ಸಾರ್ವಜನಿಕರ ಜವಾಬ್ದಾರಿ ಹಾಗೂ ತ್ವರಿತ ಪೊಲೀಸ್ ಕ್ರಮದ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer: ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಹಾಗೂ ಲಭ್ಯವಿರುವ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ವಿಡಿಯೋದಲ್ಲಿನ ಎಲ್ಲಾ ವಿವರಗಳನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ. ತನಿಖೆಯ ಅಂತಿಮ ವರದಿಯ ಆಧಾರದ ಮೇಲೆ ಮಾಹಿತಿ ಬದಲಾಗುವ ಸಾಧ್ಯತೆ ಇದೆ.







