ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಅಡುಗೆ ಮನೆಯಲ್ಲಿ ನಾನ್-ಸ್ಟಿಕ್ ಪ್ಯಾನ್ (non-stick pan) ಕಡ್ಡಾಯವಾಗಿ ಇದ್ದೆ ಇರುತ್ತೆ. ಅದರಲ್ಲಿ ನಿಮ್ಮ ಅಡುಗೆ ಮಾಡುವುದರಿಂದ ನಿಮಗೆ ಖುಷಿಯಾಗುತ್ತದೆ. ಆದ್ರೆ ನೆನಪಿರಲಿ ನಿಮ್ಮ ಅಡುಗೆ ಮನೆಯಲ್ಲಿರುವ ನಾನ್ ಸ್ಟಿಕ್ ಪ್ಯಾನ್ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.
ಕೆಲವು ದಿನಗಳ ಹಿಂದೆ 267 ಜನರಲ್ಲಿ ಪಾಲಿಮರ್ ಫ್ಯೂಮ್ ಫೀವರ್ ಅನ್ನೋ ಅಪರೂಪದ ಕಾಯಿಲೆ ಕಾಣಿಸಿಕೊಂಡಿದೆ ಎಂದು ಅಮೆರಿಕದ ಪಾಯ್ಸನ್ ಸೆಂಟರ್ ವರದಿ ಮಾಡಿದೆ.
ಇದನ್ನು ಓದಿ : Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!
ಇದಕ್ಕೆ ಕಾರಣ ಬಿಸಿಯಾದ ನಾನ್ ಸ್ಟಿಕ್ ಪ್ಯಾನ್ (non-stick pan) ನಿಂದ ಆಚೆ ಬರುವ ಹೊಗೆ ಕಾರಣ ಎಂದು ಹೇಳಲಾಗುತ್ತಿದೆ. ಅದರ ಹೊಗೆಯನ್ನು ಸೇವಿಸಿದ ಮಹಿಳೆಯರಲ್ಲಿ ಈ ರೀತಿಯ ಒಂದು ಜ್ವರ ಕಾಣಿಸಿಕೊಂಡಿದೆ.
ಇನ್ನೂ ಪ್ಯಾನ್ (non-stick pan) ಬಿಸಿಯಿಂದಾಗಿ ಹೊಗೆ ಮೂಲಕ ಹೊರ ಬರುವ ವಿಷಕಾರಿ ಹೊಗೆಯನ್ನು ಸೇವಿಸುವುದರಿಂದ ಉಸಿರಾಟದಲ್ಲಿ ತೊಂದರೆ, ಕಫಾ, ತಲೆನೋವು, ತಲೆ ಸುತ್ತುವುದು, ಸುಸ್ತು, ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಫರಿದಾಬಾದ್ಬನ ಏಷಿಯಾ ಆಸ್ಪತ್ರೆಯ ವೈದ್ಯರಾದ ಸಂತೋಷ್ ಕುಮಾರ್ ಅಗ್ರವಾಲ್ ಹೇಳಿದ್ದಾರೆ.
ನಾನ್‌ಸ್ಟಿಕ್ ಪ್ಯಾನ್ (non-stick pan) ನಲ್ಲಿ ತರಹೇವಾರಿ ಅಡುಗೆ ಮಾಡ್ತಿದ್ರೆ ಹುಷಾರ್, ಯುಎಸ್‌ನಲ್ಲಿ ಈ ಪಾತ್ರೆಯಿಂದ ಸಂಭವಿಸಬಹುದಾದ ರೋಗಗಳು ಹೆಚ್ಚಾಗಿವೆ ಎಂದು ವರದಿಯಾಗಿವೆ.
ಇದನ್ನು ಓದಿ : Mangli : ಗಾಯಕಿ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ.!
ವರದಿಯನುಸಾರ ಪಾಲಿಮರ್ ಫ್ಯೂಮ್ ಜ್ವರ ಎಂದೂ ಕರೆಯಲ್ಪಡುವ ಟೆಫ್ಲಾನ್ ಜ್ವರದಿಂದಾಗಿ ಕಳೆದ ವರ್ಷ 250 ಕ್ಕೂ ಹೆಚ್ಚು ಅಮೇರಿಕನ್ನರು ಆಸ್ಪತ್ರೆ ಪಾಲಾಗಿದ್ದರು. ಈ ವರ್ಷವೂ ಈ ಜ್ವರ ಸದ್ದು ಮಾಡ್ತಿದೆ ಎಂದು ವರದಿಗಳು ತಿಳಿಸಿವೆ.
ಏನಿದು ಟೆಫ್ಲಾನ್ ಜ್ವರ?
ಈ ಜ್ವರವು ಇದು ಟೆಫ್ಲಾನ್ ಕುಕ್‌ವೇರ್‌ನಿಂದ ಬರುವುದು. ಈ ಪಾತ್ರೆಯನ್ನು ಸರಿಯಾಗಿ ಬಳಸದಿದ್ದಾಗ ಈ ಜ್ವರ ಬರುವ ಸಾಧ್ಯತೆ ಇದೆ. ನಾನ್ ಸ್ಟಿಕ್ ಕುಕ್‌ವೇರ್ (non-stick pan) ನ್ನು ಅತಿಯಾಗಿ ಬಿಸಿ ಮಾಡುವುದು ಅಥವಾ ಪ್ಯಾನ್‌ಗಳನ್ನು ಸ್ಕ್ರಾಚಿಂಗ್ ಮಾಡುವುದರಿಂದ ಹೊರಬರುವ ಲೇಪನದಲ್ಲಿನ ರಾಸಾಯನಿಕಗಳು ಬಿಸಿಯಾದ ಮೇಲೆ ವಿಷಕಾರ ಹೊಗೆಯನ್ನು ಬಿಡುಗಡೆ ಮಾಡುತ್ತವೆ. ಈ ಕಾರಣದಿಂದ ಜ್ವರ ಬರುತ್ತದೆ.
ಅಲ್ಲದೇ ನಾನ್‌ಸ್ಟಿಕ್ ಪ್ಯಾನ್ (non-stick pan) ನಿಂದ ಬರುವ ಈ ರೋಗವು ತಲೆನೋವು, ಮೈ-ಕೈ ನೋವು, ಜ್ವರ, ಶೀತ ಮತ್ತು ನಡುಕದಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಟೆಫ್ಲಾನ್ ಜ್ವರದ ಲಕ್ಷಣಗಳು ತಕ್ಷಣವೇ ಇಲ್ಲಾ, ಸ್ವಲ್ಪ ಸಮಯದ ನಂತರ ಬೆಳೆಯಬಹುದು.
ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!
ತಜ್ಞರು ಕೂಡ, ಪ್ಯಾನ್ ಬಿಸಿ ಮಾಡಿದಾಗ ಅದರಿಂದ ಬರುವ ಹೊಗೆಯು ದೇಹ ಸೇರಿದಾಗ ಶ್ವಾಸಕೋಶದಲ್ಲಿನ ಕಿರಿಕಿರಿಯು ಜ್ವರದಂತಹ ಲಕ್ಷಣಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಟೆಫ್ಲಾನ್ ಎಂದರೇನು?
ಪಾಲಿಟೆಟ್ರಾಫ್ಲೋರೋಎಥಿಲೀನ್ ಎಂದು ಕರೆಯಲ್ಪಡುವ ಟೆಫ್ಲಾನ್ ಕಾರ್ಬನ್ ಮತ್ತು ಫ್ಲೋರಿನ್ ಅನ್ನು ಹೊಂದಿರುವ ಸಿಂಥೆಟಿಕ್ ರಾಸಾಯನಿಕವಾಗಿದೆ. ಇದು ಪ್ರತಿಕ್ರಿಯಾತ್ಮಕವಲ್ಲದ, ನಾನ್ ಸ್ಟಿಕ್ ಮತ್ತು ಮೃದುವಾದ ಲೇಪನವನ್ನು ಮೇಲ್ಮೈಗೆ ಒದಗಿಸುತ್ತದೆ. ಇದರಿಂದ ಆಹಾರ ತಳ ಹಿಡಿಯದೇ ಸುಲಭವಾಗಿ ಅಡುಗೆ ಮಾಡಬಹುದು.
ಸಾಮಾನ್ಯವಾಗಿ ನಾವು ಟೆಫ್ಲಾನ್ ಎಂದು ಕರೆಯಲ್ಪಡುವ ಪಾಲಿಟೆಟ್ರಾಫ್ಲೋರೋ ಎಥಿಲೀನ್ (PTFE) ವಸ್ತುವಿನಿಂದ ಲೇಪಿತವಾದ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಅಡುಗೆ ಮಾಡುವುದರೆ ಅದು ಸುರಕ್ಷಿತ.
ಇದನ್ನು ಓದಿ : Ahmedabad : 243 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತ.!
ನಾನ್ ಸ್ಟಿಕ್ ಪ್ಯಾನ್ (non-stick pan) ನ್ನು 500 ಡಿಗ್ರಿ ಫ್ಯಾರನ್ ಹೀಟ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ, ಕೆಲವು ನಾನ್‌ಸ್ಟಿಕ್ ಪ್ಯಾನ್‌ಗಳ ಮೇಲಿನ ಲೇಪನವು ಹದಗೆಡಲು ಪ್ರಾರಂಭಿಸಬಹುದು.
ಆಕ್ಸಿಡೀಕೃತ, ಫ್ಲೋರಿನೇಟೆಡ್ ಪದಾರ್ಥಗಳ ಸಂಕೀರ್ಣ ಮಿಶ್ರಣವನ್ನು ಗಾಳಿಯಲ್ಲಿ ಬಿಡುಗಡೆ ಮಾಡಬಹುದು. ಈ ಹಾನಿಕಾರಕ ಪದಾರ್ಥಗಳನ್ನು ಹೊಗೆಯ ರೂಪದಲ್ಲಿ ಉಸಿರಾಡುವುದರಿಂದ ಈ ರೀತಿಯ ಅಸ್ವಸ್ಥತೆ ಸಂಭವಿಸಬಹುದು.
ನಾನ್‌ಸ್ಟಿಕ್ ಪ್ಯಾನ್ (non-stick pan)ಗಳು ಕಡಿಮೆ ಸಮಯದಲ್ಲಿ ಬೇಗ ಬಿಸಿಯಾಗಬಹುದು, ಆದ್ದರಿಂದ ನಾನ್‌ಸ್ಟಿಕ್ ಪ್ಯಾನ್‌ಗಳನ್ನು ಪೂರ್ವಭಾವಿಯಾಗಿ ಕಾಯಿಸುವುದನ್ನು ನಿಲ್ಲಿಸಿ. ಟೆಫ್ಲಾನ್ ಪ್ಯಾನ್ ಅನ್ನು ಹೆಚ್ಚಿನ ತಾಪಮಾನಕ್ಕೆ ಬಿಸಿ ಮಾಡುವುದನ್ನು ತಪ್ಪಿಸಬೇಕು. ಯಾವಾಗಲೂ ಎಣ್ಣೆ, ತುಪ್ಪ, ಬೆಣ್ಣೆ ಇಂತವುಗಳನ್ನು ಹಾಕಿ ಬಿಸಿ ಮಾಡಬೇಕು.
ಇದನ್ನು ಓದಿ : ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!
ಇನ್ನೂ ಈ ಪ್ಯಾನ್ ಅನ್ನು ಹೆಚ್ಚು ಬಿಸಿ ಮಾಡಿ ಅಡುಗೆ ಮಾಡುತ್ತಾರೋ, ಅವರು ಈ ಹೊಗೆಯನ್ನು ತೆಗೆದುಕೊಳ್ಳುವ ಮೂಲಕ ಜ್ವರ ತರಹದ ಕಾಯಿಲೆಗಳ ಅಪಾಯಕ್ಕೆ ಒಳಗಾಗುತ್ತಾರೆ.
ತಾಮ್ರ, ಕಬ್ಬಿಣ, ಅಲ್ಯೂಮಿನಿಯಂ ಮತ್ತು ತವರ ಸೇರಿದಂತೆ ಈ ರೀತಿಯ ಲೋಹವನ್ನು ಬೆಸುಗೆ ಹಾಕುವ ಕೆಲಸಗಾರರಿಗೂ ಇದರ ಅಪಾಯ ಹೆಚ್ಚು. ಈ ಕೆಟ್ಟ ಪರಿಣಾಮಗಳನ್ನು ತಡೆಗಟ್ಟಲು ಸರಿಯಾದ ರಕ್ಷಣಾ ಸಾಧನಗಳನ್ನು ಇವರು ಬಳಸಬೇಕು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.
Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!
ಜನಸ್ಪಂದನ ನ್ಯೂಸ್, ದ.ಕ : ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯ ಪಿಎಸ್ಐ ಓರ್ವರನ್ನು ಅಮಾನತು (Suspend) ಮಾಡಲಾಗಿದೆ.
ಅಕ್ರಮ ಜುಗಾರಿ ಅಡ್ಡೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಬೈಕ್ ವಶಪಡಿಸಿಕೊಂಡು, ನಂತರ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಪಿಎಸ್ಐ ಅವರನ್ನು ಕರ್ತವ್ಯದಿಂದ ಅಮಾನತು (Suspend) ಮಾಡಲಾಗಿದೆ.
ಇದನ್ನು ಓದಿ : Austria : ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ ; 10 ಜನ ಬಲಿ.!
ವಿಟ್ಲ ಪೊಲೀಸ್ ಠಾಣೆಯ ಪಿಎಸ್ಐ ಕೌಶಿಕ್ ಬಿ.ಸಿ. ಎಂಬುವವರೆ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಅಮಾನತು (Suspend) ಆದ ಪಿಎಸ್ಐ.
ಅಕ್ರಮ ಜುಗಾರಿ ಅಡ್ಡೆ ಮೇಲೆ ಮೇ 8, 2025 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಮಾನತು (Suspend) ಆದೇಶ ಮೇ 12, 2025 ರಂದು ಹೊರಬಿದ್ದಿದೆ.
ಇದನ್ನು ಓದಿ : Sciatica : ಬೆನ್ನುಮೂಳೆಯಿಂದ ಪಾದಗಳವರೆಗೆ ಹರಡುವ ಈ ರೋಗ ಅಸಹನೀಯ ನೋವು ತರುತ್ತದೆ.
ಅಕ್ರಮ ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮೇ 8, 2025 ರಂದು ಪಿಎಸ್ಐ ಕೌಶಿಕ್ ಬಿ.ಸಿ. ಅವರು ಸಿಬ್ಬಂದಿಯೊಂದಿಗೆ ಅಡ್ಡೆ ಮೇಲೆ ದಾಳಿ ನಡೆಸಿದ್ದರು.
ದಾಳಿ ವೇಳೆ ಜುಗಾರಿ ಆಟದಲ್ಲಿ ತೊಡಗಿದ್ದ ಯಾರೂ ಸ್ಥಳದಲ್ಲಿ ಪತ್ತೆಯಾಗಿರಲಿಲ್ಲ, ಆದರೆ ಘಟನಾ ಸ್ಥಳದಲ್ಲಿ ಒಂದು ಮೋಟಾರು ಸೈಕಲ್ ಪತ್ತೆಯಾಗಿತ್ತು.
ಇದನ್ನು ಓದಿ : Video : ಕಂಠಪೂರ್ತಿ ಕುಡಿದು ಜನನಿಬಿಡ ರಸ್ತೆಯಲ್ಲಿ ಯುವತಿಯ ಡೊಂಬರಾಟ.!
ಕಾನೂನಾತ್ಮಕ ಕ್ರಮ ಜರುಗಿಸಬೇಕಾಗಿದ್ದ ಪಿಎಸ್ಐ ಅವರು, ಬೈಕ್ ಮಾಲಕನಿಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ.
ಬೈಕ್ ಬಿಡುಗಡೆಗೆ ಮೂರನೇ ವ್ಯಕ್ತಿಯ ಮೂಲಕ ಬೈಕ್ ಮಾಲೀಕನಿಗೆ ಹಣದ ಬೇಡಿಕೆಯಿಟ್ಟಿದ್ದು, ಅದರ ಸಂಭಾಷಣೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನು ಓದಿ : Kiss : ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್.!
ಈ ಕುರಿತು ಇಲಾಖಾ ಮಟ್ಟದಲ್ಲಿ ತನಿಖೆ ನಡೆದಿದ್ದು, ಆರೋಪದ ಸತ್ಯಾಸತ್ಯತೆ ದೃಢಪಟ್ಟ ಹಿನ್ನೆಲೆಯಲ್ಲಿ ಪಿಎಸ್ಐ ಕೌಶಿಕ್ ಬಿ.ಸಿ. ಅವರನ್ನು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತು (Suspend) ಗೊಳಿಸಿ ಜಿಲ್ಲಾ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.